ಕೋಪ ಬಂದ್ರೆ ನಾನು ಮನುಷ್ಯನಾಗಿ ಇರಲ್ಲ ಅನ್ನೋರು ನೀವಾಗಿದ್ರೆ ಹೋದಲ್ಲೆಲ್ಲ ಒಂದು ಪೇಪರ್, ಪೆನ್ ಇಟ್ಕೊಂಡು ಹೋಗಿ. ಕೋಪಕ್ಕೆ ಮೂಗು ಕೊಯ್ದುಕೊಳ್ಳುವ ಮೊದಲೇ ಪೇಪರ್ ಮೇಲೆ ಕಾರಣ ಬರೀರಿ. ಏನಾಗುತ್ತೆ ನೀವೇ ನೋಡಿ.
ಒಂದಲ್ಲ ಒಂದು ಸಮಯದಲ್ಲಿ ಮನುಷ್ಯ ಕೋಪಕ್ಕೆ ಗುರಿಯಾಗ್ತಾನೆ. ಒಬ್ಬರ ಮೇಲೆ ಅತೀ ಕೋಪ ಬಂದಾಗ ಅದನ್ನು ಆ ಕ್ಷಣಕ್ಕೆ ಹೊರ ಹಾಕಿದ್ರೆ ಮನಸ್ಸು ಶಾಂತವಾಗುತ್ತದೆ. ಅದೇ ಈ ಕೋಪವನ್ನು ಮನಸ್ಸಿನಲ್ಲಿಯೇ ನುಂಗಿಕೊಳ್ಳುವ ಪ್ರಯತ್ನ ನಡೆಸಿದ್ರೆ ನಿಮ್ಮ ಕೋಪ ತಣ್ಣಗಾಗುವ ಬದಲು ಹೆಚ್ಚಾಗುತ್ತದೆ. ಮನಸ್ಸು ಕಾದ ಕೆಂಡವಾಗುತ್ತದೆ. ಚಡಪಡಿಗೆ, ಒತ್ತಡ ಹೆಚ್ಚಾಗುತ್ತದೆ. ಕೆಲವರಿಗೆ ಕೋಪ ನಿಯಂತ್ರಿಸಿಕೊಳ್ಳಲಾಗದೆ ಅಳು ಬರುತ್ತದೆ. ಮತ್ತೆ ಕೆಲವರು ತಮಗೆ ತಾವೇ ಹಾನಿ ಮಾಡಿಕೊಳ್ತಾರೆ. ಮಕ್ಕಳ ಮೇಲೆ ನಿಮಗೆ ಕೋಪ ಬಂದ್ರೆ ನೀವು ಆ ಕ್ಷಣ ಅವರ ಮುಂದೆ ಕಿರುಚಾಡಿ, ಕೂಗಾಡಿ ಅದನ್ನು ಕಡಿಮೆ ಮಾಡಿಕೊಳ್ತೀರಿ. ಕಚೇರಿಯಲ್ಲಿ ಬಾಸ್ ಮೇಲೆ, ಮನೆಯಲ್ಲಿ ಹಿಡಿಯರ ಮೇಲೆ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಅಪರಿಚಿತರ ಮೇಲೆ ಕೋಪ ಬಂದಾಗ ಅದನ್ನು ಆ ಕ್ಷಣ ವ್ಯಕ್ತಪಡಿಸಲು ಆಗೋದಿಲ್ಲ. ಆಗ ಮೇಲೆ ಹೇಳಿದಂತೆ ಜನರು ಒತ್ತಡಕ್ಕೆ ಒಳಗಾಗ್ತಾರೆ. ಈ ಕೋಪ ನಿಯಂತ್ರಣ ಹೇಗೆ ಎಂಬ ಪ್ರಶ್ನೆ ಬಂದಾಗ ಜನರು, ಯೋಗ, ಧ್ಯಾನದ ಸಲಹೆ ನೀಡ್ತಾರೆ. ಇದ್ರ ಜೊತೆ ವಿಜ್ಞಾನಿಗಳು ಇನ್ನೊಂದು ಸಲಹೆಯನ್ನು ಈಗ ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅಧ್ಯಯನ ನಡೆಸಿ ಈ ವರದಿಯನ್ನು ನೀಡಿದ್ದಾರೆ.
ವಿಜ್ಞಾನಿ (Scientist) ಗಳ ಪ್ರಕಾರ ಕೋಪ ಕಡಿಮೆ ಮಾಡೋದು ಹೇಗೆ? : ಜಪಾನ್ (Japan) ನ ಕವೈ ನಗೋಯಾ ವಿಶ್ವವಿದ್ಯಾಲಯದ ಅರಿವಿನ ವಿಜ್ಞಾನ ವಿಭಾಗವು ಅಧ್ಯಯನ (Study) ನಡೆಸಿದೆ. ಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆದಿದೆ. ಈ ಅಧ್ಯಯನ ವರದಿ ಪ್ರಕಾರ, ನೀವು ಕೋಪ ಕಡಿಮೆ ಮಾಡಿಕೊಳ್ಳೋದು ಬಹಳ ಸುಲಭ. ಕೋಪ (Anger) ಬರ್ತಿದ್ದಂತೆ ನೀವು ಒಂದು ಕಾಗದವನ್ನು ತೆಗೆದುಕೊಳ್ಳಿ. ಅದ್ರ ಮೇಲೆ ನಿಮ್ಮ ಕೋಪದ ವಿಷ್ಯವನ್ನು ಬರೆದು ಅದನ್ನು ಹರಿದು ಹಾಕಿ. ಇಷ್ಟೆ, ನಿಮ್ಮ ಕೋಪ ಕಡಿಮೆಯಾಗುತ್ತೆ ಎನ್ನುತ್ತಾರೆ ತಜ್ಞರು.
