ಆಯುರ್ವೇದದ ಪ್ರಕಾರ ಗಿಡಮೂಲಿಕೆ ಚಹಾಗಳನ್ನು(Herbal Tea) ಬಳಸುವುದರಿಂದ ನಮ್ಮ ಪ್ರಾಚೀನ ಆಯುರ್ವೇದ(Ayurveda) ವ್ಯವಸ್ಥೆಯನ್ನು ನಮ್ಮ ಆಧುನಿಕ ಜೀವನಶೈಲಿಯಲ್ಲಿ ತರುವುದರ ಮೂಲಕ ಅನುಕೂಲಕರವಾದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.
ಚಹಾ ಎಂದರೆ ಒಂದು ರಿಫ್ರೆಶ್‌ಮೆಂಟ್(Refreshment) ಎನ್ನುತ್ತಾರೆ ಕೆಲವರು. ಚಹಾ ಎಂದರೆ ಬಹುತೇಕ ಜನರಿಗೆ ಒಂದು ಎನರ್ಜಿ ಡ್ರಿಂಕ್(Energy Drink) ಇದ್ದಂತೆ. ಚಹಾ ಕುಡಿಯುವುದರಿಂದಲೂ ಆರೋಗ್ಯಕ್ಕೆ ಬಹಳ ಲಾಭಗಳಿವೆ. ಅಲ್ಲದೆ ಮಸಾಲೆ ಚಹಾ ಕುಡಿಯುವುದರಿಂದ ಹಲವಾರು ಲಾಭಗಳಿವೆ. ಈ ಬಗ್ಗೆ ಆಯುರ್ವೇದದಲ್ಲೂ ಉಲ್ಲೇಖವಿದ್ದು ಮಸಾಲೆ ಚಹಾ ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಗಿಡಮೂಲಿಕೆಗಳಿಂದ ತಯಾರಿಸಿದ ಮಸಾಲೆಗಳಿಂದ ಕೂಡಿದ ಚಹಾ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ ಎಂದು ಆಯುರ್ವೇದದಲ್ಲಿ ತಿಳಿಸಿದೆ. ಆಯುರ್ವೇದದಲ್ಲಿ(Ayurveda) ಇದು ಅವಿಭಾಜ್ಯ ಅಂಗವಾಗಿದೆ. ನಮ್ಮ ಪೂರ್ವಜರು ಈಗಿನಂತೆ ಚಹಾ ಸೇವಿಸುತ್ತಿರಲಿಲ್ಲ. ಗಿಡಮೂಲಿಕೆ(Medicinal Plant) ಮಸಾಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುತ್ತಿದ್ದು, ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಜೀರ್ಣಕ್ರಿಯೆಗೆ(Digestion) ಸಹಾಯ ಮಾಡುವುದು, ದೇಹವನ್ನು ಬೆಚ್ಚಗಾಗಿಸುವುದು(Body Warm), ನರಗಳನ್ನು ಶಾಂತಗೊಳಿಸುವುದು, ತೂಕ ನಷ್ಟಕ್ಕೆ(Weight Loss) ಸಹಾಯ ಮಾಡುವುದು ಇತ್ಯಾದಿ.
ಶುಂಠಿ ಚಹಾ(Ginger Tea)
ಶುಂಠಿಯನ್ನು ಆಯುರ್ವೇದದಲ್ಲಿ ಸಾರ್ವತ್ರಿಕ ಪರಿಹಾರ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಹೊಂದಿದ್ದು, ಶುಂಠಿಯನ್ನು ನೀರಿನಲ್ಲಿ ಕುದಿಸಿ ಚಹಾವನ್ನು ಕುಡಿಯಬಹುದು. ಜೀರ್ಣಕ್ರಿಯೆಗಾಗಿ ಊಟದ ನಂತರ ಶುಂಠಿ ಚಹಾವನ್ನು ಸೇವಿಸಬೇಕು. ಅಲ್ಲದೆ ಕೆಮ್ಮು ಶೀತಕ್ಕೂ ಬಳಸಲಾಗುತ್ತದೆ. ಇದು ಊರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ ಮತ್ತು ಮೊಡವೆ ಮತ್ತು ಇತರೆ ಕಲೆಗಳಿಂದ ಚರ್ಮವನ್ನು ತೆರವುಗೊಳಿಸುತ್ತದೆ.
