Weight Loss: 7 ತಿಂಗಳಲ್ಲಿ 63 ಕೆಜಿ ತೂಕ ಇಳಿಸಲು ಮನೆ ಬಿಟ್ಟಿದ್ದ ವ್ಯಕ್ತಿ

By Suvarna News  |  First Published Dec 3, 2022, 5:57 PM IST

ತೂಕ ಇಳಿಸಿಕೊಳ್ಳಬೇಕೆಂದ್ರೆ ಮನಸ್ಸು ಗಟ್ಟಿಯಾಗಿರಬೇಕು. ಕಣ್ಣಿಗೆ ಕಾಣುವ ರುಚಿ ಆಹಾರ ಬಿಡಬೇಕು, ಸ್ನೇಹಿತರ ಜೊತೆ ಪಾರ್ಟಿ ಬಿಡಬೇಕು. ಈ ವ್ಯಕ್ತಿಗೆ ಇದೆಲ್ಲ ಅಸಾಧ್ಯ ಎನ್ನಿಸಿದಾಗ ಮನೆಯನ್ನೇ ಬಿಟ್ಟ. ಊರು ಬಿಟ್ಟು ಬೇರೆ ಜಾಗಕ್ಕೆ ಹೋದವನು 7 ತಿಂಗಳಲ್ಲಿ ಮಹಾನ್ ಸಾಧನೆ ಮಾಡಿದ್ದಾನೆ.
 


ತೂಕ ಇಳಿಸೋದು ಸುಲಭದ ಕೆಲಸವಲ್ಲ. ಅತಿ ಹೆಚ್ಚು ಬೊಜ್ಜು ಹೊಂದಿರುವ ವ್ಯಕ್ತಿಗಳಿಗೆ ತೂಕ ಇಳಿಸೋದು ಮತ್ತಷ್ಟು ಸವಾಲಿನ ಕೆಲಸ. ಐರಿಶ್ ಮೂಲದ ಒಬ್ಬ ವ್ಯಕ್ತಿ ಬ್ರಿಯಾನ್ ಓ ಕೀಫೆ. ಮಂಚದ ಮೇಲೆ ಮಲಗಿ ಜಂಕ್ ಫುಡ್ ತಿನ್ನುವ ಅಭ್ಯಾಸ ಅವನ ತೂಕವನ್ನು 153 ಕೆಜಿಗೆ ಹೆಚ್ಚಿಸಿತ್ತು. ಇದರಿಂದಾಗಿ ಆತನಿಗೆ ಕೆಲಸಕ್ಕೆ ಹೋಗಲೂ ಸಾಧ್ಯವಾಗಲಿಲ್ಲ. 15 ವರ್ಷಗಳ ಕಾಲ ಮನೆಯಲ್ಲಿ ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಿದ ಬ್ರಿಯಾನ್, ಆಹಾರ ತಜ್ಞರಿಂದ ಅನೇಕ ಟಿಪ್ಸ್ ಪಡೆದಿದ್ದ. ಆದ್ರೆ ಇದ್ಯಾವುದೂ ಆಗದಿದ್ದಾಗ ತೂಕ ಇಳಿಸಿಕೊಳ್ಳಲು ಏನು ಮಾಡಿದೆ ಎಂಬುದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾನೆ. 

ಬ್ರಿಯಾನ್ ಓಕೀಫೆ (Brian OKeefe) 15 ವರ್ಷಗಳಿಂದ ಅನೇಕ ರೀತಿಯ ಪ್ರಯತ್ನ ಮಾಡಿದ್ದ. ಆದ್ರೆ ಯಾವುದ್ರಲ್ಲೂ ಯಶಸ್ಸು ಸಿಗಲಿಲ್ಲ. ಡೇವಿಡ್ ಗೊಗ್ಗಿನ್ಸ್ (David Goggins) ಪುಸ್ತಕ ಕಾಂಟ್ ಹರ್ಟ್ ಮಿ ಓದಿದ ನಂತ್ರ  ಬ್ರಿಯಾನ್ ಓಗೆ ತನ್ನ ದೌರ್ಬಲ್ಯ ಅರ್ಥವಾಯ್ತು. ಸ್ನೇಹಿತ (Friend) ರು ಡ್ರಿಂಕ್ಸ್ ಗೆ ಕರೆದಾಗ ಅಥವಾ ಕುಟುಂಬಸ್ಥರು ಡಿನ್ನರ್ ಗೆ ಕರೆದಾಗ ಅದನ್ನು ತಪ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಾಗ್ತಿಲ್ಲ. ಇದ್ರಿಂದಾಗಿ ತೂಕ ನಿಯಂತ್ರಣಕ್ಕೆ ಬರ್ತಿಲ್ಲವೆಂದು ಬ್ರಿಯಾನ್ ಓ ಅರಿತುಕೊಂಡು.

Latest Videos

undefined

ತೂಕ ಇಳಿಸಿಕೊಳ್ಳಲು ಮನೆ ಬಿಟ್ಟ ಬ್ರಿಯಾನ್ ಓ : ಮನೆಯಲ್ಲಿದ್ದರೆ ತೂಕ ಇಳಿಸಲು ಸಾಧ್ಯವಾಗೋದಿಲ್ಲ ಎಂಬುದನ್ನು ಅರಿತ ಬ್ರಿಯಾನ್ ಓ ಮನೆ ಬಿಡಲು ನಿರ್ಧರಿಸಿದ. ಸ್ಪೇನ್‌ನ ಮಲ್ಲೋರ್ಕಾ ದ್ವೀಪಕ್ಕೆ ತೆರಳಿದ. ಇಲ್ಲಿ ವರ್ಕ್ ಔಟ್ ಮಾಡದಿರಲು ಯಾವುದೇ ಕಾರಣವಿರಲಿಲ್ಲ. ಸ್ನೇಹಿತರು ಮತ್ತು ಕುಟುಂಬಸ್ಥರ ಜೊತೆ ಮಾತನಾಡಬಾರದು ಎಂದು ನಿರ್ಧರಿಸಿದ ಬ್ರಿಯಾನ್  ಓ ವರ್ಕ್ ಔಟ್ ಗೆ ಮುಂದಾದ. 

