ಇಂದಿನ ದಿನಗಳಲ್ಲಿ ಜಿಮ್‌ಗಳಲ್ಲಿ ಹಾರ್ಟ್‌  ಅಟ್ಯಾಕ್‌ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಜಿಮ್‌ನಲ್ಲಿ ನೀವು ಮಾಡಬೇಕಾದದ್ದು ಏನು, ಏನು ಮಾಡಬಾರದು ಎನ್ನುವ ವಿವರ ಕೂಡ ಇಲ್ಲಿದೆ.

ತ್ತೀಚಿನ ದಿನಗಳಲ್ಲಿ ನಡು ವಯಸ್ಸಿನ ವ್ಯಕ್ತಿಗಳು ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಮ್‌ಗೆ ಸೇರುವ ಯುವಕರು ಹಠಾತ್‌ ಆಗಿ ಸಾವು ಕಾಣುತ್ತಿರುವುದು ವೈದ್ಯಲೋಕಕ್ಕೆ ಅಚ್ಚರಿ ತಂದಿದೆ. ಬೊಜ್ಜುದೇಹ, ನಿಯಮಿತ ವರ್ಕ್‌ಔಟ್‌ ಇಲ್ಲದೇ ಇದ್ದಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎಂದು ಹೇಳುವ ಹೊತ್ತಿನಲ್ಲಿಯೇ, ಜಿಮ್‌ನಲ್ಲಿ ಫಿಟ್‌ ಇರುವ ಯುವಕರೇ ಹಾರ್ಟ್‌ ಅಟ್ಯಾಕ್‌ಗೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕೆ ಕಾರಣವೇನು ಅನ್ನೋದರ ಜೊತೆಗೆ, ಸುರಕ್ಷಿತವಾಗಿರುವ ಯಾವೆಲ್ಲಾ ಸಲಹೆ ಪಾಲಿಸಬೇಕು ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.

ಜಿಮ್‌ನಲ್ಲಿ ಹೃದಯಾಘಾತವಾಗಲು ಕಾರಣವೇನು?
ಅತಿಯಾದ ವರ್ಕ್‌ಔಟ್‌:
ಕೆಲವರು ತಮ್ಮನ್ನು ದೇಹವನ್ನು ಅಗತ್ಯಕ್ಕಿಂತ ಹೆಚ್ಚಾಗಿ ದಂಡಿಸಲು ಹೋಗುತ್ತಾರೆ. ವೇಗವಾಗಿ ತಮ್ಮ ಬಾಡಿ ಫಿಟ್‌ ಆಗಬೇಕು ಎನ್ನುವ ನಿಟ್ಟಿನಲ್ಲಿ ಬಾರ ಎತ್ತಲು ಹೋಗುತ್ಥಾರೆ. ಸರಿಯಾದ ತಯಾರಿಯೇ ಇಲ್ಲದೆ ಹೆಚ್ಚಿನ ತೀವ್ರತೆಯ ವ್ಯಾಯಮಗಳನ್ನು ಮಾಡುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ.

ಅಧಿಕ ರಕ್ತದೊತ್ತಡ: ವ್ಯಾಯಾಮವು ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ಕೆಲವರಿಗೆ, ಇದು ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಹಿಂತಿರುಗುವುದಿಲ್ಲ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಗುರುತಿಸದೇ ಇರುವ ಹೃದಯ ಸಮಸ್ಯೆಗಳು: ಅನೇಕ ಯುವಕ ಹಾಗೂ ಯುವತಿಯರು ನಿಯಮಿತವಾಗಿ ತಮ್ಮ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳೋದಿಲ್ಲ. ಹೃದಯ ಸ್ಥಿತಿ ಹೇಗೆ ಎನ್ನುವ ಮಾಹಿತಿಯೇ ಅವರಿಗೆ ಇರುವುದಿಲ್ಲ. ಹೃದಯದಲ್ಲಿ ಇರುವ ಸಣ್ಣ ಬ್ಲಾಕೇಜ್‌ಗಳು ಕೂಡ ತೀವ್ರತರವಾಗಿ ವ್ಯಾಯಾಮದ ಸಮಯದಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಅನಾರೋಗ್ಯಕರ ಅಭ್ಯಾಸಗಳು: ಧೂಮಪಾನ ಮತ್ತು ಕೆಟ್ಟ ಡಯಟ್‌ ಕೂಡ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ. ಅತಿಯಾದ ರೆಡ್‌ ಮೀಟ್‌ ಹಾಗೂ ಜಂಕ್‌ ಫುಡ್‌ ತಿನ್ನುವುದೂ ಹೃದಯಕ್ಕೆ ಹಾನಿಕರ.

