ಇದು ಆನ್ಲೈನ್ ಜಗತ್ತು. ಇಲ್ಲಿ ಎಲ್ಲವೂ ಸಿಗುತ್ತದೆ. ಔಷಧಿಗಳನ್ನು ಆನ್ಲೈನ್ ನಲ್ಲಿ ಖರೀದಿಸುವ ಟ್ರೆಂಡ್ ಕೂಡ ಹೆಚ್ಚಾಗಿದೆ. ಆದ್ರೆ ಆನ್ಲೈನ್ ಮೂಲಕ ಮೆಡಿಸಿನ್ ಖರೀದಿ ವೇಳೆ ತಪ್ಪು ಮಾಡಿದ್ರೆ ಆರೋಗ್ಯ ಹಾಳಾಗೋದು ನಿಶ್ಚಿತ.
ಈಗ ಯಾವುದೇ ವಸ್ತುವನ್ನು ಖರೀದಿ (Buy) ಸಲು ನಾವು ಮಾರುಕಟ್ಟೆ (Market) ಗೆ ಹೋಗ್ಬೇಕಾಗಿಲ್ಲ. ಸರತಿ ಸಾಲಿನಲ್ಲಿ ನಿಲ್ಬೇಕಾಗಿಲ್ಲ. ಮನೆ (Home) ಯಲ್ಲಿ ತಣ್ಣಗೆ ಕುಳಿತು, ಮೊಬೈಲ್ (Mobile) ನಲ್ಲಿ ಆರ್ಡರ್ ಮಾಡಿದ್ರೆ ಸಾಕು. ಕೆಲವೇ ಗಂಟೆಗಳಲ್ಲಿ ಆಹಾರ, ಬಟ್ಟೆ ಸೇರಿದಂತೆ ಎಲ್ಲ ವಸ್ತುಗಳನ್ನು ಡೆಲಿವರಿ (Delivery) ನೀಡುವ ವೆಬ್ ಸೈಟ್ (Web site ) ಗಳು ಸಾಕಷ್ಟಿವೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಔಷಧಿ (Medicine) ಗಳನ್ನು ಕೂಡ ಮಾರಾಟ ಮಾಡಲಾಗ್ತಿದೆ. ಹಾಗೆ ಆನ್‌ಲೈನ್‌ನಲ್ಲಿ ಔಷಧಗಳನ್ನು ಖರೀದಿಸುವ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಆನ್‌ಲೈನ್ ಮೋಡ್‌ನಲ್ಲಿ ಔಷಧಿಯನ್ನು ಖರೀದಿಸುವಾಗ ಎಚ್ಚರಿಕೆಯಿಂದಿರಬೇಕು. ಅನೇಕರು ಕೆಲವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ಅವರು ಸರಿಯಾದ ಔಷಧಿಯ ಬದಲಿಗೆ ತಪ್ಪು ಔಷಧವನ್ನು ಪಡೆಯುತ್ತಾರೆ. ಇಂದು, ಆನ್‌ಲೈನ್‌ನಲ್ಲಿ ಔಷಧಿಗಳನ್ನು ಖರೀದಿಸುವಾಗ ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಹೇಳ್ತೇವೆ.
ಆನ್ಲೈನ್ ನಲ್ಲಿ ಔಷಧಿ ಖರೀದಿ ಮುನ್ನ :
ಸೂಕ್ತ ವೆಬ್ಸೈಟ್ ಆಯ್ಕೆ : ಆನ್ಲೈನ್ ಖರೀದಿ ಹೆಚ್ಚಾಗ್ತಿದ್ದಂತೆ ವೆಬ್ಸೈಟ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದ್ರಿಂದ ತಪ್ಪುಗಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಆನ್ಲೈನ್ ನಲ್ಲಿ ಔಷಧಿ ಖರೀದಿಸುವ ಮೊದಲು ನೀವು ವಿಶ್ವಾಸಾರ್ಹ ವೆಬ್‌ಸೈಟ್ ಅನ್ನು ಆರಿಸಿಕೊಳ್ಳಬೇಕು. ವಿಶ್ವಾಸಾರ್ಹ ವೆಬ್ಸೈಟ್ ನಲ್ಲಿ ಸರಿಯಾದ ಔಷಧಿಗಳು ನಿಮಗೆ ಸಿಗುತ್ತವೆ. ನಕಲಿಗಳ ಹಾವಳಿ ಅಲ್ಲಿರುವುದಿಲ್ಲ. ಆಗ ನಕಲಿ ಔಷಧಿಯನ್ನು ಖರೀದಿಸುವುದು ತಪ್ಪುತ್ತದೆ.
ಮೊದಲ ಬಾರಿ ಔಷಧಿ ಖರೀದಿ : ಮೊದಲ ಬಾರಿ ನೀವು ಆನ್ಲೈನ್ ನಲ್ಲಿ ಔಷಧಿ ಖರೀದಿ ಮಾಡ್ತಿದ್ದೀರಿ ಎಂದಾದ್ರೆ ವೆಬ್ಸೈಟ್ ರಿವ್ಯೂವನ್ನು ಚೆಕ್ ಮಾಡಿ. ವೆಬ್ ಸೈಟ್ ನಲ್ಲಿ ಔಷಧಿ ಖರೀದಿ ಮಾಡಿದ ಗ್ರಾಹಕರ ಅಭಿಪ್ರಾಯವನ್ನು ಓದಿ.
