ವಿಟಮಿನ್ ಡಿ ಕೊರತೆ ಸಾಮಾನ್ಯವಾಗಿ ಉಂಟಾಗುವಂಥದ್ದು.ಆದರೆ, ಈ ಕೊರತೆಯ ಪರಿಹಾರಕ್ಕೆ ಮಾತ್ರೆಗಳನ್ನು ದೀರ್ಘಕಾಲ ತೆಗೆದುಕೊಳ್ಳುವುದರಿಂದ ಅಥವಾ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಡಿ ಅಧಿಕವಾಗಬಹುದು. ಆಗಲೂ ಹಲವು ಸಮಸ್ಯೆಗಳು ಉಂಟಾಗುತ್ತವೆ.
ನಾವು ಆರೋಗ್ಯವಾಗಿರಲು ಹಲವಾರು ಪೋಷಕಾಂಶಗಳು ಅಗತ್ಯ. ಯಾವೊಂದು ಪೋಷಕಾಂಶದ ಕೊರತೆಯಾದರೂ ಕಷ್ಟ, ಹೆಚ್ಚಾದರೂ ಸಮಸ್ಯೆ ತಪ್ಪಿದ್ದಲ್ಲ. ಅಂತಹ ಪೋಷಕಾಂಶಗಳಲ್ಲಿ ವಿಟಮಿನ್ ಡಿ ಕೂಡ ಒಂದು. ವಿಟಮಿನ್ ಬಿ ೧೨ ನಂತೆಯೇ ವಿಟಮಿನ್ ಡಿ ಕೊರತೆಯಾಗುವುದು ಸಾಮಾನ್ಯ. ಬಹಳಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತದೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗುವುದು ನಿಮಗೆ ಗೊತ್ತೇ ಇದೆ. ಆಯಾಸ, ಕೂದಲು ಉದುರುವಿಕೆ, ಮಧುಮೇಹ, ಬೊಜ್ಜು ಸೇರಿದಂತೆ ಹಲವು ದೀರ್ಘಕಾಲಿಕ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ, ಅದರ ಬಗ್ಗೆ ನಿಗಾ ಇಡುವುದು ಅಗತ್ಯ. ಹಾಗೆಯೇ, ವಿಟಮಿನ್ ಡಿ ಪೋಷಕಾಂಶ ದೇಹದಲ್ಲಿ ಅಧಿಕವಾದರೂ ಸಮಸ್ಯೆ ತಪ್ಪಿದ್ದಲ್ಲ. ಇದು ಅಪರೂಪದ ಸಮಸ್ಯೆಯಾದರೂ ಇಂಥದ್ದೊಂದು ಸ್ಥಿತಿ ನಿರ್ಮಾಣವಾಗುವುದಿದೆ. ಇದನ್ನು ಹೈಪರ್ ವಿಟಮಿನೊಸಿಸ್ ಡಿ ಎಂದು ಕರೆಯಲಾಗುತ್ತದೆ. ವಿಟಮಿನ್ ಡಿ ಟಾಕ್ಸಿಸಿಟಿ ಎಂದೂ ಹೇಳಲಾಗುತ್ತದೆ.
