ಜಿರಳೆ ಸಮಸ್ಯೆಗೆ ಮೂಲದಲ್ಲಿಯೇ ಪರಿಹಾರ ಹುಡುಕಿದ್ದಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಎ.ಆರ್. ಶಿವಕುಮಾರ್. ಅವರು ಹೇಳಿದ ಪರಿಹಾರವೇನು?
ಜಿರಲೆ ಹೆಸ್ರು ಕೇಳಿದ್ರೆ ಸಾಕು ಹೆಚ್ಚಿನವರು ಅದರಲ್ಲಿಯೂ ಹೆಚ್ಚಾಗಿ ಹಲವು ಮಹಿಳೆಯರು ಹೌಹಾರುವುದು ಉಂಟು. ಜಿರಲೆ ಕಂಡರೆ ಭಯ ಪಡುವ ದೊಡ್ಡ ವರ್ಗವೇ ಇದೆ. ಅಷ್ಟಕ್ಕೂ ಮನೆಯಲ್ಲಿ ಜಿರಲೆಗಳು ಇದ್ದರೂ ಅದು ಒಳ್ಳೆಯದಲ್ಲ. ಕಾಯಿಲೆ ಕೂಡ ಹೆಚ್ಚಾದಂತೆ ಎಂದು ಹೇಳುತ್ತಾರೆ. ಸುಮಾರು 70 ದಶಲಕ್ಷ ವರ್ಷಗಳ ಹಿಂದೆ ಜಿರಳೆಗಳು ಪರಮಾಣು ಸ್ಫೋಟದಿಂದ ಬದುಕುಳಿದ ಏಕೈಕ ಜೀವಿಗಳು ಎಂದು ನಂಬಲಾಗಿದೆ. ಅದು ಪವರ್ಫುಲ್ ಈ ಕೀಟ. ಜಿರಳೆಯನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಗಳು ಸಿಗುತ್ತವೆ. ಚಾಕ್ಪೀಸ್ಗಳೂ ಲಭ್ಯ. ಆದರೆ ಇವೆಲ್ಲವೂ ಜಿರಳೆಗಿಂತಲೂ ಹೆಚ್ಚು ಮನುಷ್ಯರಿಗೆ ಹಾನಿಕಾರಕ ಎನ್ನುವುದೂ ಅಷ್ಟೇ ಸತ್ಯ. ಇವುಗಳಲ್ಲಿ ಬಳಸುವ ರಾಸಾಯನಿಕದಿಂದಾಗಿಯೇ ಇಂದು ಇನ್ನಿಲ್ಲದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ಹಾಗಿದ್ದರೆ ಜಿರಲೆ ಮನೆಯನ್ನು ಪ್ರವೇಶದಂತೆ ತಡೆಯುವುದು ಸಾಧ್ಯವೇ ಎನ್ನುವ ಪ್ರಶ್ನೆ ಹಲವರಲ್ಲಿ ಕಾಡುವುದು ಇದೆ. ಇದಕ್ಕೆ ಒಂದು ಉಪಾಯವನ್ನು ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ ಭಾರತೀಯ ವಿಜ್ಞಾನ ಸಂಸ್ಥೆ- ಬೆಂಗಳೂರು (ಐಐಎಸ್ಸಿ-ಬೆಂಗಳೂರು) ವಿಜ್ಞಾನಿ ಎ.