ತೂಕ ಇಳಿಸಿಕೊಳ್ಳೋದು ಈಗ ಸುಲಭವಲ್ಲ. ಸಾಕಷ್ಟು ಪ್ರಯತ್ನದ ನಂತ್ರವೂ ಒಂದೆರಡು ಕೆಜಿ ಇಳಿಯೋದು ಕಷ್ಟದ ಕೆಲಸ. ಅದ್ರಲ್ಲೂ ಸಣ್ಣವರಿರುವಾಗ ಅವರ ಬಾಯಿಕಟ್ಟಿ, ಬೆವರಿಳಿಸಿ ತೂಕ ಕಡಿಮೆ ಮಾಡೋದು ಮತ್ತಷ್ಟು ಕಠಿಣ. ಆದ್ರೆ ಪ್ರಯತ್ನವಿದ್ರೆ ಫಲ ಎನ್ನುವಂತೆ ಈ ಹುಡುಗ ಸಾಧಿಸಿ ತೋರಿಸಿದ್ದಾನೆ.
ತೂಕ ಹೆಚ್ಚಳ ಈಗಿನ ದಿನಗಳಲ್ಲಿ ಮಾಮೂಲಿಯಾಗಿದ್ರೂ ಮಕ್ಕಳ ತೂಕ ವಿಪರೀತವಾಗಿದ್ರೆ ಅದು ಅಪಾಯ. ಸಣ್ಣ ವಯಸ್ಸಿನಲ್ಲಿಯೇ ನೂರರ ಗಡಿದಾಟಿದ ಅನೇಕ ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಾಲಕನೊಬ್ಬನ ಫೋಟೋ ವೈರಲ್ ಆಗಿತ್ತು. ಆತನ ಅತಿಯಾದ ತೂಕವೇ ಆತ ಪ್ರಸಿದ್ಧಿಪಡೆಯಲು ಕಾರಣವಾಗಿತ್ತು. ಆತನ ಹೆಸರು ಆರಿಯಾ ಪಮಾನಾ. ವಿಶ್ವದ ಅತ್ಯಂತ ದಡೂತಿ ಬಾಲಕ ಎಂಬ ಬಿರುದು ಆತನಿಗೆ ಸಿಕ್ಕಿತ್ತು. ಆದ್ರೀಗ ಆರಿಯಾ ಪಮಾನಾ ಬದಲಾಗಿದ್ದಾನೆ. 10ನೇ ವಯಸ್ಸಿನಲ್ಲಿಯೇ 200 ಕೆಜಿ ತೂಕವಿದ್ದ ಆರಿಯಾ ಪಮಾನಾ ಕೆಲ ವರ್ಷಗಳ ನಂತ್ರ ತನ್ನ ತೂಕವನ್ನು 114 ಕೆಜಿಗೆ ತಂದಿದ್ದ. ಈಗ ಆತನ ತೂಕ 86 ಕೆಜಿಯಾಗಿದೆ. ಇಂಡೋನೇಷ್ಯಾದ ಪ್ರಸಿದ್ಧ ಮತ್ತು ವೃತ್ತಿಪರ ಬಾಡಿ ಬಿಲ್ಡರ್ ಈತನ ತೂಕ ಇಳಿಕೆಗೆ ನೆರವಾಗಿದ್ದ. ನಾವಿಂದು ಆರಿಯಾ ಪಮಾನಾ ಹೇಗೆ ತೂಕ ಇಳಿಸಿಕೊಂಡಿದ್ದಾನೆ ಎಂಬುದನ್ನು ನಿಮಗೆ ಹೇಳ್ತೇವೆ.
ಆರಿಯಾ ಪಮಾನಾ (Aria Permana) ತೂಕ ಹೀಗೆ ಹೆಚ್ಚಾಗಿತ್ತು : ಆರಿಯಾನಿಗೆ ವಿಡಿಯೋ ಗೇಮ್ (Video Game) ಆಡೋದು ಬಹಳ ಇಷ್ಟದ ಕೆಲಸವಾಗಿತ್ತು. ಅಲ್ಲದೆ ಆತ ಸಂಸ್ಕರಿಸಿದ ಆಹಾರ (Food) , ಜಂಕ್ ಫುಡ್, ಫ್ರೈಡ್ ಚಿಕನ್ ಮತ್ತು ತಂಪು ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಸುಮಾರು 7,000 ಕ್ಯಾಲೊರಿಗಳನ್ನು ಪ್ರತಿ ದಿನ ಸೇವನೆ ಮಾಡ್ತಿದ್ದ. ಅವನ ದೇಹಕ್ಕೆ ಅಗತ್ಯವಿರುವುದಕ್ಕಿಂತ ಇದು ಆರು-ಏಳು ಪಟ್ಟು ಹೆಚ್ಚಾಗಿತ್ತು. ಆರಿಯಾನಿಗೆ ಸರಿಯಾಗಿ ನಡೆಯೋಕೆ ಆಗ್ತಿರಲಿಲ್ಲ. ಆತ ನೆಲದ ಮೇಲೆ ಕುಳಿತುಕೊಳ್ಳೋದು ಕನಸಿನ ಮಾತಾಗಿತ್ತು. ಮನೆಯ ಬಾತ್ ರೂಮಿನಲ್ಲಿ ಸ್ನಾನ ಮಾಡೋದು ಆತನಿಗೆ ಕಷ್ಟವಾಗಿತ್ತು. ಹಾಗಾಗಿ ಮನೆ ಹೊರಗಿನ ತೊಟ್ಟಿಯಲ್ಲಿ ಸ್ನಾನ ಮಾಡ್ತಿದ್ದ. ಯಾವುದೇ ಬಟ್ಟೆ ಆತನಿಗೆ ಸರಿಯಾಗಿ ಹೊಂದಿಕೆಯಾಗ್ತಿರಲಿಲ್ಲ. ಹಾಗಾಗಿ ಅನೇಕ ಸಂದರ್ಭದಲ್ಲಿ ಶರ್ಟ್ ಧರಿಸದೆ ಕಾಲ ಕಳೆಯುತ್ತಿದ್ದ.
