ಗೋಡಂಬಿ ಇಷ್ಟ ಅನ್ನೋರಿಗೆ ಗೇರುಹಣ್ಣಿನ ಬಗ್ಗೆ ಏನ್ ಗೊತ್ತು?

By Suvarna News  |  First Published May 6, 2020, 6:27 PM IST

ಗೋಡಂಬಿ ಹೆಸರು ಕೇಳಿದ್ರೇನೆ ಕೆಲವರ ಬಾಯಿಯಲ್ಲಿ ನೀರು ಬರುತ್ತೆ. ಆದ್ರೆ ಗೋಡಂಬಿ ಅಥವಾ ಗೇರುಬೀಜಕ್ಕೆ ಅಂಟಿಕೊಂಡೇ ಬೆಳೆಯುವ ಗೇರುಹಣ್ಣಿನ ಬಗ್ಗೆ ತಿಳಿದೋರ ಸಂಖ್ಯೆ ತುಂಬಾ ಕಡಿಮೇನೆ.


ಗೋಡಂಬಿ ಹೆಸರು ಕೇಳಿದ್ರೆ ತಿನ್ನುವ ಬಯಕೆ ಮೂಡುತ್ತೆ. ಸಿಹಿ ಖಾದ್ಯಗಳಿಗೆ ಗೋಡಂಬಿ ಬಿದ್ರೇನೆ ರುಚಿ. ಗೋಡಂಬಿಯನ್ನು ಇಷ್ಟಪಟ್ಟು ತಿನ್ನೋರಿಗೆ ಅದರ ಹಣ್ಣಿನ ಬಗ್ಗೆ ಗೊತ್ತಿರೋದು ಕಡಿಮೆ. ಗೇರು ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಹೀಗಾಗಿ ಈ ಭಾಗದ ಜನರಿಗೆ ಗೇರುಹಣ್ಣು ಚಿರಪರಿಚಿತ. ಇದನ್ನು ಹಾಗೆಯೇ ತಿನ್ನಬಹುದು. ಕೆಲವರು ಇದ್ರಿಂದ ಕಡುಬು ಸೇರಿದಂತೆ ಕೆಲವು ಖಾದ್ಯಗಳು ಹಾಗೂ ಜ್ಯೂಸ್ ಕೂಡ ತಯಾರಿಸುತ್ತಾರೆ. ಮದ್ಯ ತಯಾರಿಕೆಯಲ್ಲೂ ಇದು ಬಳಕೆಯಾಗುತ್ತದೆ. ಗೋವಾಕ್ಕೆ ಭೇಟಿ ನೀಡಿದವರಂತೂ ಗೇರುಹಣ್ಣಿನ ಪೆನ್ನಿ ರುಚಿಯನ್ನು ಟೆಸ್ಟ್ ಮಾಡದೇ ಇರಲು ಸಾಧ್ಯವೇ ಇಲ್ಲ. ಗೇರುಹಣ್ಣು ಪ್ರೋಟೀನ್ ಹಾಗೂ ಮಿನರಲ್ಸ್‍ನಿಂದ ಸಮೃದ್ಧವಾಗಿದೆ. ತಾಮ್ರ, ಕ್ಯಾಲ್ಸಿಯಂ, ಮೆಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣಾಂಶ ಹಾಗೂ ಸತುವಿನಂತಹ ಮಿನರಲ್‍ಗಳು ಗೇರುಹಣ್ಣಿನಲ್ಲಿ ಹೇರಳವಾಗಿವೆ. ಗೇರುಹಣ್ಣು ರುಚಿಯಲ್ಲಿ ಒಗರಾಗಿರುವ ಜೊತೆಗೆ ತಿಂದ ಬಳಿಕ ಗಂಟಲು ಕಟ್ಟಿದ ಅನುಭವವಾಗುತ್ತದೆ. ಕೆಲವರಿಗೆ ಅದರ ವಾಸನೆ ಹಿಡಿಸೋದಿಲ್ಲ. ಆದ್ರೆ ಆರೋಗ್ಯ ದೃಷ್ಟಿಯಿಂದ ನೋಡಿದ್ರೆ ಗೇರುಹಣ್ಣನ್ನು ಇಷ್ಟಪಡದಿರಲು ಕಾರಣವೇ ಇಲ್ಲ. ರಕ್ತದ ಉತ್ಪಾದನೆ ಹೆಚ್ಚಿಸುವ ಜೊತೆ ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಪೂರಕವಾದ ಅನೇಕ ಪ್ರಯೋಜನಗಳನ್ನು ಇದು ಒಳಗೊಂಡಿದೆ.