ಸ್ಥೂಲಕಾಯ ಮತ್ತು ಮಧುಮೇಹ: ಈ ಪರಿಸ್ಥಿತಿಗಳು ಭಾರೀ ವ್ಯಾಯಾಮದ ಸಮಯದಲ್ಲಿ ರಕ್ತವನ್ನು ಸರಿಯಾಗಿ ಹರಿಯದಂತೆ ಮಾಡುತ್ತದೆ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ವ್ಯಾಯಾಮ ಮಾಡುವಾಗ ಹೃದಯಾಘಾತದ ಸೂಚನೆಗಳು: ವಾಕರಿಕೆ, ಉಸಿರಾಟದ ತೊಂದರೆ, ತಲೆತಿರುಗುವಿಕೆ, ವಿಪರೀತ ಬೆವರುವುದು ಆಗುತ್ತಿದ್ದರೆ ಅದನ್ನು ಹೃದಯಾಘಾತದ ಸೂಚನೆ ಎನ್ನಬಹುದು. ಇಂಥ ಲಕ್ಷಣಗಳನ್ನು ಇರುವ ಯಾರನ್ನಾದರೂ ಜಿಮ್‌ನಲ್ಲಿ ನೋಡಿದರೆ, ಸಿಪಿಆರ್‌ ನೀಡುವುದರಿಂದ ಅವರ ಜೀವವನ್ನು ಉಳಿಸಬಹುದು.

ಜಿಮ್‌ನಲ್ಲಿ ಹೃದಯಾಘಾತವನ್ನು ತಡೆಯಲು ಸಲಹೆಗಳು:
*ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ: ಯಾವ ವ್ಯಾಯಾಮವನ್ನೂ ಅತಿಯಾಗಿ ಮಾಡಬೇಡಿ. ಎಷ್ಟು ಪ್ರಮಾಣದ ವ್ಯಾಯಾಮವನ್ನು ನಿಮ್ಮ ದೇಹ ನಿಭಾಯಿಸಬಲ್ಲುದು ಎನ್ನುವುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಮಾಹಿತಿ ಇರಲಿದೆ. ನಿಯಮಿತ ಚೆಕ್‌ಅಪ್‌ಗಳು ನಿಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ನಿಮ್ಮ ವೈದ್ಯರ ಸಲಹೆಯನ್ನು ಅನುಸರಿಸಿ.

*ನಿಮ್ಮ ದೇಹ ಹೇಳೋದನ್ನು ಕೇಳಿ: ನೀವು ನೋವು ಅನುಭವಿಸಿದರೆ, ಮುಖ್ಯವಾಗಿ ಎದೆ ಭಾಗದಲ್ಲಿ ಅಥವಾ ಯಾವುದೇ ಅಸ್ವಸ್ಥತೆ ಕಂಡಲ್ಲಿ ತಕ್ಷಣವೇ ವ್ಯಾಯಾಮ ನಿಲ್ಲಿಸಿ ಹಾಗೂ ಸ್ಥಳದಲ್ಲಿದ್ದವರ ಸಹಾಯ ಪಡೆಯಿರಿ. 

*ಹೈಡ್ರೇಟೆಡ್ ಆಗಿರಿ: ಬೆವರುವಿಕೆಯಿಂದ ಡಿಹೈಡ್ರೇಷನ್‌ ತಪ್ಪಿಸಲು ನಿಯಮಿತವಾಗಿ ನೀರನ್ನು ಕುಡಿಯಿರಿ.

