ಮಿದುಳು ಕುಗ್ಗುವ ಸಮಸ್ಯೆಗೆ ಪರಿಹಾರವಿಲ್ಲದೆ ಇಲ್ಲ. ಅತ್ಯುತ್ತಮ ಆಹಾರ ಸೇವನೆ, ಮಿದುಳಿನ ಆರೋಗ್ಯಕ್ಕೆ ಪೂರಕವಾದ ಆಹಾರ, ಧ್ಯಾನ ಹಾಗೂ ಪ್ರಾಣಾಯಾಮಗಳಿಂದ ಮಿದುಳು ಕುಗ್ಗದಂತೆ ನೋಡಿಕೊಳ್ಳಬಹುದು.
ವಯಸ್ಸಾದಂತೆ ಮಾನವನ (Human) ಚಟುವಟಿಕೆಗಳು (Activity) ನಿಧಾನಗೊಳ್ಳುತ್ತವೆ. ಮನಸ್ಸು ವಯಸ್ಸನ್ನು ಅಂಗೀಕರಿಸದಿದ್ದರೂ ದೇಹಕ್ಕೆ ಅದರ ಅನುಭವ ಆಗುತ್ತಿರುತ್ತದೆ. ಇದಕ್ಕೆಲ್ಲ ಕಾರಣ ಮಿದುಳು (Brain) ಕುಗ್ಗುವುದು (Shrinking). ವಯಸ್ಸಾದಂತೆ ಮಿದುಳಿನಲ್ಲಿಯೂ ಬದಲಾವಣೆ (Change) ಸಹಜ. ಮಿದುಳಿನ ಬಾಹ್ಯ ಪ್ರದೇಶ ಕಿರಿದಾಗುವುದು ಸಾಮಾನ್ಯವಾಗಿ ಕಂಡುಬರುವ ಬದಲಾವಣೆ. ಇದರಿಂದಾಗಿ ನಮ್ಮ ಕಾರ್ಯಕ್ಷಮತೆ (Ability) ಹಾಗೂ ನೆನಪಿನ ಶಕ್ತಿಯ (Memory) ಮೇಲೆ ಪರಿಣಾಮ ಉಂಟಾಗುತ್ತದೆ. ಮಿದುಳು ಕುಗ್ಗುವುದಕ್ಕೆ ವಯಸ್ಸಾಗುವುದು ಒಂದು ಪ್ರಮುಖ ಕಾರಣವಾದರೂ ನಮ್ಮ ಇತರೆ ಕೆಲ ಅಭ್ಯಾಸಗಳೂ ಇದಕ್ಕೆ ಕೊಡುಗೆ ನೀಡುತ್ತವೆ.
ನಾವು ಮಧ್ಯವಯಸ್ಸು ತಲುಪಿದಾಗ ದೇಹದೊಂದಿಗೆ ಮಿದುಳೂ ಬದಲಾಗುತ್ತದೆ. 40 ವರ್ಷ ತಲುಪಿದಾಗ ಮಿದುಳು ಕುಗ್ಗಲು ಆರಂಭಿಸುತ್ತದೆ. 60 ವರ್ಷವಾದಾಗ ಮಿದುಳು ಕುಗ್ಗುವ ವೇಗ ಇನ್ನಷ್ಟು ಹೆಚ್ಚುತ್ತದೆ. ಜತೆಗೆ, ನಮ್ಮ ಇನ್ನೂ ಹಲವಾರು ಅಭ್ಯಾಸಗಳೂ ಮಿದುಳು ಕುಗ್ಗಲು ಇನ್ನಷ್ಟು ಸಾತ್ ನೀಡುತ್ತವೆ. ಅಂತಹ ಸಾಮಾನ್ಯ ಅಭ್ಯಾಸಗಳನ್ನು ತಿಳಿದುಕೊಂಡು ಅವುಗಳನ್ನು ಬದಲಿಸಿಕೊಳ್ಳುವುದು ಉತ್ತಮ.
