ಪ್ರತಿಯೊಂದು ವಿಷ್ಯಕ್ಕೂ ಬೇರೆಯವರನ್ನು ಅವಲಂಬಿಸಬಾರದು ನಿಜ. ಹಾಗಂತ ಎಲ್ಲ ಕೆಲಸವನ್ನು ನಾನೇ ಮಾಡ್ತೇನೆ ಅಂತಾ ಹೋಗೋದು ಒಳ್ಳೆಯದಲ್ಲ. ಅತಿಯಾದ ಸ್ವಾವಲಂಬಿತನ ನಿಮ್ಮನ್ನು ಗಟ್ಟಿಗೊಳಿಸುವ ಬದಲು ದುರ್ಬಲಗೊಳಿಸುತ್ತದೆ.
ಚಿಕ್ಕವರಾಗಿದ್ದಾಗಿನಿಂದಲೂ ಅಥವಾ ದೊಡ್ಡವರು ಚಿಕ್ಕವರಿಗೆ ನೀವೇ ಸ್ವತಂತ್ರವಾಗಿ ಎಲ್ಲವನ್ನೂ ಮಾಡಿಕೊಳ್ಳಬೇಕು, ಯಾರ ಮೇಲೂ ಅವಲಂಬಿಸಬಾರದು, ದೊಡ್ಡವರಾದ ಹಾಗೆ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂಬ ಕಿವಿಮಾತನ್ನು ಹೇಳುತ್ತಾರೆ. ಒಂದು ಹಂತಕ್ಕೆ ಇದು ನೂರಕ್ಕೆ ನೂರು ನಿಜ. ಪರಾವಲಂಬಿ ಜೀವನ ಎಂದೂ ಸಮಂಜಸವಲ್ಲ. ಹಾಗಂತ ಅತಿಯಾದ ಸ್ವಾವಲಂಬನೆ ಕೂಡ ಒಳ್ಳೆಯದಲ್ಲ. ನಿತ್ಯದ ಜೀವನದಲ್ಲಿ ನಾವು ಕೆಲವರನ್ನು ನೋಡುತ್ತೇವೆ. ಅವರು ಯಾರ ಬಳಿಯೂ ಸಹಾಯ ಕೇಳಲು ಇಚ್ಛಿಸುವುದಿಲ್ಲ. ಬೇರೆಯವರು ಮಾಡಿದ ಕೆಲಸ ಅವರಿಗೆ ಸರಿ ಎನಿಸುವುದಿಲ್ಲ. ತಾನು ಸ್ವಾವಲಂಬಿ ತನಗೆ ಯಾರ ಸಹಾಯವೂ ಬೇಡ ಎಂದು ಅವರು ಸಾಬೀತುಪಡಿಸುತ್ತಾರೆ. ಆದರೆ ಕೆಲವು ತಜ್ಞರು ಹೇಳುವಂತೆ ಇಂತಹ ಅತಿಯಾದ ಸ್ವಾವಲಂಬನೆ ಅಥವಾ ಹೈಪರ್ ಇಂಡಿಪೆನ್ಡೆನ್ಸ್ ಸ್ವಭಾವ ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ. ಈ ಹೈಪರ್ ಇಂಡಿಪೆನ್ಡೆನ್ಸ್ ಎಂದರೇನು? ಅದರ ಕೆಲವು ಲಕ್ಷಣಗಳೇನು ಎಂಬುದನ್ನು ನೋಡೋಣ.
