28ರ ಹರೆಯದ ಯುವತಿ ತನ್ನ ಕೊನೆಯ ದಿನದ ಕುರಿತು ಮಾಡಿದ ಪೋಸ್ಟ್ ಎಂತವರ ಕಣ್ಣಲ್ಲಿ ಕಣ್ಮೀರು ಸುರಿಸುತ್ತೆ. ಕಾರಣ ಸಾವನ್ನು ಎದುರಿನಲ್ಲಿಟ್ಟುಕೊಂಡು ನಗು ನಗುತ್ತಲೇ ಬರ ಮಾಡಿಕೊಂಡ ಯವತಿಯ ನೋವಿನ ಹಾಗೂ ದುರಂತ ಘಟನೆ ವಿವರ ಇಲ್ಲಿದೆ.
ನೆದರ್ಲೆಂಡ್(ಜ.31) ವಯಸ್ಸು ಕೇವಲ 28. ತನ್ನ ಸಾವಿನ ದಿನಾಂಕ, ಸಮಯ ಬರೆದ ಗಟ್ಟಿಗಿಟ್ಟಿ ಈಕೆ. ಆದರೆ ಈ ಯುವತಿಯ ನಗು ಹಾಗೂ ಕೊನೆಯ ಪೋಸ್ಟ್ ಎಂತವರನ್ನು ಭಾವುಕರನ್ನಾಗಿ ಮಾಡುತ್ತದೆ. ಕಾರಣ ದಯಾಮರಣ ಪಡೆದ ಈ ಯುವತಿ ಈಗಿಲ್ಲ. ಆದರೆ ಆಕೆಯ ಪೋಸ್ಟ್, ನೆನಪುಗಳು ಮಾತ್ರ ಹಚ್ಚ ಹಸುರಾಗಿದೆ. ನೆದರ್ಲೆಂಡ್‌ನ 28ರ ಹರೆಯದ ಲೌರೆನ್ ಹ್ಯೂವೆ ಜನವರಿ 27ರಂದು ದಯಾಮರಣದ ಮೂಲಕ ಮೃತಪಟ್ಟಿದ್ದಾರೆ. ಆದರೆ ತನ್ನ ದಯಾಮರಣದ ಕುರಿತು ಈಕೆ ಪೋಸ್ಟ್ ಮಾಡಿದ್ದಳು. ಶನಿವಾರ ನನ್ನ ಕೊನೆಯ ದಿನ. ಮಧ್ಯಾಹ್ನ 1.30ರಿಂದ 2.30ರೊಳಗೆ ನಾನು ಸಾಯುತ್ತೇನೆ. ನನ್ನ ಅಂತ್ಯಸಂಸ್ಕಾರಕ್ಕೆ ನಾನೇ ಆಮಂತ್ರಣ ವಿನ್ಯಾಸ ಮಾಡಿದ್ದೇನೆ. ವಿಚಿತ್ರವಾದರೂ ಹೊಸ ಅನುಭವ ಎಂದಿದ್ದಾಳೆ.
ಲೌರೆನ್ ಹ್ಯೂವೆ ಎಲ್ಲರಂತೆ ಸ್ವಚ್ಚಂದ ದಿನಗಳ ಕಳೆದ ಯುವತಿ. ಸುಂದರ ಬಾಲ್ಯ, ಶಿಕ್ಷಣ ಹೀಗೆ ಎಲ್ಲವೂ ಅಚ್ಚುಕಟ್ಟಾಗಿತ್ತು. ಆದರೆ ಪದೇ ಪದೆ ಆರೋಗ್ಯ ಸಮಸ್ಯೆ ಮಾತ್ರ ಲೌರೆನ್‌ಗೆ ಎಲ್ಲಿಲ್ಲದಂತೆ ಕಾಡುತ್ತಿತ್ತು. 2019ರಲ್ಲಿ ಲೌರೆನ್ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅತೀಯಾದ ನೋವು, ಮಾನಸಿಕ ತೊಳಲಾಟದಿಂದ ಬಳಲಿದ್ದಳು.
ದಯಾಮರಣ ಕೋರಿ ಪ್ರಾಣ ಬಿಟ್ಟ ಖ್ಯಾತ ನಟಿ! ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದೇ ಸಿಂಧು ದುರಂತ ಸಾವು!
