ಕೆಲಸ, ಒತ್ತಡ ಜಾಸ್ತಿಯಾಗ್ತಿದ್ದಂತೆ ದೇಹ ಮತ್ತು ಮನಸ್ಸು ಎಡರೂ ಸುಸ್ತಾಗುತ್ತದೆ. ವಿಶ್ರಾಂತಿಯನ್ನು ಮನಸ್ಸು ಬಯಸುತ್ತದೆ. ಆದ್ರೆ ಕೆಲ ನೋವುಗಳು ನಿದ್ರೆಗೆ ಭಂಗ ತರುತ್ತವೆ. ಅಂಥ ಪರಿಸ್ಥಿತಿಯಲ್ಲಿ ನೀವು ಎಣ್ಣೆ ಮಸಾಜ್ ಮಾಡಿಕೊಂಡ್ರೆ ಒಳ್ಳೆಯದು.
ಈಗಿನ ದಿನಗಳಲ್ಲಿ ವಿಶ್ರಾಂತಿಗೆ ಸಮಯವಿಲ್ಲ. ಒಂದಲ್ಲ ಒಂದು ಕೆಲಸದಲ್ಲಿ ಜನರು ಬ್ಯುಸಿಯಿರ್ತಾರೆ. ಕಚೇರಿ ಕೆಲಸ, ಮನೆ ಕೆಲಸ, ಮಕ್ಕಳ ಕೆಲಸ ಹೀಗೆ ಒಂದಾದ್ಮೇಲೆ ಒಂದು ಕೆಲಸ ಮಾಡುವುದು ಅನಿವಾರ್ಯ ಕೂಡ. ಎಲ್ಲ ಕೆಲಸದ ಮಧ್ಯೆ ದೇಹಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ನಿದ್ರೆ ಮಾಡಿದ್ರೆ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ನಿಜ ಆದ್ರೆ ನೋವಿನಿಂದ ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೆ ಇದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ಬೇಗ ನಿದ್ರೆ ಬರಬೇಕು, ದೇಹ ವಿಶ್ರಾಂತಿಕೊಳ್ಳಬೇಕು ಎನ್ನುವವರು ಕೆಲ ಎಣ್ಣೆಯಿಂದ ಮಸಾಜ್ ಮಾಡಿದ್ರೆ ಒಳ್ಳೆಯದು. ಮಾರುಕಟ್ಟೆಯಲ್ಲಿ ಸಾಕಷ್ಟು ಎಣ್ಣೆಗಳು ಲಭ್ಯವಿದೆ. ಕೆಲ ಎಣ್ಣೆಗಳನ್ನು ನೈಸರ್ಗಿಕ ಪದಾರ್ಥಗಳಿಂದ ಮಾಡಲಾಗಿದೆ. ಆ ಎಣ್ಣೆಯಿಂದ ಮಸಾಜ್ ಮಾಡಿದ್ರೆ ಸ್ನಾಯುಗಳಿಗೆ ವಿಶ್ರಾಂತಿ ಸಿಗುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ನಾವಿಂದು ಮಸಾಜ್ ಮಾಡಲು ಸೂಕ್ತವಾದ ಎಣ್ಣೆ ಯಾವುದು ಎಂಬುದನ್ನು ಹೇಳ್ತೇವೆ.
ಹಿಮಾಲಯ ಹರ್ಬಲ್ಸ್ (Himalaya Herbals) ಸ್ಟ್ರೆಸ್ ರಿಲೀಫ್ ಮಸಾಜ್ ಆಯಿಲ್ : ಇದು 200 ಮಿಲಿ ಪ್ಯಾಕ್‌ನಲ್ಲಿ ಲಭ್ಯವಿರುವ ಮಸಾಜ್ ಆಯಿಲ್ ಆಗಿದೆ. ಈ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಇದನ್ನು ವಿಶೇಷವಾಗಿ ಪುರುಷರಿಗೆಂದು ತಯಾರಿಸಲಾಗಿದೆ. ಇದನ್ನು ತಯಾರಿಸಲು ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗಿದೆ. ಚೆರ್ರಿ ಪರಿಮಳವನ್ನು ಹೊಂದಿರುವ ಈ ಮಸಾಜ್ ಎಣ್ಣೆ ಎಲ್ಲಾ ಚರ್ಮಗಳಿಗೆ ಸೂಕ್ತವಾಗಿದೆ. ಇದ್ರಿಂದ ಯಾವುದೇ ಅಲರ್ಜಿ ಸಮಸ್ಯೆ ಕಾಡುವುದಿಲ್ಲ.
ಆಯುರ್ವೇದಿಕ್ (Auravedic) ರಿಲ್ಯಾಕ್ಸ್ ಬಾಡಿ ಮಸಾಜ್ ಆಯಿಲ್ ಫುಲ್ ಬಾಡಿ : ಇದು ಆಯಿಲ್ ಸ್ಕಿನ್ ರೀತಿಯ ಮಸಾಜ್ ಆಯಿಲ್ ಆಗಿದೆ. ಕ್ಯಾಮೊಮೈಲ್ ಮತ್ತು ಲ್ಯಾವೆಂಡರ್ ಸೇರಿದಂತೆ ನೈಸರ್ಗಿಕ ವಸ್ತುಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ನಿದ್ರಾಹೀನತೆ, ದಣಿವು ಸೇರಿದಂತೆ ಸ್ನಾಯುಗಳ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ. ಈ ಎಣ್ಣೆಯಲ್ಲಿ ನೀವು ಮಸಾಜ್ ಮಾಡಿದ್ರೆ ನಿಮ್ಮ ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.
