ಮೈಂಡ್‌ ಫುಲ್‌ ಆಗಿದ್ರೆ ವಿದ್ಯಾರ್ಥಿಗಳಲ್ಲಿ ಒತ್ತಡ ದೂರ; ಇದೇನಿದು ವಿಧಾನ?

By Suvarna News  |  First Published Aug 4, 2023, 5:21 PM IST

ಕಷ್ಟಪಟ್ಟಾದರೂ ಸರಿ, ಮೈಂಡ್‌ ಫುಲ್‌ ಆಗಿರುವ ವಿಧಾನಗಳನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಚಿತ್ತವನ್ನು ಫ್ರೆಶ್‌ ಮಾಡಿಕೊಳ್ಳಬಹುದು ಹಾಗೂ ಜೀವನದಲ್ಲಿ ಮುಂದೆ ನಡೆಯಲು ಬೇಕಾದ ಕೌಶಲ ಬೆಳೆಸಿಕೊಳ್ಳಬಹುದು. 


ಎಲ್ಲ ವಯೋಮಾನದ ವಿದ್ಯಾರ್ಥಿಗಳಲ್ಲೂ ಇಂದು ಆತಂಕ, ಖಿನ್ನತೆ  ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಂತೆ ಅವರ ಮೇಲೂ ಸಾಕಷ್ಟು ಒತ್ತಡವಿದೆ. ಹಿಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ ಇಂದಿನವರಲ್ಲಿ ಒತ್ತಡ ಹೆಚ್ಚು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗೂ ಅಧಿಕ. ಕೇವಲ 4-5 ವಯಸ್ಸಿನ ಮಕ್ಕಳೂ ಅವರದ್ದೇ ಆದ ರೀತಿಯಲ್ಲಿ ಒತ್ತಡ ಎದುರಿಸುತ್ತವೆ. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಇನ್ನಷ್ಟು ಒತ್ತಡ ಹೆಚ್ಚು. ಪಾಲಕರ ಒತ್ತಡ, ಸಾಮಾಜಿಕ ಒತ್ತಡ, ಸಮವಯಸ್ಕರ ಒತ್ತಡಗಳು ಅವರಲ್ಲಿ ಅಧಿಕವಾಗಿರುತ್ತವೆ. ನಿಮಗೆ ಗೊತ್ತೇ? ಜಾಗತಿಕವಾಗಿ ಶೇ.31ರಷ್ಟು ವಿದ್ಯಾರ್ಥಿಗಳು ಆತಂಕದ ಸಮಸ್ಯೆ ಎದುರಿಸುತ್ತಿದ್ದಾರೆ. ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಇನ್ನಷ್ಟು ಅಧಿಕ. ಶೇ.70ರಷ್ಟು ವಿದ್ಯಾರ್ಥಿಗಳು ತಮ್ಮ ಸಮವಯಸ್ಕರಲ್ಲಿ ಹೆಚ್ಚಾಗಿ ಕಾಣುವ ಸಮಸ್ಯೆ ಎಂದರೆ ಖಿನ್ನತೆ. ಕೇವಲ ಹತ್ತು ವರ್ಷಗಳ ಹಿಂದಿಗಿಂತ ಇಂದು ಆತ್ಮಹತ್ಯೆ ಮತ್ತು ದುಃಖದ ಮನೋಭಾವ ದುಪ್ಪಟ್ಟಾಗಿದೆ. ಸಾಮಾಜಿಕ ಜಾಲತಾಣಗಳು, ಪೀರ್‌ ಪ್ರೆಷರ್‌, ವಿದ್ಯಾರ್ಥಿ ಸಾಲ, ಮಾಹಿತಿ ಓವರ್‌ ಲೋಡ್‌, ಪರೀಕ್ಷೆ ಕುರಿತಾದ ಭಯ ಮುಂತಾದವು ವಿದ್ಯಾರ್ಥಿಗಳನ್ನು ಹೈರಾಣಾಗಿಸುತ್ತಿವೆ. ಇವುಗಳನ್ನು ನಿವಾರಿಸಲು ಮೈಂಡ್‌ ಫುಲ್‌ ವಿಧಾನವನ್ನು ಅನುಸರಿಸುವುದು ಸೂಕ್ತ. 

