Holi 2023 : ಹೋಳಿಯ ರಂಗು ತೆಗೆಯೋದು ಬಹಳ ಸುಲಭ

By Suvarna News  |  First Published Mar 8, 2023, 3:36 PM IST

ಹೋಳಿ ಹಬ್ಬದ ರಂಗೇರಿದೆ. ಗಲ್ಲಿ ಗಲ್ಲಿಗಳಲ್ಲಿ ಬಣ್ಣದೋಕುಳಿ ನಡೆಯುತ್ತಿದೆ. ಹಬ್ಬದ ಸಂಭ್ರಮದಲ್ಲಿರುವವರು ಬಣ್ಣ ತೆಗೆಯೋ ವಿಷ್ಯ ಬಂದಾಗ ತಲೆಬಿಸಿಗೊಳಗಾಗ್ತಾರೆ. ಇದ್ರ ಬಗ್ಗೆ ಚಿಂತೆಬೇಡ. ಮನೆಯಲ್ಲಿರೋ ವಸ್ತು ಬಳಸಿ ಮೈಗಂಟಿದ ಕಲರ್ ತೆಗೆಯಿರಿ.
 


ಹೋಳಿಯ ರಂಗಿನಲ್ಲಿ ಎಲ್ಲರೂ ಆಡಿ ನಲಿಯುತ್ತಿದ್ದಾರೆ. ಹಿಂದೂಗಳ ಹೊಸ ವರ್ಷ ಆರಂಭವಾಗುವುದು ಯುಗಾದಿಯಂದು. ಹಾಗಾಗಿ ಯುಗಾದಿಗೂ ಮೊದಲು ಬರುವ ವರ್ಷದ ಕೊನೆಯ ಹುಣ್ಣಿಮೆಯಂದು ಈ ಹೋಳಿ ಹಬ್ಬ ಆಚರಿಸಲಾಗುತ್ತದೆ. ಪುರಾಣ ಕಾಲದಿಂದಲೂ ಆಚರಣೆಯಲ್ಲಿರುವ ಈ ಹಬ್ಬಕ್ಕೆ ಪೌರಾಣಿಕ ಹಿನ್ನಲೆಯೂ ಇದೆ. ಹೋಳಿಯ ಹಬ್ಬ ವರ್ಷದಿಂದ ವರ್ಷಕ್ಕೆ ತನ್ನ ರಂಗನ್ನು ಹೆಚ್ಚಿಸುತ್ತಿದೆ. ಈ ಹಬ್ಬ ಇಂದು ಭಾರತದ ಪ್ರಸಿದ್ಧ ಹಬ್ಬಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಹೋಳಿ (Holi) ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಆಶ್ಚರ್ಯದ ಮಾತೇನಲ್ಲ. ಏಕೆಂದರೆ ಈ ರಂಗಿನಾಟ ನೋಡುಗರ ಕಣ್ಣಿಗೆ, ಆಡುವವರಿಗೆ ಕೊಡುವ ಖುಷಿಯೇ ಅಂಥದ್ದು. ಪೌರಾಣಿಕ ಕಥೆಗಳಿಂದ ಸ್ಪೂರ್ತಿ (Inspiration) ಪಡೆದ ಈ ಹಬ್ಬ ಕೆಟ್ಟತನದ ವಿರುದ್ಧ ಸತ್ಯದ ವಿಜಯವನ್ನು ಸಾಧಿಸುವ ಹಬ್ಬ (Festival) ವಾಗಿದೆ.  ಹೋಳಿಯ ಆಚರಣೆಯ ಸಂದರ್ಭದಲ್ಲಿ ಎಲ್ಲ ಕಡೆಯೂ ಬಣ್ಣಗಳ ಎರೆಚಾಟ ನಡೆದಿರುತ್ತದೆ. ಮೈ, ಬಟ್ಟೆ, ಕೂದಲುಗಳ ಪರಿವೆಯೇ ಇಲ್ಲದೇ ಎಲ್ಲರೂ ಬಿಂದಾಸ್ ಆಗಿ ಹೋಳಿಯ ಬಣ್ಣದಲ್ಲಿ ಮುಳುಗುತ್ತಾರೆ. ಹೋಳಿ ಹಬ್ಬದ ಮುಗಿದ ಮೇಲೆ ಬಣ್ಣವನ್ನು ತೊಳೆಯುವ ಸಾಹಸ ಯಾರಿಗೂ ಬೇಡ. ಕೆಲವರು ಹೋಳಿಯ ಬಣ್ಣವನ್ನು ಮಸಾಲೆ, ಹೂವು ಮತ್ತು ತರಕಾರಿಗಳಿಂದ ತಯಾರಿಸುತ್ತಾರೆ. ಹೀಗೆ ಮನೆಯಲ್ಲೇ ತಯಾರಿಸಿದ ಬಣ್ಣದಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಬಣ್ಣಗಳು ಕೆಮಿಕಲ್ ನಿಂದ ಕೂಡಿರುತ್ತೆ. ಈ ಕೆಮಿಕಲ್ ಮಿಶ್ರಿತ ಬಣ್ಣದಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ.

