ಜಗತ್ತಿನಾದ್ಯಂತ ಮಂಕಿಪಾಕ್ಸ್ ವೈರಸ್ ಆತಂಕ ಹೆಚ್ಚುತ್ತಿದ್ದು, 116 ದೇಶಗಳಲ್ಲಿ ವ್ಯಾಪಿಸಿರುವ ಈ ಮಾರಕ ಸೋಂಕು ಭಾರತಕ್ಕೂ ಆತಂಕ ತಂದಿದೆ. ಈ ವರ್ಷ ಆಫ್ರಿಕಾದಲ್ಲಿ 14000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ನವದೆಹಲಿ (ಆ.18): ಕೋವಿಡ್ ಆಯ್ತು ಈಗ ಜಗತ್ತಿನಾದ್ಯಂತ ಮತ್ತೊಂದು ವೈರಸ್ ಆತಂಕ ಆರಂಭವಾಗಿದೆ. ವಿದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಕಾಣಿಸಿಕೊಂಡಿದೆ. 195ಕ್ಕೂ ಹೆಚ್ಚು ದೇಶಗಳಿರುವ ಜಗತ್ತಿನಲ್ಲಿ 116 ದೇಶಗಳಲ್ಲಿ ಮಂಕಿ ಪಾಕ್ಸ್ ಹಬ್ಬಿದೆ.
ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೆಲ್ತ್ ಎಮರ್ಜೆನ್ಸಿ ಘೋಷಣೆಯಾಗಿದೆ. ಭಾರತಕ್ಕೂ ಮಂಕಿ ಪಾಕ್ಸ್ ಮಹಾಮಾರಿ ಆತಂಕ ಎದುರಾಗಿದೆ. ಒಂದೊಂದೇ ದೇಶಕ್ಕೆ ಮಂಕಿಪಾಕ್ಸ್ ಲಗ್ಗೆ ಇಡುತ್ತಿದೆ. ಮಂಕಿಪಾಕ್ಸ್ ಗೆ ಯಾವುದೇ ನಿರ್ದಿಷ್ಟ ಲಸಿಕೆಯಾಗಲಿ ಚಿಕಿತ್ಸೆಯಾಗಲಿ ಇಲ್ಲ.
undefined
ಕರ್ನಾಟಕದಲ್ಲಿ ಜೀಕಾ ವೈರಸ್ ಭೀತಿ: 7 ಪ್ರಕರಣಗಳು ಪತ್ತೆ, ಎಚ್ಚರಿಕೆ ಕೊಟ್ಟ ಆರೋಗ್ಯ ಇಲಾಖೆ!
ನೆರೆಯ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆ ಬೆನ್ನಲ್ಲೇ ಕೇಂದ್ರ ಸರ್ಕಾರ ಶನಿವಾರ ತುರ್ತು ಸಭೆ ನಡೆಸಿ ಪರಾಮರ್ಶೆ ನಡೆಸಿದೆ. ಭಾರತಕ್ಕೆ ಮಂಕಿಪಾಕ್ಸ್ ಪ್ರವೇಶ ತಡೆಯಲು ವಿಮಾನ ನಿಲ್ದಾಣ, ಬಂದರುಗಳಲ್ಲಿ ತಪಾಸಣೆ ಘಟಕ ತೆರೆಯಲು ನಿರ್ಧರಿಸಿದೆ. ಭಾರತದಲ್ಲಿ 2022ರ ಮಾರ್ಚ್‌ನಲ್ಲಿ ಕೇರಳದಲ್ಲಿ ಬಾರಿಗೆ ಮೊದಲ ಬಾರಿಗೆ ಮಂಕಿಪಾಕ್ಸ್ ಪತ್ತೆಯಾಗಿತ್ತು. ದೇಶದಲ್ಲಿ ಒಟ್ಟು 30 ಪ್ರಕರಣಗಳು ಪತ್ತೆಯಾಗಿತ್ತು.
