Health Tips: ಗರಿಗರಿ ರಸ್ಕ್ ಅಂದ್ರೆ ಇಷ್ಟವಾ? ಆರೋಗ್ಯ ಹಾಳಾಗೋಕೆ ಇದೊಂದು ಸಾಕು ಬಿಡಿ

By Suvarna News  |  First Published Jun 14, 2023, 5:58 PM IST

ಪ್ರತಿದಿನ ಸಂಜೆ ಚಹಾ ಜತೆಗೆ ರಸ್ಕ್ ತಿನ್ನುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಇದು ನಿಮಗೆ ಅತ್ಯಂತ ದುಬಾರಿ ಹವ್ಯಾಸವಾಗಿ ಪರಿಣಮಿಸಬಹುದು. ಏಕೆಂದರೆ, ರಸ್ಕಿನಲ್ಲಿ ಯಾವೊಂದೂ ಪೌಷ್ಟಿಕಾಂಶ ಇರುವುದಿಲ್ಲ. ಬದಲಿಗೆ, ದೇಹದ ಆರೋಗ್ಯ ಹಾಳುಮಾಡುವಂತಹ ಅಂಶಗಳೇ ಇರುತ್ತವೆ.
 


ಟೀ ಟೈಮ್ ಸ್ನ್ಯಾಕ್ಸ್ ಗೆ ಅವುಗಳದ್ದೇ ಆದ ಮಹತ್ವವಿದೆ. ಎಷ್ಟೆಂದರೆ, ಸಂಜೆಯ ಚಹಾದೊಂದಿಗೆ ಏನು ಸ್ನ್ಯಾಕ್ಸ್ ಮಾಡಲಿ ಎಂದು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಪ್ರತಿದಿನವೂ ಏನಾದರೊಂದು ಕುರುಕಲು ತಿಂಡಿಗಳನ್ನು ಮಾಡುವುದು ಕೆಲವೊಮ್ಮೆ ಅಸಾಧ್ಯ. ಹೀಗಾಗಿ, ಬಿಸ್ಕತ್ತು, ಕುರುಕಲು ತಿಂಡಿಗಳು ಅಥವಾ ರಸ್ಕ್ ತಂದಿರಿಸಿಕೊಂಡು ಸೇವಿಸುವ ಪದ್ಧತಿ ಹಲವರಿಗೆ ಇದೆ. ಚಹಾದೊಂದಿಗೆ ಬಿಸ್ಕತ್ ಮತ್ತು ರಸ್ಕ್ ಸೇವಿಸುವುದು ಸಾಕಷ್ಟು ಜನರ ಪ್ರಿಯವಾದ ಅಭ್ಯಾಸ. ಸ್ವಲ್ಪ ಹೊಟ್ಟೆ ತುಂಬಿದಂತಾಗುವುದು ಇದಕ್ಕಿರುವ ಪ್ರಮುಖ ಕಾರಣ. ಆದರೆ, ಈ ಅಭ್ಯಾಸ ದುಬಾರಿಯಾಗಿ ಪರಿಣಮಿಸಬಹುದು. ಏಕೆಂದರೆ, ರಸ್ಕ್ ಗರಿಗರಿಯಾಗಿ ತಿನ್ನಲು ಚೆನ್ನಾಗಿದ್ದರೂ ಆರೋಗ್ಯದ ಮೇಲೆ ದೀರ್ಘಕಾಲದಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬಿರುತ್ತದೆ. ಬಿಸ್ಕತ್ತು ಮತ್ತು ರಸ್ಕ್ ಆರೋಗ್ಯಕ್ಕೆ ಹಾನಿಕರ ಎನ್ನುವ ವಿಚಾರ ಇಂದಿಗೂ ಸಾಕಷ್ಟು ಜನರಿಗೆ ಗೊತ್ತಿಲ್ಲ. ಅಷ್ಟೇ ಏಕೆ? ಜ್ವರವೋ, ಕೆಮ್ಮೋ ಏನೋ ಅನಾರೋಗ್ಯದ ಸಮಯದಲ್ಲಿ ಬ್ರೆಡ್ ನೀಡುವ ಪದ್ಧತಿಯಿದೆ. ಇದೂ ಸಹ ಅತ್ಯಂತ ಅಪಾಯಕಾರಿ. ಆರೋಗ್ಯದ ಕಾಳಜಿಯುಳ್ಳ ಎಷ್ಟೋ ಜನ ಬ್ರೆಡ್ ಸೇವನೆ ಮಾಡುವುದಿಲ್ಲ. ಏಕೆಂದರೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ರಸ್ಕ್ ಕೂಡ ಅದಕ್ಕಿಂತ ಅಪಾಯಕಾರಿ ಎನ್ನಲಾಗಿದೆ. 