Latest Videos

undefined

Holi 2023: ಮದುವೆ ನಂತ್ರ ಮೊದಲ ಹೋಳಿ ಸಂಭ್ರಮ ಹೀಗಿರಲಿ

ಹೋಳಿ ಹಬ್ಬವನ್ನು ಆಚರಿಸುವವರು ಬಣ್ಣ ಬಣ್ಣದ ಪೌಡರ್ ಗಳನ್ನು ಕೊಳ್ಳುತ್ತಾರೆ. ಇದನ್ನು ಪರಸ್ಪರ ಎರಚಿಕೊಂಡಾಗಿ ಅದರಲ್ಲಿರುವ ಕೆಮಿಕಲ್ ನಮ್ಮ ಕೂದಲು, ಚರ್ಮ, ಕಣ್ಣು ಮುಂತಾದವುಗಳಿಗೆ ಹಾನಿಮಾಡಬಹುದು. ಕೆಮಿಕಲ್ ಯುಕ್ತ ಬಣ್ಣವನ್ನು ಕೂದಲು ಮತ್ತು ಚರ್ಮದಿಂದ ತೆಗೆಯುವುದು ಕೂಡ ಸುಲಭದ ಮಾತಲ್ಲ. ಬಣ್ಣಗಳಲ್ಲಿ ಬೆರೆತ ಕೆಮಿಕಲ್ ನಿಂದ ಚರ್ಮದ ರೋಗಗಳು, ಅಲರ್ಜಿ, ಗುಳ್ಳೆ, ತುರಿಕೆ ಮುಂತಾದ ಸಮಸ್ಯೆಗಳು ಕಾಡಬಹುದು. ಬಣ್ಣದಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆ ಎದುರಾಗಬಹುದು. ಪ್ರತಿ ವರ್ಷ ಹೋಳಿ ಹಬ್ಬ ಆಚರಿಸಿದಾಗಲೂ ಈ ಸಮಸ್ಯೆ ಇದ್ದೇ ಇರುತ್ತೆ. ಈ ಸಮಸ್ಯೆಗೆ ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಎಣ್ಣೆಗಳೇ ಪರಿಹಾರವಾಗಿದೆ. ಅವುಗಳನ್ನು ಬಳಸಿಕೊಂಡು ಹೋಳಿಯ ಬಣ್ಣವನ್ನು ಸುಲಭವಾಗಿ ತೆಗೆಯಬಹುದಾಗಿದೆ. ಇದರಿಂದ ನಿಮ್ಮ ಚರ್ಮ ಹಾಗೂ ಕೂದಲಿಗೆ ಉಂಟಾಗುವ ಹಾನಿಯನ್ನು ತಪ್ಪಿಸಬಹುದು.

