Men Health : ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವಾಗ್ತಿದೆಯಾ? ಎಚ್ಚರ

By Suvarna News  |  First Published May 2, 2022, 6:28 PM IST

ಪುರುಷರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿಸೋದು ಹೆಚ್ಚು. ಸಣ್ಣಪುಟ್ಟ ಸಮಸ್ಯೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೆ ಅವರ ಈ ನಿರ್ಲಕ್ಷ್ಯ ಸಂಗಾತಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ತಿಳಿದಿರೋದಿಲ್ಲ.  
 


ಸೆಕ್ಸ್ (Sex) ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯ. ಯೌವನಕ್ಕೆ ಬರ್ತಿದ್ದಂತೆ ನೈಸರ್ಗಿಕವಾಗಿ ದೇಹ ಇದನ್ನು ಬಯಸುತ್ತದೆ. ಆರೋಗ್ಯ (Health) ಕರ ಶರೀರಿ ಹಾಗೂ ಆರೋಗ್ಯಕರ ಮನಸ್ಸಿಗೆ ಇದು ಮುಖ್ಯ ಕೂಡ ಹೌದು. ಆದ್ರೆ ಅನೇಕ ಬಾರಿ ನಾವು ಮಾಡುವ ತಪ್ಪಿನಿಂದಾಗಿ ಸಂತೋಷ ನೀಡಬೇಕಿದ್ದ ಸೆಕ್ಸ್, ಜೀವನ ಪರ್ಯಂತ ನರಳುವಂತೆ ಮಾಡುತ್ತದೆ. ಹಾಗಾಗಿ ಆರೋಗ್ಯಕರ ಲೈಂಗಿಕ ಜೀವನ ಬಹಳ ಮುಖ್ಯ. ಅನೇಕ ಬಾರಿ ನಮ್ಮ ಸಣ್ಣ ತಪ್ಪಿನಿಂದಾಗಿ ನಾವು ಲೈಂಗಿಕವಾಗಿ ಹರಡುವ ರೋಗ (STD), ಅಥವಾ ಲೈಂಗಿಕವಾಗಿ ಹರಡುವ ಸೋಂಕು (STI)ಗೆ ಬಲಿಯಾಗಬೇಕಾಗುತ್ತದೆ. ಲೈಂಗಿಕ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸೋಂಕು ಇದಾಗಿದೆ. ಈ ಸೋಂಕು ಸಾಮಾನ್ಯವಾಗಿ ಯೋನಿ, ಮೌಖಿಕ ಅಥವಾ ಗುದ ಸಂಭೋಗದ ಮೂಲಕ ಹರಡುತ್ತದೆ. 

ಕೇವಲ ದೈಹಿಕ ಸಂಪರ್ಕದಿಂದ ಮಾತ್ರವಲ್ಲದೆ ಚುಚ್ಚುಮದ್ದು, ಅಥವಾ  ಶೇವಿಂಗ್ ಬ್ಲೇಡ್  ಬಳಸುವುದರಿಂದಲೂ ಈ ರೋಗಗಳು ಹರಡುತ್ತದೆ. ಸೋಂಕು ತಗಲಿದ ವ್ಯಕ್ತಿಗೆ ಗಾಯವಾಗಿದ್ದು, ಆತ ಬಳಸಿದ ಶೇವಿಂಗ್ ಬ್ಲೇಡ್ ಇನ್ನೊಬ್ಬರು ಬಳಸಿದ್ರೆ ಅಥವಾ ಆತನಿಗೆ ಬಳಸಿದ ಚುಚ್ಚು ಮದ್ದನ್ನೇ ಬೇರೆಯವರು ಬಳಸಿದ್ರೆ ಆಗ ಸೋಂಕು ತಗಲುವ ಅಪಾಯವಿರುತ್ತದೆ. 

