Alcohol Addiction: ಆಲ್ಕೋಹಾಲ್ ಬೇಕೇಬೇಕಾ? ಹಾಗಾದ್ರೆ ಎಚ್ಚರ!

By Suvarna News  |  First Published Sep 6, 2022, 5:21 PM IST

ಆಲ್ಕೋಹಾಲ್ ನಿಂದ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ತಿಳಿದಿದ್ದರೂ ಬಹಳಷ್ಟು ಜನ ಮದ್ಯಸೇವನೆ ಮಾಡುತ್ತಾರೆ. ಮದ್ಯ ಸೇವನೆ ಅನಿವಾರ್ಯವಾಗಿದ್ದರೆ ಅದಕ್ಕೊಂದು ಮಿತಿಯಿದೆ. ಹಾಗೂ ಕೆಲವು ಎಚ್ಚರಿಕೆ ತೆಗೆದುಕೊಂಡರೆ ಮದ್ಯದ ದುಷ್ಪರಿಣಾಮಗಳನ್ನು ಕಡಿಮೆಯಾಗಿಸಿಕೊಳ್ಳಬಹುದು. ಆರೋಗ್ಯವನ್ನು ಉಳಿಸಿಕೊಳ್ಳಬಹುದು.
 


ಆಲ್ಕೋಹಾಲ್ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಅದನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಕೆಲವರು ಬಿಡುವುದಕ್ಕೆ ಪ್ರಯತ್ನಪಟ್ಟರೂ ಮತ್ತೆ ಆರಂಭಿಸುತ್ತಾರೆ. ಮದ್ಯದ ದಾಸರಾದವರು ಮಡದಿ, ಮಕ್ಕಳ ಮಾತನ್ನೂ ಕೇಳುವುದಿಲ್ಲ. ದುಡಿದ ಹಣವನ್ನೆಲ್ಲ ಮದ್ಯಕ್ಕಾಗಿ ವ್ಯಯ ಮಾಡುವವರಿದ್ದಾರೆ. ಇದರಲ್ಲಿ ಬಡವ, ಶ್ರೀಮಂತ ಎನ್ನುವ ಭೇದವಿಲ್ಲ. ಬಡವರು ಕಳಪೆ ಮದ್ಯ ಸೇವಿಸಿದರೆ ಶ್ರೀಮಂತರು ದುಬಾರಿ ಮದ್ಯ ಸೇವಿಸುತ್ತಾರೆ. ಕಳಪೆ ಮದ್ಯದಿಂದ ಆರೋಗ್ಯ ಇನ್ನಷ್ಟು ಬೇಗ ಹಾಳಾಗುತ್ತದೆ, ದುಬಾರಿ ಮದ್ಯದಿಂದ ಸ್ವಲ್ಪ ನಿಧಾನವಾಗಿ ಆರೋಗ್ಯ ಕ್ಷೀಣಿಸಬಹುದು ಅಷ್ಟೇ ವ್ಯತ್ಯಾಸ. ಒಟ್ಟಿನಲ್ಲಿ ಆರೋಗ್ಯ ಹಾಳಾಗುವುದಂತೂ ನಿಶ್ಚಿತ. ಆದರೆ, ಕುಡಿಯುವಾಗ ಸ್ವಲ್ಪ ಎಚ್ಚರಿಕೆ ವಹಿಸಿದರೆ ದುಷ್ಪರಿಣಾಮಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬಹುದು. ಮದ್ಯಪಾನ ಮಾಡುವ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಆರೋಗ್ಯಕ್ಕೆ ಹೆಚ್ಚಿನ ಹಾನಿ ಆಗದಂತೆ, ದೇಹದ ವಿವಿಧ ಭಾಗಗಳು ಆಲ್ಕೋಹಾಲ್ ನಿಂದ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಬಹುದು. ಜನ ಎಂದಿನಿಂದ ಮದ್ಯಪಾನ ಆರಂಭಿಸುತ್ತಾರೋ ಅಂದಿನಿಂದಲೇ ದೇಹದ ಮೇಲೆ ಅದರ ಪ್ರಭಾವ ಆರಂಭವಾಗಿರುತ್ತದೆ. ಹೀಗಾಗಿ, ಮದ್ಯ ಸೇವನೆ ಮಾಡುವ ಮುನ್ನ ಕೆಲವು ವಿಷಯಗಳು ಗಮನದಲ್ಲಿರಲಿ.

