ಕೈಗಳನ್ನು ಶುದ್ಧ ನೀರು ಮತ್ತು ಸಾಬೂನಿನಿಂದ ತೊಳೆಯುವ ಅವಶ್ಯಕತೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 15ರಂದು ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತದೆ. ಈ ಅಭ್ಯಾಸವು ಅತಿಸಾರ ರೋಗಗಳು ಮತ್ತು ನ್ಯುಮೋನಿಯಾದಂತಹ ರೋಗಗಳು ಮತ್ತು ಸೋಂಕುಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಎಲ್ಲರಿಗೂ ನಮ್ಮ ಕೈ ಶುದ್ಧವಾಗಿಯೇ ಇದೆ ಎಂಬ ಭಾವನೆ ಇರುತ್ತದೆ. ಹಾಗಂತ ಕೈಯ ಸ್ವಚ್ಛತೆ ಬಗ್ಗೆ ಉಡಾಫೆ ಮಾಡುವ ಹಾಗಿಲ್ಲ ಯಾಕೆಂದರೆ, ನಿಮ್ಮ ಕೈಯನ್ನು ಬರಿ ತೊಳೆದರೆ ಸಾಕಾಗುವುದಿಲ್ಲ. ಜೊತೆಗೆ, ನೀವು ನಿಮ್ಮ ಕೈಯನ್ನು ಯಾವಾಗ ತೊಳೆಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಅದರೊಂದಿಗೆ, ನಿಮ್ಮ ಕೈಯನ್ನು ತೊಳೆಯಲು ಸರಿಯಾದ ಕ್ರಮಗಳನ್ನು ತಿಳಿದುಕೊಳ್ಳಬೇಕು. ನಿಮ್ಮ ಕೈಗಳನ್ನು ಕನಿಷ್ಠ 20-30 ಸೆಕೆಂಡುಗಳವರೆಗೆ ತೊಳೆಯಲು ಸೂಚಿಸಲಾಗುತ್ತದೆ. ಇದು ನಿಮ್ಮ ಕೈಯಿಂದ ಎಲ್ಲಾ ಸೂಕ್ಷ್ಮಜೀವಿಗಳು ಮತ್ತು ರೋಗಕಾರಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ರೋಗಗಳು ಮತ್ತು ಸೋಂಕುಗಳ ಹರಡುವಿಕೆಯನ್ನು ತಡೆಯುತ್ತದೆ.
ನಾವು ನಮಗೆ ಅರಿವಿಲ್ಲದೇನಾನಾರೀತಿಯ ವಸ್ತುಗಳನ್ನು ಸ್ಪರ್ಶಿಸುತ್ತಿರುತ್ತೇವೆ, ಹಾಗೆ ಸ್ಪರ್ಶಿಸಿದ ನಂತರ ಅಥವಾ ಹೊರಗೆ ಹೋಗಿಬಂದ ನಂತರ ನಿಮ್ಮ ಕೈಯನ್ನು ತೊಳೆಯಲು ನೀವು ನೆನಪಿನಲ್ಲಿಟ್ಟುಕೊಳ್ಳುವುದು (Remember) ಸಹ ಮುಖ್ಯವಾಗಿದೆ. ರೋಗಾಣುಗಳು ಹರಡುವುದನ್ನು (Spreading) ತಡೆಯಲು ನಿಮ್ಮ ಕೈಗಳನ್ನು ಯಾವ ಸಮಯದಲ್ಲಿ ತೊಳೆಯಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ..
undefined
Global Handwashing Day : ಕೈಗಳನ್ನು ನಿಯಮಿತವಾಗಿ ತೊಳೆಯದಿದ್ರೆ ಆಗೋ ತೊಂದ್ರೆ ಒಂದೆರಡಲ್ಲ
ಹೀಗೆ ಕೈಗಳನ್ನು ತೊಳೆಯುವ ಅಗತ್ಯವನ್ನು ಬೇರೆ ಬೇರೆ ಸಂದರ್ಭಗಳು ಎದುರಾದ ಸಮಯವನ್ನು (Times) ನೀವು ಗಮನಿಸಿ, ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ನಿಲ್ಲಿಸಲು ನಿಮ್ಮ ಕೈಗಳನ್ನು ತೊಳೆಯಿರಿ.
Global Handwashing Day: ಸ್ವಚ್ಛವಾಗಿ ಕೈ ತೊಳೆಯಲೂ ಒಂದು ದಿನ
ಕೈಗಳನ್ನು ಸರಿಯಾಗಿ ತೊಳೆಯಲು ಕ್ರಮಗಳು (ways):