Tap to resize

Latest Videos

ಎಸ್ ಟಿಡಿ ಸೋಂಕು ಕೇವಲ ಪುರುಷರನ್ನು ಅಥವಾ ಕೇವಲ ಮಹಿಳೆಯರನ್ನು ಕಾಡುವ ರೋಗವಲ್ಲ. ಅದು ಪುರುಷ ಹಾಗೂ ಮಹಿಳೆ ಇಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಾದವಳಿಗೆ ಎಸ್ ಟಿಡಿ ಕಾಣಿಸಿಕೊಂಡ್ರೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದ್ರೆ ಈ ಸೋಂಕು ಮಗುವಿಗೆ ಹರಡುವ ಅಪಾಯವಿರುತ್ತದೆ. ಪುರುಷರಲ್ಲಿ ಕಂಡುಬರುವ ಎಸ್ ಟಿಡಿಯ ಲಕ್ಷಣಗಳು ಯಾವುವು? ಅದಕ್ಕೆ ಕಾರಣವೇನು ? ಹಾಗೆ, ಅದಕ್ಕೆ ಪರಿಹಾರವೇನು ಎಂಬುದನ್ನು ಇಂದು ನಾವು ಹೇಳ್ತೇವೆ. 

HEALTH CARE : ಆನ್ಲೈನ್ ನಲ್ಲಿ ಔಷಧಿ ಖರೀದಿ ವೇಳೆ ನಡೆಯುತ್ತೆ ತಪ್ಪು

ಮೊದಲನೇಯದಾಗಿ ನಾವು ಎಸ್ ಟಿಡಿಯಲ್ಲಿ ಎಷ್ಟು ವಿಧಗಳಿವೆ ಎಂಬುದನ್ನು ತಿಳಿದುಕೊಳ್ಳೋಣ. ಪುರುಷರಲ್ಲಿ ಕಾಣಿಸಿಕೊಳ್ಳುವ ಎಸ್ ಟಿಡಿಯಲ್ಲಿ ಅನೇಕ ವಿಧಾನಗಳಿವೆ.  ಕ್ಲಮೈಡಿಯ, ಗೊನೊರಿಯಾ, ಟ್ರೈಕೊಮೋನಿಯಾಸಿಸ್ ಮತ್ತು ಜನನಾಂಗದ ಹರ್ಪಿಸ್ ಇದರಲ್ಲಿ ಸೇರಿವೆ. ಪುರುಷರಲ್ಲಿ ಕಂಡುಬರುವ ಕೆಲವು ಎಸ್ ಟಿಡಿ ಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಇನ್ನು ಕೆಲವು ಸೋಂಕಿನಲ್ಲಿ ನಾವು ಲಕ್ಷಣಗಳನ್ನು ಕಾಣಬಹುದು. 

ಪುರುಷರಲ್ಲಿ ಕಾಣಿಸಿಕೊಳ್ಳು ಎಸ್ ಟಿಡಿ ಸೋಂಕಿನ ಲಕ್ಷಣಗಳು ಯಾವುವು ಗೊತ್ತಾ? :  
• ಪುರುಷರ ಜನನಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿರುತ್ತದೆ. ಹಾಗೆಯೇ ಜನನಾಂಗದಲ್ಲಿ ಸದಾ ಉರಿ, ಸುಡುವ ಅನುಭವವಾಗುತ್ತದೆ.
• ಜನನಾಂಗದಿಂದ ಡಿಸ್ಚಾರ್ಜ್ ಆಗ್ತಿದ್ದರೆ ಈ ಬಗ್ಗೆ ಗಮನ ಹರಿಸಬೇಕು.
• ಸೊಂಟದ ಸುತ್ತ ವಿಪರೀತ ನೋವು ಕಾಣಿಸುತ್ತಿದ್ದರೆ ನಿರ್ಲಕ್ಷ್ಯ ಮಾಡ್ಬೇಡಿ.
• ಜನನಾಂಗದ ಪ್ರದೇಶದ ಸುತ್ತಲೂ ಹುಣ್ಣುಗಳು ಅಥವಾ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. 
• ಎಸ್ ಟಿಡಿ ಸೋಂಕಿಗೆ ಒಳಗಾದ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆ ವೇಳೆ ಉರಿಯ ಅನುಭವವಾಗುತ್ತದೆ. 
• ಸೋಂಕು ತಗಲಿದ ವ್ಯಕ್ತಿಗೆ ಪದೇ ಪದೇ ಬಾತ್ರೂಮ್ ಗೆ ಹೋಗಬೇಕೆನ್ನಿಸುತ್ತದೆ. 