ಮಂಕಿಪಾಕ್ಸ್‌ನ 14000ಕ್ಕೂ ಹೆಚ್ಚು ಪ್ರಕರಣಗಳು ಈ ವರ್ಷವೊಂದರಲ್ಲೇ ಆಫ್ರಿಕಾ ದೇಶಗಳಲ್ಲಿ ಪತ್ತೆಯಾಗಿ 450ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿವೆ. ಆದರೆ ಎರಡು ದಿನಗಳ ಹಿಂದಷ್ಟೇ ಯುರೋಪ್ ದೇಶವಾದ ಸ್ವೀಡನ್‌ನಲ್ಲಿ ಈ ಸೋಂಕು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಸೋಂಕು ಪತ್ತೆಯಾಗಿದೆ. ಇದು ಏಷ್ಯಾ ಖಂಡದಲ್ಲಿ ಈ ವರ್ಷದ ಬೆಳಕಿಗೆ ಬಂದ ಮೊದಲ ಪ್ರಕರಣವಾಗಿದೆ. ಹೀಗಾಗಿ ಭಾರತ ಸೇರಿ ಅಕ್ಕಪಕ್ಕದ ದೇಶಗಳಿಗೆ ಆತಂಕ ಎದುರಾಗಿದೆ.
ಮಂಕಿಪಾಕ್ಸ್ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಡಬ್ಲ್ಯುಎಚ್‌ಒ ಸಲಹೆ
1970ರಲ್ಲಿ ಮೊದಲ ಬಾರಿಗೆ ಕಾಂಗೋದಲ್ಲಿ ಕಾಣಿಸಿಕೊಂಡು 2022ರಲ್ಲಿ ವಿಶ್ವದ 116 ದೇಶಗಳಿಗೆ ವ್ಯಾಪಿಸಿದ್ದ ಮಂಕಿಪಾಕ್ಸ್ ಮಾರಕ ಸಾಂಕ್ರಾಮಿಕಗಳ ಪೈಕಿ ಒಂದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೊಸ ಪ್ರಕರಣಗಳಲ್ಲಿ ಶೇ.160ರಷ್ಟು ಹೆಚ್ಚಳವಾಗಿದೆ.
ಮಂಕಿಪಾಕ್ಸ್ ಸಾಮಾನ್ಯವಾಗಿ ಕೋತಿಗಳು, ಇಲಿಗಳು ಮತ್ತು ಅಳಿಲುಗಳಂತಹ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಜ್ವರದಂತಹ ರೋಗ ಲಕ್ಷಣಗಳು ಮತ್ತು ಕೀವು ತರಹದ ಗಾಯಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸೋಂಕು ಕಾಣಿಸಿಕೊಂಡ ವ್ಯಕ್ತಿ ಸಾಯುವ ಸಾಧ್ಯತೆಗಳಿರುತ್ತದೆ. ಇನ್ನು ಇದು ಹೆಚ್ಚಾಗಿ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ರೋಗ 7 ರಿಂದ 14 ದಿನದವರೆಗೆ ಇರುತ್ತದೆ.
ಮಂಕಿಪಾಕ್ಸ್ ಲಕ್ಷಣಗಳು ಏನು?
ದೇಹದ ಮೇಲೆ ಗುಳ್ಳೆ ತರದ ರಾಶ್ ಗಳು
ಮೈ ಮೇಲೆ ಗುಳ್ಳೆಗಳ ಜತೆ ಜ್ವರದ ಲಕ್ಷಣಗಳು
ತೀವ್ರವಾದ ತಲೆ ನೋವು, ಬೆನ್ನು ನೋವು ಸ್ನಾಯು ನೋವು
2 ವಾರದಿಂದ 7 ವಾರಗಳ ಕಾಲ ಬಾಧಿಸುವ ರೋಗ
ಶೀತ, ಜ್ವರ, ಸ್ನಾಯು ದೌರ್ಬಲ್ಯ, ಊತ, ಚರ್ಮದ ಮೇಲೆ ಗುಳ್ಳೆ ಬಳಲಿಕೆ
ಅಂಗೈಗಳು, ಪಾದಗಳು ದೇಹದ ಮೇಲೆ ವ್ಯಾಪಕವಾದ ದದ್ದು/ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ
ಮಂಕಿಪಾಕ್ಸ್ ವೈರಸ್ ಚಿಕಿತ್ಸೆ ಏನು?
ಮಂಕಿಪಾಕ್ಸ್ ವೈರಸ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ, ಸ್ಮಾಲ್‌ಪಾಕ್ಸ್‌ಗೆ ಬಳಸುವ ಲಸಿಕೆ ಬಳಕೆ ಮಾಡಲಾಗುತ್ತಿದೆ. ಸ್ಮಾಲ್‌ಪಾಕ್ಸ್‌ಗೆ ಬಳಸುವ ಲಸಿಕೆ ಶೇ 85ರಷ್ಟು ರಕ್ಷಣೆ ನೀಡುತ್ತದೆ.