ಏನಿದು ವಿಧಾನ?
ಮೈಂಡ್‌ ಫುಲ್‌ (Mindfulness) ಆಗಿರುವುದೆಂದರೆ ನಮ್ಮ ಯೋಚನೆ (Thoughts), ಚಿಂತನೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು, ಈ ಕ್ಷಣದ ಆದ್ಯತೆಗೆ ಗಮನ ಹರಿಸುವುದು, ಉದ್ದೇಶಪೂರ್ವಕವಾಗಿ ಎಚ್ಚರದ ಸ್ಥಿತಿಯಲ್ಲಿರುವುದು. ಅಸಲಿಗೆ ಇದು ಕಷ್ಟವೇನೂ ಅಲ್ಲ. ನಮ್ಮ ವಿಚಾರಗಳು, ಭಾವನೆಗಳು (Feelings), ದೈಹಿಕ ಸಂವೇದನೆ (Body Feel) ಮತ್ತು ಸುತ್ತಲಿನ ವಾತಾವರಣದ (Environment) ಕುರಿತು ಕ್ಷಣಕ್ಷಣಕ್ಕೂ ಎಚ್ಚರಿಕೆ ಹೊಂದಿರುವುದು ಖಂಡಿತ ಕಷ್ಟವಾಗುವುದಿಲ್ಲ. ಈ ಕ್ಷಣದ ಬದುಕಿನತ್ತ, ಈಗ ಮಾಡಬೇಕಾಗಿರುವ ಕಾರ್ಯದತ್ತ ಸರಿಯಾಗಿ ಗಮನ ಹರಿಸಿದರೆ ಆಯಿತು, ಅಷ್ಟೆ. ಇದನ್ನು ಸಾಧಿಸಲು ಹಲವು ವಿಧಾನಗಳಿವೆ.