Health Tips: ನಿದ್ರೆಕೊಡದ ಸಂಗಾತಿ ಗೊರಕೆಗೆ ಹೇಳಿ ಬೈ ಬೈ

ಇನ್ನು ಪುರುಷರಲ್ಲಿ ಕಾಣಿಸಿಕೊಳ್ಳುವ ಎಸ್ ಟಿಡಿಗೆ ಕಾರಣಗಳು ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ದೇಹದಲ್ಲಿ ತೇವಾಂಶವಿರುವ ಸ್ಥಳದಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ಎಸ್ ಟಿಡಿಗೆ ಕಾರಣವಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಸೆಕ್ಸ್ ವೇಳೆ ಒಬ್ಬರಿಂದ ಇನ್ನೊಬ್ಬರ ದೇಹ ಸೇರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿರುತ್ತವೆ. ಆದ್ರೆ ಕೆಲವು ಬಾರಿ ತುಂಬಾ ಅಪಾಯಕಾರಿಯಾಗಿರುತ್ತವೆ.

ಎಸ್ ಟಿಡಿ ಸಮಸ್ಯೆ ಗುಣಪಡಿಸುವುದು ಹೇಗೆ? : ಬ್ಯಾಕ್ಟೀರಿಯಾದಿಂದ ಉಂಟಾಗುವ ಎಸ್ ಟಿಡಿಯನ್ನು ಎಂಟಿಬಯೋಟಿಕ್ ಮಾತ್ರೆಗಳಿಂದ ಗುಣಪಡಿಸಬಹುದು. ಆದ್ರೆ ಕೆಲವರು ಎಸ್ ಟಿಡಿಗಳಿಗೆ ಚಿಕಿತ್ಸೆಯಿಲ್ಲ. ಉದಾಹರಣೆಗೆ ಹರ್ಪಿಸ್ ಮತ್ತು ಎಚ್ಐವಿ ಸೋಂಕಿನಂತಹ ಕೆಲವು ಎಸ್ ಟಿಡಿ ಸಂಪೂರ್ಣ ಗುಣವಾಗುವುದಿಲ್ಲ. ಜೀವನ ಪರ್ಯಂತ ಆ ಸಮಸ್ಯೆಯನ್ನು ಪುರುಷ ಅನುಭವಿಸಬೇಕಾಗುತ್ತದೆ. 

ಮೊದಲೇ ಹೇಳಿದಂತೆ ಲೈಂಗಿಕ ರೋಗ ಇದು. ಹಾಗಾಗಿ, ಅತಿ ಹೆಚ್ಚು ಲೈಂಗಿಕ ಕ್ರಿಯೆ ನಡೆಸುವ ವ್ಯಕ್ತಿಗಿಂತ ಒಂದಕ್ಕಿಂತ ಹೆಚ್ಚು ಜನರ ಜೊತೆ ಲೈಂಗಿಕ ಕ್ರಿಯೆ ನಡೆಸುವ ವ್ಯಕ್ತಿಗೆ ಇದು ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಬಳಸಿದ ಚುಚ್ಚುಮದ್ದು ಬಳಕೆ ಅಥವಾ ಈಗಾಗಲೇ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ವಸ್ತುಗಳ ಬಳಕೆಯಿಂದಲೂ ಕಾಡುತ್ತದೆ. ಎಸ್ ಟಿಡಿ ಬರದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದ್ರೆ ಸಂಭೋಗದ ವೇಳೆ ಕಾಂಡೋಮ್ ಬಳಕೆ ಮಾಡಬೇಕು. ಹಾಗೆ ಬೇರೆಯವರ ವಸ್ತುಗಳನ್ನು ಬಳಸಬಾರದು.

click me!