Mental Health: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗುಪ್ತ ಸಮಸ್ಯೆಗಳಿದ್ರೆ ಹೀಗೆಲ್ಲ ವರ್ತಿಸೋದು ಸಹಜ, ಎಚ್ಚರ

By Suvarna News  |  First Published Aug 7, 2023, 5:51 PM IST

ವ್ಯಕ್ತಿತ್ವಕ್ಕೆ ಸಂಬಂಧಿಸಿದ ತೊಂದರೆಗಳು ಎಲ್ಲರಲ್ಲೂ ಇರುವುದಿಲ್ಲ. ಸಣ್ಣಪುಟ್ಟ ಏರಿಳಿತಗಳಿದ್ದರೂ ಅದು ಜೀವನಕ್ಕೆ ಹಾನಿ ತರುವಷ್ಟು ಇರುವುದಿಲ್ಲ. ಆದರೆ, ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಪರ್ಸನಾಲಿಟಿ ಡಿಸಾರ್ಡರ್ ಇರುವ ಜನ ತಮ್ಮ ಸಂಬಂಧಗಳನ್ನು ನಿಭಾಯಿಸಲು ಸೋಲುತ್ತಾರೆ, ದುಡುಕು, ಕೋಪದ ವರ್ತನೆ, ಅನಾರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುತ್ತಾರೆ. ಈ ಕುರಿತು ಎಚ್ಚರಿಕೆ ಇರಬೇಕು.


ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಂದ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ಅನಾರೋಗ್ಯಕರ ಚಿಂತನೆ, ಭಾವನಾತ್ಮಕ ಏರಿಳಿತ ಮತ್ತು ವರ್ತನೆಯಲ್ಲಿ ತೊಂದರೆಗಳು ಕಂಡುಬಂದರೆ ಪರ್ಸನಾಲಿಟಿ ಡಿಸಾರ್ಡರ್ ಎಂದು ಗುರುತಿಸಲಾಗುತ್ತದೆ. ಇಂತಹ ಸಮಸ್ಯೆಗಳಿಂದ ಬಳಲುವ ಜನ ಸಂಬಂಧಗಳನ್ನು ನಿಭಾಯಿಸಲು ಕಷ್ಟಪಡುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿ ತೊಂದರೆ ಎದುರಿಸುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ದುಡುಕು ಮತ್ತು ಅಜಾಗರೂಕ ವರ್ತನೆಗಳನ್ನು ಪ್ರದರ್ಶಿಸುತ್ತಾರೆ. ಅಸ್ಥಿರವಾದ ಯೋಚನೆಗಳು, ತಮ್ಮತನದ ಬಗ್ಗೆ ಖಚಿತತೆ ಇಲ್ಲದ ಭಾವನೆಗಳಿಂದ ಬಳಲುತ್ತಾರೆ. ಕೆಲವೊಮ್ಮೆ ಇಂತಹ ಸಮಸ್ಯೆಗಳು ಹೆಚ್ಚು ತೀವ್ರವಾಗಿಲ್ಲದೆ ಇದ್ದಾಗ ಗುರುತಿಸಲ್ಪಡದೇ ಇರುವ ಸಾಧ್ಯತೆ ಅಧಿಕ. ಬಾಲ್ಯಕಾಲದಲ್ಲಿ ಅನುಭವಿಸಿದ ತೀವ್ರವಾದ ಯಾತನೆ, ಮಿದುಳಿನ ರಾಸಾಯನಿಕಗಳ ರಚನೆ, ಅಂತರ್ಗತ ವ್ಯಕ್ತಿತ್ವಗಳು ಇಂತಹ ವರ್ತನೆಗಳಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಶೇ.30-60ರಷ್ಟು ಪಾಲು ಜೀನ್ ನದ್ದೂ ಇದೆ ಎನ್ನುತ್ತವೆ ಅಧ್ಯಯನಗಳು. ಕೆಲವರು ಯಾರೂ ಊಹಿಸಲಾಗದ ಹಾಗೂ ಅಸ್ಥಿರ ವರ್ತನೆಗಳನ್ನು ತೋರುತ್ತಾರೆ. ಇವರ ಯೋಚನಾ ಕ್ರಮ ಸ್ಥಿರವಾಗಿರುವುದಿಲ್ಲ. ಬದಲಾಗುವ ಮೂಡಿಗೆ ತಕ್ಕಂತೆ ವರ್ತಿಸುತ್ತಾರೆ. ಹಠಮಾರಿತನ ತೋರುತ್ತಾರೆ, ಹಿಂಸಾತ್ಮಕ ನಡವಳಿಕೆ ಪ್ರದರ್ಶಿಸಬಹುದು, ಕೆಲವರಲ್ಲಿ ಆತ್ಮಹತ್ಯೆಯ ವಿಚಾರವೂ ಸುಳಿಯಬಹುದು. ಇವರು ಆಗಾಗ ಹಲವು ರೀತಿಯಲ್ಲಿ ತಮ್ಮೊಳಗಿನ ವ್ಯಕ್ತಿತ್ವ ಭಿನ್ನತೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆಗ ನಿರ್ಲಕ್ಷ್ಯ ಮಾಡದೇ ಸೂಕ್ತ ತಪಾಸಣೆ ಮಾಡಿಸಬೇಕು. 

