ಗಂಟೆಗೆ ಎಷ್ಟು ನೀರು ಕುಡಿದರೆ ಆರೋಗ್ಯ ಚೆನ್ನಾಗಿರುತ್ತೆ?

By Suvarna News  |  First Published Oct 17, 2022, 1:21 PM IST

ನೀರಿಲ್ಲದೆ ಉಸಿರಿಲ್ಲ. ಆರೋಗ್ಯವಂತ ವ್ಯಕ್ತಿ ದಿನಕ್ಕೆ 2-3 ಲೀಟರ್ ನೀರು ಸೇವನೆ ಮಾಡ್ಬೇಕು. ದೇಹದಲ್ಲಿ ನೀರು ಕಡಿಮೆಯಾದ್ರೂ ಸಮಸ್ಯೆ, ಹೆಚ್ಚಾದ್ರೂ ಸಮಸ್ಯೆ. ಹಾಗಾಗಿ ನೀರು ಸೇವನೆ ಬಗ್ಗೆ ಸ್ವಲ್ಪ ಜ್ಞಾನ ಇರೋದು ಒಳ್ಳೆಯದು.
 


ಆಹಾರವಿಲ್ಲದೆ ನಾಲ್ಕೈದು ದಿನ ಕಳೆಯಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಕಳೆಯೋದು ಕಷ್ಟ. ಇದೇ ಕಾರಣಕ್ಕೆ ನೀರನ್ನು ಜೀವಜಲ ಅನ್ನೋದು. ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ಕುಡಿಯಬೇಕು ಎನ್ನುವ ಕಾರಣಕ್ಕೆ ಕೆಲವರು ಅತಿ ಹೆಚ್ಚು ನೀರಿನ ಸೇವನೆ ಮಾಡ್ತಾರೆ. ದಿನಕ್ಕೆ ಐದಾರು ಲೀಟರ್ ನೀರು ಕುಡಿಯುವವರಿದ್ದಾರೆ. ಕಡಿಮೆ ನೀರು ಕುಡಿಯೋದು ದೇಹಕ್ಕೆ ಹೇಗೆ ಹಾನಿಕಾರಕವೋ ಅದೇ ರೀತಿ ಹೆಚ್ಚು ನೀರು ಕುಡಿಯೋದು ಕೂಡ ಅಪಾಯಕಾರಿ. ಈ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ನೀರು ಸೇವನೆಯಿಂದಾಗುವ ಲಾಭಗಳು ಏನು ಎಂಬುದರ ಜೊತೆಗೆ ಹೆಚ್ಚು ನೀರು ಕುಡಿದ್ರೆ ಆಗುವ ಹಾನಿ ಏನು? ಒಂದು ಗಂಟೆಗೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ನಾವು ಹೇಳ್ತೇವೆ.

ಮೊದಲನೇಯದಾಗಿ ನೀರು (water) ಕುಡಿಯುವುದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನೋಡೋಣ. ಹಾರ್ವರ್ಡ್ (Harvard) ವೈದ್ಯಕೀಯ ಸ್ಕೂಲ್ ಪ್ರಕಾರ, ನೀರು ದೇಹದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಜೀವಕೋಶಗಳಿಗೆ ಪೋಷಣೆ ಮತ್ತು ಆಮ್ಲಜನಕ (Oxygen) ವನ್ನು ತಲುಪಿಸಲು ನೀರು ಅಗತ್ಯವಾಗಿದೆ. ನೀರು ಮೂತ್ರಕೋಶ ಮತ್ತು ದೇಹದಲ್ಲಿರುವ ಕೊಳಕು, ವಿಷ ಪದಾರ್ಥ ಮತ್ತು ಕೆಟ್ಟ ಬ್ಯಾಕ್ಟೀರಿಯಾವನ್ನು ಹೊರಗೆ ಹಾಕಲು ನೆರವಾಗುತ್ತದೆ. ಸರಿಯಾದ ರೀತಿಯಲ್ಲಿ ಆಹಾರ ಜೀರ್ಣವಾಗ್ಬೇಕೆಂದ್ರೆ ನೀರು ಅಗತ್ಯ. ಮಲಬದ್ಧತೆ ಸಮಸ್ಯೆಯನ್ನು ತಡೆಯುವುದಲ್ಲದೆ. ಬಿಪಿ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ನೀರು ಮಾಡುತ್ತದೆ. ಕೀಲುಗಳ ಆರೋಗ್ಯಕ ರಕ್ಷಿಸುವ ಜೊತೆಗೆ ದೇಹದ ಭಾಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತದೆ. ದೇಹದ ಉಷ್ಣತೆಯನ್ನು ನಿರ್ವಹಿಸುವ ಕೆಲಸವನ್ನು ನೀರು ಮಾಡುತ್ತದೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವ ಜೊತೆಗೆ ನಮ್ಮ ದೇಹ ಆರೋಗ್ಯವಾಗಿರುವಂತೆ ಮಾಡಲು ನೀರು ಬೇಕೇಬೇಕು.

