Health Tips: ಹೊಟ್ಟೆ ಸರಿಯಾಗಿಲ್ಲ ಅಂದ್ರೆ ಹೀಗೆಲ್ಲ ಆಗುತ್ತೆ

By Suvarna NewsFirst Published Mar 27, 2023, 5:00 PM IST
Highlights

ನಮ್ಮ ಹೊಟ್ಟೆ ಆರೋಗ್ಯದ ಗುಟ್ಟನ್ನು ತಿಳಿಸಿಬಿಡುತ್ತದೆ. ಹೊಟ್ಟೆ ಸರಿಯಾಗಿದ್ದರೆ ಮಾತ್ರ ಆರೋಗ್ಯ. ಇಲ್ಲವಾದರೆ ವಿವಿಧ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಹೊಟ್ಟೆ ಸರಿಯಾಗಿಲ್ಲ ಎನ್ನುವುದನ್ನು ಹಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು.
 

ಆರೋಗ್ಯಪೂರ್ಣ ದೇಹಕ್ಕಾಗಿ ಅಷ್ಟೇ ಸುಸ್ಥಿತಿಯಲ್ಲಿರುವ ಹೊಟ್ಟೆ ಅತ್ಯಗತ್ಯ. ನಮ್ಮ ಆರೋಗ್ಯದ ಮೇಲೆ ಹೊಟ್ಟೆಯ ಸ್ಥಿತಿಗತಿ ಭಾರೀ ಪರಿಣಾಮ ಬೀರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆ ಹೊಟ್ಟೆಯಿಂದ ಶುರುವಾಗಿ, ಅಂತ್ಯದಲ್ಲಿ ಕರುಳನ್ನು ಒಳಗೊಂಡಿದೆ. ಇದನ್ನು ಗ್ಯಾಸ್ಟ್ರೊಇಂಟಸ್ಟೈನಲ್ ಟ್ರ್ಯಾಕ್ಟ್ ಅಂದರೆ ಜೀರ್ಣಾಂಗವ್ಯೂಹ ಎಂದು ಕರೆಯಲಾಗುತ್ತದೆ. ನಮ್ಮ ಜೀರ್ಣಾಂಗವ್ಯೂಹವನ್ನು ಎರಡನೇ ಮಿದುಳು ಎಂದೂ ಕರೆಯಲಾಗುತ್ತದೆ. ನಿಮಗೇನಾದರೂ ಪದೇ ಪದೆ ಹೊಟ್ಟೆಯ ಸಮಸ್ಯೆ ಕಂಡುಬರುತ್ತಿದ್ದರೆ, ನೋವು ಅಥವಾ ನುಲಿದಂತಾಗುವ ಸಮಸ್ಯೆ ಇದ್ದರೆ ನಿಮ್ಮ ಹೊಟ್ಟೆ ಸರಿಯಾಗಿಲ್ಲ ಎಂದರ್ಥ. ಬಾಯಿಯ ಮೂಲಕ ದೇಹದ ಒಳಸೇರುವ ಪ್ರತಿಯೊಂದು ಆಹಾರ ಈ ಗ್ಯಾಸ್ಟ್ರೊಇಂಟೆಸ್ಟೈನಲ್ ಟ್ರ್ಯಾಕ್ಟ್ ನಲ್ಲಿ ವಿಭಜನೆಯಾಗುತ್ತದೆ. ನೀವು ತರಾತುರಿಯಲ್ಲಿ ಗಬಗಬನೆ ಆಹಾರ ಸೇವನೆ ಮಾಡುವವರಾಗಿದ್ದರೆ, ಸರಿಯಾಗಿ ಅಗಿದು ತಿನ್ನುವ ಅಭ್ಯಾಸ ಹೊಂದಿಲ್ಲದೆ ಇದ್ದರೆ, ಬೇರೆ ಯಾವುದೋ ಕೆಲಸ ಮಾಡುತ್ತ ಆಹಾರ ಸೇವಿಸುವವರಾಗಿದ್ದರೆ ಇವೆಲ್ಲದರ ಪರಿಣಾಮ ಹೊಟ್ಟೆಯ ಮೇಲೆ ಉಂಟಾಗುತ್ತದೆ. ಕಾರಣ ಏನೇ ಇರಲಿ, ಹೊಟ್ಟೆಯುರಿ, ಗ್ಯಾಸ್ಟ್ರಿಕ್ ಸೇರಿದಂತೆ ಯಾವುದೇ ಸಮಸ್ಯೆ ಪದೇ ಪದೆ ಉಂಟಾಗುತ್ತಿದ್ದರೆ ನಿಮ್ಮ ಹೊಟ್ಟೆಯ ಆರೋಗ್ಯ ಸರಿಯಾಗಿಲ್ಲ ಎಂದರ್ಥ. ಅದನ್ನು ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು. 

