Stay Fit: ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್‌

By Suvarna News  |  First Published Jan 31, 2022, 8:39 PM IST

ಬೆಳಗ್ಗೆ, ಸಂಜೆ ಜಿಮ್‌ (Gym)ಗೆ ಹೋಗೋಕೆ ಬೇಜಾರಾ ? ಆ ಭಾರದ ಡಂಬಲ್ಸ್ ಎತ್ತೋ ಕೆಲ್ಸ ಆಗ್ದಪ್ಪಾ..ಬೇರೇನಾದ್ರೂ ಮಾಡ್ಬೋದಿತ್ತು ಅಂತ ಯೋಚಿಸ್ತಿದ್ದೀರಾ. ಟೆನ್ಶನ್ (Tension) ಬಿಟ್ಬಿಡಿ, ಜಿಮ್ಗೆ ಹೋಗದೆಯೂ ಫಿಟ್ ಆಂಡ್ ಫೈನ್ (Fine) ಆಗಿರುವುದು ಹೇಗೆ ನಾವು ಹೇಳ್ತೀವಿ.


ಕೊರೋನಾ (Corona) ಸೋಂಕು ಹರಡಲು ಆರಂಭವಾದಾಗಿನಿಂದಲೂ ಜನಜೀವನ ಬದಲಾವಣೆಯಾಗುತ್ತಾ ಬಂದಿದೆ. ಆರೋಗ್ಯದ ಕುರಿತಾಗಿರುವ ಮನಸ್ಥಿತಿ, ಕಾಳಜಿ ಎಲ್ಲವೂ ಬದಲಾಗಿದೆ. ಕರ್ಫ್ಯೂ, ಲಾಕ್‌ಡೌನ್ (Lockdown) ಮೊದಲಾದ ನಿರ್ಬಂಧಗಳಿಂದ ಜನರು ಹೆಚ್ಚಾಗಿ ಒಳಾಂಗಣ ಚಟುವಟಿಕೆಗಳು ಪಾಲ್ಗೊಳ್ಳುತ್ತಿದ್ದಾರೆ. ಮೊದೆಲ್ಲೆಲ್ಲಾ ಬ್ಯೂಟಿಪಾರ್ಲರ್, ಜಿಮ್ (Gym) ಎಂದು ಓಡಾಡುತ್ತಿದ್ದವರೂ ಈಗೆಲ್ಲಾ ಮನೆಯಲ್ಲೇ ಪರ್ಯಾಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಫಿಟ್ ಆಗಿರಲು ಆರೋಗ್ಯಕರ ಆಯ್ಕೆಗಳ ಬಗ್ಗೆ ಕೆಲವರಿಗೆ ತಿಳಿದಿದೆ. ಕೆಲವರು ಸಮಯ ಮತ್ತು ಹಣವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಅಥವಾ ಮನೆಯಲ್ಲಿ ತಮ್ಮ ಫಿಟ್‌ನೆಸ್ ಮಟ್ಟವನ್ನು ಹೆಚ್ಚಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಾಗಿದ್ರೆ ಜಿಮ್ಗೆ ಹೋಗದೆಯೇ ಫಿಟ್ ಆಂಡ್ ಫೈನ್ ಆಗಿರುವುದು ಹೇಗೆ ?

ಬೆಳಗ್ಗೆದ್ದು ಯೋಗ ಮಾಡಿ 
ಬೆಳಗ್ಗೆದ್ದು ಯೋಗ (Yoga) ಮಾಡುವುದ ಮನಸ್ಸಿನ ಹಾಗೂ ದೇಹದ ಆರೋಗ್ಯಕ್ಕೆ ಅತ್ಯುತ್ತಮ. ಯೋಗ ಮಾಡುವುದು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಉದ್ವೇಗ, ಖಿನ್ನತೆ ಮೊದಲಾದ ಸಮಸ್ಯೆ ದೂರವಾಗುತ್ತದೆ. ಯೋಗ ಮಾಡಲು ಪ್ರತ್ಯೇಕವಾಗಿ ಕ್ಲಾಸ್‌ಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಯೂಟ್ಯೂಬ್ ನೋಡಿ ಸರಳವಾಗಿ ಯೋಗಾಸನಗಳನ್ನು ಕಲಿತುಕೊಳ್ಳಬಹುದು.

Tap to resize

Latest Videos

ಜಿಮ್ ಮಾಡಲು ಟೈಮ್ ಇಲ್ದಿದ್ರೆ ಸ್ಕಿಪ್ಪಿಂಗ್ ಮಾಡುವ ಮೂಲಕ ಫಿಟ್ ಆಗಿರಿ

ಸಾಧ್ಯವಾದಷ್ಟು ನಡೆಯಿರಿ 
ವಾಕಿಂಗ್ (Walking) ಮಾಡುವುದು ಫಿಟ್ ಆಗಿರಲು ಸರಳ ಮತ್ತು ಪರಿಣಾಮಕಾರಿ ವಿಧಾನ. ಹೀಗಾಗಿ ಪ್ರತಿನಿತ್ಯ ಸಾಧ್ಯವಾದಷ್ಟೂ ನಡೆಯಿರಿ. ವಾಕಿಂಗ್ ಮಾಡುವುದು, ದೇಹವನ್ನು ಸದೃಢವಾಗಿಡಲು ಉತ್ತಮ ಮಾರ್ಗವಾಗಿದೆ. ಇದು ತೂಕವನ್ನು ಕಳೆದುಕೊಳ್ಳಲು ಸುಲಭ ಮಾರ್ಗವಾಗಿದೆ. ಜೊತೆಗೆ, ವಾಕಿಂಗ್, ಜಾಗಿಂಗ್ ಮತ್ತು ಓಟವು ಹೃದಯರಕ್ತನಾಳದ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ..

