ಬೇರೆಯವರ ಮೇಲಿರಲಿ ಪ್ರೀತಿ, ಇದು ಮರಳಿ ಕೊಡುತ್ತೆ ಇನ್ನಷ್ಟು

By Suvarna NewsFirst Published Feb 6, 2023, 5:23 PM IST
Highlights

ಸಹಾನುಭೂತಿ, ಕರುಣೆ ವ್ಯಕ್ತಿತ್ವದಲ್ಲಿರಬೇಕು, ಅದನ್ನು ಬೆಳೆಸಿಕೊಳ್ಳಲು ಆದ್ಯತೆ ನೀಡಿ ಎನ್ನುವ ಮಾತುಗಳನ್ನು ದಿನಬೆಳಗಾದರೆ ಕೇಳಿರುತ್ತೇವೆ. ಆದರೂ ಅದರಿಂದೇನು ಪ್ರಯೋಜನ ಎನಿಸಬಹುದು. ಸಹಾನುಭೂತಿಯೊಂದಿದ್ದರೆ ಹಲವು ಧನಾತ್ಮಕ ಅಂಶಗಳು ವ್ಯಕ್ತಿತ್ವದಲ್ಲಿ ಜತೆಯಾಗಿರುತ್ತವೆ. 
 

ಸಹಾನುಭೂತಿ ಉಳ್ಳವರು ನೀವಾಗಿದ್ದರೆ ನಿಮ್ಮ ಸುತ್ತಮುತ್ತ ಇರುವ ಜನರ ಭಾವನೆ, ಅವರ ಸಾಮರ್ಥ್ಯದ ಮಟ್ಟವನ್ನು ಅರಿತುಕೊಂಡಿರುತ್ತೀರಿ. ಸಹಾನುಭೂತಿ ಉಳ್ಳವರಲ್ಲಿ ಇಂಥದ್ದೊಂದು ತಾಕತ್ತು ಜನ್ಮಜಾತವಾಗಿ ಅದ್ಹೇಗೋ ಬಂದಿರುತ್ತದೆ. ಕರುಣೆ ಹಾಗೂ ಸಹಾನುಭೂತಿಯಿಂದ ಕೂಡಿದ್ದು ಎಲ್ಲರ ಬಗೆಗೂ ಪ್ರೀತಿ ಹೊಂದಿದ್ದರೆ ನಿಮ್ಮಲ್ಲಿ ಖಂಡಿತವಾಗಿ ಇತರರಿಗೆ ಸಹಾಯ ಮಾಡುವ ಭಾವನೆಯೂ ಜಾಗೃತವಾಗಿರುತ್ತದೆ. ಸಹಾನುಭೂತಿ ತುಂಬ ಉತ್ತಮ ಪ್ರಜ್ಞೆಯಾಗಿದ್ದರೂ, ಅದು ಮತ್ತೊಂದು ರೀತಿಯಲ್ಲಿ ಶಾಪದಂತಾಗುವುದೂ ಇದೆ. ಏಕೆಂದರೆ, ಇವರಿಗೆ ಖಾಸಗಿ ಕ್ಷಣಗಳೂ ಇಲ್ಲವಾಗಿಬಿಡಬಹುದು. ಹಾಗೆಂದು ಜನ ಇವರನ್ನು ಸಾಕಷ್ಟು ಹೊಗಳುತ್ತಾರೆ. ಸಹಾನುಭೂತಿ ಉಳ್ಳವರು ಸಾಮಾನ್ಯವಾಗಿ ಮತ್ತೊಬ್ಬರ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾರೆ. ಇನ್ನೊಬ್ಬರ ನೋವು, ನಲಿವಿಗೆ ಕಿವಿಯಾಗುವ ಮನಸ್ಸು ಇವರಲ್ಲಿರುತ್ತದೆ. ಎದುರಿನವರನ್ನು ಜಡ್ಜ್ ಮಾಡದಿರುವ ದೊಡ್ಡ ಗುಣ ಇರುತ್ತದೆ. ಒಂದೊಮ್ಮೆ ಅವರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದರೂ ಅವರೊಂದಿಗೆ ಮಾತುಕತೆ ನಡೆಸಲು ಹಿಂದೇಟು ಹಾಕದೆ ಇರುವುದು ಕಂಡುಬರುತ್ತದೆ. ಇಷ್ಟೆ ಅಲ್ಲ, ಸಹಾನುಭೂತಿ ಉಳ್ಳವರಲ್ಲಿ ಹಲವು ಉತ್ತಮ ಗುಣಗಳು ಜತೆಯಾಗಿರುವುದು ಸಾಮಾನ್ಯ ಎನ್ನಲಾಗಿದೆ. 

