Covid-19: N95 ಮಾಸ್ಕ್‌ ಹಾಕ್ತಿದ್ದೀರಾ ? ಹಾಗಿದ್ರೆ ಈ ವಿಷ್ಯ ತಿಳ್ಕೊಳ್ಳಿ

Suvarna News   | Asianet News
Published : Feb 01, 2022, 10:01 AM ISTUpdated : Feb 01, 2022, 10:08 AM IST
Covid-19: N95 ಮಾಸ್ಕ್‌ ಹಾಕ್ತಿದ್ದೀರಾ ? ಹಾಗಿದ್ರೆ ಈ  ವಿಷ್ಯ ತಿಳ್ಕೊಳ್ಳಿ

ಸಾರಾಂಶ

ಕೊರೋನಾ (Corona) ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಹೀಗಿರುವಾಗ ಯಾವ ಮಾಸ್ಕ್ (Mask) ಧರಿಸೋದು ಒಳ್ಳೆಯದು ಅನ್ನೋ ಕನ್‌ಫ್ಯೂಶನ್. ಎಲ್ರೂ N95 ಮಾಸ್ಕ್ ಬೆಸ್ಟ್ ಅಂತಾರೆ. ಅದನ್ನೇ ಹಾಕೋದಾ ?. ಇದನ್ನು ರೀ ಯೂಸ್ (Reuse) ಮಾಡ್ಬೋದಾ ? ಪ್ರಾಬ್ಲಂ ಇಲ್ವಾ. ನೀವು ತಿಳ್ಕೊಳ್ಬೇಕಾದ ಕೆಲವೊಂದು ವಿಚಾರ ಇಲ್ಲಿದೆ.

ಕೋವಿಡ್ (Covid) ಒಂದನೇ ಅಲೆ, ಎರಡನೇ ಅಲೆ, ಮೂರನೇ ಅಲೆಯೆಂದು ಕೊರೋನಾ ಸೋಂಕು ಮತ್ತೆ ಮತ್ತೆ ಹರಡುತ್ತಲೇ ಇದೆ. ಹೀಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಮಾತ್ರ ಸೋಂಕು ಹರಡುವುದನ್ನು ತಡೆಯಲು ಸಾಧ್ಯ. ಹೀಗಾಗಿಯೇ ಸೋಂಕಿನ ವಿರುದ್ಧ ಹೋರಾಡಲು ಮಾಸ್ಕ್ ಧರಿಸುವುದು ಅತೀ ಮುಖ್ಯ. ಸರ್ಜಿಕಲ್ ಮಾಸ್ಕ್, N95 ಮಾಸ್ಕ್ (N95 Mask), ಕ್ಲಾತ್ ಮಾಸ್ಕ್ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಮಾಸ್ಕ್ ಬಳಸುತ್ತಾರೆ. ಆದ್ರೆ, ಸೋಂಕಿನ ವಿರುದ್ಧ ಯಾವ ಮಾಸ್ಕ್ ಧರಿಸುವುದು ಉತ್ತಮ ಎಂಬ ಚರ್ಚೆಗೆ ಬಂದಾಗ ಹೆಚ್ಚಿನವರು N95 ಮಾಸ್ಕ್ ಎಂದೇ ಸಲಹೆ ನೀಡುತ್ತಾರೆ. ಆದರೆ, N95 ಮಾಸ್ಕ್ ನಿಜಕ್ಕೂ ಸೇಫಾ ? ಇದನ್ನು ಎಷ್ಟು ಬಾರಿ ಮರುಬಳಕೆ ಮಾಡಬಹುದು ? N95 ಮಾಸ್ಕ್ ಹಾಕುವಾಗ ಯಾವ ರೀತಿಯ ನಿಯಮ ಪಾಲಿಸಬೇಕು ? ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ. ಆ ಕುರಿತು ತಿಳಿಯೋಣ.