ಆರ್. ಶಿವಕುಮಾರ್. ಜಿರಳೆ ರಾತ್ರಿ 10 ಗಂಟೆ ಮೇಲೆ ತುಂಬಾ ಆ್ಯಕ್ಟೀವ್ ಆಗುತ್ತೆ. ಹೊಸದಾಗಿ ಮನೆ ಕಟ್ಟಿದಾಗ ಬರೋದಿಲ್ಲ ಎಂದುಕೊಳ್ಳುವವರೇ ಹೆಚ್ಚು. ನಮಗೂ ಹೀಗೆಯೇ ಆಗಿತ್ತು. ಆದರೆ ಮನೆ ಕಟ್ಟಿ ಸ್ವಲ್ಪ ದಿನದಲ್ಲಿಯೇ ಜಿರಳೆ ಮನೆ ಪ್ರವೇಶಿಸಿಬಿಟ್ಟಿತ್ತು. ಆಶ್ಚರ್ಯ ಆಗೋಯ್ತು. ಅದನ್ನು ಹೋಗಲಾಡಿಸಲು ಏನೇನೋ ಟ್ರೈ ಮಾಡಿದ್ವಿ. ಸ್ವಲ್ಪ ದಿನ ಇರ್ತಿರಲಿಲ್ಲ, ಮತ್ತೆ ಬರ್ತಿತ್ತು. ಆಮೇಲೆ ಸಂಶೋಧನೆ ಶುರು ಹಚ್ಕೊಂಡೆ ಎನ್ನುತ್ತಲೇ ಶಿವಕುಮಾರ್ ಅವರು, ತಾವು ಕಂಡುಕೊಂಡ ಸಫಲತೆಯ ಕುರಿತು ಹೇಳಿದ್ದಾರೆ. ನಿರೂಪಕಿ ಸೌಜನ್ಯ ಅವರಿಗೆ ನೀಡಿರುವ ಸಂದರ್ಶನದಲ್ಲಿ ಶಿವಕುಮಾರ್ ಅವರು ಈ ಮಾಹಿತಿ ನೀಡಿದ್ದಾರೆ.
undefined
ಹಾರ್ಟ್ ಬ್ಲಾಕೇಜ್ ತೆಗೆಯುವ ಅದ್ಭುತ ಔಷಧ ಈ ಕಷಾಯ: ಹೃದಯ ಸಮಸ್ಯೆಗಳಿಗೆ ರಾಮಬಾಣ- ಡಾ.ಗೌರಿ ಮಾಹಿತಿ
ಜಿರಳೆಗಳು ಸಂಸಾರ ಮಾಡಿಕೊಂಡು ಇರುವುದಲ್ಲ, ಬದಲಿಗೆ ಕೊಳಚೆ ನೀರು ಹೋಗುವ ಪೈಪ್ನಲ್ಲಿ ಅವು ವಾಸಿಸುತ್ತವೆ. ಕೊಳಚೆ ನೀರು ಹೋಗುವ ಪೈಪ್ಗಳು ಅರ್ಧ ಖಾಲಿ ಇರುತ್ತವೆ. ಅಲ್ಲಿಯ ವಾಸನೆ, ಕತ್ತಲು ಎಲ್ಲವೂ ಇಷ್ಟವಾಗಿ ಜಿರಳೆಗಳು ಅಲ್ಲಿಯೇ ಸಂಸಾರ ಹೂಡುತ್ತವೆ ಎನ್ನುವುದು ತಿಳಿಯಿತು. ಖಾಲಿ ಇದ್ದ ಸ್ಥಳದಿಂದ ಬಂದು ಆಹಾರ ಇರುವ ಕಡೆ ಮನೆಯೊಳಗೆ ಬರುತ್ತದೆ. ಆದ್ದರಿಂದ ಮನೆಯೊಳಕ್ಕೆ ಪರಿಹಾರ ಹುಡುಕಿದರೆ ಅದು ಕಷ್ಟ. ಆದ್ದರಿಂದ ಕೊಳಚೆ ನೀರು ಹೋಗುವ ಪೈಪ್ನ ಕೊನೆಯ ಭಾಗದಲ್ಲಿ ಪೈಪ್ ನೇರವಾಗಿ ಇರುವುದರಿಂದಲೇ ಹೀಗೆ ಆಗುವುದು ತಿಳಿಯಿತು.ಲ ಆದ್ದರಿಂದ ಕೊನೆಯ ಭಾಗದಲ್ಲಿ ಬೆಂಡ್ ಮಾಡಿರುವ ಯೂ ಟರ್ನ್ ಪೈಪ್ ಹಾಕಿ ಬೆಂಡ್ ಮಾಡಿದೆವು.