•    ಆಳವಾದ ಭಾವನೆಗಳು (Deep Emotions)
ಭಾವನೆಗಳು ತೀವ್ರವಾಗಿದ್ದಷ್ಟೂ ವ್ಯಕ್ತಿ ತನ್ನೊಳಗೆ ತಾನು ವಿಚಾರ ಮಾಡುವ ವಿಸ್ತಾರ ಹೆಚ್ಚುತ್ತದೆ. ನಿಮ್ಮಲ್ಲಿ ಸಹಾನುಭೂತಿ (Empathy) ತುಂಬಿದ್ದರೆ ಕಣ್ಣಿಗೆ ಕಂಡಿದ್ದು, ಕಿವಿಗೆ ಕೇಳಿದ್ದೆದರ ಬಗ್ಗೆ ನೀವು ಅನುಭವಿಸಬಲ್ಲಿರಿ (Feel). ಈ ಗುಣ ನಿಮ್ಮನ್ನು ಇತರರಿಗಿಂತ ಭಿನ್ನವಾಗಿ (Different) ರೂಪಿಸುತ್ತದೆ. 

ಚಿನ್ನ ಅಲ್ಲ, ವಜ್ರವೂ ಅಲ್ಲ ಹೆಂಡ್ತಿ ತನ್ನ ಗಂಡನಿಂದ ಬಯಸೋದೇನು ಗೊತ್ತಾ?

•    ಸಂಘರ್ಷವೆಂದರೆ (Conflict) ಆಗದು
ಸಂಘರ್ಷದಿಂದ, ವಾದದಿಂದ ಏನಾದರೂ ಸಾಧಿಸಲು (Achieve) ಸಾಧ್ಯವೇ ಎನ್ನುವುದು ನಿಮ್ಮ ಧೋರಣೆಯಾಗಿರುತ್ತದೆ. ಯಾವಾಗಲಾದರೂ ಇತರರೊಂದಿಗೆ ವಾದ ಮಾಡುವ ಸನ್ನಿವೇಶ ಏರ್ಪಟ್ಟರೂ ನೀವು ಮಾತುಕತೆಯ (Dialogue) ಮೂಲಕವೇ ವಿವಾದ ಬಗೆಹರಿಸಿಕೊಳ್ಳಲು ಯತ್ನಿಸುತ್ತೀರಿ. ಏಕೆಂದರೆ, ಮಾತುಕತೆಯಲ್ಲಿ, ಮುಕ್ತ ಸಂವಹನದಲ್ಲಿ (Open Communication) ಹಾಗೂ ವಿವೇಕದ ವರ್ತನೆಯಲ್ಲಿ ನಿಮಗೆ ನಂಬಿಕೆ (Faith) ಇರುತ್ತದೆ. ಹೀಗಾಗಿ, ಸಾಮಾನ್ಯವಾಗಿ ಯಾವುದೇ ಸಮಯದಲ್ಲೂ ತಾಳ್ಮೆ (Cool) ಕಳೆದುಕೊಳ್ಳುವುದಿಲ್ಲ. 