ಅತ್ಯಧಿಕ ವಿಟಮಿನ್ ಡಿ (Vitamin D) ಅಂಶ ದೇಹದಲ್ಲಿರುವುದು (Body) ಆರೋಗ್ಯಕ್ಕೆ (Health) ಪೂರಕವಲ್ಲ. ಹಾಗೆಂದು ಇದು ಸೂರ್ಯನ ಬೆಳಕಿಗೆ (Sun Light) ಹೆಚ್ಚು ಒಡ್ಡಿದರೆ, ಆಹಾರದ (Food) ಮೂಲಕ ಹೆಚ್ಚಾಗುವುದೇ ಇಲ್ಲ. ವಿಟಮಿನ್ ಡಿ ಮಾತ್ರೆಗಳಿಂದ ಇದು ಉಂಟಾಗಬಹುದು. ಆಹಾರದ ಮೂಲಕ ಹೆಚ್ಚು ಪ್ರಮಾಣದ ವಿಟಮಿನ್ ಡಿ ದೇಹ ಸೇರುವುದಿಲ್ಲ. ಇನ್ನು, ಸೂರ್ಯನ ಬೆಳಕಿನಿಂದ ಪಡೆಯುವ ವಿಟಮಿನ್ ಡಿ ಅನ್ನು ದೇಹ ತಾನೇ ನಿಯಂತ್ರಿಸಿಕೊಳ್ಳುತ್ತದೆ. ಹೀಗಾಗಿ, ಮಾತ್ರೆಗಳ ಅಧಿಕ ಸೇವನೆ ಒಳ್ಳೆಯದಲ್ಲ.
ವಿಟಮಿನ್ ಡಿ, ವಯಸ್ಸಾದವರಲ್ಲಿ ಹೃದಯಾಘಾತ ತಡೆಯಬಹುದು; ಅಧ್ಯಯನದಿಂದ ಮಾಹಿತಿ
• ವಾಕರಿಕೆ (Vomiting) ಮತ್ತು ತಲೆಸುತ್ತುವುದು
ವಿಟಮಿನ್ ಡಿ ಮಾತ್ರೆಗಳ ಪ್ರಮಾಣ ಹೆಚ್ಚಾದರೆ ದಿನವೂ ಬೆಳಗ್ಗೆ ಏಳುವ ಹೊತ್ತಿಗೆ ವಾಕರಿಕೆ ಉಂಟಾಗುತ್ತದೆ. ತಲೆ ಸುತ್ತು ಬರುವುದೂ ಉಂಟು. ಒಂದೊಮ್ಮೆ ವಿಟಮಿನ್ ಡಿ ಕೊರತೆ (Deficiency) ಇದ್ದರೆ ವೈದ್ಯರು ಮಾತ್ರೆಯ (Tablets) ಸಲಹೆ ನೀಡಿದರೆ ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುತ್ತ ಕೊರತೆ ನಿವಾರಣೆಯಾಗುತ್ತಿದ್ದಂತೆಯೇ ಮಾತ್ರೆ ನಿಲ್ಲಿಸಿ. ಮತ್ತು ಆಹಾರ, ಸೂರ್ಯರಶ್ಮಿಯ ಮೂಲಕ ವಿಟಮಿನ್ ಡಿ ದೊರೆಯುವಂತೆ ನೋಡಿಕೊಳ್ಳುವುದು ಉತ್ತಮ.
• ಆಹಾರ ತಿನ್ನುವ ಬಯಕೆಯಿಲ್ಲ (Lack of Appetite)
ನಿಮಗೆ ಹಸಿವಾಗದಿರುವ ಹಾಗೂ ಆಹಾರ ಸೇವನೆ ಮಾಡದಿರುವ ಸಮಸ್ಯೆ ಉಂಟಾಗಿದ್ದರೆ ವಿಟಮಿನ್ ಡಿ ಮಟ್ಟವನ್ನು (Level) ಗಮನಿಸುವುದು ಸೂಕ್ತ. ಮಾತ್ರೆಗಳ ಸೇವನೆ ಹೆಚ್ಚಾದಾಗ ಈ ಸಮಸ್ಯೆ ಸಾಮಾನ್ಯ.
