ಆರೋಗ್ಯ ಟ್ರ್ಯಾಕ್ ಮಾಡಲು Smart Watch ಬಳಸಿ ಆಸ್ಪತ್ರೆ ಸೇರಿದ ಯುವಕ!

By Suvarna News  |  First Published Mar 8, 2023, 3:25 PM IST

ಈಗ ಎಲ್ಲರ ಕೈಗೂ ಸ್ಮಾರ್ಟ್ ವಾಚ್ ಲಗ್ಗೆಯಿಟ್ಟಿದೆ. ಪ್ರತಿಯೊಬ್ಬರೂ ಇದ್ರಲ್ಲಿ ತಮ್ಮ ಆರೋಗ್ಯವನ್ನು ಟ್ರ್ಯಾಕ್ ಮಾಡ್ತಾರೆ. ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಈ ವಾಚ್ ನಮ್ಮ ಆರೋಗ್ಯವನ್ನು ಹದಗೆಡಿಸುತ್ತೆ ಕೂಡ. ಅದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ.
 


ಹಿಂದೆ ಸಮಯ ನೋಡಲು ಮಾತ್ರ ವಾಚ್ ಸೀಮಿತವಾಗಿತ್ತು. ಆದ್ರೀಗ ಜನರು ಈ ವಾಚ್ ನಲ್ಲಿ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ತಿಳಿಯಬಹುದು. ಬಿಪಿಯಿಂದ ಹಿಡಿದು ಹೃದಯಬಡಿತ ಹೇಗಿದೆ ಎನ್ನುವವರೆಗೆ ಅನೇಕ ವಿಷ್ಯಗಳನ್ನು ನಾವು ವಾಚ್ ನಲ್ಲಿ ಪಡೆಯಬಹುದು. ಇದೆಲ್ಲವೂ ಸ್ಮಾರ್ಟ್ ವಾಚ್ ನಲ್ಲಿ ಲಭ್ಯವಿದೆ.  ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಮಾರ್ಟ್ ವಾಚ್ ಬಳಸಲು ಇಷ್ಟಪಡುತ್ತಾರೆ.  ಫಿಟ್‌ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಜನರು ಸದಾ ಸ್ಮಾರ್ಟ್ ವಾಚ್ ಕಟ್ಟಿರುತ್ತಾರೆ. ಅನೇಕರು ರಾತ್ರಿ ಕೂಡ ವಾಚ್ ಕಟ್ಟಿ ಮಲಗುತ್ತಾರೆ. 

ಮಾರುಕಟ್ಟೆ (Market) ಗೆ ನಾನಾ ಕಂಪನಿಯ ಸ್ಮಾರ್ಟ್ ವಾಚ್‌ (Smart Watch) ಗಳು ಲಗ್ಗೆಯಿಟ್ಟಿವೆ. ಆದ್ರೆ ಈ ಸ್ಮಾರ್ಟ್ ಎಷ್ಟು ವೈಶಿಷ್ಟ್ಯತೆಯನ್ನು ಹೊಂದಿದೆಯೋ ಅಷ್ಟೇ ಅಪಾಯವೂ ಆಗಬಹುದು. ಈ  ಬಗ್ಗೆ ವೈದ್ಯ (Doctor) ರು ಎಚ್ಚರಿಸಿದ್ದಾರೆ. ಸ್ಮಾರ್ಟ್ ವಾಚ್‌ಗಳು ಜನರ ಮಾನಸಿಕ ಸ್ಥಿತಿ ಮೇಲೆ ಪರಿಣಾಮಬೀರಬಹುದು ಎಂದು ವೈದ್ಯರು ಹೇಳಿದ್ದಾರೆ. ಆಶ್ಚರ್ಯವೆನ್ನಿಸಿದ್ರೂ ಇದು ಸತ್ಯ.

