Kids Care : ಉಗುರು ಕಚ್ಚಿ ಮಕ್ಕಳು ಆರೋಗ್ಯ ಹಾಳ್ಮಾಡಿಕೊಂಡ್ರೆ ಹೀಗೆ ಮಾಡಿ

By Suvarna News  |  First Published May 10, 2022, 12:43 PM IST

ಸಣ್ಣ ಮಕ್ಕಳು ಗೊತ್ತಿಲ್ಲದೆ ಕೆಲ ಕೆಟ್ಟ ಅಭ್ಯಾಸ ಶುರು ಮಾಡಿರ್ತಾರೆ. ಆರಂಭವಾದ ಅಭ್ಯಾಸ ಬಿಡಿಸೋದು ಕಷ್ಟ. ಅದ್ರಲ್ಲಿ ಉಗುರು ಕಚ್ಚುವು ಅಭ್ಯಾಸವೂ ಒಂದು. ಅದನ್ನು ಸುಲಭ ವಿಧಾನದ ಮೂಲಕ ಕಡಿಮೆ ಮಾಡ್ಬಹುದು. 
 


ಅನೇಕ ಮಕ್ಕಳು (Children) ಉಗುರು (Nail) ಕಚ್ಚುವ ಅಭ್ಯಾಸ ಹೊಂದಿರುತ್ತಾರೆ. ಕೆಲವು ಪೋಷಕರು (Parents) ತಮ್ಮ ಮಕ್ಕಳ ಉಗುರು ಕಚ್ಚುವ ಅಭ್ಯಾಸವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತೆ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದ್ರೆ ಒಮ್ಮೆ ಶುರುವಾದ ಅಭ್ಯಾಸವನ್ನು ಬಿಡಿಸುವುದು ಸುಲಭವಲ್ಲ. ಮಕ್ಕಳು ಉಗುರು ಕಚ್ಚಿದ್ರೆ ನೋಡಲು ವಿಚಿತ್ರವೆನ್ನಿಸುತ್ತದೆ. ಉಗುರು ಕಚ್ಚುವುದು ಕೆಟ್ಟ ಅಭ್ಯಾಸ ಮಾತ್ರವಲ್ಲ ಆರೋಗ್ಯ (Health) ದ ಮೇಲೂ ಪರಿಣಾಮ ಬೀರುತ್ತದೆ.  ಹಾಗಾಗಿ, ಸಣ್ಣ ಮಕ್ಕಳ ಈ ಅಭ್ಯಾಸವನ್ನು ಬೇಗ ಬಿಡಿಸಬೇಕು. ಹೊಡೆದು, ಬೈದು ಮಾಡಿದ್ರೆ ಮಕ್ಕಳು ಕೆಲ ಸಮಯ ಈ ಅಭ್ಯಾಸವನ್ನು ಬಿಡ್ತಾರೆ. ಮತ್ತೆ ಕೆಲ ದಿನದಲ್ಲೇ ಈ ಅಭ್ಯಾಸವನ್ನು ಮತ್ತೆ ಶುರು ಮಾಡ್ತಾರೆ. ಮಕ್ಕಳ ಉಗುರು ಕಚ್ಚುವ ಅಭ್ಯಾಸವನ್ನು ಕೆಲ ಟಿಪ್ಸ್ (Tips ) ಮೂಲಕ ಸುಲಭವಾಗಿ ಬಿಡಿಸಬಹುದು.  

ಉಗುರು ಕಚ್ಚುವ ಅನಾನುಕೂಲಗಳು : ಉಗುರುಗಳನ್ನು ಕಚ್ಚುವುದ್ರಿಂದ ಕೈ ಹಾಗೂ ಉಗುರಿನ ಒಳಗಿರುವ ಸೂಕ್ಷ್ಮಜೀವಿಗಳು ನೇರವಾಗಿ ಮಕ್ಕಳ ದೇಹ (Body) ಕ್ಕೆ ಹೋಗಿ ಅವರ ಆರೋಗ್ಯಕ್ಕೆ ಹಾನಿಯಾಗುತ್ತದೆ. ಮಕ್ಕಳು ಶೀಘ್ರದಲ್ಲೇ ಅನಾರೋಗ್ಯ (Illness)ಕ್ಕೆ ಒಳಗಾಗುತ್ತಾರೆ. ಹಾಗೆ ಪದೇ ಪದೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗ್ತಾರೆ.  ಉಗುರು ಜಗಿಯುವ ಅಭ್ಯಾಸವು ಮಕ್ಕಳ ಮಾನಸಿಕ (Mental) ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಕ್ಕಳು ಒತ್ತಡ (Stress) ಕ್ಕೆ ಬಲಿಯಾಗುತ್ತಾರೆ.

Tap to resize

Latest Videos

ಮಕ್ಕಳ ಉಗುರು ಕಚ್ಚುವ ಅಭ್ಯಾಸವನ್ನು ಹೀಗೆ ಬಿಡಿಸಿ :  

ಈ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳನ್ನು ವಜ್ರಗಳಂತೆ ಬಿಳಿಯಾಗಿಸುತ್ತೆ

