Mental Health: ಆತ್ಮಹತ್ಯೆ ಮನಸ್ಥಿತಿ ಹೊಂದಿರುವ ಜನರಿಗೆ ನೆರವಾಗೋದು ಹೇಗೆ ?

By Suvarna News  |  First Published Nov 29, 2022, 12:29 PM IST

ಇತ್ತೀಚಿನ ವರ್ಷಗಳಲ್ಲಿ ಸಣ್ಣಪುಟ್ಟ ಕಾರಣಕ್ಕೆ ಜನರು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಒತ್ತಡ, ಖಿನ್ನತೆ ಮೊದಲಾದ ಸಮಸ್ಯೆಗಳಿಂದ ಬಳಲುವ ಮಂದಿ ದಿಢೀರ್ ಆತ್ಮಹತ್ಯೆಯ ನಿರ್ಧಾರ ತಾಳುತ್ತಾರೆ. ಹಾಗಿದ್ರೆ ಆತ್ಮಹತ್ಯಾ ಮನಸ್ಥಿತಿಯುಳ್ಳ ಜನರನ್ನು ರಕ್ಷಿಸುವುದು ಹೇಗೆ ? ಇಲ್ಲಿದೆ ಕೆಲವು ವಿಚಾರ.


ಮಾನಸಿಕ ಆರೋಗ್ಯವು (Mental health) ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಯಾಕೆಂದರೆ ಇದು ನಿರ್ಣಾಯಕ ವಿಷಯವಾಗಿದೆ. ಒತ್ತಡದ ಜೀವನಶೈಲಿ (Lifestyle),ಕಳಪೆ ಆಹಾರಪದ್ಧತಿಯಿಂದ ನಮ್ಮ ದೇಶವು ಖಿನ್ನತೆ (Anxiety)ಯಿಂದ ಬಳಲುತ್ತಿರುವ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿದೆ. ಜೀವನದ ಈ ಕಠಿಣ ಸಮಯದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಖಿನ್ನತೆಯು ಆತ್ಮಹತ್ಯೆಗೆ ಕಾರಣವಾಗಬಹುದು. ಖಿನ್ನತೆಗೆ ಒಳಗಾದ ವ್ಯಕ್ತಿಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ತಮ್ಮ ಜೀವನವನ್ನು ಅಂತ್ಯಗೊಳಿಸಿದ ಅನೇಕ ಪ್ರಕರಣಗಳಿವೆ.

ಕುಟುಂಬದಲ್ಲಿ (Family) ಅಥವಾ ನಮ್ಮ ಸ್ನೇಹಿತರ ಮತ್ತು ಪರಿಚಯಸ್ಥರ ವಲಯದಲ್ಲಿ ಇಂಥಾ ಅನೇಕ ಜನರು ಇರಬಹುದು. ಇಂಥವರು ಜೀವನದಲ್ಲಿ ಎದುರಾಗು ಸಣ್ಣಪುಟ್ಟ ಸಮಸ್ಯೆಗಳಿಗೆ ಅಂಜುತ್ತಾರೆ. ಜೀವನವನ್ನು ಕೊನೆಗೊಳಿಸುವ ಮಾರ್ಗಗಳನ್ನು ಆಲೋಚಿಸುತ್ತಾರೆ. ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿಯಿಂದ ಅವರ ಮನಸ್ಥಿತಿಯನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ತಿಳಿಯೋಣ. 

Tap to resize

Latest Videos

"Sorry ! ನನಗೆ ರಿಪ್ಲೈ ಮಾಡಲು ಮನಸಿಲ್ಲ: ಇದು ಖಿನ್ನತೆಯ ಹೊಸ ಲಕ್ಷಣ!

ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಯಾಕೆ ಬರುತ್ತದೆ ?

1. ಆತ್ಮಹತ್ಯಾ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳ ಆಲೋಚನೆಗಳು (Thinking) ಬುದ್ಧಿಶಕ್ತಿ ಅಥವಾ ತರ್ಕವನ್ನು ಆಧರಿಸಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಾವನೆಗಳು ಅವರನ್ನು ನಿಯಂತ್ರಿಸುತ್ತವೆ. ಆದ್ದರಿಂದ, ಅವರು ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಾರೆ. ಆತ್ಮಹತ್ಯೆಯಂಥಹಾ ಕಠಿಣ ನಿರ್ಧಾರ (Decision) ತೆಗೆದುಕೊಳ್ಳುತ್ತಾರೆ. ಅವರ ಭಾವನೆಗಳನ್ನು ನಾವು ಸೌಜನ್ಯದಿಂದ ಸ್ವೀಕರಿಸಬೇಕು. ಅವರು ಹೇಳಲು ಬಯಸುವುದನ್ನು ನಾವು ಕೇಳುತ್ತಿದ್ದೇವೆ, ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಅವರಿಗೆ ಮನವರಿಕೆ ಮಾಡುವುದು ಮುಖ್ಯ.