N95 ಮಾಸ್ಕ್ ಅತ್ಯಂತ ಪರಿಣಾಮಕಾರಿ
ಕೊರೋನಾ ಸೋಂಕು ಹರಡುವುದನ್ನು ತಡೆಯಲು N95 ಮಾಸ್ಕ್ ಅತ್ಯಂತ ಪರಿಣಾಮಕಾರಿ ಮಾಸ್ಕ್ ಎಂದು ಹೇಳಲಾಗುತ್ತದೆ. ಆರಂಭದಲ್ಲೇ ಹೆಚ್ಚಿನವರು ಸರ್ಜಿಕಲ್ ಮಾಸ್ಕ್ ಧರಿಸುತ್ತಿದ್ದು, ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ N95 ಮಾಸ್ಕ್ ಧರಿಸಲು ಆರಂಭಿಸಿದರು. ಹೀಗಾಗಿಯೇ N95 ಮಾಸ್ಕ್ ಗೆ ಹೆಚ್ಚಿನ ಬೇಡಿಕೆಯಿದ್ದು, ಬೆಲೆಯೂ ಹೆಚ್ಚಾಗಿದೆ.

Mask Fashion: ಮೆಡಿಕಲ್ ಮಾಸ್ಕ್ ಧರಿಸೋರೇ ಹೆಚ್ಚು ಆಕರ್ಷಕವಂತೆ!

N95 ಮಾಸ್ಕ್‌ನ್ನು ತಯಾರಿಸಲು ಪಾಲಿಪ್ರೊಪಿಲೀನ್ ಎಂಬ ಫೈಬರ್ ಅನ್ನು ಬಳಸಲಾಗುತ್ತದೆ. ಇದು ಕೊರೋನಾದಂತಹಾ ಸೂಕ್ಷ್ಮ ವೈರಸ್‌ (Virus)ನ್ನು ತಡೆಯುವ ಶಕ್ತಿ ಹೊಂದಿದೆ. ಮುಖ, ಬಾಯಿಯನ್ನು ಸಂಪರ್ಕ ಮಾಡುವುದನ್ನು ತಡೆಯುತ್ತದೆ. ಇವುಗಳ ಶೇ.99.2ರ ವರೆಗೆ ಬ್ಯಾಕ್ಟಿರೀಯಾದಿಂದ ರಕ್ಷಣೆ (Protection) ನೀಡುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. N95 ಮಾಸ್ಕ್‌ನ್ನು ಮೃದುವಾದ ದಾರದಿಂದ ಮಾಡುವುದರಿಂದ ಇದನ್ನು ದೀರ್ಘಕಾಲದ ವರೆಗೆ ಧರಿಸಿದ್ದರೂ ಯಾವುದೇ ರೀತಿಯ ತೊಂದರೆಯಿಲ್ಲ. 

N95 ಮಾಸ್ಕ್ ಎಷ್ಟು ಬಾರಿ ಮರುಬಳಕೆ ಮಾಡಬಹುದು ?
N95 ಮಾಸ್ಕ್‌ನ್ನು ಸರಿಯಾಗಿ ಬಳಸಿದರೆ ಒಮ್ಮೆ ಮಾತ್ರವಲ್ಲದೆ ಹಲವು ದಿನಗಳ ವರೆಗೆ ಬಳಸಬಹುದು ಎನ್ನುತ್ತಾರೆ ತಜ್ಞರು. ಅಮೇರಿಕಾದ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಹೇಳುವಂತೆ ಆರೋಗ್ಯ ಕಾರ್ಯಕರ್ತರು N95 ಮುಖವಾಡವನ್ನು ಐದು ಬಾರಿ ಧರಿಸಬಹುದಾಗಿದೆ. ಆದರೆ ತಜ್ಞರು ಹೇಳುವಂತೆ ಒಬ್ಬ ಸಾಮಾನ್ಯ ವ್ಯಕ್ತಿ ಎಷ್ಟು ಬಾರಿ N95 ಮಾಸ್ಕ್ ಬಳಸಬಹುದು ಎಂಬುದು ಅದು ಹೇಗೆ ಬಳಸಲ್ಪಡುತ್ತದೆ ಎಂಬುದರ ಮೇಲೆ ಬದಲಾಗುತ್ತದೆ. 

Health Tips : ನಿರಂತರ ಮಾಸ್ಕ್ ಧರಿಸಿದ್ರೆ ದೇಹದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚುತ್ತಾ?