*ಸಾಕಷ್ಟು ನಿದ್ರೆ ಮಾಡಿ: ನಿದ್ರೆಯ ಕೊರತೆಯು ನಿಮ್ಮ ಹೃದಯಕ್ಕೆ ಹಾನಿ ಮಾಡಬಲ್ಲುದು. ನೀವು ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಜಿಮ್‌ ಮಾಡಿ ಮಂಡಿ ನೋವು ಹೆಚ್ಚಾಗಿದೆ, ಟೆನ್ಶನ್‌ಗೆ ತೂಕ ಹೆಚ್ಚಾಗಿದೆ: ಗೀತಾ ಭಾರತಿ ಭಟ್

*ಆರೋಗ್ಯಕರ ಆಹಾರವನ್ನು ಸೇವಿಸಿ: ನಿಮ್ಮ ಹೃದಯಕ್ಕೆ ಉತ್ತಮವಾದ ಆಹಾರವು ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಫಿಟ್ ಆಗಿ ಉಳಿಯಲು ಜಿಮ್‌ಗಳು ಉತ್ತಮವಾಗಿದ್ದರೂ, ಕೆಲವು ಆರೋಗ್ಯ ಪರಿಸ್ಥಿತಿಗಳಿರುವ ಜನರಿಗೆ ಅಥವಾ ಅತಿಯಾಗಿ ಕೆಲಸ ಮಾಡುವವರಿಗೆ ಅವು ಅಪಾಯ ಉಂಟುಮಾಡಬಹುದು. ಸುರಕ್ಷಿತವಾಗಿ ವ್ಯಾಯಾಮ ಮಾಡುವುದು ಮತ್ತು ನಿಮಗೆ ಇರುವ ಯಾವುದೇ ಆರೋಗ್ಯ ಸಮಸ್ಯೆ ಬಗ್ಗೆ ನಿಮಗೆ ಗೊತ್ತಿರುವುದು ಬಹಳ ಮುಖ್ಯವಾಗಿರುತ್ತದೆ.

'ಶ್ರೀಮಂತರಾಗ್ಬೇಕಾ? ಭಾರತದಲ್ಲಿ ಹೂಡಿಕೆ ಮಾಡಿ..' Investorsಗೆ ಸಲಹೆ ನೀಡಿದ ಜಿಮ್‌ ರೋಜರ್ಸ್‌

ವೈದ್ಯಕೀಯ ಸಹಾಯ ಪಡೆಯೋದು ಯಾವಾಗ: ವ್ಯಾಯಾಮದ ಸಮಯದಲ್ಲಿ ನಿಮಗೆ ಎದೆ ನೋವು, ವಾಕರಿಕೆ, ಉಸಿರಾಟದ ತೊಂದರೆ, ತಲೆತಿರುಗುವಿಕೆ, ಅಥವಾ ಅತಿಯಾದ ಬೆವರುವಿಕೆ ಅನಿಸುತ್ತಿದ್ದರೆ, ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯುವುದು ಮುಖ್ಯವಾಗಿದೆ. ಇವು ಹೃದಯಾಘಾತದ ಚಿಹ್ನೆಗಳಾಗಿರಬಹುದು. ವ್ಯಾಯಾಮವು ಪ್ರಯೋಜನಕಾರಿಯಾಗಿದೆ, ಆದರೆ ಅದನ್ನು ಸುರಕ್ಷಿತವಾಗಿ ಮಾಡುವುದು ಅತ್ಯಗತ್ಯ. ನಿಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳುವುದು, ವ್ಯಾಯಾಮವನ್ನು ಅತಿಯಾಗಿ ಮಾಡದಿರುವುದು, ಹೈಡ್ರೇಷನ್‌ನಲ್ಲಿರುವುದು, ಸಾಕಷ್ಟು ನಿದ್ರೆ ಮಾಡುವುದುಮತ್ತು ಚೆನ್ನಾಗಿ ತಿನ್ನುವುದು ಇವೆಲ್ಲವೂ ಜಿಮ್‌ನಲ್ಲಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತ ತಪಾಸಣೆ ಮತ್ತು ಹೃದಯಾಘಾತದ ಚಿಹ್ನೆಗಳ ಬಗ್ಗೆ ತಿಳಿದಿರುವುದು ಸುರಕ್ಷಿತವಾಗಿ ಉಳಿಯಲು ಪ್ರಮುಖವಾಗಿದೆ.