• ಮದ್ಯಪಾನ ಮಾಡುವುದು (Alcohol Consumtion)
ಮದ್ಯಪಾನ ಹಾನಿಕರ ಎನ್ನುವುದು ಎಲ್ಲರೂ ತಿಳಿದಿರುವ ಸಂಗತಿ. ಮದ್ಯಪಾನದಿಂದ ಮಿದುಳು ಕುಗ್ಗುವ ಪ್ರಮಾಣ ಹೆಚ್ಚುತ್ತದೆ. ಸಂಶೋಧಕರ ಪ್ರಕಾರ, ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವುದರಿಂದ ಮಿದುಳಿನ ರಚನೆ ಹಾಗೂ ಆಕಾರದ ಮೇಲೂ ಪ್ರಭಾವ ಉಂಟಾಗುತ್ತದೆ. ಇದರ ಪರಿಣಾಮ ಸ್ಮರಣೆ ಶಕ್ತಿಯ ಮೇಲಾಗುತ್ತದೆ.
• ದೀರ್ಘಕಾಲದ ಬೆನ್ನುನೋವು (Long Term Back Pain)
ಬೆನ್ನುನೋವನ್ನೇನೂ ಯಾರೂ ಬೇಕೆಂದೇ ಮಾಡಿಕೊಳ್ಳುವುದಿಲ್ಲ. ಆದರೆ, ಬೆನ್ನುನೋವನ್ನು ನಿರ್ಲಕ್ಷಿಸುವುದು ಸಲ್ಲದು. ತಜ್ಞರ ಪ್ರಕಾರ, ದೀರ್ಘಕಾಲದಿಂದ ಬೆನ್ನುನೋವಿದ್ದರೆ ಶೇ.೧೧ರಷ್ಟು ಹೆಚ್ಚು ಪ್ರಮಾಣದಲ್ಲಿ ಮಿದುಳು ಕುಗ್ಗಲು ಶುರುವಾಗುತ್ತದೆ. ೨೦೦೪ರಲ್ಲಿ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ ನಡೆಸಿದ್ದ ಒಂದು ಸಂಶೋಧನೆಯ ಪ್ರಕಾರ, ದೀರ್ಘಕಾಲದ ಬೆನ್ನುನೋವಿನಿಂದ ಮಿದುಳಿನ ಗ್ರೇ ಮ್ಯಾಟರ್ ಅಂದರೆ ಬೂದು ಭಾಗ ಕುಗ್ಗುತ್ತದೆ. ಈ ಬೂದು ಭಾಗ ನಮ್ಮ ಕೇಂದ್ರ ನರಮಂಡಲದ ಪ್ರಮುಖವಾದ ಭಾಗವಾಗಿದ್ದು, ಮಾಂಸಖಂಡಗಳ ನಿಯಂತ್ರಣ, ಅನುಭವ, ನೋಡುವುದು, ಕೇಳುವುದು, ಸ್ಮರಣೆ ಶಕ್ತಿ ಮುಂತಾದ ಕಾರ್ಯಗಳು ಸುಗಮವಾಗಿ ಸಾಗಲು ಇದೇ ಕಾರಣ.
• ಇಂಟರ್ನೆಟ್ ಬಳಕೆ (Excessive Internet Use)
ಅಚ್ಚರಿಯಾಗಬಹುದು, ಅಂತರ್ಜಾಲದ ಅಧಿಕ ಬಳಕೆಯಿಂದಲೂ ಮಿದುಳು ಕುಗ್ಗುತ್ತದೆ. ಕಳೆದ ಜೂನ್ ನಲ್ಲಿ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನ ಇದನ್ನು ಹೇಳಿದೆ. ಕಾಲೇಜು ಅಧ್ಯಯನ ಮಾಡುತ್ತಿರುವ ಯುವಕರ ಮಿದುಳನ್ನು ಸ್ಕ್ಯಾನ್ ಮಾಡಿದಾಗ ಇಂಟರ್ನೆಟ್ ಅನ್ನು ಹೆಚ್ಚು ಕಾಲ ಬಳಕೆ ಮಾಡುತ್ತಿದ್ದವರ ಮಿದುಳಿನ ಕೆಲವು ಪ್ರದೇಶಗಳು ಕುಗ್ಗಿರುವುದು ಕಂಡುಬಂದಿತ್ತು. ಕೆಲವು ಯುವಕರಲ್ಲಿ ಈ ಸಮಸ್ಯೆ ಶೇ.೧೦-೨೦ರಷ್ಟು ಹೆಚ್ಚಾಗಿತ್ತು.
