Healthy Habits: ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗುತ್ತೆ ಈ ಹವ್ಯಾಸ

Published : Mar 30, 2023, 05:47 PM ISTUpdated : Mar 30, 2023, 05:53 PM IST
Healthy Habits: ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗುತ್ತೆ ಈ ಹವ್ಯಾಸ

ಸಾರಾಂಶ

ಪರೀಕ್ಷೆ ಬಂತು ಅಂದಾಗ ಬರೀ ಓದಿದ್ರೆ ಸಾಲೋದಿಲ್ಲ. ಓದು ಹೇಗಿರಬೇಕು, ಏನೆಲ್ಲ ಟಿಪ್ಸ್ ಫಾಲೋ ಮಾಡ್ಬೇಕು ಎಂಬುದು ವಿದ್ಯಾರ್ಥಿಗೆ ಗೊತ್ತಿರಬೇಕು. ಇಲ್ಲವೆಂದ್ರೆ ಆತ ಎಷ್ಟೇ ಓದಿದ್ರೂ ಫಲಿತಾಂಶ ಸಿಗೋದು ಅಷ್ಟಕಷ್ಟೆ   

ಮಕ್ಕಳು ಓದೋದ್ರಲ್ಲಿ ಹಿಂದಿದ್ದಾರೆ. ಎಷ್ಟೇ ಓದಿದ್ರೂ ವಿದ್ಯೆ ತಲೆಗೆ ಹತ್ತೋದಿಲ್ಲ. ಪರೀಕ್ಷೆ ಹಿಂದಿನ ರಾತ್ರಿ ಪೂರ್ತಿ ನಿದ್ರೆಗೆಟ್ಟರೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ. ಇಂಥ ಆರೋಪಗಳನ್ನು ಪಾಲಕರು ಮಾಡ್ತಿರುತ್ತಾರೆ. ಈಗ ಬಹುತೇಕ ಎಲ್ಲ ಮಕ್ಕಳ ಪರೀಕ್ಷೆ ಮುಗಿದಿದ್ದು, ಫಲಿತಾಂಶ ಬರ್ತಿದೆ. ಹಾಗಾಗಿ ಈ ಮಾತನ್ನು ನಾವು ಹೆಚ್ಚಿನ  ಮಟ್ಟದಲ್ಲಿ ಕೇಳ್ತಿರುತ್ತೇವೆ.  ಕೆಲ ಮಕ್ಕಳಿ (Children) ಗೆ ಅಧ್ಯಯನದಲ್ಲಿ ಆಸಕ್ತಿಯಿರುತ್ತದೆ. ಅವರು ಹೆಚ್ಚು ಅಂಕಗಳಿಸಬೇಕು, ಎಲ್ಲದರಲ್ಲೂ ಮುಂದೆ ಬರಬೇಕೆಂದು ಓದುತ್ತಾರೆ. ಆದ್ರೆ ಯಶಸ್ಸು ಮಾತ್ರ ಅವರಿಗೆ ಸಿಗೋದಿಲ್ಲ. ಬಾಲ್ಯದಲ್ಲಿ ಮುಂದಿದ್ರೂ ಬರ್ತಾ ಬರ್ತಾ ಜೀವನ ಶಾಲೆ (School) ಯಲ್ಲಿ ಫೇಲ್ ಆಗ್ತಾರೆ. ಓದಿನಲ್ಲಿ ಮುಂದಿರುವ ಮಕ್ಕಳು ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡರೆ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.  

