ಕರ್ನಾಟಕದಲ್ಲಿ ಜೀಕಾ ವೈರಸ್ ಭೀತಿ: 7 ಪ್ರಕರಣಗಳು ಪತ್ತೆ, ಎಚ್ಚರಿಕೆ ಕೊಟ್ಟ ಆರೋಗ್ಯ ಇಲಾಖೆ!

By Gowthami K  |  First Published Aug 18, 2024, 12:27 PM IST

ಕರ್ನಾಟಕದಲ್ಲಿ ಡೆಂಘೀ ನಂತರ ಈಗ ಜೀಕಾ ವೈರಸ್ ಭೀತಿ ಎದುರಾಗಿದ್ದು, ಎರಡು ಜಿಲ್ಲೆಗಳಲ್ಲಿ ಏಳು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡುವಂತೆ ಸೂಚಿಸಿದೆ.


ಬೆಂಗಳೂರು (ಆ.18): ಕರ್ನಾಟಕದಲ್ಲಿ ಡೆಂಘೀ ಆಯ್ತು ಈಗ ಜೀಕಾ ವೈರಸ್ ಭೀತಿ ಎದುರಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಜೀಕಾ ವೈರಸ್ ಕಾಣಿಸಿಕೊಳ್ತಿದೆ. ಈಗಾಗಲೇ ರಾಜ್ಯದ ಎರಡು ಜಿಲ್ಲೆಗಳಲ್ಲಿ 7 ಜೀಕಾ ವೈರಸ್ ಪತ್ತೆಯಾಗಿದೆ. ಇದೆಲ್ಲದರ ನಡುವೆ ಡೆಂಘಿ, ಮಲೇರಿಯಾ ಪ್ರಕರಣಗಳು ಕೂಡ ರಾಜ್ಯದಲ್ಲಿ ಸದ್ಯ ಹೆಚ್ಚುತ್ತಿದೆ.

ಮಂಕಿಪಾಕ್ಸ್ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಡಬ್ಲ್ಯುಎಚ್‌ಒ ಸಲಹೆ

Tap to resize

Latest Videos

ಜೀಕಾ ವೈರಸ್ ಭೀತಿ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ  ಎಚ್ಚೆತ್ತುಕೊಂಡಿದ್ದು, ಮುನ್ಬೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಈಡಿಸ್ ಸೊಳ್ಳೆಯಿಂದ ಹರಡುವ ಜೀಕಾ ವೈರಸ್ ಪತ್ತೆ ಬೆನ್ನಲ್ಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗಂಧೆಗಳು ಕಾಣಿಸಿಕೊಳ್ಳೋದು ಜೀಕಾ ಗುಣಲಕ್ಷಣಗಳಾಗಿವೆ.

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಮತ್ತೆ ಅನಿರ್ದಿಷ್ಟಾವಧಿ ರದ್ದು! 

ಬೆಂಗಳೂರಿಗೂ ಕಾಲಿಟ್ಟ ಜೀಕಾ ವೈರಸ್:
ಸಿಲಿಕಾನ್ ಸಿಟಿಯಲ್ಲೂ ಮಾರಕ ಜೀಕಾ  ವೈರಸ್ ಪತ್ತೆಯಾಗಿದೆ.  ಜಿಗಣಿಯಲ್ಲಿ 5 ಜೀಕಾ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಎರಡು ವಾರದಲ್ಲಿ 5 ಪ್ರಕರಣ ಪತ್ತೆಯಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಆದ್ರೆ ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಶಿವಮೊಗ್ಗದಲ್ಲಿ 2 ಹಾಗೂ ಜಿಗಣಿಯಲ್ಲಿ 5 ಪ್ರಕರಣಗಳು ಪತ್ತೆಯಾಗಿದೆ ಎಂದಿದ್ದಾರೆ.

ಪ್ರಕರಣ ಕಂಡು ಬಂದ ಹಿನ್ನೆಲೆ , ಜಿಗಣಿಯಲ್ಲಿ ಕಂಟೈನ್ಮೆಂಟ್ ಝೋನ್ ಘೋಷಣೆಯಾಗಿದ್ದು, ಆರೋಗ್ಯ ಇಲಾಖೆ ಐವರ ಮೇಲೆ ನಿಗಾ ವಹಿಸಿದ್ದಾರೆ. ಜಿಕಾ ಬಂದಿರೋ ರೋಗಿಗಳ ಕುಟುಂಬಸ್ಥರ ಸ್ಯಾಂಪಲ್ ವೈದ್ಯರು ಪಡೆದಿದ್ದಾರೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಾರ್ವಜನಿಜನಿಕರಿಗೆ  ಸೂಚನೆ ಇಂತಿದೆ.

  • ಜಿಕಾ ವೈರಸ್ ದೃಢಪಟ್ಟರೆ, ಕುಟುಂಬದ ಸದಸ್ಯರ ರಕ್ತದ ಮಾದರಿ ಲ್ಯಾಬ್ ಟೆಸ್ಟ್ ಗೆ ಒಳಪಡಿಸಬೇಕು
  • ಮನೆಯ ಸುತ್ತಮುತ್ತಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಪರೀಕ್ಷೆಗೊಳಪಡಿಸುವುದು ಕಡ್ಡಾಯ
  • ಆ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಕಂಟೈನ್ವೆಂಟ್ ಜೋನ್ ಎಂದು ಪರಿಗಣಿಸಲಾಗುವುದು
  • ಜಿಕಾ ವೈರಸ್ ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ
  • ವೈರಸ್‌ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ 
     
click me!