ಕ್ರೀಡೆಯಲ್ಲಿ ಪಾಲ್ಗೊಳ್ಳಿ 
ಈಜು, ಟೆನಿಸ್ ಮೊದಲಾದ ಹೊರಾಂಗಣ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ (Exercise) ಸಿಕ್ಕಂತಾಗುತ್ತದೆ. ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಫಿಟ್ ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಕ್ರೀಡೆಯು ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಫಿಟ್ ಆಗರ್ಬೇಕಾ? ಆದರೆ ಎಲ್ಲವನ್ನೂ ನಂಬಿ ಸಮಯ ವ್ಯರ್ಥ ಮಾಡ್ಬೇಡಿ...

ದೇಹದ ತೂಕವನ್ನು ಬಳಸಿ ವ್ಯಾಯಾಮ ಮಾಡಿ 
ವ್ಯಾಯಾಮವನ್ನು ಮಾಡಲು ಜಿಮ್‌ಗೇ ಹೋಗಬೇಕಾಗಿಲ್ಲ. ಮನೆಯಲ್ಲೇ ಕೆಲವೊಂದು ಸಲಕರಣೆಗಳನ್ನು ಬಳಸಿ ಸುಲಭವಾಗಿ ವ್ಯಾಯಾಮ ಮಾಡಬಹುದು. ಪುಷ್-ಅಪ್‌, ಜಂಪಿಂಗ್ ಸೇರಿದಂತೆ ಮನೆಯಲ್ಲೇ ಹಲಗೆಗಳನ್ನು ಬಳಸಿ ವ್ಯಾಯಾಮ ಮಾಡಬಹುದು. ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವುದಲ್ಲದೆ, ಫಿಟ್ ಆಗಿರಲು ಮತ್ತು ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.

ಸೊಪ್ಪು-ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ
ಆರೋಗ್ಯ ಉತ್ತಮವಾಗಿರಲು ಸದೃಢವಾಗಿರಲು ಆಹಾರಕ್ರಮವೂ ಉತ್ತಮವಾಗಿರಬೇಕಾದುದು ಮುಖ್ಯ, ಹೀಗಾಗಿ ಯಾವತ್ತೂ ಆಹಾರದಲ್ಲಿ ಹೆಚ್ಚೆಚ್ಚು ಸೊಪ್ಪು ತರಕಾರಿಗಳನ್ನು ಸೇರಿಸುವುದನ್ನು ಮರೆಯದಿರಿ. ಹೆಚ್ಚು ಮೊಳಕೆ ಬರಿಸಿದ ಕಾಳುಗಳು, ಒಣಹಣ್ಣುಗಳನ್ನು ತಿನ್ನಿ. ಇದು ವಿನಾಕಾರಣ ತೂಕ ಹೆಚ್ಚಳವಾಗದಂತೆ ತಡೆಯುತ್ತದೆ. ದೇಹಕ್ಕೆ ಅನಗತ್ಯ ಫ್ಯಾಟ್ ಸೇರಿಸುವುದಿಲ್ಲ. ಹೀಗಾಗಿ ದೇಹ ಯಾವಾಗಲೂ ಫಿಟ್ ಆಗಿರುವಂತೆ. ಜಂಕ್‌ಫುಡ್, ಕೂಲ್ ಡ್ರಿಂಕ್ಸ್‌ನಿಂದ ದೂರವಿರಿ. ಇದರ ಬದಲು ಹಣ್ಣಿನರಸವನ್ನು ಕುಡಿಯವುದು ಒಳ್ಳೆಯದು.

ವ್ಯಾಯಾಮವನ್ನು ಹೆಚ್ಚಿಸಲು ಮತ್ತು ಕೆಲವು ಸಲಕರಣೆ ಆಧಾರಿತ ವ್ಯಾಯಾಮಗಳನ್ನು ಮಾಡಲು ನೀವು ಬಯಸಿದರೆ, ನೀವು ತೂಕ, ಪ್ರತಿರೋಧ, ಬ್ಯಾಂಡ್‌ಗಳು ಮತ್ತು ಜಂಪ್ ರೋಪ್‌ನಂತಹ ಮೂಲಭೂತ ಸಾಧನಗಳಲ್ಲಿ ಹೂಡಿಕೆ ಮಾಡಬಹುದು. ಯೂಟ್ಯೂಬ್‌ನಲ್ಲಿ ತಜ್ಞರು ಸೂಚಿಸಿರುವ ಕೆಲವು ವ್ಯಾಯಾಮದ ವೀಡಿಯೋಗಳನ್ನು ವೀಕ್ಷಿಸಿ ಅನುಸರಿಸಬಹುದು. ಅಥವಾ ಜಿಮ್‌ನಲ್ಲಿ ನೀವು ಮಾಡಿದ್ದನ್ನು ಮುಂದುವರಿಸಬಹುದು. ಸೋ, ಇನ್ಮುಂದೆ ಫಿಟ್ ಆಂಡ್ ಫೈನ್ ಆಗಿರಲು ಜಿಮ್‌ಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಈ ಸರಳ ಅಭ್ಯಾಸಗಳನ್ನು ಮಾಡಿ ಆರೋಗ್ಯಕರವಾಗಿರಿ.

click me!