Health Tips : ಬೆಳಗ್ಗೆ ಹೊಟ್ಟೆ ಸರಿಯಾಗಿ ಕ್ಲೀನ್ ಆಗ್ತಿಲ್ವಾ ? ಹೀಗೆ ಮಾಡಿ

Tap to resize

Latest Videos

ಕಡಿಮೆ ನೀರು ಸೇವನೆ ಮಾಡುವುದ್ರಿಂದ ಆಗುವ ಸಮಸ್ಯೆಗಳು : ಪ್ರತಿ ದಿನ  2 -3 ಲೀಟರ್ ನೀರು ನಮ್ಮ ದೇಹ ಸೇರಬೇಕೆಂದು ತಜ್ಞರು ಹೇಳ್ತಾರೆ. ಅದಕ್ಕಿಂತ ಕಡಿಮೆ ನೀರು ಕುಡಿಯುವುದ್ರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ತಲೆನೋವು, ಆಯಾಸ, ತಲೆತಿರುಗುವಿಕೆ, ಸುಸ್ತು, ಬಾಯಿ ಒಣಗುವುದು, ಒಣ ಕೆಮ್ಮು, ಕಡಿಮೆ ರಕ್ತದೊತ್ತಡ, ಕಾಲುಗಳು ಊದಿಕೊಳ್ಳುವುದು, ಮಲಬದ್ಧತೆ, ಮೂತ್ರದ ಬಣ್ಣ  ಬದಲಾಗುವುದು ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.  

ಅತಿ ಹೆಚ್ಚು ನೀರು ಸೇವನೆಯಿಂದಾಗುವ ಸಮಸ್ಯೆ : ನೀರಿನ ಪ್ರಮಾಣ ದೇಹದಲ್ಲಿ ಹೆಚ್ಚಾದ್ರೂ ಸಮಸ್ಯೆ ನಿಶ್ಚಿತ. ನೀರನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ನೀವು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗ್ಬೇಕಾಗುತ್ತದೆ. ಮೂತ್ರವಿಸರ್ಜನೆ ಹೆಚ್ಚಾದ್ರೆ ಎಲೆಕ್ಟ್ರೋಲೈಟ್‌ಗಳ ಕೊರತೆ, ವಾಕರಿಕೆ, ಕೈ ಮತ್ತು ಕಾಲುಗಳ ಬಣ್ಣ ಬದಲಾವಣೆ, ಸ್ನಾಯು ಸೆಳೆತ, ತಲೆನೋವು ಮತ್ತು ಆಯಾಸ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಬಾಯಾರಿಕೆ ನೀಗಲು ಡಯಟ್ ಸೋಡಾ ಕುಡಿತೀರಾ ? ಆರೋಗ್ಯಕ್ಕೆ ಡೇಂಜರ್

ಒಂದು ಗಂಟೆಗೆ ಇಷ್ಟು ನೀರು ಸೇವನೆ ಮಾಡಿ : ನಿಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯ ಎಂಬುದನ್ನು ನಿಮ್ಮ ವಯಸ್ಸು, ನಿಮ್ಮ ಆರೋಗ್ಯ ಸ್ಥಿತಿ ಹಾಗೂ ನಿಮ್ಮ ದೇಹದ ತಾಪಮಾನ, ಲಿಂಗ ಮತ್ತು ದೈಹಿಕ ಚಟುವಟಿಕೆಯನ್ನು ಗಮನಿಸಿ ಹೇಳಬೇಕಾಗುತ್ತದೆ.  ಸಾಮಾನ್ಯವಾಗಿ ಪ್ರತಿ ಗಂಟೆಗೆ 2 ರಿಂದ 3 ಕಪ್ ನೀರು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಬಿಸಿ ಹವಾಮಾನದಲ್ಲಿ ಅಥವಾ ಹೆಚ್ಚು ಬೆವರುತ್ತಿದ್ದರೆ ನೀರಿನ ಪ್ರಮಾಣವನ್ನು ಹೆಚ್ಚು ಮಾಡಬೇಕು. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯಬೇಕು. ನಿಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನೀರಿನ ಅಗತ್ಯವಿದೆ ಎಂಬುದನ್ನು ನೀವು ವೈದ್ಯರನ್ನು ಭೇಟಿಯಾಗಿ ತಿಳಿಯಬಹುದು.

ಬೆಂಬಿಡದೆ ಕಾಡೋ ಬೆನ್ನು ನೋವು Cardiac Arrest ಸೂಚನೆನಾ ?

ನಿಮ್ಮ ದೇಹದಲ್ಲಿ ನೀರು ಹೆಚ್ಚಾಗಿದ್ಯಾ? ಹೀಗೆ ಪರೀಕ್ಷೆ ಮಾಡಿ : ನಿಮ್ಮ ಮೂತ್ರದ ಮೂಲಕ ನೀವು ನಿಮ್ಮ ದೇಹದ ನೀರಿನ ಪ್ರಮಾಣ ಪರೀಕ್ಷೆ ಮಾಡಬಹುದು. ಮೂತ್ರ ಗಾಢ ಹಳದಿ ಬಣ್ಣದಲ್ಲಿದ್ದರೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದರ್ಥ. ಅದೇ ಬಿಳಿಯಾಗಿದ್ದರೆ ನೀರಿನ ಪ್ರಮಾಣ ಹೆಚ್ಚಿದೆ ಎಂಬ ಸೂಚನೆಯಾಗಿದೆ.

click me!