•    ಜನರ ಸಾಮರ್ಥ್ಯ (Ability) ಹಾಗೂ ಉದ್ದೇಶದ (Intention) ಬಗ್ಗೆ ಅರಿವು
ಸಹಾನುಭೂತಿಯುಳ್ಳವರು ನೀವಾಗಿದ್ದರೆ ನಿಮ್ಮಲ್ಲಿ ಜನ್ಮಜಾತವಾಗಿ ಇತರರ ಸಾಮರ್ಥ್ಯ ಹಾಗೂ ಉದ್ದೇಶವನ್ನು ಅರಿತುಕೊಳ್ಳುವ ಬುದ್ಧಿ ಜಾಗೃತವಾಗಿರುತ್ತದೆ. ಇದನ್ನು ಆರನೇ ಇಂದ್ರಿಯ ಬೇಕೆಂದರೂ ಕರೆಯಬಹುದು. ಯಾರಾದರೂ ಸುಳ್ಳು (Lie) ಹೇಳುತ್ತಿದ್ದರೆ, ವಿಷಯವನ್ನು ಮುಚ್ಚಿಡುತ್ತಿದ್ದರೆ, ಅಪ್ರಾಮಾಣಿಕತೆ (Insincere) ಹೊಂದಿದ್ದರೆ ಬೇಗ ನಿಮ್ಮ ಅರಿವಿಗೆ ಬರುವುದು ಹೆಚ್ಚು. ಇದೊಂಥರ ಸೂಪರ್ ಪವರ್ (Super Power) ಇದ್ದ ಹಾಗೆ. ನಿಮ್ಮನ್ನು ಹ್ಯೂಮನ್ ಲೈ ಡಿಟೆಕ್ಟರ್ (Human Lie Detector) ಎಂದೂ ಕರೆಯಬಹುದು. ಇಂಟ್ಯೂಷನ್ (Intution) ಅಂದರೆ ಅಂತಃಪ್ರಜ್ಞೆ ಜಾಗೃತವಾಗಿರುತ್ತದೆ. ಕೆಟ್ಟ ಜನರೊಂದಿಗೆ ಒಡನಾಡಲು ನಿಮಗೆ ಅಂತರಾಳದಿಂದ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅನೇಕ ಕೆಟ್ಟ ಸನ್ನಿವೇಶಗಳಿಂದ ದೂರವಿರಲು ನಿಮಗೆ ಸಾಧ್ಯವಾಗುತ್ತದೆ. ನ್ಯಾಯಾನ್ಯಾಯದ (Judgement) ಪರಿಕಲ್ಪನೆಯೂ ನಿಮ್ಮಲ್ಲಿರುತ್ತದೆ.

ನಿಮ್ಮ ಗೆಳೆಯ ನಿಮ್ಮನ್ನು ನಿಜಕ್ಕೂ ಕೇರ್ ಮಾಡ್ತಾನಾ?

•    ಎಲ್ಲದರಲ್ಲೂ ಸೊಗಸನ್ನು (Beauty) ಕಾಣುವ ಮನೋಭಾವ
ಎಲ್ಲಕ್ಕಿಂತ ಅಧಿಕವಾಗಿ, ನಿಮ್ಮಲ್ಲಿ ಸಹಾನುಭೂತಿ ತುಂಬಿದ್ದಾಗ ಜಗತ್ತಿನ ಪ್ರತಿಯೊಂದರಲ್ಲೂ ಸೊಗಸನ್ನು ಕಾಣುವ ಬುದ್ಧಿ ಜಾಗೃತವಾಗುತ್ತದೆ. ಸಣ್ಣದೊಂದು ಕಾರ್ಯ, ಸಣ್ಣದೊಂದು ಅಂಶದಲ್ಲೂ ಸೊಗಸನ್ನು ಕಂಡರೆ ಜೀವನ (Life) ಸುಂದರವೆನಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಸುತ್ತಲೂ ನೆಗೆಟಿವ್ (Negative) ಜನರಿಂದ ಕೂಡಿದ್ದಾಗ ನಿಮಗೆ ತೊಂದರೆಯಾಗಬಹುದು. ಬದಲಿಗೆ, ಕಲೆ (Art), ಸಂಗೀತ (Music), ನಿಸರ್ಗ (Nature), ಧನಾತ್ಮಕ ಜನರ ಸನಿಹದಲ್ಲಿ ನಿಮ್ಮತನ ಅರಳುವುದು ಗ್ಯಾರಂಟಿ. 

•    ಇತರರ ನೋವು (Pain) ನಿಮ್ಮದು
ಸಹಾನುಭೂತಿ ಉಳ್ಳವರಲ್ಲಿ ಉತ್ತಮವೆನಿಸದ, ಸಮಸ್ಯೆ ಸೃಷ್ಟಿಸುವಂತಹ ಅಂಶವೂ ಇದೆ. ಅದೇನೆಂದರೆ, ಇತರರ ನೋವು ನಿಮ್ಮದು ಎನ್ನುವಂತೆ ವರ್ತಿಸುತ್ತೀರಿ. ಜನರ ಭಾವನೆಗಳನ್ನು ಅರಿತುಕೊಳ್ಳುವುದು ನಿಮಗೆ ಸುಲಭವಾಗಿರುವುದರಿಂದ ಅವರ ನೋವನ್ನೂ ನಿಮ್ಮದೆಂದು ಭಾವಿಸುವುದು ಹೆಚ್ಚು. ಇದರಿಂದ ತೊಂದರೆ (Problem) ಹೆಚ್ಚು. 
 

click me!