ಆಸ್ತಮಾ ಮಂದಿ ಏನು ಮಾಡಬೇಕು; ಇದು ಹುಡುಗಾಟಿಕೆ ಟೈಮ್‌ ಅಲ್ಲ!

By Kannadaprabha News  |  First Published May 7, 2020, 10:48 AM IST

ಕೊರೋನಾ ಇರುವವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಅಸ್ತಮಾ ಇದ್ದರಂತೂ ಪ್ರಾಣಾಪಾಯ. ಇಂಥಾ ಟೈಮ್‌ ನಲ್ಲಿ ಅಸ್ತಮಾ ಇರೋರ ಕತೆಯೇನು? ಅವರು ರೋಗ ನಿರೋಧಕತೆ ಬೆಳೆಸಿಕೊಳ್ಳೋದು ಹೇಗೆ?


ಮೇ 5 ವಿಶ್ವ ಅಸ್ತಮಾ ದಿನ

ಇದು ಹುಡುಗಾಟಿಕೆ ಟೈಮ್‌ ಅಲ್ಲ

Tap to resize

Latest Videos

- ಉಬ್ಬಸ ಶುರುವಾದಾಗ ಮಾತ್ರ ಇನ್‌ ಹೆಲರ್‌, ಮೆಡಿಸಿನ್‌ ತಗೋಳೋದಲ್ಲ. ಇದರಲ್ಲಿ ನಿರಂತರತೆ ಕಾಪಾಡಿಕೊಳ್ಳಿ.

- ಪ್ರಾಣಾಯಾಮ ನಿಮಗೆಷ್ಟೋ ರಿಲೀಫ್‌ ಕೊಡುತ್ತೆ. ಈ ಬಗ್ಗೆ ಉಡಾಫೆ ಬೇಡ.

- ಧೂಳು, ಅಲರ್ಜಿಯಾಗೋ ತಿನಿಸುಗಳಿಂದ ದೂರ ಇರಿ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಇವನ್ನು ಪಾಲಿಸಲೇ ಬೇಕು.

- ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಜೊತೆಗೆ ಕೊರೋನಾ ಅಂಟಿಕೊಂಡರೆ ಪ್ರಾಣಾಪಾಯ, ಹೀಗಾಗಿ ಅವಶ್ಯಕತೆ ಇದ್ದರೂ, ಇಲ್ಲದಿದ್ದರೂ ಹೊರಗೆ ಓಡಾಡೋದನ್ನು ಅವಾಯ್ಡ್‌ ಮಾಡಿ.

- ಯಾವಾಗಲೂ ದೀರ್ಘ ಉಸಿರಾಟ ಅಭ್ಯಾಸ ಮಾಡಿಕೊಳ್ಳಿ.

ಅಸ್ತಮಾ ರೋಗಿಗಳಿಗೆ ಬೆಸ್ಟ್‌ ಆಹಾರ

- ಅಗಸೆ ಬೀಜ: ಇದಕ್ಕೆ ಫ್ಲಾಕ್ಸ್‌ ಸೀಡ್‌ ಅಂತಾರೆ. ಇದನ್ನು ಡ್ರೈ ಆಗಿ ಹುರಿದು ಚಪಾತಿ ಹಿಟ್ಟಿನ ಜೊತೆಗೆ ಬೆರೆಸಿ ಚಪಾತಿ ಮಾಡಬಹುದು, ಶೇಂಗಾ, ಬೆಲ್ಲ, ಒಣಕೊಬ್ಬರಿ, ತುಪ್ಪದ ಜೊತೆಗೆ ಹುರಿದು ಉಂಡೆ ಮಾಡಬಹುದು, ಚಟ್ನಿ ಪುಡಿಯನ್ನೂ ತಯಾರಿಸಬಹುದು. ಬಿಸಿಲಲ್ಲಿ ಒಣಗಿಸಿ, ಚೆನ್ನಾಗಿ ನೆನೆಸಿ ಬಳಸಿದರೆ ಚೆನ್ನಾಗಿ ಜೀರ್ಣ ಆಗುತ್ತೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಒಮೇಗಾ 3 ಅಂಶವಿದೆ. ಸಂಕುಚಿತವಾಗಿರುವ ಶ್ವಾಸನಾಳಗಳನ್ನು ವಿಕಸಿಸಿ ಉಸಿರಾಟ ಸರಾಗವಾಗಿಸುತ್ತದೆ.

- ಬೆಳ್ಳುಳ್ಳಿ: ಬೆಳ್ಳುಳ್ಳಿಯೂ ಶ್ವಾಸಕೋಶವನ್ನು ಚುರುಕಾಗಿಡುತ್ತದೆ, ಅಸ್ತಮಾ ಇರುವವರು ನಾಲ್ಕೈದು ಬೆಳ್ಳುಳ್ಳಿ ಎಸಳನ್ನು ಹೆಚ್ಚಿ ನೀರಿಗೆ ಹಾಕಿ ಕುದಿಸಿ. ಅರ್ಧಕ್ಕೆ ಬತ್ತಿಸಿ. ಐದು ನಿಮಿಷ ಹಾಗೇ ಬಿಡಿ. ಆಮೇಲೆ ಕುಡಿಯಿರಿ. ಬೆಳ್ಳುಳ್ಳಿ ಸಮೇತ ಕುಡಿಯಬಹುದು. ಇಷ್ಟಆಗದವರು ಸೋಸಿ ಕುಡಿಯಬಹುದು.

ಆಸ್ತಮಾ ತಡೆಯುವ 10 ಆಹಾರಗಳು

- ಶುಂಠಿ: ಇದು ಅಸ್ತಮಾವನ್ನು ನಿಯಂತ್ರಣದಲ್ಲಿಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬೆನೆಡ್ರಿಲ್‌ ಕುಡಿದಾಗ ಆಗುವಂಥಾ ರಿಲೀಫ್‌ ಫೀಲ್‌ ಇದರಿಂದ ಸಿಗುತ್ತೆ. ಉಸಿರಾಟಕ್ಕೆ, ಆಕ್ಸಿಜನ್‌ ಫೆä್ಲೕ ಹೆಚ್ಚಲು ಸಹಕಾರಿ. ಬಿಸಿನೀರಿಗೆ ಶುಂಠಿ ಜಜ್ಜಿ ಹಾಕಿ, ಇದಕ್ಕೆ ಜೇನುತುಪ್ಪ ಸೇರಿಸಿ ಹಸಿಹೊಟ್ಟೆಗೆ ಕುಡಿಯಿರಿ.

click me!