ಕ್ಯಾನ್ಸರ್ ಅಪಾಯಕಾರಿ ರೋಗಗಳಲ್ಲಿ ಒಂದು. ಅನೇಕ ಕ್ಯಾನ್ಸರ್ ಗೆ ಸರಿಯಾದ ಔಷಧಿ ನಮ್ಮಲ್ಲಿಲ್ಲ. ಕ್ಯಾನ್ಸರ್ ಗೆ ಜಾತಿ, ಮತಗಳ ಬೇಧವಿಲ್ಲ. ಆದ್ರೆ ಶ್ರೀಮಂತರಿಗೆ ಈ ಒಂದು ಕ್ಯಾನ್ಸರ್ ಹೆಚ್ಚಾಗಿ ಕಾಡುತ್ತೆ. ಅದಕ್ಕೆ ಕಾರಣವೇನು ಗೊತ್ತಾ?
ಕ್ಯಾನ್ಸರ್ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ಬ್ರೇನ್ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಹೀಗೆ ಅನೇಕ ಕ್ಯಾನ್ಸರ್ ದಾಳಿ ಇಡುತ್ತಿದೆ. ಚರ್ಮದ ಕ್ಯಾನ್ಸರ್ ಸಂಖ್ಯೆ ಕೂಡ ವೇಗವಾಗಿ ಹೆಚ್ಚಾಗಿದೆ. ಈ ಚರ್ಮದ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ. ಒಂದು ಸಂಶೋಧನೆಯಲ್ಲಿ ಚರ್ಮದ ಕ್ಯಾನ್ಸರ್ ಶ್ರೀಮಂತರಿಗೆ ಬರಲು ಕಾರಣವೇನು ಎಂಬುದನ್ನು ಪತ್ತೆ ಮಾಡಲಾಗಿದೆ.
ಮೆಕ್‌ಗಿಲ್ (McGill) ವಿಶ್ವವಿದ್ಯಾನಿಲಯ ಚರ್ಮದ ಕ್ಯಾನ್ಸರ್ (Skin Cancer) ಬಗ್ಗೆ ಅಧ್ಯಯನ ನಡೆದಿದೆ. ಅಧ್ಯಯನದ ವರದಿಯಲ್ಲಿ ಅಟ್ಲಾಂಟಿಕ್ ಪ್ರದೇಶ ಮತ್ತು ಕೆನಡಾದಲ್ಲಿ ವಾಸಿಸುವ ಜನರು ಮೆಲನೋಮಾ ಅಂದರೆ ಚರ್ಮದ ಕ್ಯಾನ್ಸರ್ ಗೆ ಹೆಚ್ಚು ಒಳಗಾಗ್ತಾರೆ ಎಂಬ ಸೂಚನೆಯನ್ನು ನೀಡಲಾಗಿದೆ. ಮೆಲನೋಮಾ ಮಾರಣಾಂತಿಕ ಮತ್ತು ಅಪಾಯಕಾರಿ ರೀತಿಯ ಕ್ಯಾನ್ಸರ್ ಆಗಿದ್ದು, ಅದು ಚರ್ಮದ ಮೇಲೆ ದಾಳಿ ಮಾಡುತ್ತದೆ.
undefined
HEALTH TIPS: ಜೀವನದಲ್ಲಿ ಎಂದಿಗೂ ಇವುಗಳನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲೇಬೇಡಿ
ಈ ಪ್ರದೇಶದಲ್ಲಿ ಹೆಚ್ಚಾಗಿದೆ ಚರ್ಮದ ಕ್ಯಾನ್ಸರ್ : ಪ್ರಪಂಚದಾದ್ಯಂತ ಚರ್ಮದ ಕ್ಯಾನ್ಸರ್ ಅಪಾಯವು ವೇಗವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನವು ಹೇಳುತ್ತದೆ. ವಿಶೇಷವಾಗಿ ಕೆನಡಾ (Canada) ಮತ್ತು ಅಟ್ಲಾಂಟಿಕ್ ಪ್ರದೇಶದಲ್ಲಿ ವಾಸಿಸುವ ಜನರು ಅತಿ ವೇಗದಲ್ಲಿ ಇದಕ್ಕೆ ತುತ್ತಾಗುತ್ತಿದ್ದಾರೆ. ಕೆನಡಾದಲ್ಲಿ ಮೂವರಲ್ಲಿ ಒಬ್ಬರಿಗೆ ಚರ್ಮದ ಕ್ಯಾನ್ಸರ್ ಬರುವ ಅಪಾಯವಿದೆ. ಇಲ್ಲಿನ ಜನರಿಗೇ ಹೆಚ್ಚು ಅಪಾಯವಿರಲು ಕಾರಣವೇನು ಎಂಬುದನ್ನು ಪತ್ತೆ ಮಾಡುವ ಕೆಲಸ ಕೂಡ ನಡೆದಿದೆ. ಕೆನಡಾ ಮತ್ತು ಅಟ್ಲಾಂಟಿಕ್ ಪ್ರದೇಶದ ಜನರ ನಡವಳಿಕೆ, ಜೀವನ ಮಟ್ಟ, ಆದಾಯ ಎಲ್ಲವೂ ಇಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಊಟ ಆದ ಕೂಡಲೇ ಹೊಟ್ಟೆ ಉಬ್ಬರಿಸಿದರೆ ಈ ತಪ್ಪು ಮಾಡ್ತೀರುತ್ತೀರೆಂದರ್ಥ!
