ಯೋಗವು ಟೈಪ್-2 ಮಧುಮೇಹದ ಅಪಾಯವನ್ನು 40% ಕಡಿಮೆ ಮಾಡುತ್ತೆ: ಹೊಸ ವರದಿ ಬಹಿರಂಗ

Published : Jul 26, 2025, 07:29 PM IST
Yoga for diabetes prevention

ಸಾರಾಂಶ

ಟೈಪ್-2 ಮಧುಮೇಹದ ಅಪಾಯವನ್ನು 40% ರಷ್ಟು ಕಡಿಮೆ ಮಾಡಲು ಯೋಗವು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ. ವಿಶೇಷವಾಗಿ ಮಧುಮೇಹದ ಕೌಟುಂಬಿಕ ಇತಿಹಾಸವಿರುವವರಿಗೆ ಯೋಗವು ಹೆಚ್ಚು ಪ್ರಯೋಜನಕಾರಿ. ಈ ಅಧ್ಯಯನವು ಮಧುಮೇಹ ಇರುವವರಿಗಿಂತ ರೋಗದ ಸಾಧ್ಯತೆ ಇರುವವರ ಮೇಲೆ ಕೇಂದ್ರೀಕರಿಸಿದೆ.

ಭಾರತದಲ್ಲಿ ಮಧುಮೇಹವು ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಲಕ್ಷಾಂತರ ಜನರು ಇದರಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ, ಒತ್ತಡ, ತಪ್ಪು ಆಹಾರ ಪದ್ಧತಿ ಮತ್ತು ಕಡಿಮೆ ದೈಹಿಕ ಚಟುವಟಿಕೆಯಿಂದ ಟೈಪ್-2 ಮಧುಮೇಹದ ಪ್ರಮಾಣ ವೇಗವಾಗಿ ಏರಿಕೆಯಾಗುತ್ತಿದೆ. ಈ ರೋಗವು ದೇಹದಲ್ಲಿ ಇನ್ಸುಲಿನ್‌ನ ಕಾರ್ಯವನ್ನು ತೊಡಕುಗೊಳಿಸುವುದರ ಜೊತೆಗೆ, ಹೃದಯ ಕಾಯಿಲೆ, ಮೂತ್ರಪಿಂಡದ ಸಮಸ್ಯೆಗಳು ಮತ್ತು ಕಣ್ಣಿನ ತೊಂದರೆಗಳಂತಹ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಆದರೆ, ಇತ್ತೀಚಿನ ವೈಜ್ಞಾನಿಕ ವರದಿಯೊಂದು ಈ ಸಮಸ್ಯೆಯನ್ನು ತಡೆಗಟ್ಟಲು ಯೋಗವು ಶಕ್ತಿಶಾಲಿ ಪರಿಹಾರವಾಗಿದೆ ಎಂದು ತಿಳಿಸಿದೆ.

ವರದಿಯಲ್ಲೇನಿದೆ?

ಪ್ರಖ್ಯಾತ endocrinologist ಡಾ. ಎಸ್.ವಿ. ಮಧು ನೇತೃತ್ವದ ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಇಂಡಿಯಾ ಇನ್ ಡಯಾಬಿಟಿಸ್ (ಆರ್‌ಎಸ್‌ಎಸ್‌ಡಿಐ) ಸಿದ್ಧಪಡಿಸಿದ ಇತ್ತೀಚಿನ ವರದಿಯು ಯೋಗಾಭ್ಯಾಸವು ಟೈಪ್-2 ಮಧುಮೇಹದ ಅಪಾಯವನ್ನು 40% ವರೆಗೆ ಕಡಿಮೆ ಮಾಡಬಹುದು ಎಂದು ತೋರಿಸಿದೆ. ವಿಶೇಷವಾಗಿ, ಕುಟುಂಬದಲ್ಲಿ ಮಧುಮೇಹದ ಇತಿಹಾಸವಿರುವಂತಹ ಹೆಚ್ಚಿನ ಅಪಾಯದ ಗುಂಪಿನ ಜನರಿಗೆ ಯೋಗವು ಗಣನೀಯ ಪ್ರಯೋಜನವನ್ನು ನೀಡುತ್ತದೆ. ಈ ವರದಿಯು ಈಗಾಗಲೇ ಮಧುಮೇಹವಿರುವವರಿಗಿಂತ, ರೋಗದ ಸಾಧ್ಯತೆ ಹೆಚ್ಚಿರುವವರ ಮೇಲೆ ಕೇಂದ್ರೀಕರಿಸಿದೆ, ಇದು ಈ ಅಧ್ಯಯನವನ್ನು ವಿಶಿಷ್ಟಗೊಳಿಸಿದೆ.

