
ಬಾಯಿಯಲ್ಲಾಗುವ ಸಣ್ಣ ಗುಳ್ಳೆ ಅಥವಾ ಹುಣ್ಣು ಕೆಲವೊಮ್ಮೆ ಎಷ್ಟು ಹಿಂಸೆ ನೀಡುತ್ತದೆ ಎಂದರೆ, ಅದರ ನೋವಿಗೆ ಜ್ವರವೇ ಬಂದುಬಿಡುತ್ತದೆ. ಆಹಾರ ಸೇವಿಸಲು ಕಷ್ಟವಾಗುತ್ತದೆ. ಉಪ್ಪು, ಹುಳಿ, ಖಾರಯುಕ್ತ ಆಹಾರವನ್ನಂತೂ ಸೇವನೆ ಮಾಡಲು ಆಗುವುದಿಲ್ಲ. ನೀರು ಕುಡಿದರೂ ಉರಿಉರಿ ಎನಿಸುತ್ತದೆ. ಬಾಯಿಯನ್ನು ಅಲ್ಲಾಡಿಸಲಾಗದೆ, ಮಾತನಾಡಲೂ ಆಗದೆ ಸಮಸ್ಯೆಯಾಗುತ್ತದೆ. ಬಾಯಿಯ ಒಳಭಾಗದಲ್ಲಿರುವ ಲೋಳೆಪೊರೆಯಲ್ಲಾಗುವ ಗುಳ್ಳೆಗಳನ್ನು ವೈದ್ಯಕೀಯ ಭಾಷೆಯಲ್ಲಿ ಸಿಸ್ಟ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ಆರೋಗ್ಯದ ಮೇಲೆ ಬೇರೆ ಏನನ್ನೂ ಪರಿಣಾಮ ಬೀರದೇ ಇದ್ದರೂ ನೋವು ಮಾತ್ರ ವಿಪರೀತವಾಗಿರುತ್ತದೆ. ಗುಳ್ಳೆ ಏಳುವ ಸಮಯದಲ್ಲಿ ಸಾಮಾನ್ಯವಾಗಿ ನೋವಾಗುತ್ತದೆ. ಆಗಲೇ ಎಚ್ಚರಿಕೆ ತೆಗೆದುಕೊಂಡರೆ ಸರಿ, ಇಲ್ಲವಾದಲ್ಲಿ ಗುಳ್ಳೆ ಮತ್ತಷ್ಟು ದೊಡ್ಡದಾಗಿ ಮುಖದ ಇಡೀ ಭಾಗ ನೋವಿನಿಂದ ಭಾರವಾಗುತ್ತದೆ. ಎಂಜಲಿನ ಗ್ರಂಥಿ ಹಾನಿಗೆ ಒಳಗಾದಾಗ ಅಥವಾ ಕಟ್ಟಿಕೊಂಡಾಗ ಸಿಸ್ಟ್ ಉಂಟಾಗುತ್ತದೆ. ಬಾಯೊಯೊಳಗೆ ಸಣ್ಣಪುಟ್ಟ ಗಾಯವಾದಾಗ, ಆಹಾರ ಅಗಿಯುವಾಗ ಅಕಸ್ಮಾತ್ತಾಗಿ ತುಟಿಗಳು ಕಚ್ಚಿದಂತೆ ಆದಾಗಲೂ ಉಂಟಾಗುತ್ತವೆ. ಕೆಲವು ತಜ್ಞರ ಪ್ರಕಾರ, ದೇಹದಲ್ಲಿ ಉಷ್ಣವಾದರೆ ಸಿಸ್ಟ್ ಆಗುವುದು ಸಾಮಾನ್ಯ. ಹೀಗಾಗಿ, ಈ ಸಮಯದಲ್ಲಿ ದೇಹಕ್ಕೆ ತಂಪನ್ನೀಯುವ ಆಹಾರ ಸೇವಿಸುವುದು ಅಗತ್ಯ.
ಬಾಯಿಯ ಹುಣ್ಣಿಗೆ (Mouth Cyst) ಮನೆಯಲ್ಲೇ ಸುಲಭವಾಗಿ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದು. ಗುಳ್ಳೆ ಸಣ್ಣದಾಗಿದ್ದರೆ ತನ್ನಿಂತಾನೇ ಹೊರಟು ಹೋಗುತ್ತದೆ. ಕೆಲವು ಬಾರಿ ನೋವು (Pain) ತೀವ್ರವಾಗಿದ್ದರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಆದರೆ, ಅದಕ್ಕೂ ಮುನ್ನ ಆರಂಭದಲ್ಲೇ ಮನೆಯಲ್ಲೇ ಸರಳ ಚಿಕಿತ್ಸೆ ಮಾಡಿಕೊಳ್ಳುವುದರಿಂದ ನೆರವಾಗುತ್ತದೆ.
• ಗ್ಲೀಸರಿನ್ (Glycerin)
ಆಂಟಿಬಯಾಟಿಕ್ (Antibiotic) ಅಂಶ ಹೊಂದಿರುವ ಗ್ಲೀಸರಿನ್ ನಿಂದ ಬಾಯಿಯ ಲೋಳೆಪೊರೆಯ ಸಿಸ್ಟ್ ಗೆ ಪರಿಹಾರ ಸಾಧ್ಯ. ಸಣ್ಣ ಹತ್ತಿಯ ಚೂರಿಗೆ ಗ್ಲೀಸರಿನ್ ಹನಿಗಳನ್ನು ಹಾಕಿ ಅದನ್ನು ಗಾಯದ ಮೇಲೆ ಇಟ್ಟುಕೊಳ್ಳಬೇಕು. ಅರ್ಧ ಗಂಟೆ ಕಾಲ ಇಟ್ಟುಕೊಂಡ ಬಳಿಕ ಸಾಮಾನ್ಯ ನೀರಿನಿಂದ (Water) ಬಾಯಿಯನ್ನು (Mouth) ತೊಳೆದುಕೊಳ್ಳಬೇಕು.