•    ಆಸಿಡ್ ರಿಫ್ಲಕ್ಸ್ (Acid Reflux)
ಆಸಿಡ್ ರಿಫ್ಲಕ್ಸ್ ಅತಿ ಸಾಮಾನ್ಯ ಸಮಸ್ಯೆ. ಹೊಟ್ಟೆಯಲ್ಲಿರುವ (Stomach) ಆಸಿಡ್ ಅನ್ನನಾಳದ ಮೂಲಕ ವಾಪಸ್ ಮೇಲೆ ಬರುತ್ತದೆ. ಆಗ ಎದೆಯುರಿ ಉಂಟಾಗುತ್ತದೆ. ಇದು ತೀವ್ರ ಆಸಿಡಿಟಿ (Acidity) ಸಮಸ್ಯೆ. ಇದರಿಂದ ನಿಮ್ಮ ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆ (Digestive System) ಆರೋಗ್ಯಕರವಾಗಿಲ್ಲ (Unhealthy) ಎನ್ನುವುದು ತಿಳಿಯುತ್ತದೆ. 

Gut Health: ಬೇಸಿಗೆಯಲ್ಲಿ ಹೊಟ್ಟೆ ಕೆಡುವುದು ಸಾಮಾನ್ಯವಾ? ಹೀಗ್ ಆರೋಗ್ಯ ನೋಡ್ಕಳ್ಳಿ

•    ಬ್ಲೋಟಿಂಗ್ (Bloating)
ಇದು ಸಹ ಎರಡನೇ ಅತಿ ಸಾಮಾನ್ಯ ಲಕ್ಷಣ ಹಾಗೂ ಸಮಸ್ಯೆ. ಆಹಾರ ಸೇವನೆಯ ಬಳಿಕ, ಹೊಟ್ಟೆಯಲ್ಲಿ ಗ್ಯಾಸ್ (Gas) ಶೇಖರವಾಗುತ್ತಿದ್ದರೆ, ಅದರಿಂದಾಗಿ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಇದೂ ಸಹ ಹೊಟ್ಟೆಯ ಆರೋಗ್ಯ ಸುಸ್ಥಿತಿಯಲ್ಲಿಲ್ಲ ಎನ್ನುವುದನ್ನು ತಿಳಿಸುವ ಮತ್ತೊಂದು ಲಕ್ಷಣ. 