ಪ್ಲೀಸ್ ನನ್ನ ನಂಬಿ, ಕೆಟ್ಟ ಫ್ಯಾಟ್ ಅಲ್ಲ ಗೋಡಂಬಿ

ಸ್ನಾಯು ಹಾಗೂ ನರಗಳ ಆರೋಗ್ಯವರ್ಧನೆ
ಗೇರುಹಣ್ಣಿನಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಸ್ನಾಯುಗಳಿಗೂ ಇದು ಬಲ ತುಂಬುತ್ತದೆ. 

Tap to resize

Latest Videos

ಕ್ಯಾನ್ಸರ್ ಬಾರದಂತೆ ತಡೆಯುತ್ತೆ
ಗೇರುಹಣ್ಣಿನಲ್ಲಿ ಪ್ರೊಯಂಥೋಸೈಯಾನಿನ್ಸ್ ಎಂಬ ಅಂಶವಿದ್ದು, ಇದು ಕ್ಯಾನ್ಸರ್ ಸೆಲ್ ದೇಹದಲ್ಲಿ ಹೆಚ್ಚಳಗೊಳ್ಳೋದನ್ನು ತಡೆಯುತ್ತೆ. ಕ್ಯಾನ್ಸರ್ ಸೆಲ್‍ಗಳು ದೇಹದಲ್ಲಿ ಒಮ್ಮೆ ಹೆಚ್ಚಳಗೊಳ್ಳಲು ಪ್ರಾರಂಭಿಸಿದ್ರೆ, ಅದನ್ನು ನಿಯಂತ್ರಿಸೋದು ತುಂಬಾ ಕಷ್ಟ. ಗೇರುಹಣ್ಣಿನಲ್ಲಿ ತಾಮ್ರದ ಅಂಶ ಕೂಡ ಹೆಚ್ಚಿದೆ. ಇದು ಕ್ಯಾನ್ಸರ್ ಸೆಲ್‍ಗಳ ಮ್ಯೂಟೇಷನ್ ನಿಯಂತ್ರಿಸುತ್ತದೆ. ಈ ಎಲ್ಲ ಗುಣಗಳಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ಗೇರುಹಣ್ಣು ನೀಡೋದು ಒಳ್ಳೆಯದು. 

ಶರೀರದ ರೋಗನಿರೋಧಕ ವ್ಯವಸ್ಥೆ ಬಲಪಡಿಸುತ್ತೆ
ಗೇರುಬೀಜದಲ್ಲಿ ವಿಟಮಿನ್ಸ್ ಹೆಚ್ಚಿನ ಪ್ರಮಾಣದಲ್ಲಿದ್ದು, ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಬ್ಯಾಕ್ಟೀರಿಯಾಗಳಿಂದ ಕಾಣಿಸಿಕೊಳ್ಳುವ ರೋಗಗಳನ್ನು ತಡೆಯಲು ಗೇರುಹಣ್ಣು ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ಸತು ಹಾಗೂ ಆಂಟಿಆಕ್ಸಿಡೆಂಟ್‍ಗಳು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗಗಳಿಂದ ರಕ್ಷಣೆ ನೀಡುತ್ತದೆ. 

ಗೋಡಂಬಿ ಬರ್ಫಿ ಮಾಡೋದು ಹೇಗೆ?