ಉಗುರುಗಳನ್ನು ಕತ್ತರಿಸಿ : ಮಗುವಿಗೆ ಉಗುರು ಕಚ್ಚುವ ಅಭ್ಯಾಸವಿದ್ದರೆ ಮಕ್ಕಳ ಉಗುರನ್ನು ಬೆಳೆಯಲು ಬಿಡಬೇಡಿ. ಉಗುರನ್ನು ಸಮಯಕ್ಕೆ ಸರಿಯಾಗಿ ಕತ್ತರಿಸಿ. ಉಗುರು ಬಾಯಿಗೆ ಸಿಗ್ತಿಲ್ಲವೆಂದ್ರೆ ಮಕ್ಕಳು ಉಗುರನ್ನು ಜಗಿಯುವುದಿಲ್ಲ. ಹಾಗಾಗಿ ಮಕ್ಕಳ ಉಗುರು ಚಿಕ್ಕದಿರುವಂತೆ ನೋಡಿಕೊಳ್ಳಿ. ಆದ್ರೆ ಅತಿಯಾಗಿ ಕತ್ತರಿಸಬೇಡಿ. ಇದ್ರಿಂದ ಚರ್ಮದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮಕ್ಕಳು ಮತ್ತಷ್ಟು ಕಿರಿಕಿರಿ ಅನುಭವಿಸುತ್ತಾರೆ.

ಕಹಿ ಪದಾರ್ಥದಿಂದ ದೂರವಿರಿ : ಮಕ್ಕಳು ಉಗುರುಗಳನ್ನು ಕಚ್ಚುತ್ತಿದ್ದರೆ ಅದನ್ನು ಬಿಡಿಸಲು ಕಹಿ ಪದಾರ್ಥಗಳ ಸಹಾಯವನ್ನು ಪಡೆಯಬಹುದು. ಕಹಿ ಬೇವು, ಹಾಗಲಕಾಯಿ ಸೇರಿದಂತೆ ಕಹಿ ಪದಾರ್ಥದ ರಸವನ್ನು ತೆಗೆಯಿರಿ. ನಂತ್ರ ಅದನ್ನು ಮಕ್ಕಳ ಉಗುರಿನ ಸುತ್ತ ಹಚ್ಚಿ. ಮಕ್ಕಳು ಬಾಯಿಗೆ ಉಗುರು ಹಾಕ್ತಿದ್ದಂತೆ ಕಹಿ ಅನುಭವವಾಗುತ್ತದೆ. ಪದೇ ಪದೇ ಮಕ್ಕಳ ಕೈಗೆ ಇದನ್ನು ಹಚ್ಚುತ್ತಿರಬೇಕು. ಕಹಿ ಆಗ್ತಿದ್ದಂತೆ ಮಕ್ಕಳು ಉಗುರು ಕಚ್ಚುವುದನ್ನು ಕಡಿಮೆ ಮಾಡ್ತಾರೆ.

ಮಕ್ಕಳ ಉಗುರು – ಕೈ ಸ್ವಚ್ಛಗೊಳಿಸಿ : ದೊಡ್ಡವರಾದ ನಮಗೇ ಕೆಟ್ಟ ಅಭ್ಯಾಸಗಳನ್ನು ತಕ್ಷಣ ಬಿಡಲು ಸಾಧ್ಯವಾಗುವುದಿಲ್ಲ. ಹಾಗೆ ಮಕ್ಕಳಿಗೆ ಕೂಡ ಕೆಟ್ಟ ಅಭ್ಯಾಸ ಬಿಡಲು ಸಮಯ ಬೇಕು. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳಿಗೆ ಬೈದು ಪ್ರಯೋಜವಿಲ್ಲ. ಹಾಗಾಗಿ ಮಕ್ಕಳ ಉಗುರಿನ ಮೇಲೆ ಪಾಲಕರು ಹೆಚ್ಚು ಗಮನ ನೀಡಬೇಕು. ಕೈ ಹಾಗೂ ಉಗುರನ್ನು ಸ್ವಚ್ಛಗೊಳಿಸಲು ಮರೆಯಬಾರದು. ಉಗುರು ಕಚ್ಚುವ ಮಕ್ಕಳು ಕೈ ಕೊಳಕಾಗಿದ್ದಾಗಲೂ ಅದನ್ನು ಬಾಯಿಗೆ ಹಾಕ್ತಾರೆ. ಹೀಗೆ ಮಾಡಿದ್ರೆ ಕೊಳಕು ಬಾಯಿ ಸೇರುತ್ತದೆ. ಹಾಗಾಗಿ ಮಕ್ಕಳ ಕೈ ಹಾಗೂ ಉಗುರನ್ನು ಆಗಾಗ ಸ್ವಚ್ಛಗೊಳಿಸಿ.   

Kids Health : ಮಕ್ಕಳಿಗೆ ಹೀಗೆ ನೀಡಿ ಏಲಕ್ಕಿ

ಮಕ್ಕಳನ್ನು ಸದಾ ಬ್ಯುಸಿಗೊಳಿಸಿ : ಖಾಲಿ ಕುಳಿತಾಗ ಮಕ್ಕಳು ಉಗುರು ಕಚ್ಚುತ್ತಾರೆ. ಅನೇಕ ಬಾರಿ ಟೆನ್ಷನ್ ಆದಾಗ ಮಕ್ಕಳು ಉಗುರು ಕಚ್ಚುತ್ತಾರೆ. ಹಾಗಾಗಿ ಮಕ್ಕಳು ಸದಾ ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಮಕ್ಕಳು ಯಾವ ಸಂದರ್ಭದಲ್ಲಿ ಉಗುರು ಕಚ್ಚುತ್ತಾರೆ ಎಂಬುದನ್ನು ಗಮನಿಸಿದ.  ಸಂದರ್ಭದಲ್ಲಿ ಮಕ್ಕಳ ಗಮನವನ್ನು ಬೇರೆಡೆ ಸೆಳೆಯಿರಿ. ಅವರಿಗೆ ಉಗುರು ಕಚ್ಚಲು ಅವಕಾಶ ನೀಡ್ಬೇಡಿ. 

click me!