•    ಮದ್ಯ ಪ್ರಮಾಣ (Limit Alcohol Level) ಮಿತಿಯಲ್ಲಿರಲಿ
ಕೆಲ ಜನ (People) ಆರಂಭದಿಂದಲೂ ಒಂದು ಮಿತಿಯಲ್ಲೇ ಮದ್ಯ ಸೇವನೆ (Drink) ಮಾಡುತ್ತಾರೆ. ಇದ್ದುದರಲ್ಲಿ ಈ ಅಭ್ಯಾಸ ಪರವಾಗಿಲ್ಲ. ಮಿತಿಯಿಲ್ಲದಂತೆ ಸೇವನೆ ಮಾಡುವುದು ಖಂಡಿತ ಸಲ್ಲದು. ಆಸ್ಟ್ರೇಲಿಯಾದ ಆರೋಗ್ಯ ಇಲಾಖೆ ಸೂಚನೆ ನೀಡುವಂತೆ, ವಾರಕ್ಕೆ 10 ಸ್ಟ್ಯಾಂಡರ್ಡ್ ಡ್ರಿಂಕ್ (Standard Drink) ಅಥವಾ ದಿನಕ್ಕೆ 4 ಸ್ಟ್ಯಾಂಡರ್ಡ್ ಡ್ರಿಂಕ್ ಸೇವನೆ ಮಾಡಬಹುದು. ನೆನಪಿರಲಿ. ಇಲ್ಲಿ, ಸ್ಟ್ಯಾಂಡರ್ಡ್ ಡ್ರಿಂಕ್ ಎಂದರೆ, 30 ಎಂಎಲ್ ಹೈ ಆಲ್ಕೋಹಾಲ್ (ವಿಸ್ಕಿ ಅಥವಾ ಜಿನ್ (Whisky, Jin) ಇತ್ಯಾದಿ), 330 ಎಂಎಲ್ ಬಿಯರ್ (Beer) ಹಾಗೂ 150 ಎಂಎಲ್ ವೈನ್ (Wine). ಹೀಗಾಗಿ, ಪ್ರಮಾಣದ ಮೇಲೆ ಗಮನವಿರಲಿ.

Tap to resize

Latest Videos

•    ಕುಡಿಯುವಾಗ, ಕುಡಿದ ಬಳಿಕ ಆಹಾರ (Food) ಸೇವಿಸಿ
ಖಾಲಿ ಹೊಟ್ಟೆಯಲ್ಲಿರುವಾಗ (Empty Stomach) ಮದ್ಯ ಸೇವನೆ ಮಾಡಿದರೆ ಬಹುಬೇಗ ರಕ್ತನಾಳಗಳಿಗೆ (Blood Stream) ಸೇರ್ಪಡೆಯಾಗುತ್ತದೆ. ಇದರಿಂದ, ದುಷ್ಪರಿಣಾಮ (Bad Effect) ಹೆಚ್ಚು. ಹೀಗಾಗಿ, ಆಲ್ಕೋಹಾಲ್ ಸೇವನೆ ಮಾಡುವಾಗ ಅದರೊಂದಿಗೆ ಏನಾದರೂ ಆಹಾರವನ್ನೂ ತಿನ್ನಬೇಕು. ಮದ್ಯ ಸೇವಿಸುವ ಮುನ್ನ ಸಾಕಷ್ಟು ನೀರು ಕುಡಿಯಬೇಕು. ಈ ಸಮಯದಲ್ಲಿ ಉಪ್ಪು, ಸಕ್ಕರೆ, ಮಸಾಲೆ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು. ತರಕಾರಿ ಸಲಾಡ್ (Vegetable Salad), ಕೆಲವು ಹಣ್ಣು, ಪನ್ನೀರ್, ಶೇಂಗಾ, ಸೌತೆಕಾಯಿ ಇತ್ಯಾದಿ ತಿನ್ನುವುದು ಸೂಕ್ತ.