ರಸ್ಕ್ (Rusk) ನಲ್ಲಿ ಏನಿದೆ?
ಗರಿಗರಿಯಾಗಿ (Crispy) ರುಚಿಯಾಗಿರುವ ರಸ್ಕ್ ನಲ್ಲಿ ಸಕ್ಕರೆ (Sugar), ಟ್ರಾನ್ಸ್ ಫ್ಯಾಟ್ (Trans Fat) ಅಂದರೆ ಕೆಟ್ಟ ಕೊಬ್ಬು (ಏಕೆಂದರೆ, ಇದನ್ನು ತಯಾರಿಸಲು ಎಣ್ಣೆ ಬೇಕು) ಹಾಗೂ ವ್ಯಸನ (Addiction) ಉಂಟು ಮಾಡುವ ಅಂಶಗಳಿರುತ್ತವೆ. ಅಲ್ಲದೆ ರಸ್ಕ್ ತಯಾರಿಸಲು ಮೈದಾ ಬಳಕೆ ಮಾಡಲಾಗುತ್ತದೆ. ಇವೆಲ್ಲವೂ ಮೆಟಬಾಲಿಕ್ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂಥವು.

Tap to resize

Latest Videos

Health Tips: ರಕ್ತನಾಳಗಳಲ್ಲಿ ಕೊಬ್ಬು ಹೆಚ್ತಾ ಇದ್ಯಾ? ಕಾಲುಗಳಲ್ಲಿ ಗೊತ್ತಾಗುತ್ತೆ ಅಲಕ್ಷ್ಯ ಬೇಡ

ರಸ್ಕನ್ನು ಬ್ರೆಡ್ (Bread) ಅನ್ನು ಹೇಗೆ ತಯಾರಿಸಲಾಗುತ್ತದೆಯೋ ಅದೇ ಮಾದರಿಯಲ್ಲಿ ತಯಾರಿಸಲಾಗುತ್ತದೆ. ಮೈದಾ ಹಿಟ್ಟಿನ ಉಂಡೆಗಳನ್ನು ಬೇಯಿಸಲಾಗುತ್ತದೆ. ತುಂಡುಗಳನ್ನಾಗಿಸಿ ಪುನಃ ಕಂದು ಬಣ್ಣ ಬರುವವರೆಗೂ ಹುರಿದಂತೆ ಬೇಯಿಸಲಾಗುತ್ತದೆ (Bake). ಗರಿಗರಿಯಾಗುವವರೆಗೂ ಕಾಯಿಸಲಾಗುತ್ತದೆ. ಎರಡು ಬಾರಿ ಹೀಗೆ ಬೇಯಿಸುವುದರಿಂದ ರಸ್ಕ್ ಒಳ್ಳೆ ಗರಿಗರಿಯಾಗುತ್ತದೆ ಹಾಗೂ ತಿನ್ನಲು ಖುಷಿಯಾಗುತ್ತದೆ. ಹೀಗಾಗಿ, ಇದು ಬ್ರೆಡ್ ಗಿಂತ ಹೆಚ್ಚು ಸಮಯ ಇರುತ್ತದೆ. ತಿಂಗಳಾದರೂ ಹಾಳಾಗುವುದಿಲ್ಲ. ಆದರೆ, ಬಾಯಿಗೆ ಇನ್ನಷ್ಟು ರುಚಿಕರವೆನ್ನಿಸಲು ಸಕ್ಕರೆ, ಹಾಲು, ಮೊಟ್ಟೆ ಹಾಗೂ ಇತರೆ ಕೃತಕ ಸಂರಕ್ಷಕಗಳನ್ನು ಬಳಕೆ ಮಾಡಲಾಗುತ್ತದೆ. ಇವು ರಸ್ಕಿನ ರಚನೆ ಹಾಗೂ ರುಚಿಗೆ (Taste) ಬಹುಮುಖ್ಯ ಕೊಡುಗೆ ನೀಡುತ್ತವೆ. 
ಪದೇ ಪದೆ ರಸ್ಕ್ ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾ (Bacteria) ರಚನೆಗೆ ಕಾರಣವಾಗುತ್ತದೆ. ಪರಿಣಾಮವಾಗಿ, ಆಗಾಗ ಸೋಂಕುಉಂಟಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಹಾಗೂ ಅಜೀರ್ಣದ (Indigestion) ಸಮಸ್ಯೆ ಸೃಷ್ಟಿಸುತ್ತದೆ.