ಚಳಿಗಾಲದಲ್ಲಿ ಶುಂಠಿ, ಏಲಕ್ಕಿ ಮತ್ತು ಲವಂಗವನ್ನು ಚಹಾಕ್ಕೆ ಸೇರಿಸುವುದರಿಂದ ದೇಹವು ಬೆಚ್ಚಗಿರುತ್ತದೆ. ಅಲ್ಲದೆ ಪುದೀನ ತಂಪಾಗಿಸುವ ಪರಿಣಾಮವನ್ನು ಹೊಂದಿದ್ದು, ಪುದೀನಾ, ತುಳಸಿಯನ್ನು ಒಟ್ಟಿಗೆ ಬಳಸಬಹುದು.ಚರ್ಮವನ್ನು ತೆರವುಗೊಳಿಸಲು ಮತ್ತು ಮೊಡವೆ ಮತ್ತು ಮೊಡವೆಗಳಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ ಗಿಡಮೂಲಿಕೆ ಚಹಾಗಳು ಮತ್ತು ಹಸಿರು ಚಹಾದ ಮೌಲ್ಯಗಳನ್ನು ಎತ್ತಿ ಹಿಡಿದಿದೆ.
Tea Benefits: ಕ್ಯಾಮೊಮೈಲ್ ಟೀ ಕುಡೀರಿ, ಮುಟ್ಟಿನ ನೋವು ಥಟ್ಟಂತ ಮಾಯ !
ಹರ್ಬಲ್ ಟೀಗಳಿಂದ ಪ್ರಯೋಜನಗಳು (Herbal Tea)
ಹರ್ಬಲ್ ಟೀ ಮತ್ತು ಹಸಿರು ಚಹಾವನ್ನು ಕುಡಿಯುವುದು ಅದರ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶದಿAದಾಗಿ ಇತರೆ ಯಾವುದೇ ಪಾನೀಯಗಳಿಗಿಂತ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. ಅವು ಪಾಲಿಫಿನಾಲ್‌ಗಳನ್ನು(Polly final) ಹೊಂದಿರುತ್ತವೆ. ಇದು ಶಕ್ತಿಯುತ ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾಗಿವೆ.
ಹಾಗಾಗಿ ಪ್ರತೀ ದಿನ ಹರ್ಬಲ್ ಟೀ ಕುಡಿಯುವುದರಿಂದ ಉರಿಯೂತ, ಮಂದತೆ, ಕಲೆಗಳಿಗೆ ಗುರಿಯಾಗಿದ್ದರೆ ಈ ಚಹಾ ಪ್ರಯೋಗಿಸಬಹುದು.
ಗ್ರೀನ್ ಟೀ ಪ್ರಯೋಜನಗಳು (Green Tea): ಇತ್ತೀಚೆಗೆ ಬಹುತೇಕ ಯುವ ಜನರು ಗ್ರೀನ್ ಟೀಯನ್ನು ಇಷ್ಟಪಡುತ್ತಾರೆ. ಇದರಿಂದ ಆರೋಗ್ಯಕ್ಕೆ ಬಹಳ ಉಪಯೋಗವಿದೆ. ಅನೇಕ ಆರೋಗ್ಯ ಮತ್ತು ಸೌಂದರ್ಯಕ್ಕೆ ಉಪಕಾರಿಯಾಗಿದೆ.
