ಹೃದಯಾಘಾತ ಪ್ರಕರಣಗಳು ಹೆಚ್ಚಾಗ್ತಿದ್ದಂತೆ ಜನರು ಫಿಟ್ನೆಸ್ ಗೆ ಮಹತ್ವ ನೀಡ್ತಿದ್ದಾರೆ. ಆದ್ರೆ ಜಿಮ್ ನಲ್ಲೇ ಹೃದಯಾಘಾತವಾಗ್ತಿರುವ ಪ್ರಕರಣ ಅವರನ್ನು ಆತಂಕಗೊಳಿಸಿದೆ. ಯಾವ ವ್ಯಾಯಾಮದ ನಂತ್ರ ಯಾವ ವ್ಯಾಯಾಮ ಮಾಡಿದ್ರೆ ಸೂಕ್ತ ಎಂಬ ನಾನಾ ಪ್ರಶ್ನೆ ಅವರ ತಲೆಯಲ್ಲಿದೆ.
ಜಿಮ್, ತೂಕ ಇಳಿಕೆ, ಕಾರ್ಡಿಯೋ ವ್ಯಾಯಾಮ ಇದ್ರ ಬಗ್ಗೆ ಜನರಲ್ಲಿ ಅನೇಕ ಗೊಂದಲಗಳಿವೆ. ಕಾರ್ಡಿಯೋ ವ್ಯಾಯಾಮವನ್ನು ತೂಕ ಎತ್ತುವ ವ್ಯಾಯಾಮದ ನಂತ್ರ ಮಾಡಬೇಕೇ ಅಥವಾ ಮೊದಲು ಮಾಡಬೇಕೇ ಎಂಬ ಪ್ರಶ್ನೆ ಅನೇಕರನ್ನು ಕಾಡುವುದಿದೆ. ನೀವು ಈ ಪ್ರಶ್ನೆಗೆ ಎಲ್ಲರಿಂದ ಒಂದೇ ಉತ್ತರ ಪಡೆಯಲು ಸಾಧ್ಯವಿಲ್ಲ. ಯಾಕೆಂದ್ರೆ ನಿಮ್ಮ ಉದ್ದೇಶವೇನು ಎಂಬುದರ ಮೇಲೆ ನೀವು ಯಾವಾಗ, ಯಾವ ವ್ಯಾಯಾಮ ಮಾಡಬೇಕು ಎಂಬುದು ಮುಖ್ಯವಾಗುತ್ತದೆ. ನೀವು ತೂಕ ಇಳಿಕೆಗೆ ವ್ಯಾಯಾಮ ಮಾಡ್ತಿದ್ದರೆ ಬೇರೆ ವಿಧಾನ ಅನುಸರಿಸಬೇಕು. ಕೊಬ್ಬು ಇಳಿಸಲು ವ್ಯಾಯಾಮ ಮಾಡ್ತಿದ್ದರೆ ಹಾಗೂ ಟೋನ್ಡ್ ಗೆ ವ್ಯಾಯಾಮ ಮಾಡ್ತಿದ್ದರೆ ಇದು ಬೇರೆಯಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕಂಡೀಷನಿಂಗ್ ಕೋಚ್ ಬಸು ಶಂಕರ್ ಪ್ರಕಾರ, ಮಧ್ಯಂತರ ತರಬೇತಿ ನಂತ್ರ ವೇಟ್ ಟ್ರೈನಿಂಗ್ ಹೆಚ್ಚು ಕೊಬ್ಬು ಕರಗಿಸುತ್ತದೆ ಎಂಬುದು ಖಂಡಿತವಾಗಿಯೂ ಇಲ್ಲ ಎಂದಿದ್ದಾರೆ.
ತೂಕ (Weight) ಎತ್ತುವ ವ್ಯಾಯಾಮದ ನಂತರ ಮಧ್ಯಂತರ ತರಬೇತಿ ಅಥವಾ ಕಾರ್ಡಿಯೋ (Cardio) ಕೂಡ ನಿಮ್ಮನ್ನು ಕ್ಯಾಟಬಾಲಿಸಮ್ ಸ್ಥಿತಿಗೆ ತರುತ್ತದೆ. ಇದರಿಂದ ನೀವು ಕೊಬ್ಬನ್ನು ಕಳೆದುಕೊಳ್ಳಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ. ಒಂದು ರಚನಾತ್ಮಕ ಹಾಗೂ ಕೇಂದ್ರೀಕರಿಸಿದ ಆಹಾರ ಪದ್ಧತಿಯನ್ನು ನೀವು ಅನುಸರಿಸಿದ್ರೆ ಪರಿಣಾಮ ನಿಮಗೇ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ತೂಕ ಎತ್ತುವ ವ್ಯಾಯಾಮ (Exercise) ಗಳು ದೇಹದ ಚಯಾಪಚಯವನ್ನು ಹೆಚ್ಚಿಸಲು ಮತ್ತು ಸ್ನಾಯುವಿನ ಬೆಳವಣಿಗೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ದೀರ್ಘಾವಧಿಯಲ್ಲಿ ಹೆಚ್ಚಿನ ಕೊಬ್ಬನ್ನು ಸುಡಲು ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ. ಕಾರ್ಡಿಯೋ ವ್ಯಾಯಾಮವು ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಶ್ವಾಸಕೋಶ ಮತ್ತು ಹೃದಯವನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಆಮ್ಲಜನಕವನ್ನು ಉತ್ತಮವಾಗಿ ಬಳಸಲು ಸ್ನಾಯುಗಳಿಗೆ ತರಬೇತಿ ನೀಡುತ್ತವೆ.
undefined
ವಿಟಮಿನ್ 12 ಹೆಚ್ಚಿರೋ ಮೀನಿನ ಕಣ್ಣಲ್ಲೂ ಇದೆ ಆರೋಗ್ಯದ ಗುಟ್ಟು!