undefined
ವರ್ಕೌಟ್ ಅಥವಾ ಡಯಟ್ ಮಾಡ್ದೆ ಒಂದೇ ವಾರದಲ್ಲಿ ಬೆಲ್ಲಿ ಫ್ಯಾಟ್ ಕರಗಿಸೋಕೆ ಇಲ್ಲಿದೆ ಟಿಪ್ಸ್
ಕೋಪವನ್ನು ಕಡಿಮೆ ಮಾಡಲು ಇದು ಅತ್ಯಂತ ಪರಿಣಾಮಕಾರಿ ಎಂದವರು ಪರಿಗಣಿಸಿದ್ದಾರೆ. ನೀವು ನಿಮ್ಮ ಭಾವನೆಯನ್ನು ಕಾಗದದ ಮೇಲೆ ಬರೆಯುವ ಮೂಲಕ ಅದನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಸಂಶೋಧಕರು.
ಸಂಶೋಧಕರು 100 ವಿದ್ಯಾರ್ಥಿಗಳ ಮೇಲೆ ಈ ಸಂಬಂಧ ಅಧ್ಯಯನ ನಡೆಸಿದ್ದಾರೆ. ಸಾಮಾಜಿಕ ಸಮಸ್ಯೆ ಬಗ್ಗೆ ತಮ್ಮ ಅಭಿಪ್ರಾಯ ಬರೆಯಲು ಅವರಿಗೆ ಹೇಳಿದ್ದಾರೆ. ನಂತ್ರ ಅವರು ಬರೆದ ಉತ್ತರವನ್ನು ಇವರು ಖಂಡಿಸಿದ್ದಾರೆ. ನಾನಾ ರೀತಿಯಲ್ಲಿ ಅವಹೇಳನ ಮಾಡಿದ್ದಾರೆ. ಇದು ಸಹಜವಾಗಿಯೇ ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿದೆ. ಆ ನಂತ್ರ ವಿದ್ಯಾರ್ಥಿಗಳಿಗೆ ಕಾಗದ ನೀಡಿ ಅಭಿಪ್ರಾಯ ಬರೆಯುವಂತೆ ತಿಳಿಸಿದ್ದಾರೆ. ಅದ್ರಲ್ಲಿ ವಿದ್ಯಾರ್ಥಿಗಳನ್ನು ಎರಡು ಗುಂಪು ಮಾಡಲಾಗಿತ್ತು. ಒಂದು ಗುಂಪಿನ ಜನರು ಬರೆದ ಕಾಗದವನ್ನು ಹರಿದು ಹಾಕಿದ್ರು. ಇನ್ನೊಬ್ಬರು ಕಾಗದದ ಮೇಲೆ ಬರೆದು ಹಾಗೆ ಇಟ್ಟಿದ್ದರು.
ಸಂಶೋಧಕರು ನಂತ್ರ ವಿದ್ಯಾರ್ಥಿಗಳ ಭಾವನೆಯನ್ನು ಅರ್ಥೈಸುವ ಪ್ರಯತ್ನ ನಡೆಸಿದ್ದಾರೆ. ಯಾವ ವಿದ್ಯಾರ್ಥಿಗಳು ಭಾವನೆಗಳನ್ನು ಕಾಗದದ ಮೇಲೆ ಬರೆದು ಹರಿದಿದ್ದರೋ ಅವರು ಕಾಗದದ ಮೇಲೆ ಬರೆದು ಕೈನಲ್ಲಿಟ್ಟುಕೊಂಡವರಿಗಿಂತ ಹೆಚ್ಚು ಶಾಂತವಾಗಿದ್ದರು. ಅವರಿಗೆ ಬಂದಿದ್ದ ಕೋಪ ಕಡಿಮೆ ಆಗಿತ್ತು ಎಂದು ತಜ್ಞರು ಹೇಳಿದ್ದಾರೆ.
ಬ್ರೈನ್ ಟ್ಯೂಮರ್‌ಗೂ ಸ್ಟ್ರೋಕ್‌ಗೂ ಸಂಬಂಧವಿದ್ಯಾ?
ಕೋಪ ನಿಯಂತ್ರಣಕ್ಕಿರುವ ವಿಧಾನ : ನೀವು ಕಾಗದದ ಮೇಲೆ ಭಾವನೆ ಬರೆದು ಆ ಕಾಗದ ಹರಿಯುವ ಜೊತೆಗೆ ಕೋಪ ಬಂದಾಗ ಸುಮ್ಮನಿರುವುದು, ಜಾಗ ಬದಲಿಸುವುದು, ಉಲ್ಟಾ ಲೆಕ್ಕ ಮಾಡುವುದು ಸೇರಿದಂತೆ ಸಂಗೀತ ಕೇಳುವುದು ಅಥವಾ ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಕೆಲಸ ಅಥವಾ ಹವ್ಯಾಸ ಮಾಡಬೇಕು.