ಇದನ್ನೂ ಓದಿ: Barbie Doll ಬಾರ್ಬಿ ರೀತಿ ಕಾಣಲು 53 ಲಕ್ಷ ರೂ ಖರ್ಚು, ಸಂಬಂಧ ಮುರಿದ ಕುಟುಂಬಸ್ಥರು!
• ಸಾಕಷ್ಟು ನಿದ್ರೆ ಮಾಡದಿರುವುದು (Shortage of Enough Sleep)
ದೇಹಕ್ಕೆ ಸಾಕಷ್ಟು ನಿದ್ರೆ ಮಾಡದಿರುವುದು ಮಿದುಳು ಕುಗ್ಗಲು ಇನ್ನೊಂದು ಪ್ರಮುಖ ಕಾರಣ. ಕೆಲವರು ದಿನಕ್ಕೆ ಕೇವಲ ನಾಲ್ಕು ಗಂಟೆ ನಿದ್ರೆ ಮಾಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಅವರಿಗೆ ಈ ಸಮಸ್ಯೆ ಹೆಚ್ಚು. ಇನ್ನು, ಕೆಲವರಿಗೆ ರಾತ್ರಿ ನಿದ್ರೆ ಬಾರದ ಸಮಸ್ಯೆ ಇರುತ್ತದೆ. ಅವರಿಗೂ ವಯಸ್ಸಾದಂತೆ ಮಿದುಳು ಕುಗ್ಗುವ ಸಮಸ್ಯೆ ಅತಿ ಹೆಚ್ಚು. ಸಂಶೋಧಕರ ಪ್ರಕಾರ, ಕಡಿಮೆ ನಿದ್ರೆ ಮಾಡುವ ಹಿರಿಯರಿಗಂತೂ ಈ ಸಮಸ್ಯೆ ತೀವ್ರವಾಗುತ್ತದೆ.
ಇದನ್ನೂ ಓದಿ: Men Health : ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವಾಗ್ತಿದೆಯಾ? ಎಚ್ಚರ
ಮಿದುಳು ಕುಗ್ಗುವ ಸಮಸ್ಯೆಗೆ ಪರಿಹಾರವಿಲ್ಲದೆ ಇಲ್ಲ. ಅತ್ಯುತ್ತಮ ಆಹಾರ ಸೇವನೆ, ಮಿದುಳಿನ ಆರೋಗ್ಯಕ್ಕೆ ಪೂರಕವಾದ ಆಹಾರ, ಧ್ಯಾನ ಹಾಗೂ ಪ್ರಾಣಾಯಾಮಗಳಿಂದ ಮಿದುಳು ಕುಗ್ಗದಂತೆ ನೋಡಿಕೊಳ್ಳಬಹುದು. ಪ್ರಾಣಾಯಾಮ ಈ ನಿಟ್ಟಿನಲ್ಲಿ ಬಹಳ ಸಹಕಾರಿ. ಇದರಿಂದ ಮಿದುಳು ಕುಗ್ಗದಂತೆಯೂ, ಸ್ಮರಣೆ ಶಕ್ತಿಗೆ ಯಾವುದೇ ಹಾನಿ ಆಗದಂತೆಯೂ ನಿಭಾಯಿಸಬಹುದು.