Latest Videos

undefined

ಎಚ್‌3ಎನ್‌2 ಕೂಡ ಕೋವಿಡ್‌ ರೀತಿಯಲ್ಲೇ ಹಬ್ಬುತ್ತೆ: ತಜ್ಞರ ಎಚ್ಚರಿಕೆ

ಸ್ಮಾರ್ಟ್ ವಾಚ್ ಧರಿಸಿ ಸಮಸ್ಯೆ ತಂದುಕೊಂಡ ಯುವಕ :  ಸ್ಮಾರ್ಟ್ ವಾಚ್‌ನ ಅಡ್ಡಪರಿಣಾಮಗಳಿಗೆ ಸಂಬಂಧಿಸಿದ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ. 27 ವರ್ಷದ ಸ್ವಿಸ್-ಜರ್ಮನ್ ಮೂಲದ ವ್ಯಕ್ತಿಯೊಬ್ಬ ಇದಕ್ಕೆ ಬಲಿಯಾಗಿದ್ದಾನೆ.  ಈ ವ್ಯಕ್ತಿಗೆ ಮೊದಲು ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ಆದರೆ ಸ್ಮಾರ್ಟ್ ವಾಚ್‌ನಿಂದಾಗಿ ಆತ ಒತ್ತಡಕ್ಕೆ ಒಳಗಾಗಿದ್ದ. ಆತಂಕವನ್ನು ಎದುರಿಸುತ್ತಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ. ಯುವಕ ಕೈಗೆ ಕಟ್ಟಿದ್ದ ಸ್ಮಾರ್ಟ್ ವಾಚ್ ನ ಮೂಲಕ ಎಲೆಕ್ಟ್ರೋಕಾರ್ಡಿಯೋಗ್ರಾಮ್ (Electrocardiogram) ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದ್ದ.  

ಸ್ಮಾರ್ಟ್ ವಾಚ್ ನಲ್ಲಿ ಹೃದಯದಲ್ಲಿ ರಕ್ತದ ಹರಿವು ಕಡಿಮೆಯಾದಂತೆ ಕಾಣಿಸಿದೆ. ಇದು ಯುವಕನ ಆತಂಕ ಹೆಚ್ಚಿಸಿದೆ. ನನಗೆ ಹೃದಯಾಘಾತವಾಗುವ ಸಾಧ್ಯತೆಯಿದೆ ಎನ್ನುವ ಭಯದಲ್ಲಿ ಯುವಕ ಆಸ್ಪತ್ರೆಗೆ ಬಂದಿದ್ದಾನೆ. ಸ್ಮಾರ್ಟ್ ವಾಚ್‌ನ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಇಸಿಜಿ ನಿಖರವಾಗಿ ಒಂದೇ ಮಾಹಿತಿಯನ್ನು ನೀಡಿತ್ತು. ಆದ್ರೆ ವ್ಯಕ್ತಿಗೆ ಯಾವುದೇ ಹೃದಯ ಸಮಸ್ಯೆ ಇರಲಿಲ್ಲ. ವ್ಯಕ್ತಿ ಸಂಪೂರ್ಣವಾಗಿ ಆರೋಗ್ಯವಾಗಿದ್ದ. ಭಯದಲ್ಲಿಯೇ ಆತನಿಗೆ ಎದೆನೋವು ಕಾಣಿಸಿಕೊಂಡಿತ್ತು. ಆತನನ್ನು ದೀರ್ಘ ಸಮಯದವರೆಗೆ ಮನವೊಲಿಸಿದ ವೈದ್ಯರು, ಆರೋಗ್ಯವಾಗಿರುವ  ಭರವಸೆ ನೀಡಿ ಮನೆಗೆ ಕಳುಹಿಸಿದ್ರು. 

