Healthy Meal : ಊಟದ ನಂತ್ರ ಸಿಹಿ ತಿಂದು ಆರೋಗ್ಯ ಕೆಡಿಸಿಕೊಳ್ಬೇಡಿ

By Suvarna News  |  First Published May 10, 2022, 12:24 PM IST

ಊಟವಾದ ನಂತರ ಸಿಹಿ ತಿನ್ನುವ ಅಭ್ಯಾಸ ಅನೇಕ ಜನರಿಗಿರುತ್ತದೆ. ಆದ್ರೆ ಆಯುರ್ವೇದ ಈ ವಿಧಾನವನ್ನು ಒಪ್ಪುವುದಿಲ್ಲ. ಆಯುರ್ವೇದ ತಜ್ಞರ ಪ್ರಕಾರ ಊಟಕ್ಕೂ ಮುನ್ನ ಸಿಹಿ ತಿನ್ನುವುದು ಸರಿಯಾದ ಮಾರ್ಗ. ಊಟದ ನಂತ್ರ ಸಿಹಿ ತಿಂದ್ರೆ ಅನೇಕ ಸಮಸ್ಯೆ ಕಾಡುತ್ತದೆ.
 


ಎಷ್ಟೇ ರುಚಿ (Taste) ಕರ ಊಟ (Meals) ಸೇವನೆ ಮಾಡ್ಲಿ, ಊಟದ ನಂತ್ರ ಸಿಹಿ (Sweet) ತಿನ್ನುವ ಬಯಕೆಯಾಗುತ್ತದೆ. ಕೆಲವರು ಊಟದ ಬಟ್ಟಲಿಗೆ ಸಿಹಿ ತಿಂಡಿಯನ್ನು ಹಾಕಿಕೊಳ್ತಾರೆ. ಮತ್ತೆ ಕೆಲವರು ಊಟವಾದ ತಕ್ಷಣ ಸಿಹಿ ತಿಂಡಿಯಿಲ್ಲವೆಂದ್ರೆ ಚಾಕೋಲೇಟ್ (Chocolate) ಸೇವನೆ ಮಾಡ್ತಾರೆ. ಊಟದ ನಂತ್ರ ಸಿಹಿ ಸೇವನೆ ಆರೋಗ್ಯಕರ ಅಭ್ಯಾಸ ಎಂದು ಜನರು ಭಾವಿಸುತ್ತಾರೆ. ಇದು ಜೀರ್ಣಕ್ರಿಯೆ (Digestion) ಯನ್ನು ಸುಧಾರಿಸುತ್ತದೆ ಎಂದು ನಂಬುತ್ತಾರೆ. ಆದ್ರೆ ಇದು ಸತ್ಯವಲ್ಲ. ಆಯುರ್ವೇದದಲ್ಲಿ ಈ ಪದ್ಧತಿ ತಪ್ಪು ಎಂದು ಹೇಳಲಾಗಿದೆ. ಆಯುರ್ವೇದದ ಪ್ರಕಾರ, ಯಾವುದೇ ಸಿಹಿ ಪದಾರ್ಥವನ್ನು ಊಟದ ಮೊದಲು ತಿನ್ನಬೇಕು. 

ತಜ್ಞರ ಪ್ರಕಾರ, ಅನೇಕ ಜನರಿಗೆ ಯಾವಾಗ ಸಿಹಿ ತಿಂಡಿ ತಿನ್ನಬೇಕೆನ್ನುವ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಊಟದ ಸಮಯದಲ್ಲಿ ಸಿಹಿತಿಂಡಿಗಳನ್ನು ತಿನ್ನುವುದರಿಂದ 'ಓಜಸ್' ಅಂದರೆ ದೇಹದ ಶಕ್ತಿ ಮತ್ತು 'ಅಮ' ಅಂದರೆ ದೇಹದಲ್ಲಿ ವಿಷತ್ವ ಹೆಚ್ಚಾಗುತ್ತದೆ. ಆಯುರ್ವೇದದಲ್ಲಿ ಈ ವಿಧಾನ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಿಹಿ ತಿಂಡಿಯನ್ನು ತಪ್ಪಾಗಿ ಸೇವನೆ ಮಾಡಿದ್ರೆ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಊಟದ ನಂತರ ನೀವೂ ಸಿಹಿತಿಂಡಿಗಳನ್ನು ಸೇವಿಸುವ  ಅಭ್ಯಾಸವನ್ನು ಹೊಂದಿದ್ದರೆ ತಕ್ಷಣ ಬದಲಿಸಿ. ಊಟಕ್ಕಿಂತ ಮೊದಲು ಸಿಹಿ ಸೇವನೆ ಮಾಡಿ. ಇವೆರಡರ ವ್ಯತ್ಯಾಸವೇನು ಎಂಬುದನ್ನು ನಾವಿಂದು ಹೇಳ್ತೇವೆ.