ಒಂದೇ N95 ಮಾಸ್ಕ್ ಮನೆಯ ಪಕ್ಕದ ಅಂಗಡಿಗೆ ಹೋಗುವಾಗ ಮಾತ್ರ ಬಳಸುವುದು. ದಿನವಿಡೀ ಧರಿಸುವುದಕ್ಕಿಂತ ತುಂಬಾ ವಿಭಿನ್ನವಾಗಿದೆ. ಹೀಗಾಗಿ ಇದನ್ನು ಮತ್ತೆ ಮತ್ತೆ ಧರಿಸಬಹುದಾಗಿದೆ. ಆದರೆ ಮನೆಯಿಂದ ಹೊರಗಡೆ ಹೋಗುವಾಗ, ಆಫೀಸ್ (Office), ಕಾಲೇಜ್‌ಗೆ ಹೋಗುವಾಗ ಬಳಸುವಾಗ N95 ಮಾಸ್ಕ್‌ನ್ನು ದೀರ್ಘ ಕಾಲದ ವರೆಗೆ ಬಳಸಲು ಸಾಧ್ಯವಾಗುವುದಿಲ್ಲ. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಖವಾಡಗಳು ಮತ್ತು ಏರೋಸಾಲ್‌ಗಳನ್ನು ಅಧ್ಯಯನ ಮಾಡುವ ರಿಚರ್ಡ್ ಫ್ಲಾಗನ್, N95 ಮುಖವಾಡದ ಬಳಕೆಯನ್ನು ಸುಮಾರು ಎರಡು ಅಥವಾ ಮೂರು ದಿನಗಳ ವರೆಗೆ ಸೀಮಿತಗೊಳಿಸಲು ಶಿಫಾರಸು ಮಾಡುತ್ತಾರೆ.

N95ನಲ್ಲಿ ತೆಗೆದುಕೊಳ್ಳುವ ಪ್ರತಿ ಉಸಿರಿನೊಂದಿಗೆ, ಕಣಗಳು ಮುಖವಾಡದ ಮೇಲೆ ಸಂಗ್ರಹಗೊಳ್ಳುತ್ತವೆ. ಹೀಗಾಗಿ ಮುಖವಾಡವು ಬಹಳಷ್ಟು ಕಣಗಳನ್ನು ಹಿಡಿದಿದ್ದರೆ ಅದು ಉಸಿರಾಡಲು ಹೆಚ್ಚು ಕಷ್ಟಕರವಾಗಬಹುದು. ಮತ್ತು ಇದು ಮುಖವಾಡದ ಕಾರ್ಯಕ್ಷಮತೆಯನ್ನು ತಗ್ಗಿಸಬಹುದು ಎಂದು ಫ್ಲಾಗನ್ ಹೇಳುತ್ತಾರೆ. 

N95 ಮಾಸ್ಕ್ ಬಳಸುವುದನ್ನು ಯಾವಾಗ ನಿಲ್ಲಿಸಬೇಕು ?
N95 ಮಾಸ್ಕ್ ಹೆಚ್ಚು ಸಮಯ ಬಳಸುವುದರಿಂದ ಮಾಸ್ಕ್‌ನಲ್ಲಿರುವ ಎಲಾಸ್ಟಿಕ್ ಬ್ಯಾಂಡ್ ಸಹ ಸವೆದುಹೋಗಬಹುದು. ಇದರಿಂದ ಮಾಸ್ಕ್ ಮುಖಕ್ಕೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಮಾಸ್ಕ್ ತನ್ನ ಸ್ಟಿಫ್ ನೆಸ್ ಕಳೆದುಕೊಂಡು ಕೊಳಕು ಅಥವಾ ಒದ್ದೆಯಾಗಬಹುದು. ಈ ರೀತಿಯಾದಾಗ N95 ಮಾಸ್ಕ್ ಬಳಸಲು ಯೋಗ್ಯವಾಗಿರುವುದಿಲ್ಲ. ಕೊರೋನಾ ಸೋಂಕಿತ ವ್ಯಕ್ತಿ N95 ಮಾಸ್ಕ್‌ನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸದಿರುವುದು ಉತ್ತಮ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?