•    ಸಂಬಂಧ (Relation) ನಿಭಾಯಿಸುವುದು ಕಷ್ಟ
ಪ್ರೀತಿಪಾತ್ರರೊಂದಿಗೆ ವಿನಾಕಾರಣ ಯಾವುದಾದರೊಂದು ವಿಚಾರಕ್ಕೆ ಮನಸ್ತಾಪ ಮಾಡಿಕೊಂಡು ಅವರಿಗೆ ಇನ್ನಿಲ್ಲದ ಹಿಂಸೆ ನೀಡುವುದು ವ್ಯಕ್ತಿತ್ವಕ್ಕೆ (Personality) ಸಂಬಂಧಿಸಿದ ಸಮಸ್ಯೆ (Disorder)ಯಾಗಿದೆ. ಇವರಲ್ಲಿ ಅಸ್ಥಿರವಾದ (Unstable) ಭಾವನೆಗಳಿರುವುದರಿಂದ ಸಂಗಾತಿಗೆ ಬೆಲೆ ನೀಡಬೇಕೋ ಅವರನ್ನು ಕಡೆಗಣಿಸಬೇಕೋ ಎನ್ನುವ ಆಂದೋಲನದಲ್ಲಿರುತ್ತಾರೆ. ಇನ್ನು ಹಲವರು ಸಂಬಂಧಗಳ ಕುರಿತಾಗಿಯೇ ಅಂಜಿಕೆ (Fear) ಹೊಂದಿರುತ್ತಾರೆ.

ಮೈಂಡ್‌ ಫುಲ್‌ ಆಗಿದ್ರೆ ವಿದ್ಯಾರ್ಥಿಗಳಲ್ಲಿ ಒತ್ತಡ ದೂರ; ಇದೇನಿದು ವಿಧಾನ?

Tap to resize

Latest Videos

•    ಕೋಪ (Angry)
ಕೋಪ ಬಂದ ಸಮಯದಲ್ಲಿ ಏನು ಮಾಡುತ್ತಿದ್ದೇನೆ, ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೆ ವರ್ತಿಸುವುದು ಸಮಸ್ಯೆಯ ಲಕ್ಷಣಗಳಲ್ಲಿ ಒಂದು. ಇವರು ಬಹಳಷ್ಟು ಬಾರಿ ಅಗ್ರೆಸ್ಸಿವ್ (Aggressive) ಧೋರಣೆಯನ್ನೂ ತೋರುತ್ತಾರೆ. 

•    ಟೀಕೆಗೆ (Criticism) ಭಾರೀ ಪ್ರತಿಕ್ರಿಯೆ
ಕೆಲವರಿಗೆ ಟೀಕೆಗಳನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಬಾಲ್ಯಕಾಲದಲ್ಲಿ ಮಕ್ಕಳು ಅಸಡ್ಡೆಗೆ ತುತ್ತಾದಾಗ ಅಥವಾ ಯಾವುದಾದರೂ ದೌರ್ಜನ್ಯಕ್ಕೆ ಒಳಗಾದಾಗ ತಾವೇ ತಮ್ಮನ್ನು ರಕ್ಷಿಸಿಕೊಳ್ಳಬೇಕಾದ ಸ್ಥಿತಿ ಇದ್ದರೆ ದೊಡ್ಡವರಾದ ಬಳಿಕವೂ ಅದನ್ನು ಮುಂದುವರಿಸುತ್ತಾರೆ. ಟೀಕೆಗಳನ್ನು ಸಕಾರಾತ್ಮಕವಾಗಿ (Positive) ತೆಗೆದುಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ.  