Quit Addiction: ಆಲ್ಕೋಹಾಲ್ ಬಿಡೋ ಮುನ್ನ, ತುಸು ಇರಲಿ ಗಮನ

•    1 ಗಂಟೆಯಲ್ಲಿ 1 ಸ್ಟ್ಯಾಂಡರ್ಡ್ ಡ್ರಿಂಕ್ 
ಮದ್ಯವನ್ನು ಯಾವಾಗಲೂ ನಿಧಾನವಾಗಿ (Slow) ಸೇವನೆ ಮಾಡಬೇಕು. ಇದರಿಂದ ರಕ್ತನಾಳಗಳ ಮೇಲೆ ಬಹುಬೇಗ ಪ್ರಭಾವ ಉಂಟಾಗುವುದಿಲ್ಲ. ನಮ್ಮ ದೇಹ ಒಂದು ಗಂಟೆಗೆ ಒಂದು ಸ್ಟ್ಯಾಂಡರ್ಡ್ ಡ್ರಿಂಕನ್ನು ಮಾತ್ರವೇ ಸಹಿಸಿಕೊಳ್ಳಬಲ್ಲದು, ಪ್ರಕ್ರಿಯೆಗೆ ಒಳಪಡಿಸಬಲ್ಲದು. ಬೇಗ ಬೇಗ ಕುಡಿದರೆ ದೇಹಕ್ಕೆ ನಷ್ಟ ಹೆಚ್ಚು. 

•    ಸವಾಲು ಸ್ವೀಕರಿಸಬೇಡಿ (Do not Take Challenge)
ಕೆಲವರು ಮದ್ಯ ಸೇವಿಸುವ ಸಮಯದಲ್ಲಿ ಸ್ನೇಹಿತರೊಂದಿಗೆ ಸ್ಪರ್ಧೆ, ಸವಾಲಿಗೆ ಬೀಳುತ್ತಾರೆ. ಇದು ಎಂದಿಗೂ ಸಲ್ಲದು. ಯಾರು ಹೆಚ್ಚು ಕುಡಿಯುತ್ತಾರೆ ಎನ್ನುವಂತಹ ಸವಾಲು ಸ್ವೀಕಾರ ಮಾಡುವುದರಿಂದ ನಿಮ್ಮದೇ ದೇಹಕ್ಕೆ ಅಧಿಕ ಹಾನಿಯಾಗುತ್ತದೆ. ಎನರ್ಜಿ ಡ್ರಿಂಕ್ ಗಳೊಂದಿಗೆ ಆಲ್ಕೋಹಾಲ್ ಮಿಕ್ಸ್ ಮಾಡಬೇಡಿ. ಇದರಿಂದಲೂ ಹೆಚ್ಚು ಸೇವನೆ ಮಾಡುವ ಅಪಾಯ ಇರುತ್ತದೆ. 

•    ಮದ್ಯಪಾನ ಮಾಡಿ ವಾಹನ ಚಾಲನೆ (Riding Vehicle) ಸಲ್ಲದು
ನಮ್ಮ 100 ಮಿಲಿಲೀಟರ್ ರಕ್ತದಲ್ಲಿ ಆಲ್ಕೋಹಾಲ್ ಮಟ್ಟ 0.03ಕ್ಕಿಂತ ಹೆಚ್ಚಾಗಬಾರದು. ಅಂದರೆ, 100 ಮಿಲಿಲೀಟರ್ ರಕ್ತದಲ್ಲಿ 30 ಮಿಲಿಗ್ರಾಮ್ ಗಿಂತ ಅಧಿಕ ಮದ್ಯ ಸೇರ್ಪಡೆಯಾಗಬಾರದು. ಇದು ಕಾನೂನು (Law) ಪ್ರಕಾರ ಅಪರಾಧ (Crime). ಮದ್ಯ ಸೇವಿಸಿ ವಾಹನ ಚಲಾಯಿಸಬಾರದು ಎನ್ನುವುದು ಸಹ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಕೆಲವರು ಅನಿವಾರ್ಯತೆಗೆ ಬೀಳುತ್ತಾರೆ. ಆದರೆ, ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಏಕೆಂದರೆ, ಈ ಸಮಯದಲ್ಲಿ ಅಪಘಾತವಾಗುವ (Accident) ಸಾಧ್ಯತೆ ಹೆಚ್ಚು, ಇದರಿಂದ ನಿಮಗೇ ಹಾನಿ. 
 

ಸ್ಟ್ರೆಸ್‌ ಅಂತ ಅಲ್ಕೋಹಾಲ್ ಕುಡಿದ್ರೆ ಮಾನಸಿಕ ಆರೋಗ್ಯ ಕೈ ಕೊಡುತ್ತೆ


 

click me!