Health Tips : ನೀವೂ ಆಗಾಗ ಐಸ್ ತಿನ್ನುತ್ತೀರಾ..ಎಚ್ಚರ ! ದೇಹದ ಮೇಲೆ ಏನಾಗುತ್ತೆ?

Published : May 06, 2023, 03:25 PM IST
 Health Tips : ನೀವೂ ಆಗಾಗ ಐಸ್ ತಿನ್ನುತ್ತೀರಾ..ಎಚ್ಚರ ! ದೇಹದ ಮೇಲೆ ಏನಾಗುತ್ತೆ?

ಸಾರಾಂಶ

ನಮ್ಮ ದೇಹಕ್ಕೆ ವಿಟಮಿನ್ ಮತ್ತು ಪೋಷಕಾಂಶಗಳ ಅಗತ್ಯವಿರುತ್ತದೆ. ಯಾವುದು ಕಡಿಮೆಯಾದ್ರೂ ಅನಾರೋಗ್ಯ ಕಾಡುತ್ತದೆ. ನಮ್ಮ ದೇಹವೇ ನಮಗೆ ಕೆಲವೊಂದು ಸೂಚನೆ ರವಾನೆ ಮಾಡುತ್ತದೆ. ಅದನ್ನು ನಾವು ಪತ್ತೆ ಮಾಡುವ ಶಕ್ತಿ ಹೊಂದಿದ್ರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳೋದು ಸುಲಭ.  

ಜನರು ಚಿತ್ರ - ವಿಚಿತ್ರವಾದ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ಮಣ್ಣು ತಿಂದ್ರೆ ಮತ್ತೆ ಕೆಲವರು ಚಾಕ್ ಪೀಸ್ ತಿನ್ನುತ್ತಾರೆ. ಇನ್ನು ಕೆಲವರು ಟೂತ್ ಪೇಸ್ಟ್, ಮೆಂಟೋಪ್ಲಸ್ ನಂತಹ ನೋವು ನಿವಾರಕ ಔಷಧಿಗಳ ವಾಸನೆ ತೆಗೆದುಕೊಳ್ತಾರೆ. ಕೆಲ ಮಂದಿಗೆ ಐಸ್ ಅಂದ್ರೆ ತುಂಬಾ ಇಷ್ಟ. ಯಾವುದೇ ಪಾನೀಯವಿರಲಿ ಅದಕ್ಕೆ ಐಸ್ ಹಾಕಿ ಕುಡಿತಾರೆ. ಮತ್ತೆ ಕೆಲವರು ಐಸ್ ಕ್ಯೂಬ್ ಗಳನ್ನು ಹಾಗೆ ತಿನ್ನುತ್ತಾರೆ. ಐಸ್ ಕ್ಯೂಬ್ ತಿಂದ ತಕ್ಷಣ ಬಾಯಿ ತಣ್ಣಗಾಗುತ್ತದೆ. ದೇಹ ಕೂಲ್ ಆದ ಅನುಭವವಾಗುತ್ತದೆ. ನೀವೂ ಐಸ್ ಕ್ಯೂಬ್ ತಿನ್ನುವ ಅಭ್ಯಾಸ ಹೊಂದಿದ್ದರೆ ಎಚ್ಚರದಿಂದಿರಿ. ಇದು ಒಂದು ರೀತಿಯ ಕಾಯಿಲೆ. 

ನಾವು ಆರೋಗ್ಯ (Health) ಕರ ಆಹಾರವನ್ನು ಸೇವನೆ ಮಾಡ್ಬೇಕು. ಆರೋಗ್ಯಕರ ಆಹಾರ ಮಧುಮೇಹ (Diabetes), ಹೃದ್ರೋಗ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ನಂತಹ ಭಯಾನಕ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ದೇಹಕ್ಕೆ ಸರಿಯಾದ ಪೋಷಕಾಂಶ ಸಿಕ್ಕಿಲ್ಲ ಎಂದಾದ್ರೆ ದೇಹ ಅನಾರೋಗ್ಯ (Illness) ಕ್ಕೆ ಒಳಗಾಗುತ್ತದೆ. ಜೀವಸತ್ವಗಳು ಮತ್ತು ಖನಿಜಗಳ ಕೊರತೆ ನಾವು ಹಾಸಿಗೆ ಹಿಡಿಯುವಂತೆ ಮಾಡುತ್ತದೆ.  ನಮ್ಮ ದೇಹದಲ್ಲಿ ಜೀವಸತ್ವ ಹಾಗೂ ಖನಿಜ ಕಡಿಮೆಯಾಗಿದೆ ಎಂಬುದನ್ನು ನಮ್ಮ ದೇಹವೇ ಅನೇಕ ರೀತಿಯಲ್ಲಿ ತೋರಿಸುತ್ತದೆ. ಆಗ ನಾವು ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಆಹಾರದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ದೇಹದಲ್ಲಿ ಯಾವ ಪೋಷಕಾಂಶ ಕಡಿಮೆಯಾದ್ರೆ ಯಾವ ರೀತಿ ಸೂಚನೆ ಸಿಗುತ್ತದೆ ಹಾಗೆ ಐಸ್ ತಿನ್ನಬೇಕು ಅಂತಾ ನಿಮಗೆ ಅನ್ನಿಸುತ್ತಿದ್ದರೆ ನಿಮ್ಮ ದೇಹದಲ್ಲಿ ಯಾವ ಅಂಶ ಕಡಿಮೆಯಾಗಿದೆ ಎಂದರ್ಥ ಎಂಬುದನ್ನು ಇಲ್ಲಿದೆ.