2. ತೀವ್ರ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಗಳು ಸರಿಯಾದ ಚಿಕಿತ್ಸೆಯ (Treatment) ಅಗತ್ಯವಿರುವ ಸಮಸ್ಯೆಗಳಾಗಿವೆ. ಪ್ರೀತಿ ಮತ್ತು ಕಾಳಜಿಯಿಂದ, ನಾವು ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು. ಅಗತ್ಯವಿದ್ದರೆ ತಜ್ಞರ ನೆರವು ಪಡೆಯಬೇಕು. ಈಗಾಗಲೇ ನೊಂದಿರುವವರು ಎಲ್ಲರ ಜೊತೆ ಸಮಸ್ಯೆಗಳನ್ನು ಹಂಚಿಕೊಂಡರೆ ಅಥವಾ ಈ ಕ್ಷೇತ್ರದಲ್ಲಿ ಪರಿಣಿತಿ ಇಲ್ಲದ ಜನರೊಂದಿಗೆ ಮಾತನಾಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

3. ಕೆಲವೊಮ್ಮೆ, ಒಬ್ಬ ವ್ಯಕ್ತಿಯು ಮಾನಸಿಕ ತೊಂದರೆಗಳ ಬಗ್ಗೆ ದೂರು ನೀಡಿದಾಗ, ಅವನ ಸ್ನೇಹಿತರು (Friends) ಮದ್ಯ ಅಥವಾ ಡ್ರಗ್ಸ್ ಅನ್ನು ಪರಿಹಾರವಾಗಿ ಸೂಚಿಸುವ ಸಾಧ್ಯತೆಯಿದೆ. ಈ ಅನಾರೋಗ್ಯಕರ ಅಭ್ಯಾಸವನ್ನು ಎಂದಿಗೂ ಅನುಸರಿಸಬಾರದು. ಇದು ಖಿನ್ನತೆಗೆ ಒಳಗಾದ ವ್ಯಕ್ತಿಯನ್ನು ಮತ್ತಷ್ಟು ಹಾಳುಮಾಡುತ್ತದೆ. ಸಮಸ್ಯೆಗೆ ಪರಿಹಾರ, ಸಾಂತ್ವನ ನೀಡುವುದು ಸಮಸ್ಯೆಯಿಂದ ಹೊರಬರಲು ನೆರವಾಗುತ್ತದೆ.

ವೈವಾಹಿಕ ಸಂಬಂಧದಲ್ಲಿ ಹಿಂಸಾಚಾರದಿಂದ ಮಹಿಳೆಯನ್ನು ಕಾಡೋ ಸಮಸ್ಯೆಗಳಿವು

4. ಏನೇ ಆದರೂ ನಾವು ಅವರೊಂದಿಗೆ ಇರುತ್ತೇವೆ ಎಂದು ವ್ಯಕ್ತಿಗೆ ಭರವಸೆ ನೀಡುವುದು ಅತ್ಯಗತ್ಯ. ಈ ಸೌಹಾರ್ದತೆ ಸದಾ ಪರಸ್ಪರ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗಬೇಕು. ನಾವು ನಮ್ಮ ಪ್ರೀತಿಪಾತ್ರರ ಬಗ್ಗೆ ನಮ್ಮ ಕಾಳಜಿ (Care)ಯನ್ನು ಈ ರೀತಿಯ ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕಾಗಿದೆ. ದುರಾಭಿಮಾನ, ಅವರೇ ಮೊದಲು ಕಾಲ್ ಮಾಡಲಿ ಎಂಬ ಭಾವನೆಯಿಂದ ಆಪ್ತರಿಂದ ದೂರವಿರುವ ತಪ್ಪು ಮಾಡಬೇಡಿ.

5. ಆತ್ಮಹತ್ಯಾ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳನ್ನು ಎಂದಿಗೂ ಒಂಟಿ (Alone)ಯಾಗಿ ಬಿಡಬಾರದು. ಅವರ ಮೇಲೆ ಸದಾ ನಿಗಾ ಇಡಬೇಕು. ಇಲ್ಲವೇ, ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಳ್ಳಲು ಇಂಥಾ ಕ್ಷಣಗಳು ಸಾಕಾಗುತ್ತವೆ. ಯಾಕೆಂದರೆ ಒಂಟಿಯಾಗಿರುವ ಸಮಯದಲ್ಲಿ ಮನಸ್ಸು ಇನ್ನಷ್ಟು ಕೆಟ್ಟದಾಗಿ ಯೋಚಿಸುತ್ತದೆ. ಕೆಟ್ಟ ನಿರ್ಧಾರ (Decision)ವನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. 

6. ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಸನ್ನಿವೇಶಗಳನ್ನು ನಾವು ಸೃಷ್ಟಿಸಬಾರದು. ಅವರನ್ನು ಎಂದಿಗೂ ಒಂಟಿಯಾಗಲು ಬಿಡಬೇಡಿ ಮತ್ತು ಅವರ ಜೀವನವನ್ನು ಕೊನೆಗೊಳಿಸಲು ಸಹಾಯ ಮಾಡುವ ಔಷಧಿಗಳು (Medicine) ಅಥವಾ ಸಲಕರಣೆಗಳಂತಹ ಯಾವುದನ್ನೂ ಅವರ ಹತ್ತಿರ ಬಿಡಬೇಡಿ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಲೋಭನೆಗೆ ಒಳಗಾಗದಂತೆ ಯಾವಾಗಲೂ ಖಚಿತಪಡಿಸಿಕೊಳ್ಳಿ. ಹೀಗೆಲ್ಲಾ ಮಾಡುವ ಮೂಲಕ ಸಮಸ್ಯೆಗಳಿರುವ ವ್ಯಕ್ತಿ ಆತ್ಮಹತ್ಯೆಯ ನಿರ್ಧಾರ ಮಾಡುವುದನ್ನು ತಡೆಯಬಹುದು.

click me!