ಆಸ್ಪತ್ರೆ ದಾಖಲಾದ ಲೌರೆನ್‌ಗೆ ಆಘಾತ ಕಾದಿತ್ತು. ಕಾರಣ ಕ್ರಾನಿಕ್ ಫಟಿಗ್ ಸಿಂಡ್ರೋಮ್ ಹಾಗೂ(CFS) ಹಾಗೂ ಮೈಯಾಲ್ಜಿಕ್ ಎನ್ಸೆಫಾಲೋಮೈಲಿಟಿಸ್ (ME) ಆರೋಗ್ಯ ಸಮಸ್ಯೆಯಿಂದ ಬಳಲುತಿರುವುದು ಪತ್ತೆಯಾಗಿತ್ತು. ಇದರ ಜೊತೆಗೆ ಆಟಿಸಂ, ಆತಂಕ, ADHD ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಗಳು ಕೂಡ ಸೇರಿಕೊಂಡಿತ್ತು.
For my non-Dutch speaking followers, this is quite important news so I thought I'd summarize:
My last day will be on Saturday, January 27th. The will happen between 1:30 and 2:30 PM.
If you want to read more, you can use Google Translate on my blog. https://t.co/RgVQYL4vBY
2019ರಲ್ಲಿ ಕೋವಿಡ್ ವಕ್ಕರಿಸಿದಾಗ ಪಡಬಾರದ ಕಷ್ಟಪಟ್ಟಿದ್ದಳು. ಆದರೆ ಚಿಕಿತ್ಸೆ ಮುಂದುವರಿದಿತ್ತು. ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲ ಪ್ರಯತ್ನಗಳು ನಡೆಯಿತು. ಕೊನೆಗೆ ವೈದ್ಯರಿಗೂ ಏನೂ ಮಾಡಲಾಗದ ಪರಿಸ್ಥಿತಿ ಎದುರಾಯಿತು. ಇತ್ತ ದಿನದಿಂದ ದಿನಕ್ಕೆ ಅತೀವ ನೋವಿನಿಂದ ದಿನದೂಡುವದೇ ಕಷ್ಟವಾಗಿತ್ತು. ಹೀಗಾಗಿ ಈಕೆ ದಯಾಮರಣ ಪಡೆಯಲು ಇಚ್ಚಿಸಿದ್ದಳು.
ದಯಾಮರಣ ಕುರಿತು ಪ್ರಕ್ರಿಯೆ ಪೂರ್ಣಗೊಳಿಸಿದ ಈಕೆ ಅಷ್ಟೇ ಸಂತೋಷವಾಗಿ ತನ್ನ ಸಾವನ್ನು ಬರಮಾಡಿಕೊಂಡಿದ್ದಾಳೆ. ತನ್ನ ದಯಾಮರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಲೌರೆನ್, ಹಲವು ಪ್ರಶ್ನೆಗಳಿಗೂ ಉತ್ತರ ನೀಡಿದ್ದರು. ಈ ವೇಳೆ ನಾನು ದಯಾಮರಣ ಹೊಂದುತ್ತಿದ್ದೇನೆ. ಜನವರಿ 27ರ ಶನಿವಾರ ನನ್ನ ಕೊನೆಯ ದಿನ. ಮಧ್ಯಾಹ್ನ 1.30ರಿಂದ 2.30ರ ನಡುವಿನಲ್ಲಿ ದಯಾಮರಣ ಪಡೆಯಲಿದ್ದೇನೆ ಎಂದು ಪೋಸ್ಟ್ ಮಾಡಿದ್ದಾಳೆ.
ಏಷ್ಯಾದ 45 ವರ್ಷದ ಹೆಣ್ಣಾನೆಗೆ ದಯಾಮರಣ ಕಲ್ಪಿಸಿದ ಮೃಗಾಲಯ
ನಾನು ಕೊನೆಯ ಕ್ಷಣದ ದಿನಾಂಕ ಮತ್ತು ಸಮಯವನ್ನು ಸಾರ್ವಜನಿಕಗೊಳಿಸಿದ್ದೇನೆ. ಕಾರಣ ನನ್ನಂತೆ ನೀವು ಕೂಡ ಉತ್ಸುಕರಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಯಾವ ಸಂಭವಿಸುತ್ತದೆ ಎಂದು ತಿಳಿದುಕೊಳ್ಳುವ ಹಾಗೂ ಅನುಭವ ವಿಶೇಷ. ನನಗೆ ಶುಭಕೋರಲು ಬಯಸುವುದಾದರೆ ಮೇಣದ ಬತ್ತಿ ಉರಿಸಿ ಎಂದು ಬರೆದುಕೊಂಡಿದ್ದಾಳೆ. ಇಷ್ಟೇ ಅಲ್ಲ, ಫೋಟೋ ಒಂದನ್ನು ಹಂಚಿಕೊಂಡು ಮೀಮ್ಸ್ ಮಾಡಿದ್ದಾಳೆ.