HEALTHY FOOD : ತೂಕ ಇಳಿಸ್ಬೇಕೆಂದ್ರೆ ಇದನ್ನು ತಪ್ಪದೆ ತಿನ್ನಿ

ಐಸ್ ತಿನ್ನಲು ಇದು ಕಾರಣ : ಬೇಸಿಗೆಯಲ್ಲಿ ಕೂಲ್ ಕೂಲ್ ಆದ ಐಸ್ ಎಲ್ಲರಿಗೂ ಇಷ್ಟವಾಗುತ್ತದೆ. ಆದ್ರೆ ಕೆಲವರಿಗೆ ಕಾಲ ಯಾವುದೇ ಇದ್ದರೂ ಐಸ್ ತಿನ್ನಬೇಕೆಂಬ ಬಯಕೆಯಾಗುತ್ತದೆ. ನಿಮಗೂ ಐಸ್ ತಿನ್ನಬೇಕು ಅನ್ನಿಸಿದ್ರೆ  ಇದು ರಕ್ತಹೀನತೆಯನ್ನು ತೋರಿಸುತ್ತದೆ ಎನ್ನುತ್ತಾರೆ ತಜ್ಞರು. ರಕ್ತಹೀನತೆ ಸಮಸ್ಯೆ ದೂರವಾಗ್ತಿದ್ದಂತೆ ಐಸ್ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ನೀವು ಇದಕ್ಕೆ ಪರ್ಯಾಯವಾಗಿ  ಕೋಳಿ, ಮೊಟ್ಟೆ, ಕಬ್ಬಿಣಾಂಶವಿರುವ ಆಹಾರಗಳನ್ನು ಆಹಾರದಲ್ಲಿ ತಿನ್ನಬೇಕು.

ಮುಖ ಬಿರುಕು ಬಿಟ್ರೆ ಏನರ್ಥ : ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲೂ ನಿಮ್ಮ ಮುಖ ಬಿರುಕು ಬಿಡ್ತಿದೆ ಎಂದಾದ್ರೆ ನಿಮ್ಮ ದೇಹಕ್ಕೆ ವಿಟಮಿನ್ ಇ ಅಗತ್ಯವಿದೆ ಎಂದರ್ಥ. ವಿಟಮಿನ್ ಇ ಕೊರತೆ ಚರ್ಮದ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ವಿಟಮಿನ್ ಇ ಕೊರತೆ ನೀಗಿಸಲು ನೀವು ತುಪ್ಪ, ಮೊಟ್ಟೆಯ ಹಳದಿ ಭಾಗ, ಸೂರ್ಯಕಾಂತಿ ಬೀಜಗಳನ್ನು ಸೇವಿಸಬೇಕು.

ಮೊಬೈಲ್‌ ಪ್ರಿಯರೇ ಎಚ್ಚರ: ವಾರಕ್ಕೆ ಅರ್ಧಗಂಟೆ ಫೋನ್‌ನಲ್ಲಿ ಮಾತಾಡಿದ್ರೂ ಬಿ.ಪಿ. ಹೆಚ್ಚಳ, ಅಕಾಲಿಕ ಮರಣ ಸಾಧ್ಯತೆ

ಉಗುರು ನೋಡಿ ವಿಟಮಿನ್ ಕೊರತೆ ಪತ್ತೆ ಮಾಡಿ : ನಿಮ್ಮ ದೇಹದಲ್ಲಿ ವಿಟಮಿನ್ ಬಿ ಕಡಿಮೆಯಾಗಿದೆ ಎಂದಾದ್ರೆ ನಿಮ್ಮ ಉಗುರು ನಿರ್ಜೀವಗೊಳ್ಳುತ್ತದೆ. ಉಗುರಿನ ಅಕ್ಕಪಕ್ಕ ಒಡೆಯಲು ಶುರುವಾಗುತ್ತದೆ. ನಿಮಗೂ ಹೀಗೆ ಆಗ್ತಿದ್ದರೆ ಕಿತ್ತಳೆ, ಅಣಬೆ, ಮೊಟ್ಟೆಯ ಹಳದಿ ಭಾಗ, ಸೂರ್ಯಕಾಂತಿ ಬೀಜವನ್ನು ನೀವು ಡಯಟ್ ನಲ್ಲಿ ಸೇರಿಸಬೇಕು. 

ಕಾಲು ನೋವಾಗ್ತಿದ್ದರೆ ಇದು ಕಡಿಮೆಯಾಗಿದೆ ಎಂದರ್ಥ : ಕಾಲು ನೋವಿಗೆ ಮೆಗ್ನೀಸಿಯಂ ಕೊರತೆ ಕಾರಣ. ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ. ದೇಹಕ್ಕೆ ಅಗತ್ಯ ಮೆಗ್ನೀಸಿಯಂ ನೀಡಲು ನೀವು ಕುಂಬಳಕಾಯಿ ಬೀಜ, ಹಸಿರು ತರಕಾರಿಗಳನ್ನು ತಿನ್ನಬೇಕು. 

ಒಸಡಿನಲ್ಲಿ ರಕ್ತಸ್ರಾವವಾಗ್ತಿದೆಯಾ? : ಒಸಡಿನಲ್ಲಿ ಕೆಲವರಿಗೆ ರಕ್ತ ಕಾಣಿಸಿಕೊಳ್ಳುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಸಿ ಕಡಿಮೆಯಿದೆ ಎಂಬುದನ್ನು ಇದು ಸೂಚಿಸುತ್ತದೆ. ಕಿತ್ತಳೆ, ಸ್ಟ್ರಾಬೆರಿ, ಪೇರಲ, ಕಿವಿ, ನಿಂಬೆ, ಲಿಚಿ, ಪಪ್ಪಾಯಿ, ನೆಲ್ಲಿಕಾಯಿ, ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು ಮತ್ತು ಕೋಸುಗಡ್ಡೆಗಳನ್ನು ತಿನ್ನಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್