•    ಸುಳ್ಳಿನಿಂದ (Lying) ತೃಪ್ತಿ
ಸಾಕಷ್ಟು ಜನ ಅನಗತ್ಯವಾಗಿ, ಕೇವಲ ತಮ್ಮ ತೃಪ್ತಿಗೋಸ್ಕರ ಸುಳ್ಳು ಹೇಳುವುದು ಕಂಡುಬರುತ್ತದೆ. ಇವರಲ್ಲೂ ಏನಾದರೊಂದು ಸಮಸ್ಯೆ ಇದ್ದಿರಬಹುದು. ಸುಳ್ಳು ಹೇಳುವುದೇ ಇವರ ಖಯಾಲಿಯಾಗಿರಬಹುದು. ಆರೋಗ್ಯಕರ (Healthy), ಲಾಭಕರ ಸಂಬಂಧವನ್ನು ನಿರ್ಮಿಸಿಕೊಳ್ಳುವುದು ಹೇಗೆ ಎನ್ನುವುದು ಇವರಿಗೆ ಗೊತ್ತಿರುವುದಿಲ್ಲ. ಹೀಗಾಗಿ, ಸುಳ್ಳು ಹೇಳುವ ಮೂಲಕ ಸಂಬಂಧಕ್ಕೆ ಮುನ್ನುಡಿ ಬರೆಯಲು ಯತ್ನಿಸುತ್ತಾರೆ. ಭಯದಿಂದ ಇವರು ಸುಳ್ಳು ಹೇಳುತ್ತಾರೆ ಎನ್ನುತ್ತಾರೆ ತಜ್ಞರು.

Love and Health: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರೀತಿಯೇ ಸಾಕು

•    ದುಡುಕು (Impulsive) ಮತ್ತು ಅಪಾಯಕಾರಿ ವರ್ತನೆ
ದುಂದುಗಾರಿಕೆ, ಅಸುರಕ್ಷಿತ ಲೈಂಗಿಕ ಸಂಪರ್ಕ, ಮಾದಕ ವ್ಯಸನ (Addiction), ಜೂಜುಗಳಲ್ಲಿ ತೊಡಗುವ ಅಪಾಯಕಾರಿ ವರ್ತನೆ ಕಂಡುಬರುತ್ತದೆ. ನಿಯಮಗಳನ್ನು ಗಾಳಿಗೆ ತೂರುವ ಅಭ್ಯಾಸ (Habit) ಸಾಮಾನ್ಯವಾಗಿರುತ್ತದೆ. ಕೆಲವರು ಸ್ವಯಂ ಹಾನಿ ತಂದುಕೊಳ್ಳಬಹುದು. 

•    ಯಾವಾಗಲೂ ಬೇಸರ (Boredom)
ಸದಾಕಾಲ ಬೇಸರ ಎನ್ನುವವರು ನೀವಾಗಿದ್ದರೆ ಎಚ್ಚೆತ್ತುಕೊಳ್ಳಿ. ಇದೂ ಸಹ ನಿಮ್ಮೊಳಗಿನ ಸಮಸ್ಯೆಯನ್ನು ತೋರಬಹುದು. ಏಕೆಂದರೆ, ವ್ಯಕ್ತಿತ್ವದ ಸಮಸ್ಯೆ ಉಳ್ಳವರಲ್ಲಿ ನಿರಂತರವಾಗಿ ಬೇಸರ ಮನೆಮಾಡಿರುತ್ತದೆ. ಭಾವನಾತ್ಮಕ ನಿಯಂತ್ರಣ (Emotional Control) ಸಾಧ್ಯವಿಲ್ಲದೆ ಅನಾರೋಗ್ಯಕರ ಪದ್ಧತಿಗಳನ್ನು ರೂಢಿಸಿಕೊಳ್ಳುತ್ತಾರೆ. ವ್ಯಕ್ತಿತ್ವದ ಸಮಸ್ಯೆ ಉಳ್ಳವರು ಮಾದಕ ವ್ಯಸನ ಮತ್ತು ಆಲ್ಕೋಹಾಲ್ ಚಟಕ್ಕೆ ಬಹುಬೇಗ ಒಳಗಾಗುತ್ತಾರೆ ಎನ್ನುತ್ತದೆ ಅಧ್ಯಯನ.


 

click me!