ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ವಯಸ್ಕರಲ್ಲಿ ಹಾರ್ಟ್‌ಅಟ್ಯಾಕ್ ಪ್ರಮಾಣ ಏರಿಕೆಯಾಗಿದೆ. ಇದಕ್ಕೇನು ಕಾರಣ?
ಹಿಂದೆಲ್ಲಾ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತವಾಗುವುದು ಅಪರೂಪವಾಗಿತ್ತು. ಈಗ 5ರಲ್ಲಿ 1 ಹೃದಯಾಘಾತ ರೋಗಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 20 ಅಥವಾ 30 ವರ್ಷದಲ್ಲಿ ಹೃದಯಾಘಾತವು ಹೆಚ್ಚು ಸಾಮಾನ್ಯವಾಗಿದೆ. ಯುವ ವಯಸ್ಕರಲ್ಲಿ ಹೃದಯಾಘಾತದ ಹೆಚ್ಚಳಕ್ಕೆ ಕಾರಣ ಏನೆಂದು ತಿಳಿದುಕೊಂಡರೆ ಆರೋಗ್ಯವನ್ನು ರಕ್ಷಿಸಲು ಮತ್ತು ಹೃದಯರಕ್ತನಾಳದ ಕಾಯಿಲೆಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಕೆಳಗಿನ ಪ್ರಮುಖ ಕಾರಣಗಳಿಂದ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಒತ್ತಡದ ಜೀವನಶೈಲಿ: ಆಧುನಿಕ ಜೀವನಶೈಲಿ (Lifestyle) ಹಲವ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಒಂದೇ ಕಡೆ ಕುಳಿತು ಕೆಲಸ ಮಾಡುವ ಅಭ್ಯಾಸ, ವ್ಯಾಯಾಮ (Exercise) ಮಾಡದಿರುವುದು, ಮದ್ಯಪಾನ, ಧೂಮಪಾನ (Smoking) ಮೊದಲಾದ ಅಭ್ಯಾಸಗಳು ಸುಲಭವಾಗಿ ಕಾಯಿಲೆ (Disease)ಗಳನ್ನು ಆಹ್ವಾನಿಸುತ್ತವೆ. ಕೆಟ್ಟ ಅಭ್ಯಾಸಗಳು ಕ್ರಮೇಣ ದೇಹ (Body)ವನ್ನು ಅನಾರೋಗ್ಯಕ್ಕೆ ದೂಡುತ್ತದೆ. ಮತ್ತು ಹೃದಯ ಸಂಬಂಧಿತ ಕಾಯಿಲೆ ಅಥವಾ ಹೃದಯಾಘಾತ ಉಂಟಾಗುತ್ತದೆ.
ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಅಧಿಕ; ಯಾಕೆ ಹೀಗೆ?
ಮಧುಮೇಹ: ಮಧುಮೇಹ (Diabetes) ಹೊಂದಿರದ ವಯಸ್ಕರಿಗೆ ಹೋಲಿಸಿದರೆ ಹೃದ್ರೋಗದಿಂದ ಸಾಯುವ ಸಾಧ್ಯತೆ 2-4 ಪಟ್ಟು ಹೆಚ್ಚು. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಆರೋಗ್ಯಕರ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸದಿದ್ದಾಗ ಸಮಸ್ಯೆ ಹೆಚ್ಚಾಗುತ್ತದೆ. ಅಧಿಕ ರಕ್ತದ ಸಕ್ಕರೆಯು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಅಪಧಮನಿಗಳಲ್ಲಿ ಕೊಬ್ಬುಗಳನ್ನು ನಿರ್ಮಿಸುವ ಮತ್ತು ಅಪಧಮನಿಕಾಠಿಣ್ಯವನ್ನು ಉಂಟುಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮಧುಮೇಹ ಹೊಂದಿರುವ ರೋಗಿಗಳು ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ಹೃದಯಾಘಾತದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುವ ಇತರ ದೀರ್ಘಕಾಲದ ಆರೋಗ್ಯ ಕಾಯಿಲೆಗಳನ್ನು ಹೊಂದುವ ಸಾಧ್ಯತೆ ಹೆಚ್ಚು.
