
ಪ್ರಶ್ನೆ: ನನಗೆ ಮೂವತ್ತೈದು ವರ್ಷ ವಯಸ್ಸು. ಸ್ತ್ರೀ. ಖಾಸಗಿ ಆಫೀಸ್‌ನಲ್ಲಿ ಕೆಲಸ ಮಾಡುತ್ತೀನಿ. ನನಗೆ ಒಂದು ವಿಚಿತ್ರ ಸಮಸ್ಯೆ ಇದೆ. ಹಿಂದೊಮ್ಮೆ ತೊಡೆಯ ಸಂದಿನಲ್ಲಿ, ಮರ್ಮಾಂಗದ ಜಾಗದಲ್ಲಿ ಅಲರ್ಜಿ ಉಂಟಾಗಿ ತುರಿಕೆ ಶುರುವಾಗಿತ್ತು. ಆಗ ತುರಿಸುವಾಗ ಒಂಥರ ಹಿತವಾದ ಫೀಲ್ ಸಿಗ್ತಿತ್ತು. ಆಮೇಲಾಮೇಲೆ ಆಗಾಗ ಅಲ್ಲಿ ತುರಿಸಿಕೊಳ್ಳಬೇಕು ಅನಿಸುತ್ತಿತ್ತು. ಆಗ ಬಾತ್‌ರೂಮ್‌ಗೆ ಹೋಗಿ ಬರ್ತಿದ್ದೆ. ಆಮೇಲಾಮೇಲೆ ಸುತ್ತಮುತ್ತ ನೋಡಿ ಯಾರೂ ಇಲ್ಲದಿದ್ದರೆ ತುರಿಸಿಕೊಂಡು ಬಿಡುತ್ತಿದ್ದೆ. ಆ ಜಾಗದಲ್ಲಿ ಕ್ರಮೇಣ ಆಗಾಗ ನವೆಯಂತೆ ಫೀಲ್ ಆಗ್ತಿತ್ತು. ಆಗ ಅಪ್ರಜ್ಞಾಪೂರ್ವಕವಾಗಿ ತುರಿಸಿಕೊಂಡು ಬಿಡುತ್ತಿದ್ದೆ. ನಂತರ ನಾನೆಷ್ಟು ಹಾಗೆ ಮಾಡಬಾರದು ಅಂದುಕೊಂಡರೂ ತುರಿಸಿದ ಮೇಲೆ ಇನ್ನೊಬ್ಬರ ಎಕ್ಸ್ ಪ್ರೆಶನ್ ನೋಡಿ ನನಗೆ ನನ್ನ ಬಗ್ಗೆಯೇ ಅಸಹ್ಯ ಹುಟ್ಟುತ್ತಿತ್ತು. ನನ್ನ ಸಹೋದ್ಯೋಗಿಗಳು ಈ ಬಗ್ಗೆ ಹಿಂದಿನಿಂದ ತಮಾಷೆ, ಅಪಹಾಸ್ಯ ಮಾಡೋದು, ಆಡಿಕೊಂಡು ನಗೋದು ಮಾಡ್ತಿದ್ದಾರೆ. ನನಗೆ ಕೀಳರಿಮೆ ಶುರುವಾಗಿದೆ. ಜನರ ಎದುರು ಓಡಾಡುವಾಗ ಎಲ್ಲಿ ಆ ಜಾಗ ತುರಿಸಿಕೊಂಡು ನಗೆಪಾಟಲಿಗೆ ಗುರಿಯಾಗುತ್ತೇನೋ ಅಂತ ಭಯ ಶುರುವಾಗಿದೆ. ದಯಮಾಡಿ ನನ್ನ ಈ ಸಮಸ್ಯೆಗೆ ಪರಿಹಾರ ತಿಳಿಸುವಿರಾ?
