ಹಬ್ಬಕ್ಕೆ ಮನೆ ಸ್ವಚ್ಛಗೊಳಿಸುವಾಗ ಧೂಳಿನ ಅಲರ್ಜಿ ತಪ್ಪಿಸುವುದು ಹೇಗೆ ?

By Suvarna News  |  First Published Sep 28, 2022, 2:19 PM IST

ನವರಾತ್ರಿ ಅಥವಾ ದುರ್ಗಾ ಪೂಜೆಯನ್ನು ಆಚರಿಸೋಕೆ ಎಲ್ಲರೂ ಸಂಭ್ರಮದಿಂದ ರೆಡಿಯಾಗ್ತಿದ್ದಾರೆ. ಆದ್ರೆ ಹಬ್ಬಕ್ಕೆ ಸುಂದರವಾದ ಸೀರೆ, ಆಭರಣಗಳನ್ನು ತಯಾರಿಸುವುದರ ಹೊರತಾಗಿಯೂ ನೀವು ಮನೆಯನ್ನು ನೀಟಾಗಿ ಕ್ಲೀನ್ ಮಾಡಿಕೊಳ್ಳಬೇಕಾಗುತ್ತದೆ. ಆದ್ರೆ ಹೀಗೆ ಮನೆ ಕ್ಲೀನ್ ಮಾಡುವಗ ಹೆಚ್ಚಿನವರಿಗೆ ಡಸ್ಟ್ ಅಲರ್ಜಿ ಕಾಣಿಸಿಕೊಳ್ಳುತ್ತೆ. ಹೀಗಾಗದಂತೆ ಏನು ಮಾಡಬಹುದು ?


ಹಬ್ಬದ ಸಂದರ್ಭದಲ್ಲಿ ಮನೆಯನ್ನು ಅಲಂಕರಿಸುವುದರ ಹೊರತಾಗಿ ಪ್ರತಿಯೊಬ್ಬರೂ ಈ ಸಮಯದಲ್ಲಿ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು  ಬಯಸುತ್ತಾರೆ. ಪೂಜೆ, ರಂಗೋಲಿ ಮೊದಲಾದವುಗಳಿಂದ ತುಂಬಿರುವ ಹಬ್ಬದಲ್ಲಿ ಸ್ವಚ್ಛತೆ ಕಡ್ಡಾಯವಾಗಿದೆ. ಮನೆ ಸ್ವಚ್ಛಗೊಳಿಸುವಾಗ ಧೂಳು-ಮಣ್ಣು ಇತ್ಯಾದಿಗಳನ್ನು ತೊಡೆದು ಹಾಕಬೇಕಾಗುತ್ತದೆ. ಧೂಳಿನ ಸಮಸ್ಯೆ ಇರುವವರು ಡಸ್ಟ್ ಅಲರ್ಜಿಗೆ ಗುರಿಯಾಗುತ್ತಾರೆ. ಅಂತಹ ಜನರು ಸ್ವಲ್ಪ ಧೂಳನ್ನು ಉಸಿರಾಡಿದರೂ ಸೀನಲು ಪ್ರಾರಂಭಿಸುತ್ತಾರೆ, ಇದು ನಂತರ ಜ್ವರ ಅಥವಾ ತುರಿಕೆಯಂತಹ ಸಮಸ್ಯೆಗಳಾಗಿ ಬದಲಾಗಬಹುದು. ಹಾಗಾದರೆ ಡಸ್ಟ್ ಅಲರ್ಜಿಯ ಲಕ್ಷಣಗಳು ಮತ್ತು ಅದನ್ನು ತಪ್ಪಿಸುವುದು ಹೇಗೆ ಎಂದು ತಿಳಿಯೋಣ.