ಯೋಗದ ಪ್ರಯೋಜನಗಳೇನು?

ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಒಂದು ಸಮಗ್ರ ವಿಧಾನವಾಗಿದೆ. ಈ ವರದಿಯು ಕೆಲವು ನಿರ್ದಿಷ್ಟ ಯೋಗ ಆಸನಗಳಾದ ಸೂರ್ಯ ನಮಸ್ಕಾರ, ಧನುರಾಸನ, ಭುಜಂಗಾಸನ ಮತ್ತು ಪಶ್ಚಿಮೋತ್ತನಾಸನವು ರಕ್ತ ಪರಿಚಲನೆಯನ್ನು ಸುಧಾರಿಸುವುದರ ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇದರ ಜೊತೆಗೆ, ಪ್ರಾಣಾಯಾಮ ಮತ್ತು ಧ್ಯಾನದಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಒತ್ತಡವು ಮಧುಮೇಹಕ್ಕೆ ಪ್ರಮುಖ ಕಾರಣವಾಗಿರುವುದರಿಂದ, ಯೋಗದ ಈ ಗುಣವು ಅತ್ಯಂತ ಮೌಲ್ಯಯುತವಾಗಿದೆ.

ಆಧುನಿಕ ವಿಜ್ಞಾನದೊಂದಿಗೆ ಯೋಗದ ಸಂಗಮ:

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಈ ವರದಿಯನ್ನು ಭಾರತದ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯ ವೈಜ್ಞಾನಿಕ ದೃಢೀಕರಣ ಎಂದು ಕರೆದಿದ್ದಾರೆ. ಯೋಗದಂತಹ ಪ್ರಾಚೀನ ಅಭ್ಯಾಸಗಳು ಆಧುನಿಕ ವಿಜ್ಞಾನದೊಂದಿಗೆ ಸಂಯೋಜನೆಗೊಂಡಾಗ, ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಬಹುದು ಎಂದು ಅವರು ಹೇಳಿದ್ದಾರೆ. ಜೈವಿಕ ತಂತ್ರಜ್ಞಾನ ಇಲಾಖೆಯು ಈ ದಿಕ್ಕಿನಲ್ಲಿ ಮತ್ತಷ್ಟು ಸಂಶೋಧನೆಯನ್ನು ಕೈಗೊಂಡಿದ್ದು, ಯೋಗದ ಪ್ರಯೋಜನಗಳನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಯೋಗ ದೈಹಿಕ ವ್ಯಾಯಾಮ ಅಷ್ಟೇ ಅಲ್ಲ..

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಒಂದು ಜೀವನಶೈಲಿಯಾಗಿದೆ. ಇದನ್ನು ದೈನಂದಿನ ಜೀವನದಲ್ಲಿ ಸೇರಿಸಿಕೊಳ್ಳುವುದು ಕಷ್ಟವೇನಲ್ಲ. ದಿನಕ್ಕೆ 20-30 ನಿಮಿಷಗಳ ಯೋಗಾಭ್ಯಾಸವು ದೇಹ ಮತ್ತು ಮನಸ್ಸಿಗೆ ಗಣನೀಯ ಪ್ರಯೋಜನವನ್ನು ನೀಡುತ್ತದೆ. ಆದರೆ, ಯಾವುದೇ ಯೋಗಾಭ್ಯಾಸವನ್ನು ಆರಂಭಿಸುವ ಮೊದಲು, ತರಬೇತಿ ಪಡೆದ ಯೋಗ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದು ಮತ್ತು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಒಳಿತು.

ಯೋಗವು ದೇಹವನ್ನು ಸದೃಢವಾಗಿಡುವುದಲ್ಲದೆ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಇದು ಮಧುಮೇಹಕ್ಕೆ ಪ್ರಮುಖ ಕಾರಣವಾದ ಒತ್ತಡವನ್ನು ಕಡಿಮೆ ಮಾಡುತ್ತದೆ. ಸೂರ್ಯ ನಮಸ್ಕಾರ, ಧನುರಾಸನ, ಭುಜಂಗಾಸನ ಮತ್ತು ಪಶ್ಚಿಮೋತ್ತನಾಸನದಂತಹ ಕೆಲವು ಯೋಗ ಭಂಗಿಗಳು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ, ಪ್ರಾಣಾಯಾಮ ಮತ್ತು ಧ್ಯಾನದಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಗಮನಿಸಿ: ಆರೋಗ್ಯ ನಿಯತಕಾಲಿಕೆಗಳಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯಾಗಿದೆ. ಮಧುಮೇಹ ಸಂಬಂಧಿತ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?