Child Health: ಚಿಕ್ಕ ಮಕ್ಕಳಲ್ಲಿ ಕಾಡುವ ಬಿಪಿಗೆ ಕಾರಣವೇನು ಗೊತ್ತಾ?

By Suvarna NewsFirst Published Sep 17, 2022, 2:35 PM IST
Highlights

ಹಿಂದಿನ ಕಾಲದಲ್ಲಿ ಹಿರಿಯರಿಗೆ ಬರ್ತಿದ್ದ, ಅವರಿಗೆ ಸೀಮಿತ ಎನ್ನುವಂತಿದ್ದ ಖಾಯಿಲೆಗಳು ಈಗ ಮಕ್ಕಳಿಗೂ ಕಾಣಿಸಿಕೊಳ್ತಿವೆ. ಚಿಕ್ಕ ಮಕ್ಕಳೆ ಬಿಪಿ, ಶುಗರ್ ಗೆ ಬಲಿಯಾಗ್ತಿದ್ದಾರೆ. ಅಧಿಕ ರಕ್ತದೊತ್ತಡ ಮಕ್ಕಳಲ್ಲಿ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಅವ್ರ ಬಾಲ್ಯ ಹಾಳಾಗ್ಬಾರದು ಅಂದ್ರೆ ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ.
 

ಅಧಿಕ ರಕ್ತದೊತ್ತಡ ಅಂದ್ರೆ ಹೈಬಿಪಿ ಹಿಂದೆ ದೊಡ್ಡವರಿಗೆ ಮಾತ್ರ ಕಾಣಿಸಿಕೊಳ್ಳುವ ಖಾಯಿಲೆ ಎಂದಾಗಿತ್ತು. ವಯಸ್ಸು 50 ದಾಟಿದ ನಂತ್ರ ಬರುವ ಖಾಯಿಲೆ ಎಂದು ಜನರು ನಂಬಿದ್ರು. ಆದ್ರೆ ಈಗ ಮಕ್ಕಳಿಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡಲು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಜೀವನ ಶೈಲಿ ಹಾಗೂ ಆಹಾರ ಪದ್ಧತಿ. ಮಕ್ಕಳಿಗೆ ಬಿಪಿ ಲಕ್ಷಣ ದೊಡ್ಡ ಮಟ್ಟದಲ್ಲಿ ಕಾಣಿಸುವುದಿಲ್ಲ. ಇದ್ರಿಂದಾಗಿ ಮಕ್ಕಳು ಪಾಲಕರಿಗೆ ಮಕ್ಕಳ ರೋಗ ಪತ್ತೆ ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕೆಟ್ಟ ಜೀವನಶೈಲಿ ಜೊತೆಗೆ ಅಸಮತೋಲಿತ ಆಹಾರ ಮುಖ್ಯ ಕಾರಣವೆಂದು ತಜ್ಞರು ಹೇಳ್ತಾರೆ. ಅನೇಕ ಬಾರಿ ಆನುವಂಶಿಕ ಕಾರಣಗಳಿಂದಲೂ ಮಕ್ಕಳಿಗೆ ಬಿಪಿ ಸಮಸ್ಯೆ ಕಾಡುತ್ತದೆ. ಮಕ್ಕಳಲ್ಲಿ ಕಾಡುವ ಬಿಪಿ ಲಕ್ಷಣ ಹಾಗೂ ಅದರ ಚಿಕಿತ್ಸೆ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ಮಕ್ಕಳ (Children)ಲ್ಲಿ ಕಾಡುವ ಅಧಿಕ ರಕ್ತದೊತ್ತಡ (High Blood Pressure) ದ ಲಕ್ಷಣ : ಮಕ್ಕಳಿಗೆ ಬಿಪಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ವರದಿಯೊಂದರ ಪ್ರಕಾರ, ಅಧಿಕ ರಕ್ತದೊತ್ತಡ ಹೊಂದಿರುವ ಮಕ್ಕಳಲ್ಲಿ ಇದ್ರ ಲಕ್ಷಣ ಸೌಮ್ಯವಾಗಿರುತ್ತದೆ. ಸಮಸ್ಯೆ ಹೆಚ್ಚಾದಾಗ ಅದರ ಲಕ್ಷಣ ಕೂಡ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಈಗಿನ ಕಾಲಮಾನದಲ್ಲಿ ನಾಲ್ಕರಲ್ಲಿ ಇಬ್ಬರು ಮಕ್ಕಳಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳಿಗೆ ಆಗಾಗ ತಲೆ ತಿರುಗುವುದು, ತಲೆ ನೋವು (Headache) ಹಾಗೂ ಆಯಾಸ (Tiredness) ಕಾಣಿಸಿಕೊಳ್ಳುತ್ತಿದ್ದರೆ ಇದು ಬಿಪಿ ಲಕ್ಷಣವಾಗಿದೆ.  ಇದಲ್ಲದೆ ಬಿಪಿ ಸಮಸ್ಯೆ ಹೆಚ್ಚಾಗ್ತಿದ್ದಂತೆ ಮಕ್ಕಳಲ್ಲಿ ಇನ್ನೊಂದಿಷ್ಟು ಆರೋಗ್ಯ ಸಮಸ್ಯೆ ಕಾಡುತ್ತದೆ. 