ವಾರದಲ್ಲಿ ಏಳು ದಿನ ವರ್ಕ್ ಔಟ್ (Work Out) : ತೂಕ ಇಳಿಸಿಕೊಳ್ಳಲು ಮುಂದಾದ ಬ್ರಿಯಾನ್ ಓ, ಎರಡು ವಾರಗಳ ಕಾಲ ಪ್ರತಿದಿನ ಸುಮಾರು 90 ನಿಮಿಷಗಳ ಕಾಲ ನಿರಂತರವಾಗಿ ವಾಕಿಂಗ್ ಮಾಡಿದ್ದಾನೆ. ಪ್ರತಿದಿನ ಐದು ಗಂಟೆಗಳ ಕಾಲ ಕಠಿಣ ವ್ಯಾಯಾಮ ಮಾಡಿದ್ದಾನೆ. ವಾರದಲ್ಲಿ ಆರು ದಿನ ತೂಕ ಎತ್ತುವುದನ್ನು ಅಭ್ಯಾಸ ಮಾಡ್ತಿದ್ದ. ನಂತರ ವಾರಕ್ಕೆ ಮೂರು ಬಾರಿ ಸ್ವಿಮ್ಮಿಂಗ್ ಹಾಗೂ ರನ್ನಿಂಗ್ ಮಾಡ್ತಿದ್ದ.  ಬ್ರಿಯಾನ್ ಓ ಒಂದು ದಿನವೂ ಬಿಡುವು ತೆಗೆದುಕೊಳ್ತಿರಲಿಲ್ಲವಂತೆ. 

ಬ್ರಿಯಾನ್ ಓ ಆಹಾರ ಹೀಗಿತ್ತು: ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸೇವನೆ ತೂಕ ನಷ್ಟದ ಪ್ರಮುಖ ಭಾಗವಾಗಿತ್ತು ಎಂದು ಬ್ರಿಯಾನ್ ಹೇಳಿದ್ದಾನೆ. ದೇಹದ ಕೊಬ್ಬನ್ನು ಕಡಿಮೆ ಮಾಡಲು, ಆರು ತಿಂಗಳ ಕಾಲ 2,200 ಕ್ಯಾಲೊರಿ ಸೇವಿಸಿದ್ದನಂತೆ ಬ್ರಿಯಾನ್. ತೂಕ ಇಳಿಸುವ ದಾರಿಯಲ್ಲಿ ಪ್ರತಿದಿನ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದನಂತೆ ಬ್ರಿಯಾನ್. ಆ ದಿನಗಳು ತುಂಬಾ ನೋವಿನಿಂದ ಕೂಡಿತ್ತು ಎನ್ನುತ್ತಾನೆ ಬ್ರಿಯಾನ್. 

Weight Loss Tips: ಬೇಗ ತೂಕ ಇಳಿಸ್ಕೋಬೇಕಾ, ಚಪಾತಿಗೆ ತುಪ್ಪ ಹಚ್ಕೊಂಡು ತಿನ್ನಿ ಸಾಕು

ತೂಕ ಇಳಿಸಿಕೊಳ್ಳುವ ಮೊದಲ ಮೂರು ತಿಂಗಳು ಊಟ, ನಿದ್ದೆ, ವ್ಯಾಯಾಮ ಬಿಟ್ಟರೆ ಬೇರೇನೂ ಮಾಡಲಿಲ್ಲ ಎನ್ನುತ್ತಾನೆ ಬ್ರಿಯಾನ್.  ಉಳಿದ ಸಮಯ ಸೋಫಾ ಮೇಲೆ ಇರ್ತಿದ್ದ ನಾನು ಶೌಚಾಲಯಕ್ಕೆ ಹೋಗಲು ಕಷ್ಟವಾಗ್ತಿತ್ತು ಎಂದಿದ್ದಾನೆ. ನಾಲ್ಕನೇ ತಿಂಗಳಿನಿಂದ ನನಗೆ ಇದು ನಿಧಾನವಾಗಿ ಅಭ್ಯಾಸವಾಯ್ತು ಎನ್ನುತ್ತಾನೆ ಬ್ರಿಯಾನ್ ಓ.  

ಚಳಿಗಾಲದಲ್ಲಿ ದಿಢೀರ್ ತೂಕ ಹೆಚ್ಚಾಗೋದೇಕೆ? ಕಾರಣ ಇಲ್ಲಿವೆ ನೋಡಿ

ಸತತ ಪರಿಶ್ರಮದ ನಂತ್ರ 7 ತಿಂಗಳ ನಿರಂತರ ವ್ಯಾಯಾಮದ ನಂತ್ರ ಬ್ರಿಯಾನ್ ತೂಕ ಇಳಿಸಿಕೊಳ್ಳಲು ಯಶಸ್ವಿಯಾದನಂತೆ. ಆತ 7 ತಿಂಗಳಲ್ಲಿ 63 ಕೆಜಿ ತೂಕ ಇಳಿಸಿಕೊಂಡನಂತೆ. ಬ್ರಿಯಾನ್ ಓ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಂತ್ರ ಆ ವಿಡಿಯೋವನ್ನು 2 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. 

click me!