ಅಷ್ಟಕ್ಕೂ ಜಿರಲೆಯ ಬಗ್ಗೆ ಬರೆಯುತ್ತಾ ಹೋದರೆ ದೊಡ್ಡ ವೃತ್ತಾಂತವೇ ಇದೆ. ಮನುಷ್ಯರಿಗೂ ಜಿರಳೆಗಳ ಸಂಬಂಧ ತಲೆತಲಾಂತರಗಳಿಂದಲೂ ಇವೆ. ನಮ್ಮ ಪೂರ್ವಜರು ಗುಹೆಗಳಲ್ಲಿ ವಾಸಿಸುತ್ತಿದ್ದ ಕಾಲದಿಂದಲೂ ಜಿರಲೆಯ ಸಂಬಂಧ ಮನುಷ್ಯನ ಜೊತೆಗೆ ಇದೆ. ಗುಹೆಯಿಂದ ಹಿಡಿದು ಈಗ ಗಗನಚುಂಬಿ ಕಟ್ಟಡ ಬಂದರೂ ಜಿರಲೆ ಮಾತ್ರ ಸದಾ ಮನುಷ್ಯನ ಬೆನ್ನುಹತ್ತಿಯೇ ಇವೆ. ಮನೆಗಳನ್ನು ಎಷ್ಟು ಶುಚಿಯಾಗಿ ಇಟ್ಟುಕೊಂಡರೂ, ಎಲ್ಲಿಂದಲೋ ಬಂದು ಒಂದಲ್ಲೊಂದು ಜಿರಲೆ ಸೇರಿಕೊಂಡು ಬಿಟ್ಟರೆ, ಮುಗಿದೇ ಹೋಯ್ತು, ಕೆಲವೇ ದಿನಗಳಲ್ಲಿ ಅದು ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತದೆ. ಇದೇ ಕಾರಣಕ್ಕೆ, ಜಿರಳೆಗಳು ಇರದ ಮನೆ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಇದೇ ವೇಳೆ ಇದನ್ನು ಕಂಡರೆ ಹೆದರುವ ದೊಡ್ಡ ವರ್ಗವೇ ಇದೆ. ಇದರಿಂದ ಜಿರಲೆ ಕೊನೆಯವರೆಗೆ ಬಂದು ಗೇಟ್ ಹಾಕಿದೆ ಎಂದು ತಿಳಿದು ವಾಪಸ್ ಹೋಗುತ್ತವೆ. ಅಲ್ಲಿಂದ ಇಲ್ಲಿಯವರೆಗೂ ಜಿರಳೆ ಬರಲಿಲ್ಲ ಎಂದಿದ್ದಾರೆ. ಈ ವಿಡಿಯೋಗೆ ಹಲವರು ಹಲವು ರೀತಿಯ ಕಮೆಂಟ್ ಕೂಡ ಹಾಕಿದ್ದಾರೆ. ಯೂ ಟರ್ನ್ ಪೈಪ್ನಲ್ಲಿ ಗಟ್ಟಿ ಪದಾರ್ಥ ಕುಳಿತುಕೊಂಡರೆ ನೀರು ಹೋಗುವುದು ಕಷ್ಟವಾಗಿ ಬ್ಲಾಕ್ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮತ್ತೆ ಕೆಲವರು, ಪಾತ್ರೆಗಳನ್ನು ತೊಳೆಯುವಾಗ ಎಲ್ಲವನ್ನೂ ಮೊದಲು ಡಸ್ಟ್ಬಿನ್ನಲ್ಲಿಯೇ ಹಾಕಿ, ಸಿಂಕ್ನಲ್ಲಿಯೇ ಎಲ್ಲವನ್ನೂ ಹಾಕಿದರೆ ಬ್ಲಾಕ್ ಸಹಜ ಎಂದಿದ್ದಾರೆ.
ಡೆಂಗ್ಯೂ ಹತ್ತಿರ ಸುಳಿಯದಂತೆ ಇಲ್ಲಿದೆ ದಿವ್ಯ ಔಷಧ: ಜ್ವರಕ್ಕೂ ರಾಮಬಾಣ- ವೈದ್ಯೆಯಿಂದ ಸುಲಭದ ಪರಿಹಾರ...