ಮಕ್ಕಳಿಗೆ ಬಿಪಿ ಅಧಿಕವಾದಾಗ ಉಸಿರಾಡಲು ಸಮಸ್ಯೆಯಾಗುತ್ತದೆ. ಬಿಪಿ ಹೆಚ್ಚಾಗ್ತಿದ್ದಂತೆ ಮಕ್ಕಳ ಮೂಗಿನಿಂದ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎದೆಯಲ್ಲಿ ಬಿಗಿತ ಹಾಗೂ ಎದೆ ನೋವು ಕೂಡ ಬಿಪಿಯ ಲಕ್ಷಣಗಳಲ್ಲಿ ಒಂದಾಗಿದೆ. ಬಿಪಿಯಿಂದಾಗಿ ಮಕ್ಕಳಿಗೆ ಪದೇ ಪದೇ ಕೋಪ ಬರುತ್ತದೆ. ಹಾಗೆಯೇ ಸದಾ ಕಿರಿಕಿರಿ ಅನುಭವಿಸುತ್ತಾರೆ. ಅಧಿಕ ರಕ್ತದೊತ್ತಡದಿಂದ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಬಿಪಿ ಇರುವ ಮಕ್ಕಳ ತೂಕ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಮಕ್ಕಳಲ್ಲಿ ವಾಕರಿಕೆ ಸಮಸ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಮಕ್ಕಳಲ್ಲಿ ಕಾಡುವ ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? : ಮಕ್ಕಳಲ್ಲಿ ಹೆಚ್ಚಾಗಿ ಕಾಡುವ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಆನುವಂಶಿಕ ಕಾರಣಗಳಿರುತ್ತವೆ. ಇದಲ್ಲದೆ, ಹಾರ್ಮೋನುಗಳ ಬದಲಾವಣೆಯಿಂದ ಹೃದ್ರೋಗ ಸಮಸ್ಯೆಯಿಂದ ಮತ್ತು ಗಂಭೀರ ಮೂತ್ರಪಿಂಡದ ಕಾಯಿಲೆಗಳಿಂದ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮಕ್ಕಳು ಬಿಪಿಗೆ ಬಲಿಯಾಗ್ತಾರೆ. ಮೊದಲೇ ಹೇಳಿದಂತೆ ಕಳಪೆ ಜೀವನಶೈಲಿ ಮತ್ತು ಕೆಟ್ಟ ಆಹಾರದಿಂದ ಕೂಡ  ಮಕ್ಕಳು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗ್ತಾರೆ.  

ಇದನ್ನೂ ಓದಿ: Interesting Fact: ಬೆಳ್ಳುಳ್ಳಿಯನ್ನು ಪಾದಗಳಡಿ ಇಡೋದ್ರಿಂದ ಏನಾಗುತ್ತೆ ಗೊತ್ತಾ?

ಮಕ್ಕಳಲ್ಲಿ ಕಾಡುವ ಅಧಿಕ ರಕ್ತದೊತ್ತಡ ತಡೆಗಟ್ಟುವ ವಿಧಾನ : ಮಕ್ಕಳು ಬಿಪಿಗೆ ಬಲಿಯಾಗ್ಬಾರದು ಎಂದಾದ್ರೆ ಪಾಲಕರು ಮೊದಲು ಎಚ್ಚೆತ್ತುಕೊಳ್ಳಬೇಕಿದೆ. ಮಕ್ಕಳ ಜೀವನ ಶೈಲಿಯನ್ನು ಸುಧಾರಿಸಬೇಕಿದೆ. ಮಕ್ಕಳಿಗೆ ಫಾಸ್ಟ್ ಫುಡ್, ಜಂಕ್ ಫುಡ್ ಮತ್ತು ಹೆಚ್ಚು ಕರಿದ ಆಹಾರಗಳನ್ನು ನೀಡುವ ಬದಲು ಆರೋಗ್ಯಕರ ಆಹಾರವನ್ನು ನೀಡಬೇಕಿದೆ. ಮಕ್ಕಳನ್ನು ನಿಷ್ಕ್ರಿಯ ಜೀವನಶೈಲಿಯಿಂದ ಹೊರಗೆ ತರಬೇಕಿದೆ. ಮಕ್ಕಳಿಗೆ ಪೋಷಕಾಂಶವಿರುವ ಹಣ್ಣು, ತರಕಾರಿಯನ್ನು ನೀಡಬೇಕು. ಹಾಗೆ ಮಕ್ಕಳಿಗೆ ವ್ಯಾಯಾಮ, ಯೋಗ, ಹೊರಾಂಗಣ ಆಟಗಳಿಗೆ ಪ್ರೋತ್ಸಾಹ ನೀಡಬೇಕಿದೆ.

ಇದನ್ನೂ ಓದಿ: HOME REMEDIES: ಬೆಳಿಗ್ಗೆ ಕಾಡುವ ತಲೆನೋವನ್ನು ಹೀಗೆ ಗಾಯಬ್ ಮಾಡಿ

ಪೋಷಕರಿಗೆ ಈಗಾಗಲೇ ಬಿಪಿ ಇದ್ದು, ಬಿಪಿ ಆನುವಂಶಿಕವಾಗಿ ಬರ್ತಿದ್ದರೆ ಪಾಲಕರು ಮೊದಲೇ ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ಬಿಪಿ ಬರದಂತೆ ಕಾಳಜಿವಹಿಸಬೇಕು. ಸೂಕ್ತ ಸಮಯದಲ್ಲಿ ವೈದ್ಯರ ಭೇಟಿ ಮಾಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು. 

click me!