ಹೃದಯ ಸಮಸ್ಯೆಗೆ ಒತ್ತಡವೇ ಶತ್ರು, ರಕ್ಷಣೆ ಹೇಗೆ ಅಂತ ಹೇಳ್ತಾರೆ ಸುಷ್ಮಿತಾ ಸೇನ್ ಡಾಕ್ಟರ್

By Roopa Hegde  |  First Published Dec 23, 2024, 12:55 PM IST

ಹೃದಯಾಘಾತ ಹೆಚ್ಚಾಗ್ತಿದ್ದಂತೆ ಜನರ ಟೆನ್ಷನ್ ಜಾಸ್ತಿಯಾಗಿದೆ. ಅದ್ರಿಂದ ರಕ್ಷಣೆಗೆ ಹೇಗೆ ಎಂಬ ಪ್ರಶ್ನೆ ಜನರನ್ನು ಕಾಡ್ತಿದೆ. ಅದಕ್ಕೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಚಿಕಿತ್ಸೆ ನೀಡಿದ್ದ ಹೃದಯ ತಜ್ಞರು ಸೂಕ್ತ ಸಲಹೆ ನೀಡಿದ್ದಾರೆ. 
 


ಹೃದಯಾಘಾತ (Heart attack) ದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕುಳಿತಲ್ಲಿ, ನಿಂತಲ್ಲಿ, ಅಲ್ಲಲ್ಲಿಯೇ ಜನರು ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹೃದಯಾಘಾತದ ಹೆಸರು ಕೇಳಿದ್ರೆ ಬೆವರುವ ಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ (health) ವಾಗಿದ್ದಾನೆ ಅಂದ್ಕೊಂಡ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ನಮ್ಮನ್ನಗಲಿದ ಅನೇಕ ಘಟನೆ ನಮ್ಮ ಮುಂದಿದೆ. ಭಾರತದ ಜನಪ್ರಿಯ ಗ್ರೀಕ್ ಯೋಗರ್ಟ್ ಬ್ರ್ಯಾಂಡ್ ಎಪಿಗಾಮಿಯಾ (Greek yogurt brand Epigamia) ದ ಸಹ ಸಂಸ್ಥಾಪಕ ಮತ್ತು ಸಿಇಒ ರೋಹನ್ ಮಿರ್ಚಂದಾನಿ ಡಿಸೆಂಬರ್ 21 ರಂದು ತಮ್ಮ 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರೋಹನ್ ಅಕಾಲಿಕ ಸಾವು ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯಕ ಎಂಬುದನ್ನು ಮತ್ತಷ್ಟು ಎತ್ತಿ ತೋರಿಸುತ್ತಿದೆ.  ಈ ಮಧ್ಯೆ ನಮ್ಮ ಹೃದಯದ ಬಗ್ಗೆ ಏನೆಲ್ಲ ಕಾಳಜಿ ವಹಿಸಬೇಕು ಎಂದು ಬಾಲಿವುಡ್ ಹಿರಿಯ ನಟಿ ಸುಶ್ಮಿತಾ ಸೇನ್ (actress Sushmita Sen) ಕಾರ್ಡಿಯೋಲಿಸ್ಟ್ ತಜ್ಞ ಡಾ. ರಾಜೀವ್ ಬಿ ಭಾಗವತ್ ಹೇಳಿದ್ದಾರೆ.

ಕಳೆದ ವರ್ಷ, ನಟಿ ಸುಶ್ಮಿತಾ ಸೇನ್  ಅಪಧಮನಿಗಳಲ್ಲಿ ಶೇಕಡಾ 95ರಷ್ಟು ಬ್ಲಾಕೇಜ್ ಪತ್ತೆಯಾಗಿತ್ತು. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕ ಕಾರಣ ಹೃದಯಾಘಾತದಿಂದ ಬದುಕುಳಿದಿದ್ದರು. ಅವರ ಹೃದಯ ತಜ್ಞ, ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರಾಜೀವ್ ಬಿ ಭಾಗವತ್, ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಒತ್ತಡ ನಿರ್ವಹಣೆಯ ಸಂಯೋಜನೆಯು ಹೃದಯ ಸಮಸ್ಯೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದಿದ್ದಾರೆ. 

Tap to resize

Latest Videos

undefined

ಚಿಕನ್ ಪ್ರಿಯರೇ, ಕೋಳಿಯ ಭಾಗ ತಿನ್ನೋದು ತುಂಬಾ ಡೇಂಜರ್!

ನಿತ್ಯದ ನಮ್ಮ ವರ್ಕ್ ಔಟ್, ರಕ್ತಕ್ಕೆ ಆಮ್ಲಜನಕದ ಹರಿವನ್ನು ನಿರ್ಧರಿಸುತ್ತದೆ ಎಂದು ಡಾ. ಭಾಗವತ್ ಹೇಳಿದ್ದಾರೆ. ನಿಯಮಿತ ಮತ್ತು ಮಧ್ಯಮ ವ್ಯಾಯಾಮವು ಸ್ನಾಯುಗಳಲ್ಲಿ ಶಕ್ತಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಬ್ಲಾಕೇಜ್ ಸಮಯದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. 