ಒಬ್ಬ ವ್ಯಕ್ತಿಯು ಫಿಟ್‌ನೆಸ್ ಮತ್ತು ಸರಿಯಾದ ಆರೋಗ್ಯಕ್ಕಾಗಿ ಮಾತ್ರ ವ್ಯಾಯಾಮ ಮಾಡುತ್ತಿದ್ದರೆ, ಅವನು ತನ್ನ ವ್ಯಾಯಾಮದ ವೇಳಾಪಟ್ಟಿಯಲ್ಲಿ ತೂಕ ಎತ್ತುವ ವ್ಯಾಯಾಮ ಮತ್ತು ಕಾರ್ಡಿಯೋ ವ್ಯಾಯಾಮಗಳೆಡನ್ನು ಸೇರಿಸಬೇಕು. ಇದರಿಂದ ಆತನ ಸ್ನಾಯುಗಳು ಬಲಗೊಳ್ಳುತ್ತವೆ. ಕಾರ್ಡಿಯೋ ಮೊದಲು ತೂಕ ಎತ್ತುವ ವ್ಯಾಯಾಮ ಮಾಡಿದ್ರೆ ಕೊಬ್ಬು ಕರಗಿಸಲು ಸಹಕಾರಿಯಾಗುತ್ತದೆ. ಮೊದಲು ತೂಕವನ್ನು ಎತ್ತುವುದು ನಿಮ್ಮ ದೇಹವನ್ನು ಏರೋಬಿಕ್ ಮೋಡ್‌ಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಓಡಲು ಪ್ರಾರಂಭಿಸುವ ಹೊತ್ತಿಗೆ, ನಿಮ್ಮ ದೇಹವು ಈಗಾಗಲೇ ಕೊಬ್ಬನ್ನು ಸುಡುವ ಸ್ಥಿತಿಗೆ ಬಂದಿರುತ್ತದೆ.
HEALTH TIPS: ಜೀವನದಲ್ಲಿ ಎಂದಿಗೂ ಇವುಗಳನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲೇಬೇಡಿ
ಕಾರ್ಡಿಯೋ ಮೊದಲು ತೂಕ ಎತ್ತುವ ವ್ಯಾಯಾಮ ಮಾಡೋದ್ರಿಂದ ನಷ್ಟವೂ ಇದೆ. ತೂಕವನ್ನು ಎತ್ತಿದ ನಂತರ ವ್ಯಾಯಾಮ ಮಾಡುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಪಟ್ಟಿ ಮಾಡೋದಾದ್ರೆ, ಒಂದೇ ಸಮಯದಲ್ಲಿ ವೇಟ್‌ಲಿಫ್ಟಿಂಗ್ ಮತ್ತು ಕಾರ್ಡಿಯೋ ಎರಡನ್ನೂ ಮಾಡೋದ್ರಿಂದ ಜಿಮ್‌ನಲ್ಲಿ ನಿಮ್ಮ ಸಮಯವನ್ನು ಉಳಿಸಬಹುದು. ತೂಕ ಎತ್ತುವ ವ್ಯಾಯಾಮದ ನಂತರ ಕಾರ್ಡಿಯೋ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಕ್ಯಾಲೋರಿ ಬರ್ನ್ ಅನ್ನು ಹೆಚ್ಚಿಸಲು ಸಹಾಯ ಆಗುತ್ತದೆ. ಇದು ಕೊಬ್ಬು ನಷ್ಟವನ್ನು ಉತ್ತೇಜಿಸುತ್ತದೆ. ಎರಡನ್ನೂ ಒಟ್ಟಿಗೆ ಮಾಡುವಾಗ ತೀವ್ರವಾದ ತರಬೇತಿ ಮತ್ತು ಕಾರ್ಡಿಯೊವನ್ನು ನಿಯಮಿತವಾಗಿ ಮಾಡಬಾರದು. ಅತಿಯಾದ ತರಬೇತಿ ನಿಮ್ಮನ್ನು ಅಪಾಯಕ್ಕೆ ತಳ್ಳಬಹುದು. ತೂಕವನ್ನು ಎತ್ತಿದ ತಕ್ಷಣ ಅತಿಯಾದ ಕಾರ್ಡಿಯೋ ಮಾಡುವುದರಿಂದ ಸ್ನಾಯುವಿನ ಚೇತರಿಕೆ ಮತ್ತು ಬೆಳವಣಿಗೆಗೆ ಅಡ್ಡಿಯಾಗಬಹುದು. ಈ ಎರಡೂ ವ್ಯಾಯಾಮ ಮಾಡುವ ಮೊದಲು ನೀವು ಆಹಾರಕ್ಕೆ ಮಹತ್ವ ನೀಡಿ. ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುವುದು ಇಲ್ಲಿ ಮುಖ್ಯವಾಗುತ್ತದೆ. ತೂಕವನ್ನು ಎತ್ತಿದ ನಂತರ ವ್ಯಾಯಾಮ ಮಾಡಬೇಕೆ ಅಥವಾ ಬೇಡವೇ ಎಂಬ ನಿರ್ಧಾರವು ಅಂತಿಮವಾಗಿ ನಿಮ್ಮ ಫಿಟ್ನೆಸ್ ಉದ್ದೇಶಗಳನ್ನು ಅವಲಂಬಿಸಿರುತ್ತದೆ.