ಕಾಲು ನೋವು ಅಂತಾ ಎಣ್ಣೆ ಹಚ್ಚಿ ಮಸಾಜ್ ಮಾಡೋರೆ ಹೆಚ್ಚು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯೋರ ಸಂಖ್ಯೆ ಕಡಿಮೆ. ಆದ್ರೆ ಕಾಲು, ಪಾದದ ನೋವು ಕೂಡ ನಿಮ್ಮ ದೇಹದ ಅಂಗಗಳಲ್ಲಿ ಸಮಸ್ಯೆಯಿದೆ ಎಂಬುದನ್ನು ಸೂಚಿಸುತ್ತದೆ ಎಂಬುದು ನೆನಪಿರಲಿ.
ಈಗಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗೋದು ಸಾಮಾನ್ಯವಾಗಿದೆ. ಹಾಗೆಯೇ ಹೃದಯಾಘಾತ ಕೂಡ. ಚಿಕ್ಕ ವಯಸ್ಸಿನವರಿಗೆ ಹೃದಯಘಾತದ ಸಮಸ್ಯೆ ಕಾಣಿಸಿಕೊಳ್ತಿದೆ. ನಮ್ಮ ದೇಹದಲ್ಲಿ ಯಾವುದೇ ಸಣ್ಣ ಬದಲಾವಣೆಯಾದ್ರೂ ನಮ್ಮ ದೇಹ ಮುನ್ಸೂಚನೆ ನೀಡುತ್ತದೆ. ಆದ್ರೆ ಜನರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಸಮಸ್ಯೆ ದೊಡ್ಡದಾಗೋವರೆಗೂ ಕೆಲವೊಮ್ಮೆ ಜೀವ ಹೋಗೋವರೆಗೂ ಜನರಿಗೆ ತಮ್ಮ ದೇಹದಲ್ಲಾದ ಬದಲಾವಣೆ ಗುರುತಿಸೋಕೆ ಆಗೋದಿಲ್ಲ.
ಹೆಚ್ಚು ನಡೆದಾಗ, ನಿಂತು ಕೆಲಸ ಮಾಡಿದಾಗ ಇಲ್ಲವೆ ತುಂಬಾ ಸಮಯ ಕುಳಿತುಕೊಂಡಾಗ ಕೂಡ ನಮಗೆ ಕಾಲು (Foot) ನೋವು ಬರುವುದಿದೆ. ಪಾದದಲ್ಲಿ ನೋವು ಬಂದಾಗ ನಾವು ಅದನ್ನು ನಿರ್ಲಕ್ಷ್ಯ ಮಾಡ್ತೇವೆ. ನಿಂತ ಕಾರಣ ಇಲ್ಲವೆ ಬೇರೆ ಯಾವುದೇ ಕಾರಣಕ್ಕೆ ಪಾದ ನೋಯ್ತಿದೆ ಎಂದು ನಮಗೆ ನಾವು ಸಬೂಬು ಹೇಳಿಕೊಂಡು ಅದಕ್ಕೆ ಚಿಕಿತ್ಸೆ (Treatment) ಪಡೆಯೋದಿಲ್ಲ. ಆದ್ರೆ ದೀರ್ಘಕಾಲ ನಿಮಗೆ ಪಾದದಲ್ಲಿ ನೋವು ಕಾಣಿಸಿಕೊಳ್ತಿದ್ದರೆ ತಕ್ಷಣ ವೈದ್ಯ (Doctor) ರನ್ನು ಭೇಟಿಯಾಗಿ. ಯಾಕೆಂದ್ರೆ ಪಾದದ ನೋವು ನಿಮ್ಮ ಹೃದಯದ ಆರೋಗ್ಯ (Health) ಸರಿಯಾಗಿಲ್ಲ, ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತದೆ.
undefined
HEALTH TIPS: ಬ್ಲಡ್ ಶುಗರ್ ಲೆವೆಲ್ ಕಡಿಮೆಯಾದ್ರೆ ಏನು ಮಾಡೋದು?
ನಿಮ್ಮ ಪಾದ ನೋವು ಬರಲು ಕಾರಣವೇನು? : ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಿಲ್ಲವೆಂದ್ರೆ ಎಲ್ಲ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗೆ ರಕ್ತ ಪರಿಚಲನೆ ಸರಿಯಾಗಿ ಆಗದೆ ಹೋದ್ರೆ, ಪಾದದಲ್ಲೂ ನೋವು ಕಾಣಿಸುತ್ತದೆ. ಪಾದಗಳು ಜೋಮು ಹಿಡಿದಂತಾಗುತ್ತದೆ. ಸಾಮಾನ್ಯ ಕಾಲು ನೋವಿಗಿಂತ ಇದು ಭಿನ್ನವಾಗಿರುತ್ತದೆ. ಹಾಗಾಗಿ ಇದಕ್ಕೆ ತಕ್ಷಣ ಚಿಕಿತ್ಸೆ ಪಡೆಯಬೇಕೆಂದು ತಜ್ಞರು ಹೇಳ್ತಾರೆ.
