Home Remedies: ಪದೇ ಪದೇ ಕಾಡೋ ವಾಕರಿಕೆಗೆ ಇಲ್ಲಿವೆ ಸಿಂಪಲ್ ಮದ್ದು, ಏನ್ಮಾಡಬಹುದು?

By Suvarna News  |  First Published Sep 6, 2022, 2:31 PM IST

ಹೊಟ್ಟೆ ತೊಳಿಸಿದಂತಾಗಿ ವಾಕರಿಕೆ ಬರೋದು ವಿಪರೀತ ಕಿರಿಕಿರಿ ನೀಡುವ ಖಾಯಿಲೆ. ಏಕಾಏಕಿ ಶುರುವಾಗುವ ಈ ವಾಕರಿಕೆ ಮೂಡ್ ಹಾಳು ಮಾಡುತ್ತದೆ. ಇದಕ್ಕೆ ಎಷ್ಟೇ ಮಾತ್ರೆ ತೆಗೆದುಕೊಂಡ್ರೂ ಪ್ರಯೋಜನವಿಲ್ಲ ಎನ್ನುವವರು ಮನೆ ಮದ್ದನ್ನು ಟ್ರೈ ಮಾಡಿ.
 


ಪಿತ್ತ ಜಾಸ್ತಿಯಾದ್ರೆ, ಹೊಟ್ಟೆ ಕೆಟ್ಟರೆ, ಗರ್ಭಧಾರಣೆ ಸಮಯದಲ್ಲಿ, ತಲೆನೋವಿಗೆ ಹೀಗೆ ಬೇರೆ ಬೇರೆ ಕಾರಣಕ್ಕೆ ವಾಕರಿಗೆ ಬರೋದು ಸಜಹ. ಅನೇಕರು ಈ ವಾಕರಿಕೆ ಸಮಸ್ಯೆಯನ್ನು ಎದುರಿಸ್ತಾರೆ. ಆ ಕಡೆ ವಾಂತಿ ಬರೋದಿಲ್ಲ, ಈಕಡೆ ನೆಮ್ಮದಿ ಇಲ್ಲ ಎನ್ನುವಂತಹ ಸ್ಥಿತಿ ಅದು. ವಾಕರಿಕೆ ವಿಪರೀತ ಕಿರಿಕಿರಿ ನೀಡುತ್ತದೆ. ಅನೇಕ ಬಾರಿ ಮಾತನಾಡೋದು ಕಷ್ಟ ಎನ್ನುವಂತ ಪರಿಸ್ಥಿತಿ ಬರುತ್ತದೆ. ವಾಕರಿಕೆ ಸಮಸ್ಯೆ ಕಾಡಬಾರದು ಎನ್ನುವ ಕಾರಣಕ್ಕೆ ಕೆಲವರು ಔಷಧಿ ಮೊರೆ ಹೋಗ್ತಾರೆ. ಆದ್ರೆ ಪ್ರತಿ ಬಾರಿ ಔಷಧಿ ತೆಗೆದುಕೊಳ್ಳುವುದ್ರಿಂದ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ನೀವು ವಾಕರಿಕೆಗೆ ಮನೆಯಲ್ಲಿಯೇ ಮದ್ದು ಮಾಡಬಹುದು. ಇದು ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಜೊತೆಗೆ ಬೇಗ ನಿಮ್ಮ ವಾಕರಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 

ವಾಕರಿಕೆ (Nausea) ಸಮಸ್ಯೆಗೆ ಮನೆ ಮದ್ದು (Home Remedies) : 

Tap to resize

Latest Videos

ಶುಂಠಿ (Ginger) ಬಳಸಿ ನೋಡಿ : ಅಡುಗೆ ಮನೆ ಅಂದ್ಮೇಲೆ ಶುಂಠಿ ಇರ್ಲೇಬೇಕು. ಶುಂಠಿ ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ನಿಮ್ಮ ವಾಕರಿಕೆ ಸಮಸ್ಯೆಗೆ ಶುಂಠಿ ಮದ್ದಾಗಬಲ್ಲದು. ಇದು ವಾಕರಿಕೆ ಮಾತ್ರವದೆ   ಹೊಟ್ಟೆ, ಸ್ನಾಯು ನೋವು ಮತ್ತು ಶೀತ ಮತ್ತು ಕೆಮ್ಮಿನ ಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಾಕರಿಕೆ ಬರ್ತಿದ್ದರೆ ನೀವು ಹಸಿ ಶುಂಠಿಗೆ ಕಲ್ಲುಪ್ಪನ್ನು ಸೇರಿಸಿ ಸೇವನೆ ಮಾಡಬಹುದು. ಇಲ್ಲವೆ ಶುಂಠಿ ಕಷಾಯ ಕುಡಿಯಬಹುದು. ಶುಂಠಿ ಟೀ ಕೂಡ ವಾಕರಿಕೆಗೆ ಉತ್ತಮ ಎನ್ನುತ್ತಾರೆ ತಜ್ಞರು. 

