Healh Tips: ಅಧಿಕ ತೂಕದ ಸಮಸ್ಯೆನಾ ? ಆಹಾರದಲ್ಲಿ ಸಾಸಿವೆ ಸೇರಿಸಿ

By Suvarna NewsFirst Published Jan 25, 2022, 5:23 PM IST
Highlights

ಇತ್ತೀಚಿನ ದಿನಗಳಲ್ಲಿ ತೂಕ (Weight) ಹೆಚ್ಚಾಗುವುದು ಎಲ್ಲರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಜಿಮ್ (Gym), ಯೋಗ (Yoga), ಡಯೆಟ್ ಹೀಗೆ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಸಾಸಿವೆಯನ್ನು ನಿಮ್ಮ ಆಹಾರ (Food)ದಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳುವುದರಿಂದಲೂ ತೂಕ ಕಳೆದುಕೊಳ್ಳಬಹುದು ಅನ್ನೋದು ನಿಮಗೆ ಗೊತ್ತಾ ?

ಆಧುನಿಕ ಜೀವನಶೈಲಿ, ಆಹಾರಪದ್ಧತಿಯಿಂದ ತೂಕ ಹೆಚ್ಚಳ ಸಮಸ್ಯೆ ಈಗ ಸರ್ವಾಂತರ್ಯಾಮಿ ಆಗಿಬಿಟ್ಟಿದೆ. ಜಂಕ್ ಫುಡ್, ಫಾಸ್ಟ್ ಫುಡ್‌ಗಳ ಭರಾಟೆ, ದೇಹಕ್ಕೆ ಹೆಚ್ಚು ದಣಿವಿಲ್ಲದ ಕೆಲಸ, ಮನುಷ್ಯನ ಒಟ್ಟಾರೆ ದಿನಚರಿಯೇ ಅಧಿಕ ತೂಕ, ಹೆಚ್ಚುವರಿ ಬೊಜ್ಜು ಇನ್ನಿತರ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗ್ತಿದೆ. ತೂಕ ಇಳಿಸಿಕೊಳ್ಳೋಕೆ ಜಿಮ್, ಯೋಗ, ವ್ಯಾಯಾಮ ಎಂದು ಹಲವರು ಹಲವು ಬಗೆಯಲ್ಲಿ ಟ್ರೈ ಮಾಡ್ತಾರೆ. ಬೆಳಗ್ಗೆದ್ದು ಜೇನು ಬೆರೆಸಿದ ನೀರು, ನಿಂಬೆ ರಸ ಸೇರಿಸಿದ ನೀರು, ಸೆಲೆಕ್ಟೆಡ್ ಫುಡ್ ತಿನ್ನುತ್ತಾ ಡಯೆಟ್ ಸಹ ಮಾಡುತ್ತಾರೆ. ಇದಲ್ಲದೆಯೂ ಕೆಲವೊಂದನ್ನು ನಮ್ಮ ಆಹಾರ (Food)ದಲ್ಲಿ ಸೇರಿಸಿಕೊಳ್ಳುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಅದರಲ್ಲೊಂದು ಸಾಸಿವೆ.

ಸಾಸಿವೆಯನ್ನು ಸಾಮಾನ್ಯವಾಗಿ ಎಲ್ಲರೂ ಒಗ್ಗರಣೆಗಾಗಿ ಬಳಸುವುದನ್ನು ಮಾತ್ರ ನೋಡಿರುತ್ತಾರೆ. ಆದರೆ ಇದಲ್ಲದೆಯೂ ಹಲವು ಪಾಕ ವಿಧಾನಗಳಲ್ಲಿ ಸಾಸಿವೆಯ ಬಳಕೆಯಾಗುತ್ತದೆ. ಸಾಸಿವೆ (Mustard) ಪೇಸ್ಟ್ ಅನ್ನು ಮೇಲೋಗರಗಳಿಗೆ ಸೇರಿಸಬಹುದು, ಸಲಾಡ್‌ನ ಮೇಲೆ ಸ್ವಲ್ಪ ಸಾಸಿವೆ ಬೀಜಗಳನ್ನು ಹಾಕಬಹುದು. ಇದು ಆಹಾರದ ರುಚಿಯನ್ನೂ ಹೆಚ್ಚಿಸುವುದಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಒಗ್ಗರಣೆ ಡಬ್ಬದಲ್ಲಿ ಈ ಸಾಸಿವಿಗೆ ಕ್ಯಾನ್ಸರ್ ದೂರ ಮಾಡೋ ಶಕ್ತಿನೂ ಇದೆ..

ಸಾಸಿವೆ ಕಾಳುಗಳನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳು
ಆಹಾರಕ್ಕೆ ಸಾಸಿವೆ ಕಾಳುಗಳನ್ನು ಸೇರಿಸುವುದರಿಂದ ಅದರ ಪೌಷ್ಟಿಕಾಂಶದ ಅಂಶ ಹೆಚ್ಚುತ್ತದೆ. ಇದು ನಿಮ್ಮ ಅಂಗಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಸಾಸಿವೆ ಕಾಳುಗಳನ್ನು ತಿನ್ನುವ ಪ್ರಯೋಜನಗಳಲ್ಲಿ ಮುಖ್ಯವಾದುದು ತೂಕ ನಷ್ಟ.