ಧೂಳಿನ ಅಲರ್ಜಿ ಎಂದರೇನು?
ಮೊದಲು ಧೂಳಿನ ಅಲರ್ಜಿ (Dust allergy) ಎಂದರೇನು ಎಂದು ತಿಳಿಯೋಣ. ಧೂಳು ಮತ್ತು ಕೊಳೆಯಿಂದಾಗಿ ಉಸಿರಾಟದ ತೊಂದರೆ ಹೊಂದಿದ್ದರೆ, ನೀವು ಧೂಳಿನ ಅಲರ್ಜಿಯಿಂದ ಬಳಲುತ್ತಿದ್ದೀರಿ ಎಂದು ತಿಳಿದುಕೊಳ್ಳಬಹುದು. ಅಲರ್ಜಿಯಿಂದ ಬಳಲುತ್ತಿರುವವರಿಗೆ ಮಾತ್ರ ಧೂಳಿನ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಧೂಳಿನ ಅಲರ್ಜಿಯು ಅಸ್ತಮಾ ಮತ್ತು ಎಸ್ಜಿಮಾಗೆ ಕಾರಣವಾಗಬಹುದು.

Tap to resize

Latest Videos

ಮನೆಯಲ್ಲಿರೋ ಈ ವಸ್ತುಗಳ ಮೇಲೆ ಎಷ್ಟೊಂದು ಬ್ಯಾಕ್ಟೀರಿಯಾ ಇರುತ್ತೆ ಗೊತ್ತಾ?

ಧೂಳಿನ ಅಲರ್ಜಿಯ ಲಕ್ಷಣಗಳು
ಧೂಳಿನ ಅಲರ್ಜಿಯು ನಿರಂತರ ಸೀನುವಿಕೆಗೆ ಕಾರಣವಾಗುತ್ತದೆ. ಇದಲ್ಲದೆ, ಧೂಳಿನ ಅಲರ್ಜಿಯಿಂದ ಮೂಗು ನೀರು, ಕಣ್ಣಿನ ತುರಿಕೆ, ಕೆಂಪಾಗುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ಅಲರ್ಜಿಯಿಂದ ಮೂಗು ಕಟ್ಟುವಿಕೆ, ಮೂಗು, ಬಾಯಿ, ಗಂಟಲು ತುರಿಕೆ ಉಂಟಾಗಬಹುದು. ಡಸ್ಟ್ ಅಲರ್ಜಿಯಿಂದ ಬಾಯಿಯೊಳಗೆ ತುರಿಕೆ, ಕೆಮ್ಮು ಸಹ ಉಂಟಾಗುತ್ತದೆ. ನೀವು ಈ ಎಲ್ಲಾ ಚಿಹ್ನೆಗಳನ್ನು ನೋಡಿದರೆ ಜಾಗರೂಕರಾಗಿರಿ. ಅಲರ್ಜಿ ಏನೆಂದು ನಿರ್ಧರಿಸಿ. ಇದರೊಂದಿಗೆ ಅಲರ್ಜಿಯನ್ನು ತಡೆಯಲು ಪ್ರಯತ್ನಿಸಿ.

ಧೂಳಿನ ಅಲರ್ಜಿಗೆ ಪರಿಹಾರವೇನು ?
- ಧೂಳಿನ ಅಲರ್ಜಿಯನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಅನುಸರಿಸಬೇಕು. ಮೊದಲು ಮನೆಯಿಂದ (Home) ಹೊರಗೆ ಹೋಗುವಾಗ ಮಾಸ್ಕ್ ಧರಿಸಿ. ಆದಷ್ಟು ಧೂಳಿನಿಂದ ದೂರವಿರಿ. ಪೀಠೋಪಕರಣಗಳ (Furniture) ಮೇಲೆ ಸಂಗ್ರಹವಾದ ಧೂಳಿನಿಂದ ಕೆಲವೊಮ್ಮೆ ಧೂಳಿನ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಪೀಠೋಪಕರಣಗಳ ಮೇಲೆ ಧೂಳು ಸೇರಲು ಬಿಡಬೇಡಿ. ನಿಯಮಿತವಾಗಿ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ. 

