ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್‌ನ ಉತ್ಪನ್ನ ತಯಾರಿಕಾ ಪರವಾನಗಿಯನ್ನು ಮಹಾರಾಷ್ಟ್ರ ರದ್ದುಗೊಳಿಸಿದೆ. ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಗುಣಮಟ್ಟ ಪರಿಶೀಲನೆಯಲ್ಲಿ ಉತ್ತೀರ್ಣವಾಗದ ಕಾರಣ ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತವು ಪೌಡರ್ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿದೆ.
ಮಹಾರಾಷ್ಟ್ರ : ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಜಾನ್ಸನ್ ಬೇಬಿ ಪೌಡರ್‌ನ ಉತ್ಪಾದನಾ ಪರವಾನಗಿಯನ್ನು ಮಹಾರಾಷ್ಟ್ರ ಎಫ್‌ಡಿಎ ರದ್ದುಗೊಳಿಸಿದೆ. ಮಹಾರಾಷ್ಟ್ರ FDA(Food & Drugs Administration)ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. ಉತ್ಪನ್ನವು ಕಡ್ಡಾಯ ಮಿತಿಗಿಂತ ಹೆಚ್ಚಿನ pH ಮೌಲ್ಯವನ್ನು ಹೊಂದಿದೆ ಎಂದು ಕಂಡುಬಂದ ಕಾರಣ ಜಾನ್ಸನ್ ಮತ್ತು ಜಾನ್ಸನ್‌ಗೆ ಮಹಾರಾಷ್ಟ್ರದಲ್ಲಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅನ್ನು ತಯಾರಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸೂಚಿಸಲಾಗಿದೆ.
Johnson & Johnsons ಪರವಾನಗಿ ರದ್ದುಗೊಳಿಸಿದ ಮಹಾರಾಷ್ಟ್ರ
ಗುಣಮಟ್ಟ (Quality) ಪರಿಶೀಲನೆಗಾಗಿ ಪುಣೆ ಮತ್ತು ನಾಸಿಕ್ ಎಂಬ ಎರಡು ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. FDAಯು ಡ್ರಗ್ಸ್ & ಕಾಸ್ಮೆಟಿಕ್ಸ್ ಆಕ್ಟ್ 1940 ರ ಅಡಿಯಲ್ಲಿ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತು. J&J ತನ್ನ ಎಲ್ಲಾ ಸ್ಟಾಕ್‌ಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಳಲಾಯಿತು. ಈ ಮಧ್ಯೆ, ಸಂಸ್ಥೆಯು ಆಡಳಿತದ ವರದಿಗಳನ್ನು ಸ್ವೀಕರಿಸಿಲ್ಲ ಮತ್ತು ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.
2023ರಲ್ಲಿ ಸಿಗಲ್ಲ Johnson & Johnson ಬೇಬಿ ಪೌಡರ್; ವಿಶ್ವಾದ್ಯಂತ ಮಾರಾಟ ಸ್ಥಗಿತ ನಿರ್ಧಾರ ಪ್ರಕಟಿಸಿದ ಕಂಪನಿ
ಮಹಾರಾಷ್ಟ್ರದ ಎಫ್‌ಡಿಎ ಕೂಡ ಕಂಪನಿಗೆ ‘ಸ್ಟ್ಯಾಂಡರ್ಡ್ ಕ್ವಾಲಿಟಿ ಅಲ್ಲ’ ಎಂದು ಪತ್ತೆಯಾದ ಪುಡಿಯ ದಾಸ್ತಾನುಗಳನ್ನು ಹಿಂಪಡೆಯುವಂತೆ ಕೇಳಿಕೊಂಡಿದೆ. ಪೌಡರ್ ಅನ್ನು ಬಳಸುವುದರಿಂದ ನವಜಾತ ಶಿಶುಗಳ (Infants) ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು FDA ಉಲ್ಲೇಖಿಸಿದೆ. ಲಿಮಿಟೆಡ್ ಮುಲುಂಡ್, ಮುಂಬೈ ಪುಣೆ ಮತ್ತು ನಾಸಿಕ್‌ನಲ್ಲಿ ತೆಗೆದ ಪುಡಿಯ ಮಾದರಿಗಳನ್ನು ಸರ್ಕಾರವು ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ ಎಂದು ಘೋಷಿಸಿತು. ಸಾರ್ವಜನಿಕ ಆರೋಗ್ಯದ (Health) ಹಿತದೃಷ್ಟಿಯಿಂದ FDAಯು ಜಾನ್ಸನ್ ಮತ್ತು ಜಾನ್ಸನ್ ಪ್ರೈವೇಟ್‌ನ ಜಾನ್ಸನ್ ಬೇಬಿ ಪೌಡರ್‌ನ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಜಾನ್ಸನ್ ಮತ್ತು ಜಾನ್ಸನ್ ಬೇಬಿ ಟಾಲ್ಕ್ ಸುತ್ತಲಿನ ವಿವಾದ ಏನು ?