Latest Videos

undefined

ಜೀರ್ಣಕ್ರಿಯೆ : ಊಟದ ನಂತ್ರ ಸಿಹಿ ತಿಂಡಿ ಬೇಕೇಬೇಕು ಎನ್ನುವವರು ಮೊದಲು ಈ ವಿಷ್ಯವನ್ನು ತಿಳಿಯಬೇಕು. ಊಟದ ನಂತ್ರ ಸಿಹಿ ತಿಂಡಿ ಸೇವನೆ ಮಾಡಿದ್ರೆ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಊಟದ ನಂತರ ಸಿಹಿತಿಂಡಿಗಳನ್ನು ತಿನ್ನುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಹಲವರು ಭಾವಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಜನರು ಈ ವಿಧಾನವನ್ನು ಅನುಸರಿಸುತ್ತಾರೆ.  ಆದರೆ ಆಯುರ್ವೇದ ತಜ್ಞರ ಪ್ರಕಾರ, ಸಿಹಿ ತಿಂಡಿಯನ್ನು ಆಹಾರದ ಮೊದಲು ಸೇವನೆ ಮಾಡ್ಬೇಕು. ಏಕೆಂದರೆ ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ.

ಮನೆಯಲ್ಲಿ ಸುಲಭವಾಗಿ ಸಾಂಬಾರ್ ಮಸಾಲಾ ತಯಾರಿಸುವುದು ಹೀಗೆ

ಮಲಬದ್ಧತೆ : ಊಟದ ನಂತರ ಸಿಹಿ ಪದಾರ್ಥ ಸೇವನೆ ಮಾಡಿದರೆ ಇದು ಜೀರ್ಣಕ್ರಿಯೆಯ ವೇಗವನ್ನು ನಿಧಾನಗೊಳ್ಳುತ್ತದೆ. ತಡವಾಗಿ ಜೀರ್ಣವಾಗುವುದರಿಂದ, ಮಲಬದ್ಧತೆ ಅಥವಾ ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗಾಗಿ ಊಟ ಶುರು ಮಾಡುವ ಮೊದಲು  ಸಿಹಿ ತಿನ್ನಲು ಪ್ರಯತ್ನಿಸಿ. ಇದರಿಂದ ಯಾವುದೇ ಜೀರ್ಣಕ್ರಿಯೆ ಸಮಸ್ಯೆಯಾಗುವುದಿಲ್ಲ.

ಅಜೀರ್ಣ : ಸಾಮಾನ್ಯವಾಗಿ ಊಟದ ಮೊದಲು ಸಿಹಿ ತಿಂದ್ರೆ ಸರಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಭಾವಿಸ್ತಾರೆ. ಆದ್ರೆ ಈ ನಂಬಿಕೆ ತಪ್ಪು. ಜೀರ್ಣಕ್ರಿಯೆ ಹೊರತಾಗಿ, ಆಹಾರ ಸೇವನೆ ಮೊದಲು ಸಿಹಿತಿಂಡಿಗಳನ್ನು ತಿನ್ನುವುದರಿಂದ ರುಚಿ ಮೊಗ್ಗುಗಳು ಸಕ್ರಿಯಗೊಳ್ಳುತ್ತವೆ. ಇದು ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಅದೇ ಊಟದ ನಂತರ ಸಿಹಿ ತಿನ್ನುವುದ್ರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಅಜೀರ್ಣ ಅಥವಾ ಹುಳಿ ತೇಗಿನ ಸಮಸ್ಯೆಗಳು ಶುರುವಾಗುತ್ತವೆ.

Travel Tips : ಪ್ರವಾಸ ಥ್ರಿಲ್ ಆಗಿರ್ಬೇಕೆಂದ್ರೆ ಈ ಆಹಾರದಿಂದ ದೂರವಿರಿ

ಹೊಟ್ಟೆ ಉಬ್ಬರ : ಕೆಲವು ಜನರು ಸಿಹಿತಿಂಡಿಗಳಲ್ಲಿ ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಉದಾಹರಣೆಗೆ ಬೆಲ್ಲ ಅಥವಾ ಖರ್ಜೂರ  ಸೇರಿದಂತೆ ಆರೋಗ್ಯಕರ ಸಿಹಿ ಸೇವನೆ ಮಾಡ್ತಾರೆ. ಊಟದ ನಂತ್ರ ಬೆಲ್ಲ ಅಥವಾ ಕರ್ಜೂರ್ ತಿಂದ್ರೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಭಾವಿಸ್ತಾರೆ. ಮತ್ತೆ ಕೆಲವರು ಊಟದ ಕೊನೆಯಲ್ಲಿ ಸಕ್ಕರೆ ತಿನ್ನಲು ಪ್ರಾರಂಭಿಸುವವರೂ ಇದ್ದಾರೆ. ಈ ತಪ್ಪು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವುದಲ್ಲದೆ, ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಉಬ್ಬುವಿಕೆಯ ಸಮಸ್ಯೆ ಕೂಡ ಶುರುವಾಗುತ್ತದೆ. ಹೊಟ್ಟೆ ಉಬ್ಬುವಿಕೆಯಿಂದಾಗಿ ಹೊಟ್ಟೆಯಲ್ಲಿ ಸದಾ ಕಿರಿಕಿರಿಯಾಗ್ತಿರುತ್ತದೆ.

click me!