ರೋಸ್ ಟೀ(Rose Tea): ರೋಸ್ ವಾಟರ್ ಕೇಳಿದ್ದೀರಿ. ಆದರೆ ಗುಲಾಬಿ ಟೀಯಿಂದಲೂ ಆರೋಗ್ಯಕ್ಕೆ ಬಹಳ ಉಪಯೋಗವಿದೆ. ಇದು ಚರ್ಮ ಹಾಗೂ ಕೂದಲಿಗೆ ಹೊಳಪನ್ನು(Hair Shining) ನೀಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು.
ದೀಪಾವಳಿ ನಂತರ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳುವುದು ಮಸ್ಟ್!
ಮಸಾಲೆ ಟೀ(Spices Tea): ಮಸಾಲೆ ಟೀಯನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇದು ಉತ್ತಮ ಗಿಡಮೂಲಿಕೆಗಳಿಂದ ಮಾಡಲಾಗಿದ್ದು, ಇದರಲ್ಲಿ ದಾಲ್ಚಿನ್ನಿ(Dalchinne), ಲವಂಗ(Cloves), ಜೀರಿಗೆ(Cumin), ಕರಿಮೆಣಸು(Black pepper), ಏಲಕ್ಕಿ(Cinnamon), ಜಾಯಿಕಾಯಿ ಮುಂತಾದ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ.
ಮಸಾಲೆಗಳು. ವಾಸ್ತವವಾಗಿ ಔಷಧೀಯ ಗಿಡಮೂಲಿಕೆಗಳಾಗಿದ್ದು, ಆಹಾರ ಪದಾರ್ಥಗಳ ಗುಣಗಳನ್ನು ಬದಲಾಯಿಸಲು, ಅವುಗಳಲ್ಲಿನ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆಗೆ(Digestion) ಸಹಾಯ ಮಾಡುತ್ತದೆ.
ಕರಿಮೆಣಸು ಕೆಮ್ಮು(Cough), ಶೀತ(Cold), ಉಸಿರಾಟದ ದಟ್ಟಣೆಯಲ್ಲಿ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಜಾಯಿಕಾಯಿ ಕೆಳ ಹೊಟ್ಟೆಯ ನರಗಳನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು(Stress) ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿಂಬೆ ಹುಲ್ಲು(Lemn Grass), ಪುದೀನ(mint), ಸಿಹಿ ತುಳಸಿ, ಗುಲಾಬಿ ದಳಗಳು ಅಥವಾ ಜೇನುತುಪ್ಪದಂತಹ(Honey) ಅನೇಕ ಇತರೆ ಸಸ್ಯ ಉತ್ಪನ್ನಗಳನ್ನು ಸೇರಿಸಬಹುದು.
ತೂಕ ನಷ್ಟ ಮತ್ತು ನಿರ್ವಿಶೀಕರಣಕ್ಕಾಗಿ ಚಹಾಗಳು(Weight Loss and Detoxification): ನೀವು ಬಳಸುವ ಚಹಾದಲ್ಲಿ ಏನೆಲ್ಲಾ ಪದಾರ್ಥಗಳನ್ನು ಬಳಸುತ್ತೀರಿ ಎಂಬುದರ ಮೇಲೆ ತೂಕ ನಷ್ಟ ಹಾಗೂ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಗಿಡಮೂಲಿಕೆ ಚಹಾಗೆ ನೀವು ಬಳಸಬಹುದಾದ ಕೆಲ ಪದಾರ್ಥಗಳೆಂದರೆ ಶುಂಠಿ(Ginger), ನಲ್ಲಿಕಾಯಿ(Amla), ಬಾರ್ಲಿ(Barli), ಗುಲಾಬಿ, ಲೈಕೋರೈಸ್(Licorice) ಇತ್ಯಾದಿ. ಇವು ಚಯಾಪಚಯನ ದರವನ್ನು ಪ್ರಭಾವಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿನ ವಿಷವನ್ನು ತೊಡೆದುಹಾಕಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.