- ಹಾಸಿಗೆಯಲ್ಲಿ ಸಂಗ್ರಹವಾದ ಧೂಳಿನಿಂದ ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಎದ್ದ ನಂತರ ಮತ್ತು ಮಲಗುವ ಮೊದಲು ಹಾಸಿಗೆ (Bed)ಯನ್ನು ನೀಟಾಗಿ ಕ್ಲೀನ್‌ ಮಾಡಿ. ಈ ಸಮಯದಲ್ಲಿ ನಿಮ್ಮ ಮುಖವನ್ನು ಕವರ್ ಮಾಡಿ. ಇಲ್ಲದಿದ್ದರೆ ಹಾಸಿಗೆಯ ಮೇಲೆ ಶೇಖರಣೆಯಾಗುವ ಧೂಳು ಅಲರ್ಜಿಯ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಅಲ್ಲದೆ, ಹಾಸಿಗೆಯನ್ನು ಸಾಂದರ್ಭಿಕವಾಗಿ ಬಿಸಿಲಿನಲ್ಲಿ ಇರಿಸಿ. ಇದು ಧೂಳನ್ನು ಹೋಗಲಾಡಿಸುತ್ತದೆ.

Home Cleaning : ಮನೆಯಲ್ಲಿರುವ ಧೂಳು ತೆಗೆಯೋಕೆ ಇಲ್ಲಿದೆ ಸುಲಭ ಉಪಾಯ

- ಧೂಳಿನ ಅಲರ್ಜಿಯ ಸಮಸ್ಯೆ ಇರುವವರು ಮಲಗುವ ಕೋಣೆಯನ್ನು ಅಲಂಕರಿಸಲು ವಿಶೇಷ ಗಮನ ಕೊಡಿ. ಮಲಗುವ ಕೋಣೆಯಲ್ಲಿ ಪುಸ್ತಕದ ಕಪಾಟುಗಳು ಅಥವಾ ದಿನಪತ್ರಿಕೆಗಳನ್ನು ಇಡಬೇಡಿ. ಇದು ಸುಲಭವಾಗಿ ಧೂಳನ್ನು ಸಂಗ್ರಹಿಸುತ್ತದೆ. ಈ ಧೂಳಿನಿಂದ ಅಲರ್ಜಿ ಸಮಸ್ಯೆಗಳು ಹೆಚ್ಚಾಗುತ್ತದೆ. ರೂಮುಗಳಲ್ಲಿ ಕಾರ್ಪೆಟ್ ಇಡದಿರುವುದು ಉತ್ತಮ. ಕಾರ್ಪೆಟ್‌ಗಳು ಸುಲಭವಾಗಿ ಧೂಳಿನಿಂದ ಕೂಡಿರುತ್ತವೆ. ಆ ಧೂಳನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ.

- ನೀವು ಖಾಸಗಿ ಕಾರ್ಪೆಟ್ ಹೊಂದಿದ್ದರೆ, ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ (Cleaning). ಧೂಳಿನ ಅಲರ್ಜಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮಲಗುವ ಕೋಣೆಯಿಂದ ಕಪ್ಪು ಮತ್ತು ಬಿಳಿ ಪರದೆಗಳನ್ನು ತೆಗೆದುಹಾಕಿ. ಅಲ್ಲದೆ, ಸಾಕುಪ್ರಾಣಿಗಳನ್ನು (Pets) ಮಲಗುವ ಕೋಣೆಗಳಿಂದ ಮತ್ತು ಸಾಧ್ಯವಾದರೆ ಮನೆಯಿಂದ ಹೊರಗಿಡಿ. ಎಲ್ಲಕ್ಕಿಂತ ಮುಖ್ಯವಾಗಿ ಹಬ್ಬಕ್ಕೆಂದು ಮನೆ ಕ್ಲೀನ್ ಮಾಡುವಾಗ ಧೂಳಿನಿಂದ ಪಾರಾಗಲು ಮಾಸ್ಕ್ ಧರಿಸುವುದನ್ನು ಮರೆಯಲೇಬೇಡಿ.

click me!