ಅಧಿಕ ತೂಕದ ಸಮಸ್ಯೆ ಕಳೆದ ಎರಡು ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಿದ. ಕೋವಿಡ್ (Covid) ಸೋಂಕಿನ ನಂತರ ಜನರು ವರ್ಕ್ ಫ್ರಂ ಹೋಂ ಶುರು ಮಾಡಿದ್ದಾರೆ. ಮನೆಯಲ್ಲೇ ಕುಳಿತಲ್ಲೇ ಕುಳಿತು ದಿನಪೂರ್ತಿ ಕೆಲಸ ಮಾಡುತ್ತಾ, ಅತಿಯಾಗಿ ತಿನ್ನುವುದು ಮತ್ತು ಕಡಿಮೆ ದೈಹಿಕ ಚಟುವಟಿಕೆಯು ತೂಕ ಹೆಚ್ಚಾಗಲು ಕಾರಣವಾಗ್ತಿದೆ. ಆದ್ದರಿಂದ, ತೂಕವನ್ನು ಕಳೆದುಕೊಳ್ಳುವ ಸಲುವಾಗಿ, ವ್ಯಾಯಾಮ (Excersice)ದ ಜೊತೆಗೆ ಆರೋಗ್ಯಕರವಾಗಿ ತಿನ್ನಬೇಕು. ಸಾಸಿವೆ ಕಾಳುಗಳು ಆಹಾರಕ್ಕೆ ಉತ್ತಮ ಸೇರ್ಪಡೆಯಾಗಬಹುದು. ಈ ಬೀಜಗಳನ್ನು ಸಾಸಿವೆ ಸಸ್ಯಗಳಿಂದ ಪಡೆಯಲಾಗುತ್ತದೆ. ಆದರೆ, ಕೇವಲ ಬೀಜಗಳು ಮಾತ್ರವಲ್ಲ, ಸಾಸಿವೆ ಸಸ್ಯದ ಇತರ ಭಾಗಗಳು ತೂಕ ನಷ್ಟಕ್ಕೆ ಸಹಕಾರಿಯಾಗಿವೆ.

Baby Care : ಸಾಸಿವೆ ದಿಂಬಿನ ಮೇಲೆ ಮಲಗಿಸೋ ಪ್ರಯೋಜನಗಳೇನು?

ಸಾಸಿವೆ ಬೀಜಗಳು ವಿವಿಧ ರೀತಿಯ ಪೋಷಕಾಂಶಗಳಿಂದ ತುಂಬಿವ. ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸಾಸಿವೆಯ ಸೇವನೆ ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಸಾಸಿವೆ ಕಬ್ಬಿಣ, ಕ್ಯಾಲ್ಸಿಯಂ (Calcium), ಸೆಲೆನಿಯಮ್ ಮತ್ತು ರಂಜಕವನ್ನು ಹೊಂದಿರುತ್ತದೆ ಮತ್ತು ಈ ಎಲ್ಲಾ ಖನಿಜಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಿಧಾನವಾಗಿ ತೂಕ ಕಡಿಮೆಯಾಗುತ್ತಾ ಹೋಗುತ್ತದೆ. 

ಸಾಸಿವೆಗಳು ತುಲನಾತ್ಮಕವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಆದ್ದರಿಂದ ನಿಮ್ಮ ದೈನಂದಿನ ಕ್ಯಾಲೋರಿಗಳ ಸೇವನೆಯ ಬಗ್ಗೆ ಚಿಂತಿಸದೆ ನೀವು ಅವುಗಳನ್ನು ನಿಮ್ಮ ಆಹಾರದಲ್ಲಿ ಸುಲಭವಾಗಿ ಸೇರಿಸಬಹುದು. ಸಾಸಿವೆ ಪೇಸ್ಟ್‌ನ್ನು ಸಲಾಡ್‌ಗೆ  ಹಾಕಿಕೊಂಡು ಸೇವಿಸಬಹುದು. ಸಾಸಿವೆ ಎಣ್ಣೆಯಲ್ಲಿ ಅಡುಗೆ ಮಾಡುವುದು ಉತ್ತಮ ಆರೋಗ್ಯ ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಚಳಿಗಾಲದಲ್ಲಿ ನೀವು ಸಾಸಿವೆ ಎಲೆಗಳನ್ನು ಸಹ ತಿನ್ನಬಹುದು. ಹಸಿರು ಎಲೆಗಳು ಬೀಜಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ..

ಯಾರು ಸಾಸಿವೆ ಸೇವಿಸಬಾರದು ?
ನೀವು ಸೀಮಿತ ಪ್ರಮಾಣದಲ್ಲಿ ತೆಗೆದುಕೊಂಡರೆ ಮಾತ್ರ ಸಾಸಿವೆ ಬೀಜಗಳು ಆರೋಗ್ಯಕ್ಕೆ ಸುರಕ್ಷಿತವಾಗಿದೆ. ಯಾವುದೇ ರೂಪದಲ್ಲಿ ಸಾಸಿವೆಯ ಅತಿಯಾದ ಸೇವನೆಯು ಅತಿಸಾರ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಮಧುಮೇಹ (Diabetes) ದಿಂದ ಬಳಲುತ್ತಿರುವವರು ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಸೀಮಿತ ಪ್ರಮಾಣದಲ್ಲಿ ಸಾಸಿವೆ ಬೀಜಗಳನ್ನು ತೆಗೆದುಕೊಳ್ಳಬೇಕು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಸಹ ಸಾಸಿವೆಯನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು.

click me!