ಹೈಪರ್ ಇಂಡಿಪೆನ್ಡೆನ್ಸ್ ಟ್ರೌಮಾ (Hyper Independence Trauma) ಎಂದರೇನು?: ಹೈಪರ್ ಇಂಡಿಪೆನ್ಡೆನ್ಸ್ ಒಂದು ಬಗೆಯ ಮಾನಸಿಕ (Mental) ಖಾಯಿಲೆಯಾಗಿದೆ. ಇದಕ್ಕೆ ಒಳಗಾದ ವ್ಯಕ್ತಿ ತನ್ನನ್ನು ತಾನು ಎಕ್ಸಟ್ರೀಮ್ ಇಂಡಿಪೆನ್ಡೆನ್ಸ್ ಎನ್ನುವಂತೆ ತೋರಿಸಿಕೊಳ್ಳುತ್ತಾನೆ. ಇಂತಹ ವ್ಯಕ್ತಿಗಳು ಎಂತಹ ಪರಿಸ್ಥಿತಿಯಲ್ಲೂ ಇನ್ನೊಬ್ಬರ ಸಹಾಯ ಪಡೆಯುವುದನ್ನು ಇಷ್ಟಪಡುವುದಿಲ್ಲ. ಅವರ ಈ ಸ್ವಭಾವದಿಂದಲೇ ಅವರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
undefined
ಹೈಪರ್ ಇಂಡಿಪೆನ್ಡೆನ್ಸ್ ಟ್ರೌಮಾದ ಲಕ್ಷಣ (Symptom) ಗಳು : ಯಾವಾಗಲೂ ಕೆಲಸದಲ್ಲೇ ಮುಳುಗಿರುವುದು : ಈ ಖಾಯಿಲೆಗೆ ಒಳಗಾದವರು ಯಾವಾಗಲೂ ತಮ್ಮದೇ ಆದ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಕೆಲಸದ ನಡುವೆ ಅವರಿಗೆ ತಮ್ಮ ವಯಕ್ತಿಯ ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ಗಮನವೇ ಇರುವುದಿಲ್ಲ. ಇಂತವರನ್ನು ವರ್ಕೋಹಾಲಿಕ್ ಅಥವಾ ಓವರ್ ಅಚೀವರ್ ಎಂದು ಕೂಡ ಹೇಳಬಹುದು. ಬೇಡದ ಸಂಬಂಧದ ಸುತ್ತ ಸುತ್ತುವುದು : ಹೈಪರ್ ಇಂಡಿಪೆನ್ಡೆನ್ಸ್ ಹೊಂದಿರುವ ವ್ಯಕ್ತಿಗಳು ತುಂಬ ಹಳೆಯ ಸಂಬಂಧ ಅಥವಾ ಬೇಡದ ಸಂಬಂಧವನ್ನು ಮುಂದುವರೆಸುತ್ತಾರೆ. ಆ ಸಂಬಂಧದಿಂದ ಅವರಿಗೆ ತೊಂದರೆ ಆಗುತ್ತಿದ್ದರೂ ಕೂಡ ಅದನ್ನು ಅವರು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ತಾವು ಸಮರ್ಥರು ಎಂದು ತೋರಿಸಿಕೊಳ್ಳುವ ಗೀಳು ಇರುತ್ತದೆ. ಹಾಗಾಗಿಯೇ ಅವರು ಬೇಡದ ಸಂಬಂಧವನ್ನು ಕೂಡ ಮುಂದುವರೆಸುತ್ತಾರೆ.
ARYA PERMANA: 200KG ತೂಕದ ಬಾಲಕ ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ?
ಸಹಾಯ ಪಡೆಯಲು ಹಿಂಜರಿಕೆ : ಹೈಪರ್ ಇಂಡಿಪೆನ್ಡೆನ್ಸ್ ತೊಂದರೆಯಿಂದ ಬಳಲುತ್ತಿರುವವರು ಅವಶ್ಯ ಇದ್ದಾಗಲೂ ಕೂಡ ಇತರರ ಸಹಾಯ ಪಡೆಯಲು ಹಿಂಜರಿಯುತ್ತಾರೆ. ಇನ್ನೊಬ್ಬರ ಸಹಾಯ ಕೇಳಲು ಅವರಿಗೆ ತೊಂದರೆ ಎನಿಸುತ್ತದೆ.