•    ಮಲಬದ್ಧತೆ (Constipation)
ಮಲದ ರೂಪದಲ್ಲಿ ನಮ್ಮ ದೇಹದಿಂದ ಅವಶೇಷದ ಪದಾರ್ಥ ಹೊರಗೆ ಹೋಗುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ (Healthy Man) ದಿನಕ್ಕೆ ಎರಡು ಬಾರಿ ಅಥವಾ ಒಂದು ಬಾರಿಯಾದರೂ ಮಲ ವಿಸರ್ಜನೆ ಮಾಡುತ್ತಾನೆ. ಆದರೂ ಸ್ವಚ್ಛವಾಗಿ ಹೊರಹೋಗದಿರುವುದು ಅನೇಕರ ಸಮಸ್ಯೆ. ಮಲಬದ್ಧತೆ ಸಮಸ್ಯೆಯಿಂದ ಸರಿಯಾಗಿ ಮಲ ಹೊರಹೋಗದೆ ಇದ್ದಾಗ ಹಲವು ರೀತಿಯ ಅನಾರೋಗ್ಯ ಉಂಟಾಗುವುದು ಸಾಮಾನ್ಯ. ಮಲಬದ್ಧತೆ ಸಮಸ್ಯೆ ಮೈದಾ ಹೆಚ್ಚಿರುವ ಆಹಾರ, ಬೇಕರಿ ತಿನಿಸುಗಳು, ನಾರಿನಂಶವುಳ್ಳ ಪದಾರ್ಥಗಳ ಸೇವನೆ ಮಾಡದಿರುವುದು, ಒತ್ತಡ (Stress), ಕೆಫೀನ್ ಹಾಗೂ ಧೂಮಪಾನದಿಂದ ಉಂಟಾಗುತ್ತದೆ.

•    ಹೊಟ್ಟೆನೋವು (Pain)
ಹೊಟ್ಟೆಯಲ್ಲಿ ಕೆಲವೊಮ್ಮೆ ನುಲಿದಂತೆ ನೋವು ಉಂಟಾಗಬಹುದು. ಇದು ಸಾಮಾನ್ಯವಾಗಿ ಕೆಟ್ಟ ಆಹಾರ (Bad Food) ಸೇವನೆ ಮಾಡುವುದರಿಂದ ಉಂಟಾಗುತ್ತದೆ. ಸಂಸ್ಕರಿತ ಆಹಾರದಲ್ಲಿ ಕೃತಕ ಬಣ್ಣ ಮತ್ತು ಕೆಮಿಕಲ್ಸ್ ಇರುತ್ತವೆ. ಇವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ. ಒತ್ತಡ ಹಾಗೂ ಧೂಮಪಾನದಿಂದಲೂ ಹೊಟ್ಟೆನೋವು ಬರಬಹುದು.

Summer Season ಇದು, ಇವನ್ನು ಕುಡಿದು ಆರೋಗ್ಯ ಚೆನ್ನಾಗಿರುವಂತೆ ನೋಡ್ಕಳ್ಳಿ

ಹೊಟ್ಟೆ ಆರೋಗ್ಯ ಕಾಪಾಡ್ಕೊಳಿ
•    ಆಹಾರದ (Food) ಬಗ್ಗೆ ಎಚ್ಚರ ವಹಿಸಿ. ಬಾಯಿಗೆ ಏನು ರುಚಿ ಎನಿಸುತ್ತದೆಯೋ ಅದು ದೇಹಕ್ಕೆ ಪೂರಕವಾಗಿರಬೇಕೆಂದಿಲ್ಲ. ಹೀಗಾಗಿ, ಆರೋಗ್ಯಕ್ಕೆ ಅಗತ್ಯವಾದ ಆಹಾರವನ್ನು ಮಾತ್ರ ಸೇವಿಸಿ.
•    ಆಹಾರವನ್ನು ಸರಿಯಾಗಿ ಅಗಿದು (Chew) ತಿನ್ನಬೇಕು. ಇದರಿಂದ ಆಹಾರದಲ್ಲಿರುವ ಸ್ಟಾರ್ಚ್ (Starch) ಅಂಶ ನಾಶವಾಗಿ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. 
•    ನಾರಿನಂಶವಿರುವ (Fibre Food) ಆಹಾರ ಸೇವನೆಗೆ ಆದ್ಯತೆ ನೀಡಿ. 
•    ಟಿವಿ ನೋಡುತ್ತ, ಫೋನಲ್ಲಿ ಮಾತಾಡುತ್ತ ಆಹಾರ ತಿನ್ನಬೇಡಿ. 
 

click me!