ಕಿಡ್ನಿಗೆ ಸಂಬಂಧಿಸಿದ ಈ ರೋಗ ಆರಂಭದಲ್ಲೇ ಗುರುತಿಸಿಲ್ಲಾಂದ್ರೆ ಅಪಾಯ ಹೆಚ್ಚು

ಮೆಡಿಕಲ್ ಕೇಸ್ ರಿಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಡ್ಯಾನಿಶ್ ಫುಟ್‌ಬಾಲ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಪಂದ್ಯದ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಈ ವಿಶ್ವ ತಿಳಿದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ತನ್ನ ಹೃದಯದ ಆರೋಗ್ಯವನ್ನು ಪತ್ತೆಹಚ್ಚಲು ಸ್ಮಾರ್ಟ್ ವಾಚ್ ಖರೀದಿಸಿದ್ದನಂತೆ. ಫುಟ್ಬಾಲ್ ಆಟಗಾರನ ಪ್ರಕರಣವನ್ನು ವಿದ್ಯಾರ್ಥಿ ತುಂಬಾ ಗಂಭೀರವಾಗಿ ಪರಿಗಣಿಸಿದ್ದ. ಇದು ವಿದ್ಯಾರ್ಥಿಯ ಚಿಂತೆ ಹೆಚ್ಚಿಸಿತ್ತು. ಸ್ಮಾರ್ಟ್ ವಾಚ್ ಮೂಲಕ ತಮ್ಮ ಹೃದಯದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದ್ದ. ಸ್ಮಾರ್ಟ್‌ವಾಚ್‌ನಲ್ಲಿರುವ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾನಿಟರ್‌ನಲ್ಲಿ ಹೃದಯಾಘಾತದ ಸೂಚನೆ ಹೇಗೆ ಸಿಗುತ್ತದೆ ಎನ್ನುವ ಬಗ್ಗೆ ಆತ ಗೂಗಲ್ ಸರ್ಚ್ ಮಾಡಿ ತಿಳಿದುಕೊಂಡಿದ್ದ. ವಾಚ್ ನಲ್ಲಿ ಸ್ವಲ್ಪ ಏರುಪೇರು ಕಾಣಿಸಿಕೊಂಡ ಕಾರಣ ವಿದ್ಯಾರ್ಥಿ  ತೀವ್ರ ಭಯಗೊಂಡಿದ್ದ. ಆತಂಕದ ಲಕ್ಷಣ ಆತನಲ್ಲಿ ಗೋಚರಿಸಿತ್ತು.  ತುರ್ತು ವಿಭಾಗದಲ್ಲಿ ಆತನ ಪರೀಕ್ಷೆ ನಡೆದಿತ್ತು. ಆದ್ರೆ ಹೃದಯಕ್ಕೆ  ಸಂಬಂಧಿಸಿದ ಯಾವುದೇ ಸಮಸ್ಯೆ ಆತನಿಗಿರಲಿಲ್ಲ. 

ಸ್ಮಾರ್ಟ್ ವಾಚ್ ಬಳಸುವುದು ಅಪಾಯಕಾರಿಯೇ? :  ಸ್ಮಾರ್ಟ್ ವಾಚ್‌ ಅಪಾಯಕಾರಿಯೇ ಎನ್ನುವ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ.  ಇದು ತೂಕ ಹೆಚ್ಚಾಗಲು ಕಾರಣವಾಗಬಹುದು ಎಂದು ಕೆಲವರು ವಾದಿಸುತ್ತಾರೆ. ಒಂದು ವರ್ಷದವರೆಗೆ ಸ್ಮಾರ್ಟ್ ವಾಚ್ ಧರಿಸಿದ್ದ ಜನರ  ತೂಕ ಅಥವಾ ರಕ್ತದೊತ್ತಡದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ ಎಂದು 2016 ರಲ್ಲಿ ಪ್ರಕಟವಾದ ಪತ್ರಿಕೆ ವರದಿಯೊಂದು ಹೇಳಿತ್ತು. ದಿ ಲ್ಯಾನ್ಸೆಟ್ ವರದಿಯ ಪ್ರಕಾರ, ಟ್ರ್ಯಾಕರ್‌ಗಳ ವೈಶಿಷ್ಟ್ಯದ ಹೊರತಾಗಿಯೂ ಸ್ಮಾರ್ಟ್‌ವಾಚ್‌ಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದಕ್ಕೆ ಕಡಿಮೆ ಪುರಾವೆಗಳಿವೆ.
 

click me!