Iron Deficiency: ಅಮೆರಿಕಾ ಹುಡ್ಗೀರನ್ನೂ ಬಿಡದ ಈ ಕಾಯಿಲೆ ನಮ್ಮನ್ ಬಿಡುತ್ತಾ
• ಕ್ಯಾಲ್ಸಿಯಂ ಕಟ್ಟುವಿಕೆ (Calcium Build)
ರಕ್ತದಲ್ಲಿ (Blood) ಕ್ಯಾಲ್ಸಿಯಂ ನಿರ್ಮಾಣವಾಗುವುದರಿಂದ ದೌರ್ಬಲ್ಯದ ಸಮಸ್ಯೆ ಕಾಡುತ್ತದೆ. ಹೈಪರ್ ಕ್ಯಾಲ್ಸಿಮಿಯ ಎನ್ನಲಾಗುವ ಈ ಸಮಸ್ಯೆಯಿಂದ ಪದೇ ಪದೆ ಮೂತ್ರ (Urine) ವಿಸರ್ಜಿಸುವಂತೆ ಆಗುತ್ತದೆ. ವಿಟಮಿನ್ ಡಿ ಹೆಚ್ಚಳದಿಂದ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದರೆ ಅದನ್ನು ಕರಗಿಸಲು ಸ್ಟಿರಾಯ್ಡ್ ಗಳ ಮೂಲಕ ಚಿಕಿತ್ಸೆ (Treatment) ನೀಡಲಾಗುತ್ತದೆ. ಇದೂ ಸಹ ಆರೋಗ್ಯಕ್ಕೆ ಅಪಾಯಕಾರಿ. ಹೀಗಾಗಿ, ವೈದ್ಯರು ಶಿಫಾರಸು ಮಾಡಿದ್ದಾರೆಂದು ವರ್ಷಾನುಗಟ್ಟಲೆ ವಿಟಮಿನ್ ಡಿ ಮಾತ್ರೆಗಳನ್ನು ಸೇವಿಸುವ ಮುನ್ನ ಕಾಲಕಾಲಕ್ಕೆ ಸೂಕ್ತ ತಪಾಸಣೆ ಮಾಡಿಸಿಕೊಳ್ಳಿ.
• ಕಿಡ್ನಿ (Kidney) ಸಮಸ್ಯೆ
ಹೈಪರ್ ಕ್ಯಾಲ್ಸಿಮಿಯಾದಿಂದ ಕಿಡ್ನಿಗಳಿಗೆ ಸಮಸ್ಯೆ ಉಂಟಾಗುವುದು ನಿಶ್ಚಿತ. ಇದರಿಂದಾಗಿ ಕಿಡ್ನಿಯಲ್ಲಿ ಕಲ್ಲುಗಳು (Stones) ರಚನೆಯಾಗುತ್ತವೆ. ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುವುದನ್ನು ನೆಫ್ರೊಕ್ಯಾಲ್ಸಿನೊಸಿಸ್ ಎನ್ನಲಾಗುತ್ತದೆ. ಇದು ಕ್ರಮೇಣ ಕಿಡ್ನಿಯ ವೈಫಲ್ಯಕ್ಕೂ (Failure) ಕಾರಣವಾಗಬಹುದು.
Health Tips: ರಾತ್ರಿ ಲೇಟ್ ಊಟ, ತಕ್ಕದ ನಿದ್ರೆ, ಖತರ್ನಾಕ್ ಖಾಯಿಲೆಗೆ ಆಹ್ವಾನ!
• ಮೂಳೆಗಳಿಗೂ (Bones) ಮಾರಕ
ಮೂಳೆಗಳ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಅಗತ್ಯ. ಆದರೆ, ಇದರ ಪ್ರಮಾಣ ಹೆಚ್ಚಾದರೆ ಮೂಳೆಗಳಿಗೆ ಮಾರಕವಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ವಿಟಮಿನ್ ಡಿ ಅಧಿಕವಾಗುವುದರಿಂದ ವಿಟಮಿನ್ ಕೆ2 ಎನ್ನುವ ಪೋಷಕಾಂಶದ ಕಾರ್ಯಕ್ಕೆ ಅಡೆತಡೆಯುಂಟಾಗುತ್ತದೆ. ಈ ವಿಟಮಿನ್ ಕೆ2 ಮೂಳೆಗಳಲ್ಲಿ ಕ್ಯಾಲ್ಸಿಯಂ ನಿಯಂತ್ರಣಕ್ಕೆ ಅಗತ್ಯ.