ಟೊಳ್ಳು ಕ್ಯಾಲರಿ (Calorie)
ರಸ್ಕ್ ನಲ್ಲಿ ಸತ್ವವೇ ಇಲ್ಲದ ಕ್ಯಾಲರಿಗಳಿರುತ್ತವೆ. ಪೌಷ್ಟಿಕತೆಯ ದೃಷ್ಟಿಯಿಂದ ಏನೇನೂ ಅಂಶವಿಲ್ಲದ ಆಹಾರ ಇದು. ಒಂದೇ ಒಂದು ರಸ್ಕ್ 40-60 ಕ್ಯಾಲರಿ ಹೊಂದಿರುತ್ತದೆ. ಹೀಗಾಗಿ, ತೂಕ ಹೆಚ್ಚುತ್ತದೆ. ಅದರಲ್ಲೂ ಟೀ (Tea) ಜತೆಗೆ ಎಷ್ಟು ರಸ್ಕ್ ತಿಂದಿರಿ ಎನ್ನುವುದು ನಿಮಗೇ ತಿಳಿಯುವುದಿಲ್ಲ!

ಹೊಟ್ಟೆಯಲ್ಲಿ ಗುಡು ಗುಡು ಅನಿಸ್ತಾ ಇದೆಯಾ? ಏನಿದು ಸಮಸ್ಯೆ?

ಕಾರ್ಬೋಹೈಡ್ರೇಟ್ (Carbohydrate) ಅಧಿಕ
ರಸ್ಕ್ ನಲ್ಲಿ ಕಾರ್ಬೋಹೈಡ್ರೇಟ್ ಅಂಶ ಅಧಿಕವಾಗಿರುತ್ತದೆ. ಮೈದಾದಿಂದ ತಯಾರಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಏಕಾಏಕಿ ಏರಿಕೆಯಾಗುತ್ತದೆ. ಇದರಲ್ಲಿ ಯಾವುದೇ ರೀತಿಯಲ್ಲಿ ನಾರಿನಂಶ (Fibre) ಇರುವುದಿಲ್ಲ. ಟೈಪ್ -2 ಮಧುಮೇಹಿಗಳಿಗೆ (Diabetes) ರಸ್ಕ್ ಸೇವನೆ ಭಾರೀ ಅಪಾಯಕಾರಿ. ಪ್ರೊಟೀನ್ ಅಂಶವೂ ರಸ್ಕಿನಲ್ಲಿ ದೊರೆಯಲು ಸಾಧ್ಯವಿಲ್ಲ. ಜತೆಗೆ, ಅತ್ಯಧಿಕ ಪ್ರಮಾಣದ ಸಕ್ಕರೆ ಮತ್ತು ಗ್ಲುಟೆನ್ (Gluten) ಇರುತ್ತವೆ. ಗ್ಲುಟೆನ್ ಕಾರಣದಿಂದ ಹೊಟ್ಟೆಯಲ್ಲಿ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. 

click me!