ನಿಂಬೆ ಹಣ್ಣಿನಲ್ಲಿದೆ (Lemon) ವಾಕರಿಕೆ ಓಡಿಸುವ ಶಕ್ತಿ : ನಿಂಬೆ ಹಣ್ಣು ಔಷಧಿ ಗುಣಗಳಿಂದ ಸಮೃದ್ಧವಾಗಿದೆ. ವಾಕರಿಕೆಯನ್ನು ಗುಣಪಡಿಸಲು ನಿಂಬೆ ಹಣ್ಣು ಸುಲಭವಾದ ಮಾರ್ಗವಾಗಿದೆ. ನಿಂಬೆ ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ವಾಕರಿಕೆ ಅನುಭವ ನಿಮಗಾಗ್ತಿದೆ ಎಂದಾದ್ರೆ ನೀವು ನಿಂಬೆ ಹಣ್ಣಿನ ವಾಸನೆ ತೆಗೆದುಕೊಳ್ಳಬಹುದು. ಇದು ನಿಮ್ಮ ಮೂಡ್ ಬದಲಿಸುತ್ತದೆ. ಮನೆಯಲ್ಲಿ ನೀವು ನಿಂಬೆ ಹಣ್ಣಿನ ರಸ ಬಳಸಿ ತಾಜಾ ಪಾನಕ ಮಾಡಿ ಕುಡಿಯಬಹುದು. ಕೆಲವರು ನಿಂಬೆ ಹಣ್ಣಿನ ರಸಕ್ಕೆ ನೀರು ಬೆರೆಸಿ, ಸಕ್ಕರೆ ಹಾಗೂ ಚಿಟಕಿ ಏಲಕ್ಕಿ ಪುಡಿ ಸೇರಿಸಿ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಗೂ ನಿಂಬೆ ರಸ ಬೆರೆಸಿ ಕುಡಿಯುತ್ತಾರೆ.  

ನೀರು ಮತ್ತು ಜ್ಯೂಸ್ (Water and Juice) : ದೇಹವನ್ನು ಹೈಡ್ರೀಕರಿಸುವುದು ಮುಖ್ಯವಾಗುತ್ತದೆ. ನೀವು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.  ಕಾರ್ಬೊನೇಟೆಡ್ ಪಾನೀಯಗಳು ಅಥವಾ ಸಕ್ಕರೆ ಸೇರಿಸಿದ ಪಾನೀಯ ಕುಡಿಯಬೇಡಿ. ಮನೆಯಲ್ಲಿಯೇ ತಾಜಾ ಹಣ್ಣುಗಳಿಂದ ಮಾಡಿದ ಜ್ಯೂಸ್ ಸೇವನೆ ಮಾಡ್ಬಹುದು. ನೀವು ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿಯೂ ಕುಡಿಯಬಹುದು. ಇದು ವಾಕರಿಕೆಯನ್ನು ಕಡಿಮೆ ಮಾಡುತ್ತದೆ. 

ಎಲ್ಲರ ಜೊತೆ ಇದ್ದಾಗ್ಲೂ ಹೂಸು ತಡೆಯೋಕಾಗ್ತಿಲ್ವಾ ? ನಿವಾರಣೆಗೆ ಸಿಂಪಲ್ ಟಿಪ್ಸ್‌

ಉಸಿರಾಟ ಕ್ರಿಯೆ (Breathing Technology) : ಉಸಿರಾಟ ಕ್ರಿಯೆಯಲ್ಲಿ ಬದಲಾವಣೆ ಕೂಡ ನಿಮ್ಮ ವಾಕರಿಕೆ ಕಡಿಮೆ ಮಾಡುತ್ತದೆ. ಇದು ತ್ವರಿತ ಪರಿಹಾರವಾಗಿದೆ.  ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಬೇಕು. ನಿಮ್ಮ ಮನಸ್ಸು ಸಂಪೂರ್ಣ ಉಸಿರಾಟದ ಮೇಲೆ ಇರಬೇಕು. ಇದು ನಿಮ್ಮ ಮನಸ್ಥಿತಿಯನ್ನು ಬದಲಿಸುತ್ತದೆ. ಹಾಗೆಯೇ ಆಳವಾಗಿ ಉಸಿರಾಡುವುದು ಆರೋಗ್ಯಕ್ಕೂ ಒಳ್ಳೆಯದು. ಒತ್ತಡ ಕಡಿಮೆ ಮಾಡುವ ಮೂಲಕ ನಿಮ್ಮನ್ನು ಸಹಜ ಸ್ಥಿತಿಗೆ ತರಲು ಇದು ನೆರವಾಗುತ್ತದೆ.

ನಂಗೂ ಹಾರ್ಟ್ ಅಟ್ಯಾಕ್ ಆಗಬಹುದು, ಅನಿಸಿದ್ದುಂಟಾ? ಈ ಲಕ್ಷಣಗಳ ಕಡೆ ಇರಲಿ ಗಮನ

ಮಸಾಲೆಯಲ್ಲಿದೆ ವಾಕರಿಕೆ ಓಡಿಸುವ ಮದ್ದು : ಭಾರತೀಯ ಮಸಾಲೆಗಳು ಔಷಧಿಯಾಗಿ ಬಳಕೆಯಾಗ್ತವೆ. ಕೆಲವು ಮಸಾಲೆ ಪದಾರ್ಥಗಳು ವಾಕರಿಕೆ ವಿರುದ್ಧ ಹೋರಾಡಲು ನೆರವಾಗುತ್ತವೆ. ಓಂ ಕಾಳು, ಜೀರಿಗೆ ಮತ್ತು ದಾಲ್ಚಿನಿಯನ್ನು ನೀವು ವಾಕರಿಕೆ ಓಡಿಸಲು ಬಳಸಬಹುದು. ಅವುಗಳನ್ನು ಕಷಾಯದ ರೂಪದಲ್ಲಿ ಅಥವಾ ಹಾಗೆ ಬಳಕೆ ಮಾಡಬಹುದು. 
 

click me!