undefined
Health Tips : ಕ್ಯಾನ್ಸರ್ ರೋಗಿಗಳಿಗೆ ವರದಾನವಾದ ರೇಡಿಯೇಶನ್ ಥೆರಪಿ
ವೇಟ್ (Weight) ಟ್ರೈನಿಂಗ್ ನಿಂದ ಕಡಿಮೆಯಾಯ್ತು ತೂಕ : 2017ರಲ್ಲಿ ಆರಿಯಾನಿಗೆ ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು ನಂತರ ಅವರು ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಕಿರಿಯ ಹುಡುಗನಾಗಿದ್ದ. ಜಕಾರ್ತಾದ ಓಮ್ನಿ ಆಸ್ಪತ್ರೆಯಲ್ಲಿ ಈತನಿಗೆ ಶಸ್ತ್ರಚಿಕಿತ್ಸೆ ನಡೆಯಿತು. ನಂತ್ರ ವೈಯಕ್ತಿಕ ಜಿಮ್ ಅನ್ನು ಹೊಂದಿದ್ದ ಬಾಡಿಬಿಲ್ಡಿಂಗ್ ಚಾಂಪಿಯನ್ ಅಡೆ ರೈ ಭೇಟಿಯಾಯ್ತು. ಆರಿಯಾನನ್ನು ನೋಡಿದ ಅಡೆ ಸಹಾಯಕ್ಕೆ ಮುಂದಾದ್ರು. ಈ ವಿಷ್ಯವನ್ನು ಮನೆಯವರಿಗೆ ತಿಳಿಸಿ, ಒಪ್ಪಿಗೆ ಪಡೆದ್ರು. ಆರಿಯಾನಿಗೆ ತರಬೇತಿ ಶುರು ಮಾಡುವ ಮೊದಲು ಡಯಟ್ ಪಾಲಿಸುವಂತೆ ಹೇಳಿದ್ರು. ಆರಿಯಾ ತರಕಾರಿ ಹಾಗೂ ಕಡಿಮೆ ಕಾರ್ಬನ್ ಇರುವ ಆಹಾರ ಸೇವನೆ ಶುರು ಮಾಡಿದ್ದ. ಇದ್ರ ಜೊತೆಗೆ ಇದ್ರ ಜೊತೆಗೆ ವೇಟ್ ಟ್ರೈನಿಂಗ್ ಶುರು ಮಾಡಿದ್ದ. ಇದು ಕ್ಯಾಲೊರಿಗಳನ್ನು ಸುಡಲು ಮತ್ತು ಸ್ನಾಯುಗಳನ್ನು ಟೋನ್ ಮಾಡಲು ನೆರವಾಯಿತು.
Health Tips: ಮೂಡ್ ಔಟ್ ಆಗದೇ ರಿಲ್ಯಾಕ್ಸ್ ಆಗಿರಲು ಐದು ಸಿಂಪಲ್ ಟಿಪ್ಸ್
ಜಿಮ್ ನಲ್ಲಿ ಬೆವರಿಳಿಸೋದು ಇಷ್ಟವಾಗಿತ್ತು : ಆರಿಯಾನಿಗೆ ಜಿಮ್ ನಲ್ಲಿ ಕಸರತ್ತು ಮಾಡೋದು ಇಷ್ಟವಾಯ್ತು. ಹಾಗಾಗಿ ಯಾವುದೇ ಬೇಸರವಿಲ್ಲದೆ ಆತ ತರಬೇತಿ ಪಡೆಯುತ್ತಿದ್ದ. ಜೊತೆಗೆ ಆತ ವಾಕಿಂಗ್ ಮಾಡ್ತಿದ್ದ. ಇದ್ರಿಂದ ಹೆಚ್ಚುವರಿ ಕೊಬ್ಬು ಕರಗಲು ಸಹಾಯವಾಯ್ತು. ಮೂರು ವರ್ಷದಲ್ಲಿ ಆರಿಯಾ ತನ್ನ ಮೊದಲ ತೂಕದ ಅರ್ಧದಷ್ಟು ತೂಕ ಇಳಿಸಿದ್ದಾನೆ. ಈಗ ಆತ 14ನೇ ವಯಸ್ಸಿಗೆ ಕಾಲಿಟ್ಟಿದ್ದಾನೆ. ಅಡೆ ಮತ್ತು ಆರಿಯಾ ಸಂಬಂಧ ಗಟ್ಟಿಯಾಗಿದೆ. ಈಗ ಆರಿಯಾ ಸ್ಕೂಲಿಗೆ ಹೋಗೋದು ಮಾತ್ರವಲ್ಲದೆ ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ತಾನೆ. ಫುಟ್ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್ ಕೂಡ ಆಡ್ತಾನೆ. ತೂಕ ಇಳಿದಿರೋದು ಆರಿಯಾನ ಖುಷಿಗೆ ಕಾರಣವಾಗಿದೆ.