ಮುಂದಿನ ವರ್ಷದ ವೇಳೆಗೆ ಜಾಗತಿಕವಾಗಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅನ್ನು ಸ್ಥಗಿತಗೊಳಿಸುವುದಾಗಿ ಜಾನ್ಸನ್ ಮತ್ತು ಜಾನ್ಸನ್ ಹೇಳಿದೆ. ಹೆಲ್ತ್ ಕೇರ್ ಉತ್ಪನ್ನಗಳ ಕಂಪನಿಯು ತನ್ನ ಬೇಬಿ ಪೌಡರ್ ಮಾರಾಟವನ್ನು ಎರಡು ವರ್ಷಗಳ ಹಿಂದೆ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ನಿಲ್ಲಿಸಿತು. ಟಾಲ್ಕಮ್ ಆಧಾರಿತ ಬೇಬಿ ಪೌಡರ್‌ನಲ್ಲಿ ಕಲ್ನಾರು ಅಂಶವಿದೆ. ಇದು ಹಲವರಲ್ಲಿಅಂಡಾಶಯದ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹಲವಾರು ಮಹಿಳೆಯರು (Woman) ಕಂಪನಿಯ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದ್ದರು. ಹೀಗಿದ್ದೂ, ಜಾನ್ಸನ್ ಮತ್ತು ಜಾನ್ಸನ್ ಯಾವಾಗಲೂ ತನ್ನ ಉತ್ಪನ್ನವನ್ನು (Product) ಬಳಸಲು ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ.
ಬೇಬಿ ಪೌಡರ್ ಮಗುವಿನ ಆರೋಗ್ಯಕ್ಕೆ ಡೆಂಜರ್ ಆಗಬಹುದೇ?
ಬೇಬಿ ಪೌಡರ್‌ನ್ನು 1970ರ ದಶಕದಿಂದಲೂ ಬಳಸಲಾಗುತ್ತಿದೆ
ವರದಿಗಳ ಪ್ರಕಾರ, ಬೇಬಿ ಪೌಡರ್ ಬಳಕೆಯಿಂದ ಗರ್ಭಾಶಯದ ಕ್ಯಾನ್ಸರ್ ಸಂಭವಿಸಬಹುದು. 2019-20ರಲ್ಲಿ, ಅನೇಕ ಅಮೇರಿಕನ್ ಮಹಿಳೆಯರು ಕಂಪನಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದರು, ಈ ಪುಡಿಯ ಬಳಕೆಯಿಂದಾಗಿ ಗರ್ಭಾಶಯದ ಕ್ಯಾನ್ಸರ್ ಕಾಡುತ್ತಿದೆ ಎಂದು ಹೇಳಿದರು. ವಿಷಯ ಎಲ್ಲರ ಗಮನ ಸೆಳೆದಿದ್ದರಿಂದ ಕಂಪನಿಯೂ ನಷ್ಟ ಭರಿಸಬೇಕಾಯಿತು. ವಾಸ್ತವವಾಗಿ, ಕಲ್ನಾರಿನ-ಮುಕ್ತ ಕಲ್ನಾರಿನ (ಟ್ಯಾಲ್ಕ್) ಅನ್ನು 1970 ರ ದಶಕದಿಂದಲೂ ಬೇಬಿ ಪೌಡರ್‌ನಲ್ಲಿ ಬಳಸಲಾಗುತ್ತದೆ. ಅಧಿಕ ಪ್ರಮಾಣದ ಕಲ್ನಾರು ದೇಹದೊಳಗೆ ಹೋದರೆ ಕ್ಯಾನ್ಸರ್ ಬರಬಹುದು.
J&J ಟಾಲ್ಕಮ್ ಪೌಡರ್ ಇತಿಹಾಸ
ಜಾನ್ಸನ್ ಬೇಬಿ ಪೌಡರ್ 1894 ರಿಂದ ಮಾರಾಟದಲ್ಲಿದೆ. ಕುಟುಂಬ-ಸ್ನೇಹಿ ಮತ್ತು ಪಾಕೆಟ್-ಸ್ನೇಹಿಯಾಗಿರುವುದರಿಂದ, ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಅತ್ಯಂತ ಪ್ರಸಿದ್ಧವಾದ ಟಾಲ್ಕಮ್ ಪೌಡರ್ ಉತ್ಪನ್ನಗಳಲ್ಲಿ ಒಂದಾಗಿದೆ. ಇದು 128 ವರ್ಷಗಳಿಂದ ಪ್ರತಿ ಮನೆಯ ಭಾಗವಾಗಿದೆ. ಜಾನ್ಸನ್ ಕಂಪನಿ ಏಳು ದಶಕಗಳಿಂದ ಭಾರತದಲ್ಲಿದೆ. 1948ರಲ್ಲಿ, ಭಾರತವು ಔಪಚಾರಿಕವಾಗಿ ಜಾನ್ಸನ್ ಮತ್ತು ಜಾನ್ಸನ್ ಉತ್ಪನ್ನಗಳ ಮಾರಾಟವನ್ನು ಪ್ರಾರಂಭಿಸಿತು. ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಕೂಡ ಈ ಪ್ರಸಿದ್ಧ ಜೆ & ಜೆ ಉತ್ಪನ್ನದ ಮಾರಾಟವನ್ನು ನಿಲ್ಲಿಸಬೇಕಾಗುತ್ತದೆ. ಈಗ ಕಂಪನಿಯು ಟಾಲ್ಕ್ ಆಧಾರಿತ ಪುಡಿಯನ್ನು ಕಾರ್ನ್ ಸ್ಟಾರ್ಚ್ ಆಧಾರಿತ ಪುಡಿಯೊಂದಿಗೆ ಬದಲಾಯಿಸುತ್ತದೆ.