Health Tips: ಮೂಡ್ ಔಟ್ ಆಗದೇ ರಿಲ್ಯಾಕ್ಸ್ ಆಗಿರಲು ಐದು ಸಿಂಪಲ್ ಟಿಪ್ಸ್

ಸ್ಪಷ್ಟ ಗುರಿ ಇರಬೇಕು : ಗುರಿ (Target) ಯಿಲ್ಲದೆ ನಡೆಯೋದು ಮೂರ್ಖತನ. ಆತನ ದಾರಿ ಸ್ಪಷ್ಟವಾಗಿರದ ಕಾರಣ ಆತ ಎಲ್ಲಿಂದಲೋ ಎಲ್ಲಿಗೋ ತಲುಪುತ್ತಾನೆ. ಅವರು ಮಕ್ಕಳಿರುವಾಗ್ಲೇ ಒಂದು ಗುರಿ ಸೆಟ್ ಮಾಡಿದ್ರೆ ಒಳ್ಳೆಯದು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರು ಏನು ಮಾಡಬೇಕೆಂದು ಅವರೇ ನಿರ್ಧರಿಸಬೇಕು. ಯೋಜನಾಬದ್ಧವಾಗಿ ತಮ್ಮ ಅಧ್ಯಯನ (Study) ದತ್ತ ಗಮನ ಹರಿಸಿದರೆ ಅವರು ತಮ್ಮ ವಯಸ್ಸಿನ ಮಕ್ಕಳಿಗಿಂತ ಎರಡು ಹೆಜ್ಜೆ ಮುಂದೆ ಇರುತ್ತಾರೆ.

ಒಂದೇ ಬಾರಿ ತುಂಬಾ ವಿಷ್ಯಗಳನ್ನು ತಲೆಯಲ್ಲಿ ತುಂಬಬೇಡಿ : ಎಲ್ಲದರಲ್ಲೂ ಪರಿಣಿತರಾಗಬೇಕು ಎಂಬುದು ಪಾಲಕರ ಜೊತೆ ಮಕ್ಕಳ ಕನಸಾಗಿರುತ್ತದೆ. ಅಧ್ಯಯನದಿಂದ ಕಲೆಯವರೆಗೆ ಎಲ್ಲದರಲ್ಲೂ ಉತ್ತಮ ಸಾಧನೆ ಮಾಡುವ ಉತ್ಸಾಹ ಮಕ್ಕಳಿಗಿರುತ್ತದೆ. ಬಾಲ್ಯದಲ್ಲಿ ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುಂದಿರುತ್ತಾರೆ. ಆದ್ರೆ ದೊಡ್ಡವರಾಗ್ತಿದ್ದಂತೆ ಈ ಮಕ್ಕಳು ಹಿಂದೆ  ಬೀಳ್ತಾರೆ. ಯಾವ ದಾರಿ ಆಯ್ದುಕೊಳ್ಳಬೇಕು, ನನಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ಅವರಿಗೆ ಪತ್ತೆ ಮಾಡಲು ಸಾಧ್ಯವಾಗೋದಿಲ್ಲ. ಮಕ್ಕಳು ಎಲ್ಲದರಲ್ಲೂ ಮುಂದಿರಬೇಕೆಂಬ ಆಸೆಯನ್ನು ಬಿಡಬೇಕು. ಅವರು ತಮ್ಮಲ್ಲಿರುವ ಉತ್ತಮ ಕೌಶಲ್ಯಗಳ ಮೇಲೆ ಮಾತ್ರ ಗಮನಹರಿಸಬೇಕು. ಮೀನು ಎಂದಿಗೂ ಮರವನ್ನು ಏರಲು ಸಾಧ್ಯವಿಲ್ಲ ಮತ್ತು ಮಂಗ ಎಂದಿಗೂ ನೀರಿನ ಅಡಿಯಲ್ಲಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಮಕ್ಕಳಿಗೆ ಕಲಿಸಬೇಕು. ಪ್ರತಿಯೊಬ್ಬರೂ ಅವರದೇ ಆದ ಕೌಶಲ್ಯ ಹೊಂದಿದ್ದಾರೆ ಎಂಬುದು ಮಕ್ಕಳ ಅರಿವಿಗೆ ಬರಬೇಕು. 

Excessive Sleep : ಅತಿ ನಿದ್ರಿಸಿದರೆ ಹಾಸಿಗೆ ಹಿಡಿಯಬೇಕಾಗುತ್ತೆ, ಹುಷಾರು!