Aditi Prabhudeva: ಬೆಳಿಗ್ಗೆ ಕರಿಬೇವು, ನಿಂಬೆರಸ..ಮಧ್ಯಾಹ್ನ ಫುಲ್ ಕೆಲಸ.. ಆರೋಗ್ಯದ ಗುಟ್ಟು ಹೇಳಿದ ನಟಿ
• ಉಪ್ಪು ನೀರು (Salt Water)
ಹಿತವಾದ ಬಿಸಿ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ 15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಲೋಳೆಪೊರೆಯ ಒಳಗೆ ಸಿಲುಕಿರುವ ಯಾವುದೇ ರೀತಿಯ ದ್ರವ (Fluid) ಆಚೆ ಬರುತ್ತದೆ. ಬಾಯಿ ಚರ್ಮದೊಳಗಿರುವ ದ್ರವಾಂಶ ಆಚೆ ಕರೆತರಲು ಇದು ಅತ್ಯಂತ ಸುಲಭದ ಮಾರ್ಗ. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ನೋವು ಶಮನವಾಗುತ್ತದೆ.
• ಜೇನುತುಪ್ಪ (Honey)
ಅತ್ಯುತ್ತಮ ಆಂಟಿಬ್ಯಾಕ್ಟೀರಿಯಲ್ (Antibacterial) ಆಗಿರುವ ಜೇನುತುಪ್ಪವನ್ನು ಈ ಸಮಯದಲ್ಲಿ ಬಳಕೆ ಮಾಡುವುದು ಉತ್ತಮ. ಇದರಿಂದ ಬಾಯಿಯಲ್ಲಿ ಹೆಚ್ಚಿನ ಸೋಂಕು ಆಗದಂತೆ ತಡೆಯಲು ಸಾಧ್ಯ. ಸಿಸ್ಟ್ ಉಂಟಾದ ಜಾಗಕ್ಕೆ ಮುಕ್ಕಾಲು ಚಮಚ ಶುದ್ಧ ಜೇನುತುಪ್ಪವನ್ನು ಲೇಪಿಸಬೇಕು. ಇದಕ್ಕೆ ಟೀ ಟ್ರೀ ತೈಲದ ಹನಿಗಳನ್ನು ಸಹ ಸೇರಿಸಿಕೊಳ್ಳಬಹುದು.
• ತುಂಬೆ (Sage)
ಔಷಧೀಯ ಜಾತಿಗೆ ಸೇರಿರುವ ತುಂಬೆ ಗಿಡದ ಎಲೆಗಳಲ್ಲಿ (Leaves) ಉರಿಯೂತ ತಡೆಯುವ ಅಂಶವಿರುತ್ತದೆ. ತುಂಬೆ ಎಲೆಗಳನ್ನು ಚಹಾದೊಂದಿಗೆ ಸೇರಿಸಿಕೊಂಡು ಹಾಲು ಬೆರೆಸದೇ ಹಾಗೆಯೇ ಕುಡಿಯಬಹುದು ಅಥವಾ ಎಲೆಗಳನ್ನು ಹಾಗೆಯೇ ಅಗಿಯಬಹುದು. ಗಾಯಕ್ಕೆ ತುಂಬೆಯ ರಸ ಹೆಚ್ಚು ತಾಗುವಂತೆ ಮಾಡಿಕೊಳ್ಳಬೇಕು.
ಸ್ನಾನಕ್ಕೆ ಮನೇಲಿ ಇರೋ ಎಲ್ರೂ ಒಂದೇ ಸೋಪ್ ಯೂಸ್ ಮಾಡೋದು ಸರೀನಾ?
• ಲೋಳೆಸರ (Aloevera)
ಲೋಳೆಸರ ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿದ್ದು, ಉರಿಯೂತವನ್ನು (Inflammation) ತಡೆಯುತ್ತದೆ. ನೋವನ್ನು ಕಡಿಮೆಗೊಳಿಸುವ ಶಕ್ತಿ ಇದರಲ್ಲಿದೆ. ಬಾಯಿಯ ಹುಣ್ಣಿಗೆ ಲೋಳೆಸರದ ಜೆಲ್ (Gel) ಅನ್ನು ನೇರವಾಗಿ ಹಚ್ಚಿಕೊಂಡು 20 ನಿಮಿಷಗಳ ಕಾಲ ಇರಿಸಿಕೊಳ್ಳಬೇಕು.
• ಟೀ ಬ್ಯಾಗ್ (Frozen Tea Bag)
ಟೀ ಬ್ಯಾಗ್ ಅನ್ನು ಬಿಸಿನೀರಿನಲ್ಲಿ ಅದ್ದಿ ಅದನ್ನು ಫ್ರಿಡ್ಜ್ ನಲ್ಲಿ ಇರಿಸಬೇಕು. ಅದು ತಣ್ಣಗಾದ ಬಳಿಕ, 10-15 ನಿಮಿಷಗಳ ಕಾಲ ಗುಳ್ಳೆಯ ಮೇಲೆ ಇಟ್ಟುಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.