Tap to resize

Latest Videos

ಎಲ್ಲದಕ್ಕೂ ಯಸ್ ಅಂತ ಹೇಳೋದು ಗ್ರೇಟ್ ಅಲ್ಲ, ನಯವಾಗಿ ನೋ ಅಂತ ಹೇಳುವುದ ಕಲೀರಿ

•    ಮೊದಲನೆಯದಾಗಿ, ಉಸಿರಾಟದ ವ್ಯಾಯಾಮ (Breathing Exercise) ಅತ್ಯುತ್ತಮ. ಉಸಿರನ್ನೇ ಗಮನಿಸುತ್ತ ದೀರ್ಘವಾಗಿ ಉಸಿರಾಟ ಮಾಡುವುದು ಅತ್ಯುತ್ತಮ ಕ್ರಿಯೆ. ಇದನ್ನು ಮಾಡುವಾಗ ಮನಸ್ಸಿನಲ್ಲಿ ಯಾವುದೇ ವಿಚಾರ ಮೂಡದಂತೆ ಎಚ್ಚರಿಕೆ ವಹಿಸಿ. 
•    ಐದು ಇಂದ್ರಿಯಗಳ (Five Sense Organs) ವ್ಯಾಯಾಮ ಮಾಡಬೇಕು. ಅಂದರೆ, ಉಸಿರಾಟ ನಡೆಸುವ ಸಮಯದಲ್ಲಿ ನಿಮ್ಮ ಕಿವಿಗೆ ಏನು ಕೇಳಿಸುತ್ತದೆ, ಯಾವ ವಾಸನೆ ಬರುತ್ತಿದೆ, ಯಾವ ಭಾವನೆ ಮೂಡುತ್ತಿದೆ, ಯಾವ ರುಚಿ ಬಾಯಿಯಲ್ಲಿ ಮೂಡಿದೆ, ಮುಚ್ಚಿದ ಕಣ್ಣುಗಳಿಗೆ ಏನು ಕಾಣುತ್ತಿದೆ ಎನ್ನುವುದರ ಬಗ್ಗೆ ಗಮನ ಹರಿಸಬೇಕು. ಇದನ್ನು ಎಲ್ಲ ಕೆಲಸ ಮಾಡುವಾಗಲೂ ಅಭ್ಯಾಸ (Practice) ಮಾಡಬೇಕು. ಯಾವುದೇ ಕೆಲಸ ಮಾಡುತ್ತಿದ್ದರೂ ಅಲ್ಲೊಂದು ಎಚ್ಚರಿಕೆ (Awareness) ಇರುತ್ತದೆ. 
•    ಸ್ವಪ್ರೀತಿ (Self Compassion) ಹೆಚ್ಚಿಸಿಕೊಳ್ಳಿ. ನಿಮ್ಮನ್ನು ನೀವು ಒಪ್ಪಿಕೊಳ್ಳುವುದನ್ನು (Accept) ಅಭ್ಯಾಸ ಮಾಡಿ. ನಿಮ್ಮ ದೌರ್ಬಲ್ಯ, ಶಕ್ತಿ ಸಾಮರ್ಥ್ಯಗಳನ್ನು ಒಪ್ಪಿಕೊಳ್ಳುವುದರಿಂದ ನೀವು ನೀವಾಗಿರಲು ಸಾಧ್ಯ. ದೌರ್ಬಲ್ಯ (Weakness) ಮೀರಲು ಯತ್ನಿಸಬಹುದು, ಆದರೆ ಅಲ್ಲೂ ಹತಾಶೆ ಇಣುಕದಂತೆ ಎಚ್ಚರಿಕೆ ವಹಿಸಬೇಕು. ಆರೋಗ್ಯಕರ ಮಾರ್ಗದಲ್ಲಿ ಸಾಗಬೇಕು.
•    ಸುತ್ತಲಿನವರ ಮೂಡ್‌ (Mood) ಚೆನ್ನಾಗಿಡಿ. ವಿದ್ಯಾರ್ಥಿಗಳು ಸಾಮಾನ್ಯವಾಗಿ ಪಾಲಕರು ಸೇರಿದಂತೆ ಸುತ್ತಮುತ್ತಲಿನವರ ಮೂಡನ್ನು ಗಮನಿಸುವುದಿಲ್ಲ. ಮನೆಯಲ್ಲೇ ಇರುವ ಹಿರಿಯರು, ಪಾಲಕರು ಎಷ್ಟೋ ಬಾರಿ ಸಮಸ್ಯೆಯಲ್ಲಿರುತ್ತಾರೆ. ಅವರನ್ನು ಗಮನಿಸಿ. ಅವರಿಗೆ ಖುಷಿಯಾಗುವಂಥದ್ದೇನಾದರೂ ಮಾಡಿ. ಇದರಿಂದ ನಿಮಗೂ ಖುಷಿ (Happy) ಸಿಗುತ್ತದೆ.

ಬುದ್ಧಿ ಇದ್ದರೂ ಪೆದ್ದು ಪೆದ್ದಾಗಿ ಆಡಬೇಡಿ, ಸ್ವಲ್ಪ ಸರಿಯಾಗಿ ಬಿಹೇವ್ ಮಾಡಿ

•    ದೇಹವನ್ನು ಇಂಚಿಂಚೂ ಸ್ಕ್ಯಾನ್‌ ಮಾಡುವ ಧ್ಯಾನ (Meditation) ಮಾಡಬಹುದು. ಓದುವುದು (Reading), ಬರೆಯುವುದು ಉತ್ತಮ ಅಭ್ಯಾಸ. 
•    ದಿನವೂ ನಿಯಮಿತ ವ್ಯಾಯಾಮ ಮಾಡುವುದು ಅಗತ್ಯ.

 
 

click me!