ಫಿಟ್‌ ಆಗಿರಲು ಬೆಳಗ್ಗೆದ್ದು ಇವಿಷ್ಟನ್ನು ಮಾಡಿದ್ರೆ ಸಾಕು

By Vinutha Perla  |  First Published Apr 16, 2024, 12:35 PM IST

ಫಿಟ್ ಆಗಿರುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಇವತ್ತಿನ ದಿನಗಳಲ್ಲಿ ಅಧಿಕ ತೂಕ, ಬೊಜ್ಜು ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಹೀಗಾಗಿ ಎಲ್ಲರೂ ಫಿಟ್ ಆಗಿರುವುದು ಹೇಗೆ ಎಂಬ ದಾರಿಯನ್ನು ಹುಡುಕ್ತಿರ್ತಾರೆ. ಹಾಗಿದ್ರೆ ಫಿಟ್ ಆಗಿರಲು ಏನ್ಮಾಡ್ಬೇಕು..ಇಲ್ಲಿದೆ ಮಾಹಿತಿ.


ಫಿಟ್ ಆಗಿರುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಇವತ್ತಿನ ದಿನಗಳಲ್ಲಿ ಅಧಿಕ ತೂಕ, ಬೊಜ್ಜು ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಹೀಗಾಗಿ ಎಲ್ಲರೂ ಫಿಟ್ ಆಗಿರುವುದು ಹೇಗೆ ಎಂಬ ದಾರಿಯನ್ನು ಹುಡುಕ್ತಿರ್ತಾರೆ. ಹಾಗಿದ್ರೆ ಫಿಟ್ ಆಗಿರಲು ಏನ್ಮಾಡ್ಬೇಕು..ಇಲ್ಲಿದೆ ಮಾಹಿತಿ.

ಬೆಳಗ್ಗಿನ ದಿನಚರಿ ಉತ್ತಮವಾಗಿರಲಿ
ಬೆಳಗ್ಗೆದ್ದು ನೀವು ಏನು ಮಾಡುತ್ತೀರಿ ಅನ್ನೋದು ಇಡೀ ದಿನ ನಿಮ್ಮ ದಿನ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಮಾರ್ನಿಂಗ್ ಮಾಡುವ ಧ್ಯಾನ, ವ್ಯಾಯಾಮ, ಓದುವಿಕೆ, ನಡಿಗೆ, ಸೂರ್ಯ ನಮಸ್ಕಾರ ಮೊದಲಾದ ಚಟುವಟಿಕೆಗಳು ಆ ನಿರ್ದಿಷ್ಟ ದಿನದ ಮನಸ್ಥಿತಿಯನ್ನು ರೂಪಿಸುತ್ತದೆ. ಒಮ್ಮೆ ಅಂಥಾ ದಿನಚರಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ, ದಿನವಿಡೀ ಆರೋಗ್ಯಕರ ಆಯ್ಕೆಗಳನ್ನು ಮಾಡುವ ಮನಸ್ಥಿತಿಯಿರುತ್ತದೆ.

Latest Videos

ನೀವು ಫಿಟ್ ಆಗಿರಬೇಕಾ? ಹಾಗಿದ್ರೆ ಇವತ್ತಿನಿಂದಲೇ ದೇವಿ ಆಸನ ಟ್ರೈ ಮಾಡಿ

ಉತ್ತಮ ಆಹಾರ ಆಯ್ಕೆ ಮಾಡಿ
ಆರೋಗ್ಯ ಚೆನ್ನಾಗಿದ್ದರೆ ನೆಮ್ಮದಿಯಿರುತ್ತದೆ. ಆದರೆ ಆರೋಗ್ಯ ಚೆನ್ನಾಗಿರಲು ತಿನ್ನುವ ಆಹಾರವೂ ಉತ್ತಮವಾಗಿರಬೇಕು. ಉತ್ತಮ ಆಹಾರ ತಿಂದಾಗ ಮನಸ್ಸು ಹಾಯಾಗಿರುತ್ತದೆ. ಪ್ರತಿಯೊಂದು ತುತ್ತನ್ನೂ ಆಸ್ವಾದಿಸಿ ತಿನ್ನುವಾಗ ದೇಹ ಅದನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಆಹಾರದೊಂದಿಗೆ ಸಕಾರಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಿ. ಮನಸ್ಸಿನಿಂದ ತಿನ್ನುವ ಅಭ್ಯಾಸ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. 

ಮನಸ್ಸಿಗೆ ನೆಮ್ಮದಿ ಕೊಡುವ ಕೆಲಸ ಮಾಡಿ
ಯೋಗ, ಪ್ರಾಣಾಯಾಮ ಮತ್ತು ಧ್ಯಾನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದು ಮನಸ್ಸಿಗೆ ಅರಿವನ್ನು ಮೂಡಿಸುತ್ತದೆ. ಮನಸ್ಸು-ದೇಹದ ಸಂಪರ್ಕವನ್ನು ಬಲಪಡಿಸುತ್ತವೆ. ಇದು ನಿಮಗೆ ಫಿಟ್ ಆಗಿರಲು ಹೇಗೆ ಸಹಾಯ ಮಾಡುತ್ತದೆ. ನಾವು ಏನು ತಿನ್ನುತ್ತೇವೆ, ಹೇಗೆ ಮಾತನಾಡುತ್ತೇವೆ, ಎಷ್ಟು ನಿದ್ದೆ ಮಾಡುತ್ತೇವೆ ಎಂಬುದರ ಬಗ್ಗೆ ನಮಗೆ ಅರಿವಾದ ನಂತರ ನಾವು ಸ್ವಯಂಚಾಲಿತವಾಗಿ ನಮ್ಮ ಕೆಟ್ಟ ಅಭ್ಯಾಸಗಳನ್ನು  ಬದಲಾಯಿಸಲು ಪ್ರಾರಂಭಿಸುತ್ತೇವೆ.

ಜಿಮ್‌ನಲ್ಲಿ ಹೃದಯಾಘಾತ ಕಾಮನ್‌ ಆಗಿದ್ಯಾಕೆ? ಇಲ್ಲಿದೆ ಕೆಲವು ಕಾರಣ..

ಹೆಚ್ಚು ನೀರು ಕುಡಿಯಿರಿ
ಸರಿಯಾದ ಜಲಸಂಚಯನವು ದಿನವಿಡೀ ತಾಜಾ ಮತ್ತು ಶಕ್ತಿಯುತವಾಗಿರಲು ಪ್ರಮುಖವಾಗಿದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸ್ನಾಯುಗಳು ಮತ್ತು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ. ಯಾವಾಗಲೂ ಬೆಳಗ್ಗೆದ್ದು ಬಿಸಿಯಾದ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ನಿದ್ರೆಗೆ ಆದ್ಯತೆ ನೀಡಿ
ಫಿಟ್ ಆಗಿರಲು ಆರೋಗ್ಯಕ್ಕೆ ಬೇಕಾದಷ್ಟು ನಿದ್ದೆಯನ್ನು ಮಾಡುವುದು ಸಹ ಮುಖ್ಯ. ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ಸೈಡಿಗಿಡಿ. ಧ್ಯಾನ, ಓದುವಿಕೆ, ಬೆಚ್ಚಗಿನ ಸ್ನಾನ ಮಾಡುವುದು ಅಥವಾ ಸರಳವಾಗಿ ಕುಳಿತುಕೊಳ್ಳುವಂತಹ ವಿಶ್ರಾಂತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

click me!