ನಂಬಿಕೆಯ ಕೊರತೆ : ಹೈಪರ್ ಇಂಡಿಪೆನ್ಡೆನ್ಸ್ ಟ್ರೌಮಾ ಸಮಸ್ಯೆ ಇರುವವರು ಯಾರನ್ನೂ ನಂಬುವುದಿಲ್ಲ. ಇತರರು ಯಾವಾಗಲೂ ತನ್ನನ್ನು ಕೆಳಗೆ ಇಳಿಸಲು ಮತ್ತು ನನ್ನ ನಂಬಿಕೆ ಮುರಿಯುವ ಪ್ರಯತ್ನ ಮಾಡುತ್ತಾರೆ ಎನ್ನುವ ಭಾವನೆಯಲ್ಲೇ ಅವರು ಸದಾ ಇರುತ್ತಾರೆ.
ಗುದನಾಳದಲ್ಲಿ ಸಿಲುಕಿತ್ತು ಸೌತೆಕಾಯಿ, ಬೀಜ ತಿಂದಿದ್ದೆ ಎಂದ ವ್ಯಕ್ತಿ, ದಂಗಾದ ವೈದ್ಯರು!
ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವುದು: ಇನ್ನೊಬ್ಬರ ಎದುರು ಹಾರ್ಡ್ ವರ್ಕರ್ ಅಥವಾ ಇಂಡಿಪೆಂಡೆಂಟ್ ಎನಿಸಿಕೊಳ್ಳಲು ಇವರು ಯಾವ ಕೆಲಸ ಬೇಕಾದರೂ ಮಾಡುತ್ತಾರೆ. ಹೈಪರ್ ಇಂಡಿಪೆನ್ಡೆನ್ಸ್ ಹೊಂದಿರುವ ವ್ಯಕ್ತಿಗಳು ತಮ್ಮ ಶಕ್ತಿಗೂ ಮೀರಿ ಜವಾಬ್ದಾರಿಗಳನ್ನು ಹೊರುತ್ತಾರೆ.
ಆತಂಕ : ತಮ್ಮ ಶಕ್ತಿಗೂ ಮೀರಿದ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಇವರು ಯಾವಾಗಲೂ ಆತಂಕ ಮತ್ತು ಒತ್ತಡದ ಜೀವನ ನಡೆಸುತ್ತಾರೆ. ಹೆಚ್ಚಿನ ಕೆಲಸ ಮತ್ತು ಒತ್ತಡದಿಂದ ಯಾವಾಗಲೂ ಅಸಮಾಧಾನ, ಕೋಪ ಮತ್ತು ಕಿರಿಕಿರಿಗೆ ಒಳಗಾಗುತ್ತಾರೆ.
ಒಂಟಿಯಾಗಿರುವುದು : ಹೈಪರ್ ಇಂಡಿಪೆನ್ಡೆನ್ಸ್ ಟ್ರೌಮಾದಿಂದ ಬಳಲುತ್ತಿರುವವರು ಒಂಟಿ ಜೀವಿಗಳಾಗಿರುತ್ತಾರೆ. ಇವರು ಪ್ರೈವೇಟ್ ಪರ್ಸನ್ ಆಗಿರುತ್ತಾರೆ. ಇವರು ತಮ್ಮ ಭಾವನೆ, ಆಸೆ, ಆಕಾಂಕ್ಷೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.
ಹೈಪರ್ ಇಂಡಿಪೆನ್ಡೆನ್ಸ್ ಟ್ರೌಮಾದಿಂದ ಹೊರಬರುವುದು ಹೇಗೆ? : ಈ ಖಾಯಿಲೆಗೆ ಒಳಗಾದ ವ್ಯಕ್ತಿಗಳು ಹೆಲ್ದಿ ರೆಲೇಷನ್ಶಿಪ್, ನಂಬಿಕೆ ಮತ್ತು ತಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಈ ಸಮಸ್ಯೆಯನ್ನು ಹೆಚ್ಚಿನ ಕಾಳಜಿ ಮತ್ತು ಬೆಂಬಲದೊಂದಿಗೆ ನಿರ್ವಹಿಸಬೇಕು. ಈ ಸಮಸ್ಯೆ ಉಲ್ಬಣವಾಗುವ ಮೊದಲು ಸೂಕ್ತ ತಜ್ಞರ ಮೂಲಕ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.