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡ (High blood pressure), ಹೃದಯರಕ್ತನಾಳದ ಕಾಯಿಲೆಗೆ ದೊಡ್ಡ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಅಧಿಕ ರಕ್ತದೊತ್ತಡವು ಹೃದಯ ಸ್ನಾಯುಗಳನ್ನು ದಪ್ಪವಾಗಿಸುತ್ತದೆ. ಇದು ರಕ್ತನಾಳಗಳಿಗೆ ಹಾನಿ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಜಿಮ್‌ನಲ್ಲಿ ಹಾರ್ಟ್‌ಅಟ್ಯಾಕ್‌ನಿಂದ ಯುವಕ ಸಾವು; ವರ್ಕೌಟ್ ಮಾಡುವಾಗ್ಲೇ ಯಾಕೆ ಹೀಗಾಗುತ್ತೆ?
ಹೆಚ್ಚಿದ ತೂಕ: ಅಧಿಕ ತೂಕವು ಹಲವಾರು ಕಾರಣಗಳಿಗಾಗಿ ಹೃದಯಾಘಾತದ ಅಪಾಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆರೋಗ್ಯವಂತರಾಗಿದ್ದರೂ ಸ್ಥೂಲಕಾಯತೆ ಹೃದಯಾಘಾತವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಧಿಕ ತೂಕ ಮತ್ತು ಬೊಜ್ಜು (Obesity) ಹೊಂದಿರುವ ರೋಗಿಗಳು ಸಾಮಾನ್ಯವಾಗಿ ತಮ್ಮ ಹೃದಯದ ಆರೋಗ್ಯವನ್ನು ಕಡಿಮೆ ಮಾಡುವ ಇತರ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯೂ ಇರುತ್ತದೆ.
ಸಿಗರೇಟ್ ಸೇದುವ ಅಭ್ಯಾಸ: ಯುವ ವಯಸ್ಕರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಲ್ಲಿ, ಸಿಗರೇಟ್ ಸೇದುವುದು ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಹೃದಯಾಘಾತದ ಅಪಾಯವು ಸೇದುವ ಸಿಗರೇಟುಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಾಗುತ್ತದೆ. ಧೂಮಪಾನ ಮಾಡದವರಿಗೆ ಹೋಲಿಸಿದರೆ ದಿನಕ್ಕೆ ಒಂದು ಪ್ಯಾಕ್ ಧೂಮಪಾನವು ಹೃದಯಾಘಾತದ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಇ-ಸಿಗರೆಟ್‌ಗಳು ನಿಕೋಟಿನ್ ಮತ್ತು ಇತರ ವಿಷಕಾರಿ ಸಂಯುಕ್ತಗಳನ್ನು ಒಳಗೊಂಡಿರುತ್ತವೆ, ಅದು ಹೃದಯ ಬಡಿತವನ್ನು ವೇಗಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಸ್ಮೋಕ್ ಮಾಡದವರಿಗೆ ಹೋಲಿಸಿದರೆ ಸ್ಮೋಕ್ ಮಾಡುವವರಿಗೆ ಹೃದಯಾಘಾತವಾಗುವ ಸಾಧ್ಯತೆ 34% ಹೆಚ್ಚು ಎಂದು ತಿಳಿದುಬಂದಿದೆ.
ಒಟ್ನಲ್ಲಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಈ ಎಲ್ಲಾ ವಿಚಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಆರೋಗ್ಯವಾಗಿರಲು ಇಂಥಾ ಅಭ್ಯಾಸಗಳನ್ನು ಬಿಟ್ಟು ಬಿಡುವುದು ಒಳ್ಳೆಯದು.