ಉತ್ತರ : ನಿಮ್ಮ ಪ್ರಶ್ನೆಯಲ್ಲಿ ಒಂದು ಅಸ್ಪಷ್ಟತೆ ಇದೆ. ನಿಮಗೆ ಶುರುವಲ್ಲಿ ಅಲರ್ಜಿ ಇತ್ತು ತುರಿಸಿಕೊಳ್ತಾ ಇದ್ದಿರಿ. ಆಮೇಲೆ ಅಲರ್ಜಿ ಕಡಿಮೆ ಆಯ್ತಾ? ಅಥವಾ ಈಗಲೂ ಇದೆಯಾ? ಎಷ್ಟೋ ಸಲ ಈ ಬಗೆಯ ತುರಿಕೆಯಿಂದ ಅಲರ್ಜಿ ಕಡಿಮೆಯಾಗದೇ ಹಾಗೇ ಉಳಿದುಬಿಡುತ್ತದೆ. ಮರ್ಮಾಂಗಗಳಲ್ಲಿ ಈ ಬಗೆಯ ಅಲರ್ಜಿಗಳಾದಾಗ ವೈದ್ಯರ ಬಳಿ ಹೋಗಲೂ ಮುಜುಗರ ಪಡುತ್ತಾರೆ. ಪೂರ್ತಿ ಒಣಗಿರದ ಅರೆ ಒದ್ದೆ ಒಳ ಉಡುಪು ಹಾಕಿಕೊಂಡಾಗ ಇಂಥಾ ಫಂಗಲ್ ಇನ್ ಫೆಕ್ಷನ್ ನಂಥಾ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಈ ಸಮಸ್ಯೆಗೆ ಚರ್ಮ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಒಮ್ಮೆ ಈ ಅಲರ್ಜಿ ನಿವಾರಣೆಯಾದರೆ ಆಮೇಲೆ ನಿಮಗೆ ತುರಿಸಿಕೊಳ್ಳಬೇಕು ಅನಿಸಲ್ಲ. ಹೆಚ್ಚಿನ ಸಲ ತುರಿಸಿ ತುರಿಸಿಯೇ ಆ ಜಾಗದಲ್ಲಿ ಗಾಯ ಆಳವಾಗುತ್ತಾ ಹೋಗುತ್ತದೆ. ಹೀಗಾದಾಗ ಗಾಯ ಒಣಗಲ್ಲ. ನೀವು ಈಗಲಾದರೂ ಚರ್ಮ ವೈದ್ಯರ ಬಳಿ ಹೋಗಿ, ನಿಮ್ಮ ಸಮಸ್ಯೆಯನ್ನು ಕೂಲಂಕಷವಾಗಿ ಪರೀಕ್ಷಿಸಿ ಅವರು ಔಷಧ ಕೊಡುತ್ತಾರೆ. ಅದೇ ರೀತಿ ಕೀಳರಿಮೆಯಂಥಾ ಮಾನಸಿಕ ಸಮಸ್ಯೆಯೂ ಆಗ ನಿವಾರಣೆಯಾಗುತ್ತದೆ.
ಎಣ್ಣೆ ಹೊಡೆಯೋರಿಗೆ ಕೊರೋನಾ ಬರಲ್ವಾ?
ಹೆಂಡ್ತಿಗೆ ಸುಖ ಕೊಡಕ್ಕಾಗ್ತಿಲ್ಲ!
ಪ್ರಶ್ನೆ : ನನಗೀಗ 44 ವರ್ಷ, ಹೆಂಡತಿಗೆ 38. ಮದುವೆಯಾಗಿ ಹದಿನೆಂಟು ವರ್ಷಗಳಾಗಿವೆ. ಮಕ್ಕಳಿಲ್ಲ. ನಾವು ಅದರ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಿಲ್ಲ. ಆದರೆ ಸೆಕ್ಸ್ ವಿಷಯದಲ್ಲಿ ನನಗೆ ಬೇಜಾರಿದೆ. ಸೆಕ್ಸ್ ಮೊದಲಿನ ಮುನ್ನಲಿವಿನ ಕ್ರಿಯೆಗಳನ್ನೆಲ್ಲ ಇಬ್ಬರೂ ಎನ್‌ಜಾಯ್ ಮಾಡ್ತೀವಿ. ಆದರೆ ನನಗೆ ಶೀಘ್ರ ಸ್ಖಲನವಾಗಿ ಬಿಡುತ್ತದೆ. ಅವಳಿಗಿನ್ನೂ ತೃಪ್ತಿಯೇ ಸಿಕ್ಕಿರಲ್ಲ. ಅದನ್ನು ಅವಳು ಹೇಳಿಕೊಂಡಿಲ್ಲ. ಆದರೆ ನನಗೆ ಹಾಗನಿಸುತ್ತದೆ. ಈ ಶೀಘ್ರ ಸ್ಖಲನದಿಂದ ಹೊರ ಬರೋದು ಹೇಗೆ? ಹೆಚ್ಚು ಹೊತ್ತು ಲೈಂಗಿಕ ಕ್ರಿಯೆ ನಡೆಸಲು ನನಗೆ ಸಾಧ್ಯವಾಗೋದು ಹೇಗೆ?
ಅವರ ಗ್ರೂಪ್ ಚಾಟ್‌ನ ಗುರಿ ಹುಡುಗಿಯರ ಗ್ಯಾಂಗ್‌ರೇಪ್ !
ಉತ್ತರ : ನಿಮಗೆ ಶುಗರ್, ಬಿಪಿ ಸಮಸ್ಯೆ ಇದೆಯಾ ಅಂತ ಚೆಕ್ ಮಾಡಿ. ಹೆಚ್ಚು ಸ್ಟ್ರೆಸ್ ಮಾಡಿಕೊಳ್ಳಬೇಡಿ. ಸಾಕಷ್ಟು ವ್ಯಾಯಾಮ ಮಾಡಿ. ಪೌಷ್ಠಿಕಾಂಶ ಹೆಚ್ಚಿರುವ ಪದಾರ್ಥ ಹೆಚ್ಚೆಚ್ಚು ಸೇವಿಸಿ. ಕಾರ್ಬೋಹೈಡ್ರೇಟ್ ಅಂಶದ ಪದಾರ್ಥ ಕಡಿಮೆ ಬಳಸಿ. ಇದನ್ನೆಲ್ಲ ಪಾಲಿಸಿದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಇಷ್ಟು ಮಾಡಿಯೂ ಸಮಸ್ಯೆ ಪರಿಹಾರವಾಗಿಲ್ಲ ಅಂದರೆ ಲೈಂಗಿಕ ತಜ್ಞರನ್ನು ಭೇಟಿ ಮಾಡುವುದೊಳಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.