ಹೃದಯಕ್ಕೆ ಹಿತಕರ
ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಎಳೆಯ ವಯಸ್ಸಿನಲ್ಲೇ ಹೃದಯ ಸಮಸ್ಯೆಗಳು ಬಾಧಿಸುತ್ತಿವೆ. ಹೀಗಾಗಿ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಹೃದಯದ ಆರೋಗ್ಯ ಸಂರಕ್ಷಣೆಗೆ ನೆರವಾಗುವ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸುವುದು ಕೂಡ ಅಗತ್ಯ. ಗೇರುಹಣ್ಣಿನಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವ ಗುಣವಿದೆ. ಇದನ್ನು ತಿನ್ನೋದ್ರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ರಕ್ತದೊತ್ತಡವನ್ನು ನಿಯಂತ್ರಿಸಲು ಕೂಡ ಇದು ನೆರವು ನೀಡುತ್ತದೆ. 

ಮೆದುಳಿನ ಬೆಳವಣಿಗೆಗೆ ಪೂರಕ
ಗೇರುಹಣ್ಣು ಮೆದುಳಿಗೂ ಉತ್ತಮ. ಇದರಲ್ಲಿ ಮೆದುಳಿನ ಬೆಳವಣಿಗೆಗೆ ಸಹಾಯಕವಾದ ಅಂಶಗಳಿವೆ. ಮಕ್ಕಳಲ್ಲಿ ಮೆದುಳು ಅಭಿವೃದ್ಧಿ ಹೊಂದುತ್ತಿರುವ ಕಾರಣ ಅವರಿಗೆ ಗೇರುಹಣ್ಣು ನೀಡೋದ್ರಿಂದ ಬುದ್ಧಿ ಚುರುಕಾಗುತ್ತದೆ. 

ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? 

ದೃಷ್ಟಿ ತೊಂದರೆ ನಿವಾರಣೆ
ಗೇರುಹಣ್ಣಿನಲ್ಲಿ ಲುಟಿನ್ ಹಾಗೂ ಝೆಕ್ಸಂಥಿನ್ ಅತ್ಯಧಿಕ ಮಟ್ಟದಲ್ಲಿದ್ದು, ಕಣ್ಣುಗಳಿಗೆ ಅತ್ಯುತ್ತಮ ಆಹಾರ. ಕಣ್ಣುಗಳ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇವು, ಸೂರ್ಯನ ಕಿರಣಗಳಿಂದ ಬರುವ ಅಪಾಯಕಾರಿ ವಿಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಅಲ್ಲದೆ, ಕ್ಯಾಟರ್ಯಾಕ್ಟ್ ಮುಂತಾದ ಕಣ್ಣಿನ ತೊಂದರೆಗಳನ್ನು ದೂರ ಮಾಡುತ್ತದೆ. 

ತ್ವಚೆಯ ಸಂರಕ್ಷಣೆ
ಗೇರುಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಇರುವ ಕಾರಣ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ. ಗೇರುಹಣ್ಣು ವರ್ಷದ ಎಲ್ಲ ಅವಧಿಯಲ್ಲೂ ಬೆಳೆಯೋದಿಲ್ಲ. ಮಾರ್ಚ್‍ನಿಂದ ಮೇ ತನಕ ಅಂದ್ರೆ ಬೇಸಿಗೆಗಾಲದಲ್ಲೇ ಈ ಹಣ್ಣು ಬೆಳೆಯುವ ಕಾರಣ ಇದು ಸೀಸನಲ್ ಫ್ರೂಟ್. ಇದರಲ್ಲಿ ನೀರಿನಾಂಶವೂ ಅಧಿಕ ಪ್ರಮಾಣದಲ್ಲಿರುವ ಕಾರಣ ಬೇಸಿಗೆಯಲ್ಲಿ ಇದರ ಸೇವನೆ ದೇಹಕ್ಕೆ ಒಳ್ಳೆಯದು. 

click me!