ಅತೀಯಾದ ಪ್ಲಾಸ್ಟಿಕ್ ಬಳಕೆ ಅಪಾಯಕ ಎಚ್ಚರಿಕೆ ನೀಡುತ್ತಲೇ ಇದೆ. ಒಂದಡೆ ಪರಿಸರ ಸಂಪೂರ್ಣ ನಾಶವಾಗುತ್ತಿದ್ದರೆ, ಮತ್ತೊಂದೆಡೆ ಆರೋಗ್ಯ ಕೂಡ ಹದಗೆಡುತ್ತಿದೆ. ಇದೀಗ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಡೆಸಿದ ಅಧ್ಯಯನ ವರದಿ ಬೆಚ್ಚಿ ಬೀಳಿಸುತ್ತಿದೆ. ನಾವು ಕುಡಿಯುವ 1 ಲೀಟರ್ ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ ಬರೋಬ್ಬರಿ 2.4 ಲಕ್ಷ ಪ್ಲಾಸ್ಟಿಕ್ ಸೂಕ್ಷ್ಮ ತುಣುಕುಗಳಿವೆ.
ನವದೆಹಲಿ(ಜ.09) ಪ್ರಯಾಣ, ಪ್ರವಾಸ, ಕಚೇರಿ, ಮನೆ ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿದ್ದ ನೀರನ್ನು ಕುಡಿಯುತ್ತೇವೆ. ಯಾವುದೇ ಪ್ರದೇಶಕ್ಕೂ ತೆರಳಿದರೂ ಪ್ಲಾಸ್ಟಿಕ್ ಬಾಟಲಿ ನೀರುಗಳು ಸುಲಭವಾಗಿ ಸಿಗುತ್ತದೆ. ಹೀಗಾಗಿ ಮನೆಯಿಂದ ನೀರು ಕೊಂಡೊಯ್ಯುವ ಕಾಲ ಇದಲ್ಲ. ಇನ್ನು ಮನೆಯಲ್ಲೂ ಕೂಡ ಬಣ್ಣ ಬಣ್ಣದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿಟ್ಟು ಕುಡಿಯುವುದು ಸಾಮಾನ್ಯವಾಗಿದೆ. ಹೀಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದು ಅತ್ಯಂತ ಅಪಾಯಕಾರಿ ಅನ್ನೋದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಅಧ್ಯಯನದಲ್ಲಿ ಬಹಿರಂಗವಾಗಿದೆ. 1 ಲೀಟರ್ ಪ್ಲಾಸ್ಟಿಕ್ ಬಾಟಲಿಯ ನೀರಿನಲ್ಲಿ ಬರೋಬ್ಬರಿ 2.4 ಲಕ್ಷ ಅತೀ ಸೂಕ್ಷ್ಮ ಪ್ಲಾಸ್ಟಿಕ್ ತುಣುಕುಗಳಿವೆ ಎಂದು ಅಧ್ಯಯನ ಪತ್ತೆ ಹಚ್ಚಿದೆ.
ಪ್ಲಾಸ್ಟಿಕ್ ಬಾಲಟಿ ನೀರು ಕುಡಿಯುವುದರಿಂದ ಮನುಷ್ಯನ ದೇಹದೊಳಕ್ಕೆ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತದೆ. ಇದು ಕೇವಲ ಪ್ಲಾಸ್ಟಿಕ್ ನೀರಿನ ಬಾಟಲಿಗೆ ಮಾತ್ರ ಸೀಮಿತವಾಗಿಲ್ಲ. ಪ್ಲಾಸ್ಟಿಕ್ ಡಬ್ಬದಲ್ಲಿರುವ ಆಹಾರ ತಿನಿಸುಗಳಿಂದಲೂ ದೇಹಕ್ಕೆ ಇದೇ ರೀತಿ ಮೈಕ್ರೋಪ್ಲಾಸ್ಟಿಕ್ ಕಣಗಳು ದೇಹದೊಳಕ್ಕೆ ಸೇರುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿಸಿ ವಸ್ತುಗಳನ್ನು ತುಂಬಿದ ಪ್ಲಾಸ್ಟಿಕ್ ಬಾಟಲಿ ಮತ್ತಷ್ಟು ಅಪಾಯಕಾರಿ. ಹೋಟೆಲ್ ಸೇರಿದಂತೆ ಹಲವೆಡೆ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಪಾರ್ಸೆಲ್ ಮಾಡಲಾಗುತ್ತದೆ. ಆನ್‌ಲೈನ್ ಫುಡ್ ಆರ್ಡರ್ ವೇಳೆ ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲೇ ಬಹುತೇಕ ಆಹಾರಗಳು ಡೆಲವರಿಯಾಗುತ್ತದೆ. ಇದು ಕೂಡ ಅಪಾಯಕಾರಿಯಾಗಿದೆ.
undefined
ಚಹಾ ಕುಡಿಯೋಕೆ ಡಿಸ್ಪೋಸೇಬಲ್ ಕಪ್ ಬಳಸ್ತಿದ್ರೆ ಇವತ್ತೆ ನಿಲ್ಲಿಸಿ… ಇಲ್ಲಾಂದ್ರೆ ಅಪಾಯ ಖಚಿತ!
ನ್ಯಾನೋಪ್ಲಾಸ್ಟಿಕ್ ಅಥವಾ ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯನ ಜೀವಕೋಶಗಳ ಸೇರಲಿದೆ. ರಕ್ತಪ್ರವಾಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬಹು ಅಂಗಾಗ ವೈಕಲ್ಯಗಳು ಸಂಭವಿಸಲಿದೆ. ಈ ಮೈಕ್ರೋಪ್ಲಾಸ್ಟಿಕ್ ಗರ್ಭದಲ್ಲಿರುವ ಮಗುವಿನ ದೇಹವನ್ನೂ ಸೇರುತ್ತದೆ. ತಾಯಿಯ ಹೊಕ್ಕಳ ಬಳ್ಳಿ ಮೂಲಕ ಮಗುವಿನ ದೇಹ ಸೇರಿ ಮಗುವಿನ ಆರೋಗ್ಯವನ್ನೂ ಏರುಪೇರು ಮಾಡಲಿದೆ.ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋದನ್ನು ಈಗಾಗಲೇ ಹಲವು ವೈದ್ಯರು ಹೇಳಿದ್ದಾರೆ. ಇದೀಗ ಅಧ್ಯಯನ ವರದಿಯೂ ಇದೇ ಮಾತನ್ನು ಪುನರುಚ್ಚರಿಸಿದೆ.
ಅತೀ ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಕೂಡ ಹಾಳಾಗುತ್ತಿದೆ. ಪ್ರವಾಸಿ ತಾಣಗಳು, ನದಿ, ತೊರೆಗಳಲ್ಲಿ ನೀರು, ಜಲಚರಗಳ ಬದಲು ಪ್ಲಾಸ್ಟಿಕ್ ತುಂಬಿದ ದೃಶ್ಯಗಳೇ ಎಲ್ಲೆಡೆ ಕಾಣಸಿಗುತ್ತದೆ. ಎಲ್ಲರಲ್ಲೂ ಪ್ಲಾಸ್ಟಿಕ್ ಜಾಗೃತಿ ಮೂಡುವಷ್ಟರಲ್ಲೇ ಪರಿಸರ ಹಾಗೂ ಮಾನವನ ಆರೋಗ್ಯ ತೀವ್ರ ಹದಗೆಡುವ ಸಾಧ್ಯತೆ ಹೆಚ್ಚಿದೆ.
ತಾಪಮಾನ ತಡೆಯದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