ಹೃದಯ ಸಂಬಂಧಿ ಖಾಯಿಲೆ : ಮೊದಲೇ ಹೇಳಿದಂತೆ ದೀರ್ಘಕಾಲದವರೆಗೆ ನಿಮ್ಮ ಪಾದಗಳಲ್ಲಿ ನೋವು ಇದ್ದರೆ, ಪಾದಗಳಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗದಿದ್ದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ. ಹೃದಯಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳು ಇದ್ರಿಂದ ಉಂಟಾಗುತ್ತದೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಶೇಕಡಾ 25 ರಿಂದ ಶೇಕಡಾ 30 ಜನರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೊಂದಿದ್ದಾರೆ. ಈ ಅಧಿಕ ಕೊಲೆಸ್ಟ್ರಾಲ್ ಹೃದಯರಕ್ತನಾಳದ ಕಾಯಿಲೆಯ ಕಾರಣಗಳಲ್ಲಿ ಒಂದಾಗಿದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ.
ಸಿಕ್ಕಾಪಟ್ಟೆ ಬಿಸಿಲು ಅಂತ ಮನೆಗೆ ಕೂಲರ್ ಅಳವಡಿಸೋ ಮುನ್ನ ಈ ವಿಚಾರ ತಿಳ್ಕೊಂಡಿರಿ
ಬಾಹ್ಯ ಅಪಧಮನಿ ಕಾಯಿಲೆ ಎಂದರೇನು? : ಬಾಹ್ಯ ಅಪಧಮನಿ ಕಾಯಿಲೆಯನ್ನು ಪೆರಿಫೆರಲ್ ಆರ್ಟರಿ ಕಾಯಿಲೆ ಎಂದು ಕರೆಯಲಾಗುತ್ತದೆ. ಈ ಖಾಯಿಲೆಯಲ್ಲಿ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಿಗಿತದ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಸ್ವಲ್ಪ ಸಮಯದ ನಂತರ ಅದು ಗುಣಮುಖವಾಗುತ್ತದೆ. ಆದ್ರೆ ನಿಮಗೆ ನೋವು ಕಡಿಮೆಯಾಗ್ತಿಲ್ಲವೆಂದಾದ್ರೆ ವೈದ್ಯರನ್ನು ಭೇಟಿ ಮಾಡಿ. 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೆ ಬೊಜ್ಜಿನ ಸಮಸ್ಯೆಯ ಇರುವವರಿಗೆ ಬಾಹ್ಯ ಅಪಧಮನಿ ಕಾಯಿಲೆ ಹೆಚ್ಚಾಗಿ ಕಾಡುತ್ತದೆ.
ಈ ಸಮಸ್ಯೆಯಿಂದ ರಕ್ಷಣೆ ಹೇಗೆ? : ಕಾಲು ನೋವು ನಿಮ್ಮನ್ನು ಕಾಡಬಾರದು, ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿ ಇರಬೇಕು ಎಂದಾದ್ರೆ ನೀವು ನಿಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆ ಮಾಡ್ಬೇಕಾಗುತ್ತದೆ. ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ನೀವು ಸೇವನೆ ಮಾಡಬಾರದು.
ಸರಿಯಾದ ಪ್ರಮಾಣದ ಹಣ್ಣು (Fruit), ಹಸಿರು ತರಕಾರಿ (Green Vegetable), ಧಾನ್ಯಗಳು (Cereals), ಡ್ರೈ ಫ್ರೂಟ್ಸ್ (Dry Fruits) ಇತ್ಯಾದಿಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸಬೇಕು. ಹಾಗೆಯೇ ಧೂಮಪಾನ (Smoking) ಮತ್ತು ಮದ್ಯಪಾನದಂತಹ ದುಶ್ಚಟಗಳಿಂದ (Alcohol Addiction) ದೂರವಿರಬೇಕು. ಕೊಲೆಸ್ಟ್ರಾಲ್ ಕಡಿಮೆ ಮಾಡಲು ವ್ಯಾಯಾಮವೂ ಅಗತ್ಯ. ಡಯಟ್ (Diet) ಮಾತ್ರ ಕೊಲೆಸ್ಟ್ರಾಲ್ (cholesterol) ಅನ್ನು ನಿಯಂತ್ರಿಸುವುದಿಲ್ಲ, ಅದರೊಂದಿಗೆ ವ್ಯಾಯಾಮ (Exercise) ಮಾಡುವುದು ಅವಶ್ಯಕ. ನೀವು ನಿಯಮಿತವಾಗಿ ವಾಕಿಂಗ್ (Walking) ಮಾಡಿದ್ರೆ ಅಥವಾ ಲಘು ವ್ಯಾಯಾಮ ಮಾಡಿದ್ರೆ ಒಳ್ಳೆಯದು.