Diwali 2022: ಪಟಾಕಿ ಸುಟ್ಟ ಗಾಯ ಗುಣಪಡಿಸಲು ಸಿಂಪಲ್ ಮನೆಮದ್ದು
ವಾವ್ ಸ್ಕಿನ್ (WOW Skin) ಸೈನ್ಸ್ ಥಾಯ್ ಬಾಡಿ ಮಸಾಜ್ ಆಯಿಲ್ : ಎಲ್ಲಾ ರೀತಿಯ ಚರ್ಮಕ್ಕೆ ಇದು ಒಳ್ಳೆಯ ಮಸಾಜ್ ಆಯಿಲ್. ತೆಂಗಿನಕಾಯಿ ಮತ್ತು ನಿಂಬೆರಸದ ಪರಿಮಳದಲ್ಲಿ ಈ ಆಯಿಲ್ ಲಭ್ಯವಿದೆ. ಈ ಮಸಾಜ್ ಎಣ್ಣೆ ಪ್ಯಾರಾಬೆನ್, ಖನಿಜ ತೈಲ ಮತ್ತು ಬಣ್ಣದಿಂದ ಮುಕ್ತವಾಗಿದೆ. ಇದು ನಿಮ್ಮ ದೇಹವನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡುತ್ತದೆ. ಇದಕ್ಕಾಗಿ ಎಣ್ಣೆಗೆ ಜಾಸ್ಮಿನ್ ಅಬ್ಸೊಲ್ಯೂಟ್ ಮತ್ತು ಲೆಮನ್‌ಗ್ರಾಸ್‌ನಂತಹ 6 ತೈಲಗಳನ್ನು ಬೆರೆಸಲಾಗಿದೆ.
ಬ್ಯು ನೆಕ್ಟರ್ (Blue Nectar) ಬಾಡಿ ಮಸಾಜ್ ಆಯಿಲ್ : ಈ ಎಣ್ಣೆಯನ್ನು ಸಾವಯ ಪದಾರ್ಥಗಳಿಂದ ತಯಾರಿಸಲಾಗಿದೆ. 8 ಪ್ರಮುಖ ಗಿಡಮೂಲಿಕೆಗಳಿಂದ ಈ ಆಯಿಲ್ ಸಿದ್ಧವಾಗಿದೆ. ಒಣ ಚರ್ಮ ಮತ್ತು ಸಾಮಾನ್ಯ ಚರ್ಮವುಳ್ಳವರೆಲ್ಲರೂ ಇದನ್ನು ಬಳಸಬಹುದು. ಅದು ಜಾಸ್ಮಿನ್ ಸೇಂಟ್ ಸುವಾಸನೆಯನ್ನು ನೀಡುತ್ತದೆ. ಈ ಆಯಿಲನ್ನು ಯಾರು ಬೇಕಾದ್ರೂ ಬಳಕೆ ಮಾಡಬಹುದಾಗಿದೆ.
ಬೆಳಿಗ್ಗೆ ಎದ್ದಾಗ ತಲೆ ತಿರುಗುತ್ತಾ? ಕಾರಣವಿಲ್ಲದೆ ನೋಡಿ
ಓರಿಯಂಟಲ್ ಬೊಟಾನಿಕ್ಸ್ (Oriental Botanics) ರಿಲ್ಯಾಕ್ಸ್ ಬಾಡಿ ಮಸಾಜ್ ಆಯಿಲ್ : ಇದು ಪೆಪ್ಪರ್‌ಮಿಂಟ್ ಸೇಂಟ್ ಪರಿಮಳ ಹೊಂದಿದೆ. ಈ ಮಸಾಜ್ ಎಣ್ಣೆಯನ್ನು ಶೇಕಡಾ 100ರಷ್ಟು ಶುದ್ಧ ಮತ್ತು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗಿದೆ. ಕಾಲು, ತೋಳು, ಬೆನ್ನು ಸೇರಿದಂತೆ ದೇಹದ ಯಾವುದೇ ಭಾಗಕ್ಕೆ ಇದನ್ನು ಹಚ್ಚಬಹುದು. ಇದ್ರಿಂದ ನೋವು ಕಡಿಮೆಯಾಗುವ ಜೊತೆಗೆ ಆರಾಮವೆನ್ನಿಸುತ್ತದೆ. ಈ ಮಸಾಜ್ ಎಣ್ಣೆ ನಿಮಗೆ 200 ಮಿಲಿ ಪ್ಯಾಕ್‌ನಲ್ಲಿ ಸಿಗುತ್ತದೆ. ಇದನ್ನು ಮಹಿಳೆ ಹಾಗೂ ಪುರುಷ ಇಬ್ಬರೂ ಬಳಸಬಹುದು ಎನ್ನುತ್ತದೆ ಕಂಪನಿ.