ಹೃದಯ ಆರೋಗ್ಯದಲ್ಲಿ ವ್ಯಾಯಾಮದ ಪಾತ್ರ : ವ್ಯಾಯಾಮವು ರಕ್ತದಿಂದ ಹೆಚ್ಚಿನ ಆಮ್ಲಜನಕವನ್ನು ಹೊರತೆಗೆಯುವ ಸ್ನಾಯುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೃದಯದ ಮೇಲಿನ ಕೆಲಸದ ಹೊರೆ ಕಡಿಮೆ ಮಾಡುತ್ತದೆ. ಇದು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ  ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಯಮಿತ ವ್ಯಾಯಾಮವು ಹಠಾತ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಅಪಧಮನಿಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವೇಗವಾದ ನಡಿಗೆ, ಜಾಗಿಂಗ್ ಮತ್ತು ಈಜಿನಂತ  ಚಟುವಟಿಕೆ ರೂಢಿಸಿಕೊಳ್ಳಲು ಅವರು ಸಲಹೆ ನೀಡ್ತಾರೆ. 

ಹೃದಯಾಘಾತದ ನಂತರ  ಆರೈಕೆ ಮತ್ತು ಎಚ್ಚರಿಕೆ : ಹೃದಯಾಘಾತದಿಂದ ಚೇತರಿಸಿಕೊಳ್ಳುವವರಿಗೆ, ಡಾ. ಭಾಗವತ್ ಮಹತ್ವದ ಮಾಹಿತಿ ನೀಡಿದ್ದಾರೆ. ರೋಗಿಯ ಸ್ಥಿತಿ ಹಾಗೂ ಇತಿಹಾಸವನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪ್ರತಿ ದಿನ ವ್ಯಾಯಾಮದ ಸಮಯದಲ್ಲಿ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಬೇಕು. ಯಾವುದೇ ಅಸ್ವಸ್ಥತೆ ಕಂಡು ಬಂದಲ್ಲಿ ರೋಗಿ, ಹೃದ್ರೋಗ ತಜ್ಞರಿಗೆ ಮಾಹಿತಿ ನೀಡಬೇಕು. ಸ್ಟೆಂಟಿಂಗ್ ಅಳವಡಿಸಿದ ಏಳು ದಿನಗಳ ನಂತರ ಲಘು ವ್ಯಾಯಾಮವನ್ನು ಪ್ರಾರಂಭಿಸಬಹುದು ಎಂದು ಡಾ. ಭಾಗವತ್ ಹೇಳಿದ್ದಾರೆ. ಪ್ರತಿಯೊಬ್ಬ ರೋಗಿಯ ಸ್ಥಿತಿ ಭಿನ್ನವಾಗಿರುವ ಕಾರಣ ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಬೇಕು ಎಂದಿದ್ದಾರೆ. 

ಅತಿಯಾಗಿ ಅನ್ನ ತಿಂದ್ರೆ ಬರುತ್ತೆ ಡಯಾಬಿಟೀಸ್! ಮಧ್ಯಾಹ್ನದ ಊಟ ಹೀಗೆ ಇರಲಿ

ವ್ಯಾಯಾಮದ ಹೊರತಾಗಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಹಾರದ ಪಾತ್ರ ಬಹುಮುಖ್ಯ ಎಂದು ಡಾ. ಭಾಗವತ್ ಒತ್ತಿ ಹೇಳಿದ್ದಾರೆ. ಕಡಲೆಕಾಯಿ ಎಣ್ಣೆಯಂತಹ ಸಾಂಪ್ರದಾಯಿಕ ಎಣ್ಣೆಗಳು ಅಡುಗೆ ಸಮಯದಲ್ಲಿ ಹೆಚ್ಚು ಬಿಸಿಯಾಗದಿದ್ದರೆ ಒಳ್ಳೆಯದು. ಉತ್ಕರ್ಷಣ ನಿರೋಧಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಬಣ್ಣ ಬಣ್ಣದ ತರಕಾರಿಗಳನ್ನು ಸೇರಿಸುವುದು ಅತ್ಯಗತ್ಯ. ಸಮತೋಲಿತ ಥಾಲಿಯ ಆಹಾರ ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ. ಒತ್ತಡವು ಮೂಕ ಕೊಲೆಗಾರ ಎಂದು ಭಾಗವತ್ ಹೇಳಿದ್ದಾರೆ. ಇದು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಅಪಧಮನಿಗಳಲ್ಲಿ ಉರಿಯೂತ ಮತ್ತು ಪ್ಲೇಕ್ ರಚನೆಗೆ ಕಾರಣವಾಗಬಹುದು ಎಂದು  ಎಚ್ಚರಿಸಿದ್ದಾರೆ. ಇದೇ ವೇಳೆ ಡಾ. ಭಾಗವತ್ ನಿಯಮಿತ ವೈದ್ಯಕೀಯ ತಪಾಸಣೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ ಹೊಂದಿರುವವರು ನಿಯಮಿತವಾಗಿ ಹೃದಯ ಪರೀಕ್ಷೆಗೆ ಒಳಗಾಗಬೇಕು ಎಂದಿದ್ದಾರೆ. 

click me!