ಕಷ್ಟವನ್ನು ಎದುರಿಸಲು ಕಲಿಯಿರಿ : ಕಷ್ಟ ಬಂದಾಗ ಅಲ್ಲಿಂದ ಕಾಲ್ಕಿಳೋದು ಮಕ್ಕಳ ಅಭ್ಯಾಸ. ಪ್ರತಿ ವಿದ್ಯಾರ್ಥಿಗೆ ಒಂದಲ್ಲ ಒಂದು ವಿಷ್ಯ ಕಠಿಣವಾಗಿರುತ್ತದೆ. ಹಾಗಾಂತ ಅದನ್ನು ಬಿಡಲು ಸಾಧ್ಯವಿಲ್ಲ. ಕಷ್ಟವಾಗಿರುವುದನ್ನು ಮೊದಲು ಕಲಿಯುವಂತೆ ಮಕ್ಕಳಿಗೆ ಹೇಳ್ಬೇಕು.  

ಓದಿಗಾಗಿ ಒಂದು ಸ್ಥಳ ಮೀಸಲಿಡಿ : ಮಕ್ಕಳು ಎಷ್ಟೇ ಓದಿದ್ರೂ ನೆನಪಿಟ್ಟುಕೊಳ್ಳುವುದು ಕಷ್ಟವಾಗ್ತಿದೆ ಎಂದಾದ್ರೆ ಓದುವ ಸ್ಥಳ ಕೂಡ ಇದ್ರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅಧ್ಯಯನಕ್ಕಾಗಿ ವಿಶೇಷ ಸ್ಥಳವನ್ನು ಆಯ್ಕೆ ಮಾಡಬೇಕು. ಅಧ್ಯಯನದ ಮೇಲೆ ಸಂಪೂರ್ಣ ಗಮನಹರಿಸಬಹುದಾದ ಸ್ಥಳವನ್ನು ಆಯ್ದುಕೊಳ್ಳಬೇಕು. ಟಿವಿ, ಮೊಬೈಲ್ ನಂತಹ ವಸ್ತುಗಳಿಂದ ದೂರವಿದ್ದು, ಓದಬೇಕು. 

ಪ್ರಶ್ನೆ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ : ಮಕ್ಕಳ ತಲೆಯಲ್ಲಿ ನಾನಾ ಪ್ರಶ್ನೆ ಓಡುತ್ತಿರುತ್ತದೆ. ಆದ್ರೆ ಭಯ, ಮುಜುಗರ, ಸೋಮಾರಿತನ ಹೀಗೆ ನಾನಾ ಕಾರಣಕ್ಕೆ ಮಕ್ಕಳು ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ. ಇದ್ರಿಂದ ಅವರ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ನೀವು ಪ್ರಶ್ನೆ ಕೇಳಿದ್ರೆ ಹೊಸ ವಿಷ್ಯವನ್ನು ತಿಳಿಯಬಹುದು. ಭಯವಿಲ್ಲದೆ ಪ್ರಶ್ನೆ ಕೇಳೋದನ್ನು ಕಲಿತ್ರೆ ಒಳ್ಳೆಯದು.  

ನಿದ್ರೆಗೂ ಆದ್ಯತೆ ನೀಡಿ : ವಿದ್ಯಾರ್ಥಿ ಜೀವನದಲ್ಲಿ ನಿದ್ರೆ ಬಹಳ ಮುಖ್ಯ.   ನಿದ್ರೆ ಮಾಡದೆ ಗಂಟೆಗಟ್ಟಲೆ ಓದುವುದು ಸರಿಯಲ್ಲ.  ಸಮಯ ಸಿಕ್ಕಾಗ ನಿದ್ರೆ ಮಾಡಬೇಕು.  ವಿದ್ಯಾರ್ಥಿಯು ಉತ್ತಮ ನಿದ್ರೆ ಮಾಡುವ ಅಭ್ಯಾಸ ರೂಢಿಸಿಕೊಂಡ್ರೆ ಗಮನವನ್ನು ಒಂದೆಡೆ ಕೇಂದ್ರೀಕರಿಸಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