HEALTH TIPS : ಹಾರ್ಟ್ ಗಟ್ಟಿಯಾಗಿರ್ಬೇಕೆಂದ್ರೆ ಇದರ ಬೀಜ ಕಸಕ್ಕೆ ಎಸಿಬೇಡಿ
ಕಸ್ಟಮರ್ ಕೇರ್ ಗೆ ಕರೆ ಮಾಡಿ : ಬಿಪಿ, ಮಧುಮೇಹ ಸೇರಿದಂತೆ ಕೆಲ ರೋಗಕ್ಕೆ ಪ್ರತಿ ದಿನ ಮಾತ್ರೆ ಸೇವನೆ ಮಾಡ್ಬೇಕು. ಹಾಗಾಗಿ ನಿಮಗೆ ಯಾವ ಔಷಧಿ ಎಂಬ ಮಾಹಿತಿಯಿರುತ್ತದೆ. ಮತ್ತೆ ಕೆಲವು ರೋಗದ ಮಾತ್ರೆಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ ಔಷಧಿಗಳನ್ನು ಆರ್ಡರ್ ಮಾಡುವ ಮೊದಲು ಕಸ್ಟಮರ್ ಕೇರ್ ಗೆ ಕರೆ ಮಾಡುವುದು ಒಳ್ಳೆಯದು. ನಿಮಗೆ ಯಾವ ಸಮಸ್ಯೆ ಕಾಡ್ತಿದೆ ಹಾಗೆ ಯಾವ ಮಾತ್ರೆ ಸೇವನೆ ಮಾಡ್ಬೇಕೆಂದು ಅವರಿಂದ ಸಲಹೆ ಪಡೆಯಬಹುದು.
ಆನ್ಲೈನ್ ನಲ್ಲಿ ಬಂದ ಮಾತ್ರೆ ಸೇವಿಸುವ ಮುನ್ನ ವೈದ್ಯರಿಗೆ ತೋರಿಸಿ : ನಾವು ಆಸ್ಪತ್ರೆಗೆ ಭೇಟಿ ನೀಡಿದಾಗ, ವೈದ್ಯರು ಮಾತ್ರೆ – ಔಷಧಿ ಬರೆದುಕೊಟ್ಟಿರುತ್ತಾರೆ. ಅದನ್ನು ನಾವು ಖರೀದಿ ಮಾಡಿ ಮತ್ತೆ ವೈದ್ಯರಿಗೆ ತೋರಿಸ್ತೇವೆ. ಅದೇ ರೀತಿ, ಆನ್ಲೈನ್ ನಲ್ಲಿ ಔಷಧಿ ಖರೀದಿ ಮಾಡಿದಾಗ್ಲೂ ನೀವು ಮಾಡಬೇಕು. ಆನ್ಲೈನ್ ಮೂಲಕ ಮನೆಗೆ ಔಷಧಿ ಬಂದಾಗ ಅದನ್ನು ಒಮ್ಮೆ ವೈದ್ಯರಿಗೆ ತೋರಿಸುವುದು ಒಳ್ಳೆಯದು. ನೀವು ಸರಿಯಾದ ಔಷಧಿ ಖರೀದಿ ಮಾಡಿದ್ದೀರಾ? ಇಲ್ವಾ ಎಂಬುದು ಇಲ್ಲಿ ತಿಳಿಯುತ್ತದೆ.
ಟ್ರೆಡ್ ಮಿಲ್ v/s ಹೊರಾಂಗಣ ಓಟ, ಆರೋಗ್ಯಕ್ಕೆ ಯಾವುದು ಉತ್ತಮ
ಬಿಲ್ ಪಡೆಯಲು ಮರೆಯದಿರಿ : ಆನ್ಲೈನ್ ನಲ್ಲಿ ಔಷಧಿ ಖರೀದಿ ಮಾಡಿದ ನಂತ್ರ ಡಿಲೆವರಿಗೆ ಬರುವವರಿಂದ ಬಿಲ್ ಪಡೆಯಲು ಮರೆಯದಿರಿ. ಇದು ನೀವು ಆರ್ಡರ್ ಮಾಡಿದ ಔಷಧಿಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ಒಂದು ವೇಳೆ ಈ ಔಷಧಿಗಳ ಸೇವನೆ ನಂತ್ರ ನಿಮಗೆ ಸಮಸ್ಯೆಯಾದ್ರೆ ನೀವು ಕಂಪನಿಯ ವಿರುದ್ಧವೂ ದೂರು ನೀಡಬಹುದು. ಹಾಗೆಯೇ ನೀವು ಯಾವ ಮಾತ್ರೆ ಖರೀದಿ ಮಾಡಿದ್ದೀರಿ ಎಂಬ ದಾಖಲೆ ನಿಮ್ಮ ಬಳಿ ಇರುತ್ತದೆ.