
ದಿನಕ್ಕೆ ಎಷ್ಟು ಟೀ (Tea) ಕುಡಿದ್ರೆ ಒಳ್ಳೇದು? ಈ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆದರೆ, ಇದಕ್ಕೆ ಸರಿಯಾದ ಉತ್ತರ ಏನು ಎಂಬುದು ಇಂದಿಗೂ ಯಕ್ಷಪ್ರಶ್ನೆಯೇ ಆಗಿದೆ. ಆದರೂ ಕೂಡ ಈ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಹಾಗೂ, ಈ ಪ್ರಶ್ನೆಗೆ ಉತ್ತರವನ್ನು ಹಲವು ವೈದ್ಯರು, ಡಯಟೀಷನ್‌ಗಳು ಬೇರೆಬೇರೆಯದೇ ಕೊಡುತ್ತಾರೆ. ಟೀ ವಿಷಯದಲ್ಲಿ ಮಾತ್ರ 'ಒಂದು ಪ್ರಶ್ನೆಗೆ ಒಂದೇ ಉತ್ತರ' ಎನ್ನುವಂತಿಲ್ಲ. ಆದರೆ, ಯಾರ ಉತ್ತರ ಸರಿ ಎನ್ನುವುದು ಮಾತ್ರ ಕಗ್ಗಂಟು!
ಇದೀಗ ಈ ಪ್ರಶ್ನೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಡಾಕ್ಷರ್ ಒಬ್ಬರು ಉತ್ತರ ನೀಡಿದ್ದಾರೆ. ದಿನಕ್ಕೆ ತುಂಬಾ ಟೀ ಕುಡಿದರೆ ಒಳ್ಳೆಯದು ಅಲ್ಲವೇ ಅಲ್ಲ. ಆದರೆ, ದಿನಕ್ಕೆ ಒಂದೆರಡು ಕಪ್ ಟೀ ಕುಡಿದರೆ ತೊಂದರೆಯೇನೂ ಇಲ್ಲ. ಆದರೆ , ಅದು ಎಷ್ಟು ದೊಡ್ಡ ಕಪ್ ಎನ್ನುವುದನ್ನೂ ಕೂಡ ಅವಲಂಬಿಸಿದೆ. ಜೊತೆಗೆ, ದಿನಕ್ಕೆ ಎರಡು ಕಪ್‌ಗಳಿಗಿಂತಲೂ ಹೆಚ್ಚು ಟೀ ಕೆಲವರು ಕುಡಿದಾಗ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು.
ಭಾರತದ ಈ ಕೆಫೆಯಲ್ಲಿ ಸಿಗುತ್ತೆ ದುಬಾರಿ ಚಾಯ್, ಇದರ ಬೆಲೆ 1,000 ರೂಪಾಯಿ
ಕೆಲವರಿಗೆ ಅದು ಒಂದೇ ಟೀ ಕುಡಿದರೂ ಕಾಣಿಸಿಕೊಳ್ಳಬಹುದು. ಅದು ಅವರವರ ಆರೋಗ್ಯ-ಅನಾರೋಗ್ಯಕ್ಕೆ ಸಂಬಂಧಿಸಿದೆ. ಆದರೆ, ಆರೋಗ್ಯವಂತ ವ್ಯಕ್ತಿಗೆ ಸಾಮಾನ್ಯವಾಗಿ ದಿನಕ್ಕೆ ಎರಡು ಟೀ ಓಕೆ. ಅದಕ್ಕಿಂತ ಜಾಸ್ತಿ ನಾಟ್ ಓಕೆ ಎನ್ನಬಹುದು. ಆದರೆ, ಕೆಲವರು ದಿನವಿಡೀ ಸ್ವಲ್ಪ ಸ್ವಲ್ಪ ಟೀ ಕುಡಿಯುತ್ತಲೇ ಇರುತ್ತಾರೆ. ಅದು ಸರಿಯಲ್ಲ. ಅದರಿಂದ ಹಲವು ದುಷ್ಪರಿಣಾಮಗಳು ಆಗುತ್ತವೆ. ಆದ್ದರಿಂದ ಸ್ವಲ್ಪಸ್ವಲ್ಪ ಟೀ ಕುಡಿಯುವುದು ಸರಿಯಲ್ಲ.
ಇನ್ನೂ ಒಂದು ಸಂಗತಿ ಎಂದರೆ, ಯಾರಿಗೆ ಎಷ್ಟು ಟೀ ಕುಡಿದರೆ ತೊಂದರೆ ಆಗುತ್ತೆ ಅನ್ನೋದನ್ನ ಅವರವರ ದೇಹವೇ ಹೇಳುತ್ತೆ.. ಸೂಕ್ಷವಾಗಿ ಹೇಳುವ ದೇಹದ ಭಾಷೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅದು ಕಾಯಿಲೆ ಮೂಲಕ ಹೇಳುತ್ತೆ. ಆದರೆ, ಸಾಮಾನ್ಯವಾಗಿ ತೊಂದರೆಗಳು ತಕ್ಷಣವೇ ಕಾಣಿಸಿಕೊಳ್ಳುತ್ತವೆ. ಅದನ್ನು ಅರ್ಥಮಾಡಿಕೊಂಡರೆ ಸಾಕು, ನಾವೇ ಟೀ ಕುಡಿಯುವ ಪ್ರಮಾಣ ಕಮ್ಮಿ ಮಾಡಿಕೊಳ್ಳಬಹುದು. ಆದರೆ, ಹಲವರಿಗೆ ಅದು ಸಾಧ್ಯವಾಗದೇ ಇರಬಹುದು. ಆಗ, ಟೀ ಕುಡಿಯುವ ಕಪ್ ದಬಲಾಯಿಸಿ ಅದನ್ನು ಸಾಧ್ಯವಿದ್ದಷ್ಟೂ ಚಿಕ್ಕದು ಮಾಡಿಕೊಳ್ಳುವುದು ಬೆಸ್ಟ್.
ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನಬೇಕೋ ಬೇಡ್ವೋ? ತಿನ್ನುವ ಸರಿಯಾದ ವಿಧಾನ ಇಲ್ಲಿದೆ!
ಒಟ್ಟಾರೆಯಾಗಿ ಹೇಳುವುದು ಏನೆಂದರೆ, ದಿನಕ್ಕೆ 2 ಟೀ ಓಕೆ, ಅದಕ್ಕಿಂತ ಹೆಚ್ಚು ನಾಟ್ ಓಕೆ. ಕೆಲವರು ಅದಕ್ಕಿಂತ ಒಂದು ಕಪ್ ಜಾಸ್ತಿ ಕುಡಿದೂ ಆರೋಗ್ಯವಾಗಿಯೇ ಇರಬಹುದು. ಆದರೆ ಕೆಲವರಿಗೆ ಒಂದು ಕಪ್ ಕೂಡ ಜಾಸ್ತಿಯಾಗಿ ಅನಾರೋಗ್ಯ ತರಬಹುದು. ಹೀಗಾಗಿ ನಮ್ಮನಮ್ಮ ಆರೋಗ್ಯ-ಅನಾರೋಗ್ಯಕ್ಕೆ ಸಂಬಂಧಿಸಿ ನಾವೇ ನಿರ್ಧರಿಸಿಕೊಳ್ಳುವುದು ಕ್ಷೇಮ ಎನ್ನಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.