ಹೆಚ್ಚು ಶ್ರೀಮಂತರನ್ನು ಕಾಡ್ತಿದೆ ಚರ್ಮದ ಕ್ಯಾನ್ಸರ್ : ಅಧ್ಯಯನದಲ್ಲಿ ಶ್ರೀಮಂತರನ್ನೇ ಚರ್ಮದ ಕ್ಯಾನ್ಸರ್ ಹೆಚ್ಚು ಕಾಡಲು ಕಾರಣವೇನು ಎಂಬ ಬಗ್ಗೆ ಮಾಹಿತಿ ಪತ್ತೆ ಮಾಡಲಾಗಿದೆ. ಶ್ರೀಮಂತರು ಹೊರಗಿನ ಬಿಸಿಲಿಗೆ ತಮ್ಮನ್ನು ನಾವು ಹೆಚ್ಚು ಒಡ್ಡಿಗೊಳ್ತಾರೆ ಎಂಬುದು ಗೊತ್ತಾಗಿದೆ. ಅಂದ್ರೆ ಸಮುದ್ರ ಪ್ರದೇಶಗಳಲ್ಲಿ ಟ್ಯಾನಿಂಗ್ ಹಾಸಿಗೆ ಮೇಲೆ ಶ್ರೀಮಂತರು ಮಲಗೋದು ಹೆಚ್ಚು. ತಮ್ಮನ್ನು ತಾವು ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವ ಅವರು, ಯುವಿ ಕಿರಣಗಳಿಂದ ಚರ್ಮದ ಕ್ಯಾನ್ಸರ್ ಗೆ ಒಳಗಾಗ್ತಾರೆಂದು ಅಧ್ಯಯನದಲ್ಲಿ ಬಹಿರಂಗಪಡಿಸಲಾಗಿದೆ. ಪ್ರತಿ ವರ್ಷ 50 ಸಾವಿರ ಡಾಲರ್ ಗಿಂತಲೂ ಹೆಚ್ಚು ಸಂಪಾದನೆ ಮಾಡುವ ಜನರು ಹೊರಾಂಗಣ ಕಾರ್ಯಕ್ರಮ, ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ತಾರೆ. ಸದಾ ಹೊರಗೆ ಇರುವ ಕಾರಣ ಸೂರ್ಯ ಹಾಗೂ ನೇರಳಾತೀತ ಕಿರಣದ ಸಂಪರ್ಕಕ್ಕೆ ಅವರು ಹೆಚ್ಚಾಗಿ ಬರ್ತಾರೆ. ಇದ್ರಿಂದ ಕ್ಯಾನ್ಸರ್ ಗೆ ತುತ್ತಾಗ್ತಾರೆ ಎಂದ ತಜ್ಞರು, ಜನರು ಟ್ಯಾನಿಂಗ್ ಹಾಸಿಗೆ ಮೇಲೆ ಮಲಗೋದನ್ನು ಕಡಿಮೆ ಮಾಡಬೇಕೆಂದಿದ್ದಾರೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲ ಪುರುಷರು, ಮಹಿಳೆಯರು ಮತ್ತು ಬಣ್ಣದ ವಿಷ್ಯದಲ್ಲೂ ಅಧ್ಯಯನ ನಡೆದಿದೆ. ಮಹಿಳೆಯರಿಗಿಂತ ಪುರುಷರು ಹಾಗೇ ಬೆಳ್ಳಿಗರುವ ಪುರುಷರು ಹೆಚ್ಚು ಕ್ಯಾನ್ಸರ್ ಗೆ ಒಳಗಾಗ್ತಾರೆಂದು ಅಧ್ಯಯನದಲ್ಲಿ ಪತ್ತೆಯಾಗಿದೆ.
ಮೆಲನೋಮ ಕ್ಯಾನ್ಸರ್ ಅಂದ್ರೇನು? : ಮೆಲನೋಮ ಚರ್ಮದ ಕ್ಯಾನ್ಸರ್ ನ ಮಾರಣಾಂತಿಕ ರೂಪವಾಗಿದೆ. ಮೆಲನೋಮವು ನಿಮ್ಮ ಚರ್ಮಕ್ಕೆ ಬಣ್ಣವನ್ನು ನೀಡುವ ಜೀವಕೋಶಗಳಲ್ಲಿ ಬೆಳವಣಿಗೆಯಾಗುತ್ತದೆ. ಮೆಲನೋಮವು ನಿಮ್ಮ ಕಣ್ಣುಗಳಲ್ಲಿ ಮತ್ತು ಅಪರೂಪವಾಗಿ ನಿಮ್ಮ ಮೂಗು ಅಥವಾ ಗಂಟಲಿನಲ್ಲಿ ಕೂಡ ರೂಪುಗೊಳ್ಳಬಹುದು. ಮೆಲನೋಮ ಅತ್ಯಂತ ವೇಗವಾಗಿ ಹರಡುವ ಕ್ಯಾನ್ಸರ್ ಆಗಿದೆ. ಮಹಿಳೆಯರ ಹೆಚ್ಚಿನ ಈಸ್ಟ್ರೊಜೆನ್ ಮಟ್ಟಗಳು ಚರ್ಮದ ರಕ್ಷಣೆಯನ್ನು ನೀಡುವ ಕಾರಣ, ಪುರಷರಿಗಿಂತ ಮಹಿಳೆಯರಿಗೆ ಇದ್ರ ಅಪಾಯ ಕಡಿಮೆ.