ತುಪ್ಪ : ತುಪ್ಪವು ಚರ್ಮವನ್ನು ಅಲರ್ಜಿ ಮತ್ತು ದದ್ದುಗಳಿಂದ ಕಾಪಾಡುತ್ತದೆ ಮತ್ತು ಇವುಗಳನ್ನು ಹೈಡ್ರೇಟ್ ಆಗಿರಿಸುತ್ತದೆ. ತುಪ್ಪದಲ್ಲಿರುವ ಲ್ಯಾಕ್ಟಿಕ್ ಎಸಿಡ್ ಚರ್ಮದ ಹೊಳಪು ಮತ್ತು ಮೃದುತನವನ್ನು ಹೆಚ್ಚಿಸುತ್ತದೆ. ತುಪ್ಪವನ್ನು ಸವರಿಕೊಳ್ಳುವುದರಿಂದ ಹೋಳಿಯ ಬಣ್ಣವನ್ನು ಸುಲಭವಾಗಿ ತೆಗೆಯಬಹುದಾಗಿದೆ.

ಸಾಸಿವೆ ಎಣ್ಣೆ : ಸಾಸಿವೆ ಎಣ್ಣೆಯ ಬಳಕೆಯು ತೇವಾಂಶದಿಂದ ಕೂದಲನ್ನು ಸುರಕ್ಷಿತವಾಗಿಡುತ್ತೆ. ಕೂದಲಿನಿಂದ ಬಣ್ಣವನ್ನು ತೆಗೆದ ತಕ್ಷಣವೂ ಕೂದಲು ಹೈಡ್ರೇಟ್ ಮತ್ತು ಹೊಳೆಯುವಂತೆ ಮಾಡುತ್ತದೆ. ಎಣ್ಣೆಯು ದಪ್ಪವಾಗಿರುವುದರಿಂದ ಇದು ಬಣ್ಣದಲ್ಲಿರುವ ರಾಸಾಯನಿಕಗಳಿಂದ ಕೂದಲು ಹಾಳಾಗದಂತೆ ಕಾಪಾಡುತ್ತದೆ.

ಬನಾರಸ್ ನಲ್ಲಿ ಬಣ್ಣಗಳ ಬದಲು ಚಿತಾ ಭಸ್ಮದಿಂದ ಆಚರಿಸ್ತಾರಂತೆ ಹೋಳಿ ಹಬ್ಬ

ತೆಂಗಿನ ಎಣ್ಣೆ : ನೈಸರ್ಗಿಕವಾಗಿ ತಯಾರಾಗುವ ತೆಂಗಿನ ಎಣ್ಣೆಯಲ್ಲಿ ಎಂಟಿಆಕ್ಸಿಡೆಂಟ್ ಗಳು ಹೇರಳವಾಗಿರುತ್ತದೆ. ತೆಂಗಿನೆಣ್ಣೆಗೆ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವಿದೆ. ಇದು ನೈಸರ್ಗಿಕ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯಮಾಡುತ್ತೆ. ತೆಂಗಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣ ಇರುವುದರಿಂದ ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ ಬಣ್ಣಗಳಿಂದ ಉಂಟಾಗುವ ದದ್ದುಗಳಿಂದ ರಕ್ಷಣೆ ಪಡೆಯಬಹುದು. 

ಹೋಳಿ ಹಬ್ಬದಲ್ಲಿ ಸಂತೋಷದಿಂದ ಪಾಲ್ಗೊಳ್ಳುವುದು ಎಷ್ಟು ಮುಖ್ಯವೋ ನಮ್ಮ ಆರೋಗ್ಯದ ಕಡೆಗೆ ಲಕ್ಷ್ಯವಹಿಸುವುದು ಕೂಡ ಅಷ್ಟೇ ಮುಖ್ಯ. ಕೆಮಿಕಲ್ ಮಿಶ್ರಿತ ಬಣ್ಣದಿಂದ ನಮ್ಮ ಶರೀರಕ್ಕೆ ಯಾವುದೇ ಹಾನಿಯಾಗದಂತೆ ನಿಗಾವಹಿಸುವುದು ಉತ್ತಮ.
 

click me!